Posts

Showing posts from December, 2022

ನಾಡು ನುಡಿ ಕಟ್ಟಿದವರು ಪುಸ್ತಕ ಸರಣಿ - ಶ್ರೀ ವೀರೇಂದ್ರ ಪಾಟೀಲ್.

ನಾಡು ನುಡಿ ಕಟ್ಟಿದವರು ಪುಸ್ತಕ ಸರಣಿ ಶ್ರೀ ವೀರೇಂದ್ರ ಪಾಟೀಲ್ (ಜೀವನ ಮತ್ತು ಸಾಧನೆ) ನಾಡು ಕಂಡ ಶ್ರೇಷ್ಠ ರಾಜಕಾರಣಿ, ಚತುರ ಸಂಸದೀಯ ಪಟು, ಧೀಮಂತ ನಾಯಕ, ಕರ್ನಾಟಕದ ಹೆಮ್ಮೆ ಶ್ರೀ ವೀರೇಂದ್ರ ಪಾಟೀಲರು ತಮ್ಮ ಜೀವನವನ್ನು ನಾಡು ನುಡಿ ರಕ್ಷಣೆಗಾಗಿ, ರೈತ – ಕಾರ್ಮಿಕರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟವರು. ಪಕ್ಷ ಸಂಘಟನೆಯ ಜೊತೆ ಜೊತೆಗೆ ತಮ್ಮನ್ನು ನಂಬಿ ಆಯ್ಕೆ ಮಾಡಿದ ಜನರ ಕುರಿತು ಸದಾ ಚಿಂತಿಸುತ್ತಾ ಅವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದವರು. ಇವರ ಕಾಲದಲ್ಲಿ ನಾಡಿನ ಹಲವು ನೀರಾವರಿ ಯೋಜನೆಗಳು, ಕಾರ್ಖಾನೆಗಳು ಪ್ರಾರಂಭವಾದದ್ದು ಪಾಟೀಲರ ದೂರದೃಷ್ಠಿತ್ವಕ್ಕೆ ಒಂದು ಉದಾಹರಣೆ. ತಮ್ಮ ಸ್ವಪ್ರಯತ್ನ, ಪ್ರತಿಭೆ, ನಿಷ್ಠಾವಂತಿಕೆ, ನಿಷ್ಠುರತೆ, ಪ್ರಾಮಾಣಿಕತೆ, ಶುದ್ಧತೆ, ಸಜ್ಜನಿಕೆ, ವಿಚಾರಪರತೆ, ನಿಸ್ವಾರ್ಥ, ಜನಪರ ಚಿಂತನೆ, ಸದ್ಗುಣ, ಜನೊಪಯೋಗಿ, ಜನ ಕಲ್ಯಾಣ ಗುಣ ಮತ್ತು ಕಾರ್ಯಗಳಿಂದಾಗಿ ಶ್ರೀ ವೀರೇಂದ್ರ ಪಾಟೀಲರ ಹೆಸರು ಕರ್ನಾಟಕ ಮತ್ತು ರಾಷ್ಟ್ರದ ರಾಜಕೀಯ ಇತಿಹಾಸ ಚಿರಸ್ಥಾಯಿಯಾಗಿ ಉಳಿದಿದೆ. ಇಂತಹ ಧೀಮಂತ ನಾಯಕರ ವೈಯಕ್ತಿಕ ಬದುಕು, ಸೇವೆ, ಸಾಧನೆ ಇತ್ಯಾದಿಗಳನ್ನು ಹಾಗೂ ಮಾನ್ಯರು ನಾಡು - ನುಡಿಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವುದು ಈ ಲೇಖನದ ಉದ್ದೇಶ. ಶ್ರೀ ವೀರೇಂದ್ರ ಪಾಟೀಲರು ರಾಜ್ಯದ ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದ ಚಿಂಚೋಳಿ ತಾಲೂಕಿನ ಹೂಡದಳ್ಳಿ ಎಂಬ ಗ್ರಾಮದ ಶ್ರೀ ಬಸಪ್ಪಾ ಮತ್ತು ಚೆನ್ನಮ್ಮರ ೩ ನೇ ...

ʼಬುದ್ಧ ಕಾಣದ ನಗೆʼ ಒಂದು ಅವಲೋಕನ

ʼಬುದ್ಧ ಕಾಣದ ನಗೆʼ ಒಂದು ಅವಲೋಕನ ರಾಜು ಕವಿ ಎಸ್ ಸೂಲೇನಹಳ್ಳಿಯವರು ತಮ್ಮ ಕೃತಿಗೆ ಕೊಟ್ಟಿರುವ 'ಬುದ್ಧ ಕಾಣದ ನಗೆ' ಎಂಬ ಶೀರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಮೊದಲ ಕವಿತೆಯಲ್ಲಿಯೇ ಕವಿಗಳು ಬುದ್ದಿವಂತಿಕೆ ಮತ್ತು ಹೃದಯಸಂಪನ್ನತೆಯ ಕುರಿತು ಹೇಳುತ್ತಾ ನಾವು ಹೃದಯ ಸಂಪನ್ನರಾಗೋಣ ಎಂದು ಕರೆ ಕೊಡುವರು. ಹೃದಯ ಸಂಪನ್ನರ ಕೊರತೆಯನ್ನು ಎದುರಿಸುತ್ತಿರುವ ಸಮಾಜಕ್ಕೆ ಅದರಲ್ಲಿಯೋ ಸಮಕಾಲೀನ ಕರೋನಾ ಸಂಕಷ್ಟದ ಸಂದರ್ಭದಲ್ಲಿ ಈ ಸಂದೇಶ ಬಹಳಾ ಮುಖ್ಯವಾದದಾಗಿದೆ. ಪದಬಳಕೆ, ಪ್ರಾಸ, ಮುಕ್ತಛಂದ್ಸಿನ ಬಳಕೆಯ ದೃಷ್ಠಿಯಿಂದ ಇಲ್ಲಿನ ಕವಿತೆಗಳು ಉತ್ತಮವಾಗಿ ಹೆಣೆಯಲ್ಪಟ್ಟಿವೆ. ಇಲ್ಲಿನ ಹಲವು ಕವಿತೆಗಳು ರಾಗ ಸಂಯೋಜನೆ ಮಾಡಿ ಹಾಡಬಹುದಾದ ಉತ್ತಮ ಭಾವಗೀತೆಗಳ ದಾಟಿಯಲ್ಲಿ ಬಂದಿರುವುದು ವಿಶೇಷ. ಶ್ರಾವಣ ಮಾಸ ಎಂಬ ಕವಿತೆಯಲ್ಲಿ ಕವಿ ತಮ್ಮ ಶಬ್ದ ಚಮತ್ಕಾರಗಳಿಂದ ಓದುಗನ‌ ಕಣ್ಣ ಮುಂದೆ ಶ್ರಾವಣ ಮಾಸದ ಪ್ರಾಕೃತಿಕ ಸೌಂದರ್ಯ ವೈಭವದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಇದು ಪ್ರಕೃತಿಯ ಎಲ್ಲ ವೈಚಿತ್ರ ವಿಶೇಷತೆಗಳನ್ನು ಚಿತ್ರಿಸುವ ಬಹುತ್ವದ ನೆಲೆಯ ಕವಿತೆಯಾಗಿದೆ. ಹೇಗೆ ಪ್ರಕೃತಿ ತನ್ನ ವೈವಿಧ್ಯತೆಯಿಂದ ಮೈತುಂಬಿರುವುದೊ ಅದೇ ರೀತಿ ಈ ಕವಿತೆ, ಈ ಸಂಕಲನವು ಸಹಾ ಹಲವು ಅನುಭವಗಳು ಹಾಗೂ ಸಂವೇದನೆಗಳಿಂದ ಮೈತುಂಬಿಕೊಂಡಿದೆ. ಪ್ರೀತಿಯ ಅಭಿವ್ಯಕ್ತಿ ಮತ್ತು ಪ್ರಕೃತಿಯ ವರ್ಣನೆಯಿಂದ ಪ್ರಾರಂಭವಾಗುವ ಕೃತಿ ಮುಂದುವರೆದಂತೆ ತೀರ ಗಂಭೀರವಾದ ಚರ್ಚೆಯ, ಗಹನವಾದ ...

ಕಳ್ಳಿ ಹೂಗಳು ಪುಸ್ತಕ ಅವಲೋಕನ - ವರುಣ್ ರಾಜ್ ಜೀ.

ಕಳ್ಳಿ ಹೂಗಳು ಪುಸ್ತಕ ಅವಲೋಕನ - ವರುಣ್ ರಾಜ್ ಜೀ. ಧನಪಾಲ ನಾಗರಾಜಪ್ಪನವರ ೧೫ನೇ ಕೃತಿಯಾಗಿ ʼಕಳ್ಳಿ ಹೂಗಳುʼ ಎಂಬ ಸ್ವರಚಿತ ಅಬಾಬಿಗಳ ಸಂಕಲನ ಪ್ರಕಟವಾಗಿರುವುದು ಸಂತೋಷದ ಸಂಗತಿ. ಇವರು ತೆಲುಗಿನ ಶೇಕ್‌ ಕರೀಮುಲ್ಲಾರು ಆವಿಷ್ಕರಿಸಿದ ಅಬಾಬಿ ಸಾಹಿತ್ಯ ಪ್ರಕಾರವನ್ನು ಕನ್ನಡದಲ್ಲಿ ಯಶಸ್ವಿಯಾಗಿ ಪ್ರಯೋಗಕ್ಕೆ ತಂದಿದ್ದಾರೆ. ಅಬಾಬಿಗಳು ಸರ್ವಜ್ಞನ ವಚನಗಳು, ತೆಲುಗಿನ ವೇಮನರ ಪದ್ಯಗಳಂತೆ ಸಣ್ಣ ಸಣ್ಣ ಬಿಡಿ ಪದ್ಯಗಳಾಗಿದ್ದು, ವಿಚಾರ, ವಿಚಾರ ತೀಕ್ಷ್ಣತೆ ಮತ್ತು ಉತ್ತಮ ಸಾಹಿತ್ಯಗುಣ ಇವುಗಳಲ್ಲಿದೆ. ಕರೀಮುಲ್ಲಾರ ಅಬಾಬಿಗಳು ʼಸಮಸ್ತ ಶೋಷಿತರ ಪರ ನಿಲ್ಲುತ್ತವೆʼ ಎಂಬ ಮಾತಿಗೆ ಯಾವ ಅಪವಾದವೂ ಇಲ್ಲದಂತೆ ಇಲ್ಲಿನ ಅಭಾಬಿಗಳ ರಚನೆಯಾಗಿವೆ. ಅಬಾಬಿ ಎಂದರೆ ಸಣ್ಣ ಸಾಲು, ತೀಕ್ಷ್ಣ ವಿಚಾರ ಆತ್ಮಾವಲೋಕನ, ಸಂದೇಶ, ವಿಡಂಬನೆ, ವಿವರಣೆ ವರುಣ ಅಬಾಬಿಗಳು ಆಧುನಿಕ ವಚನಗಳು ಪ್ರಸ್ತುತ ಅಬಾಬಿಗಳ ಸಂಕಲನದಲ್ಲಿ ಸುಮಾರು ೨೦೬ ಅಬಾಬಿಗಳಿದ್ದು, ವಿವಿಧ ಸಂಧರ್ಭದಲ್ಲಿ ಉಂಟಾದ ಯೋಚನೆ, ಹೊಳೆದ ಹೊಳಹು, ಕಾಡಿದ ನೆನಪು ಇತ್ಯಾದಿಗಳನ್ನು ಧನು ಎಂಬ ಕಾವ್ಯನಾಮದಲ್ಲಿ ಕವಿಗಳು ದಾಖಲಿಸಿದ್ದಾರೆ. ಜ್ಞಾನ ಅನುಭವ ಮತ್ತು ಸಂವೇದನೆಗಳ ಸಮಿಶ್ರಣದಿಂದ ಇಲ್ಲಿನ ಅಬಾಬಿಗಳು ಪಕ್ವವಾಗಿವೆ. ಹಲವು ಕಡೆ ಪ್ರಚಲಿತ ಗಾದೆಗಳನ್ನು ಬಳಸಿಕೊಂಡಿರುವುದು ಅಬಾಬಿಗಳಿಗೆ ಒಂದು ಗಹನತೆಯನ್ನು ತಂದುಕೊಟ್ಟಿದೆ. ಜೊತೆಗೆ ಒಂದಷ್ಟು ಹೊಸ ಗಾದೆಯ ರೂಪದ ವಾಕ್ಯಗಳನ್ನು ಸೃಷ್ಠಿಸಿರುವುದು ಈ ಕ...

ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಪರಿಕಲ್ಪನೆ ; ಒಂದು ಅವಲೋಕನ - ವರುಣ್ ರಾಜ್ ಜಿ.

ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಪರಿಕಲ್ಪನೆ ; ಒಂದು ಅವಲೋಕನ - ವರುಣ್ ರಾಜ್ ಜಿ. ಸರ್ವಜ್ಞನಿಗೆ ಪುಷ್ಟದತ್ತ, ದೇವಸಾಲೆ, ವರರುಚಿ ಮುಂತಾದ ಹೆಸರುಗಳು ಇವೆ. ತ್ರಿಪದಿ ಬ್ರಹ್ಮ, ತ್ರಿಪದಿ ಚಕ್ರವರ್ತಿ, ಕಾಲುದಾರಿಯ ಸಂತ, ಚಾರಣ ಕವಿ, ಆಶು ಕವಿ, ಜನಪದ ಕವಿ, ವಿಪ್ಲವಮೂರ್ತಿ ಮುಂತಾಗಿ ಸರ್ವಜ್ಞನನ್ನು ಕರೆದು ಗೌರವಿಸಿರುವರು. ಸರ್ವಜ್ಞನ ಕಾಲ 16 ನೇ ಶತಮಾನದ ಆದಿಭಾಗ. ಕರ್ನಾಟಕದ ಹಿರೇಕೆರೂರು ತಾಲೂಕಿನ ಅಂಬಲೂರು ಸರ್ವಜ್ಞನ ಹುಟ್ಟೂರು. ಸರ್ವಜ್ಞನ ಅಂಕಿತದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ತ್ರಿಪದಿಗಳು ದೊರೆತಿದ್ದು ಇವುಗಳಲ್ಲಿ ಹಲವು ಕಾಲಾಂತರದಲ್ಲಿ ಬೇರೆಯವರಿಂದ ಸೇರಿಸಲ್ಪಟ್ಟವೆಂದು ಊಹಿಸಲಾಗಿದೆ. ಇಂದಿಗೂ ಸರ್ವಜ್ಞನ ಹೆಸರು ಅವನ ಹಿನ್ನೆಲೆ ಇತ್ಯಾದಿಗಳ ಕುರಿತ ಹಲವು ಗೊಂದಲಗಳು ಇವೆಯಾದರೂ ವಯಸ್ಸಾದ ಹಿರಿಯರು ಮಧ್ಯವಯಸ್ಕರು ಹಾಗೂ ಮಕ್ಕಳಿಗೂ ಸರ್ವಜ್ಞ ಚಿರಪರಿಚಿತ. ಇಂದಿಗೂ ಕನ್ನಡ ನಾಡಿನ, ನಾಡಿನವರ ಹೃದಯ ಮತ್ತು ಮನಸ್ಸುಗಳಲ್ಲಿ ತನ್ನ ಸಹಸ್ರಾರು ತ್ರಿಪದಿಗಳ ಮೂಲಕ ಸರ್ವಜ್ಞನು ಜೀವಿಸಿಯೇ ಇದ್ದಾನೆ. ಸರ್ವಜ್ಞನ, “ಕರೆಯದೆ ಬರುವವನ ಬರೆಯದೆ ಓದುವವನ ಬರಿಗಾಲಲಿ ನಡೆವನ ಕರೆದು ಕೆರೆದಲ್ಲಿ ಹೊಡೆಯೆಂದ ಸರ್ವಜ್ಞ”, “ಚಿತ್ತವಿಲ್ಲದೆ ಗುಡಿಯ ಸುತ್ತಿದೆಡೆ ಫಲವೇನು? ಎತ್ತು ಗಾಣವನು ತಾನೊತ್ತು ನಿತ್ಯವೂ ಸುತ್ತಿಬಂದಂತೆ ಸರ್ವಜ್ಞ”, “ವಿದ್ಯೆ ಹೇಳದ ತಂದೆ ಬುದ್ಧಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು ಸರ್ವಜ್ಞ...

ಪುಸ್ತಕ ಅವಲೋಕನ : ಬದರ್‌ (ನೂರು ಅಬಾಬಿಗಳು) – ವರುಣ್‌ ರಾಜ್‌ ಜೀ.

ಪುಸ್ತಕ ಅವಲೋಕನ : ಬದರ್‌ (ನೂರು ಅಬಾಬಿಗಳು) – ವರುಣ್‌ ರಾಜ್‌ ಜೀ. ಪುಸ್ತಕದ ಹೆಸರು : ಬದರ್ (ನೂರು ಅಬಾಬಿಗಳು) ತೆಲುಗು ಮೂಲ: ಷೇಕ್ ಕರೀಮುಲ್ಲಾ. ಕನ್ನಡಕ್ಕೆ : ಧನಪಾಲ ನಾಗರಾಜಪ್ಪ. ಪುಟಗಳ : ೧೨೮ (ಡೆಮಿ ೧/೧೬) ಮುಖ ಬೆಲೆ : ೧೦೦ ರೂ ಆಕರ್ಷಕ ಮುಖಪುಟ ಹೊಸದಾದ ಹೆಸರು ವಿಶೇಷವಾದ ರಚನಾ ಪ್ರಕಾರ ಒಂದೇ ವಾಕ್ಯದಲ್ಲಿ ಬಹಳ ಘನವಾದ ಪ್ರಶ್ನೆಗಳನ್ನ ಕೇಳುತ್ತಾ ಸಮಾಜಕ್ಕೆ ಹಾಗೂ ಓದುಗನಿಗೆ ಮುಖಾ ಮುಖಿಯಾಗುವುದು ಈ ಕೃತಿಯ ವೈಶಿಷ್ಟ್ಯ. ಪುಸ್ತಕದ ಹೆಸರು ಬದರ್. ಇದೊಂದು ಹೊಸ ಸಾಹಿತ್ಯ ಪ್ರಕಾರ ಎನಿಸಿಕೊಂಡಿರುವ ೧೦೦ ಅಬಾಬಿಗಳ ಸಂಕಲನ. ಇದನ್ನು ಒಂದು ಶತಕ ಕೃತಿ ಎನ್ನಬಹುದು. ಮೂಲ ಲೇಖಕರಾದ ತೆಲುಗಿನ ಷೇಕ್ ಕರೀಮುಲ್ಲಾ ಅವರೇ ಈ ಸಾಹಿತ್ಯ ಪ್ರಕಾರವನ್ನ ಹೊಸದಾಗಿ ಆವಿಷ್ಕರಿಸಿ ಅದೇ ಪ್ರಕಾರದಲ್ಲಿ ಕೃತಿ ರಚನೆ ಮಾಡಿರುವುದು ವಿಶೇಷ. ಮುಂದಿನ ಪೀಳಿಗೆಯ ಯುವ ಸಾಹಿತಿಗಳಿಗೆ ಅಬಾಬಿ ಸಾಹಿತ್ಯ ಪ್ರಕಾರವು ಒಂದು ಹೊಸದಾದ ಹಾಗೂ ಬಹಳ ಸರಳವೂ ಅಷ್ಟೇ ಪರಿಣಾಮಕಾರಿಯೋ ಆಗಬಹುದಾದ ಸಾಹಿತ್ಯಾಭಿವ್ಯಕ್ತಿಯ ದಾರಿಯನ್ನು ತೋರಿಸಿದೆ. ಕೃತಿಯನ್ನ " ಮತೀಯ ಫ್ಯಾಸಿಸ್ಟರ ಆಕ್ರಮಣದಲ್ಲಿ, ಐ ಎಸ್ ಐ, ಐಸಿಸ್ ಉಗ್ರವಾದಿಗಳ ದಾಳಿಯಲ್ಲಿ , ಅಮೇರಿಕದ ಸಾಮ್ರಾಜ್ಯಶಾಹಿ ಅಧಿಪತ್ಯದ ದಾಳಿಯಲ್ಲಿ ಕೊಲೆಯಾವದವರಿಗೆ ಅರ್ಪಣೆ ಮಾಡಿರುವುದು ಒಂದು‌ ಕ್ಷಣ ಓದುಗನನ್ನು ಭಾವುಕಗೊಳಿಸುತ್ತದೆ. ಅಬಾಬಿಲ್ ಪಕ್ಷಿಗಳ ಕುರಿತು ಅವುಗಳ ಶಕ್ತಿ ಸಾಮರ್ಥ್ಯದ ಕುರಿತು ಹೇಳ...

ಅಪ್ರಮೇಯ ಸಂಕಲನದ ಕುರಿತು

ಅಪ್ರಮೇಯ ಪದದ ಅರ್ಥ ಅಳತೆಗೆ ಸಿಗದಿರುವುದು, ಸರ್ವವ್ಯಾಪ್ತಿಯಾದದ್ದು ಎಂದು. ಹೆಸರಿಗೆ ತಕ್ಕಹಾಗೆ ಇಲ್ಲಿನ ಹಲವು ಅಭಾಬಿಗಳು ಸರ್ವವ್ಯಾಪ್ತಿತ್ವ ಮತ್ತು ಸರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿರುವ ಅಬಾಬಿಗಳಾಗಿವೆ. ತೆಲುಗಿನ ಯೋಗಿ ವೇಮನರು ʼನಿಕ್ಕಮೈನ ಮಂಚಿ ನೀಲಮೊಕಟಿ ಚಾಲು………………ಚಾಟು ಪದ್ಯಮೊಕಟಿ ಚಾಲದಾ ….. ವೇಮʼ ಎಂದು ತಮ್ಮ ಒಂದು ಪದ್ಯದಲ್ಲಿ ಹೇಳುವರು. ಇದರ ಅರ್ಥ ಒಂದು ಶ್ರೇಷ್ಠವಾದ ನೀಲಮಣಿಯ ಹಾಗೆ ʼಚಾಟುʼ ಪದ್ಯವು ಶ್ರೇಷ್ಠ ಎಂದು. ʼಚಾಟುʼ ಪದ್ಯವೆಂದರೆ ಹೆಚ್ಚಿನ ಛಂಧೋನಿಯಮಗಳಿಗೆ ಒಳಪಡದ ಬಾಯಿಂದ ಬಾಯಿಗೆ ಹರಿದು ಬರಬಹುದಾದ ಕವಿಯ ಅನುಭೂತಿಯಿಂದ ರಚನೆಗೊಂಡ ಪದ್ಯ. ವೇಮನ ಶತಕ, ಸರ್ವಜ್ಞನ ವಚನಗಳು ಈ ರೀತಿಯವೆ. ಇದೇ ಸಾಲಿನಲ್ಲಿ ನಿಲ್ಲಬಲ್ಲ ಘನತೆ ಅಬಾಬಿಗಳಿಗಿದೆ. ಅಪ್ರಮೇಯ ಕೃತಿಯ ʼಕಿತ್ತಲೆ ಹಣ್ಣಿನ ಬುಟ್ಟಿಯಲ್ಲಿ ಅಕ್ಷರಗಳು ನನಸಾಗಿವೆ ಪ್ರಾಮಾಣಿಕ ಕರ್ಮಫಲ ನೈನಾ ಮನಸ್ಸಿದ್ದರೆ ಅಸಾಧ್ಯವೇನಿಲ್ಲʼ ಎಂಬ ಒಂದು ಅಬಾಬಿಯನ್ನು ಓದಿದ ತಕ್ಷಣ ನಮಗೆ ಮಾನ್ಯ ಹರೆಕಳ ಹಾಜಬ್ಬ ನವರು ನೆನಪಾಗುವರು. ಇವರ ಕತೆಯನ್ನು ಸಾಧನೆಯನ್ನು, ಅವರ ಪ್ರಾಮಾಣಿಕ ಪ್ರಯತ್ನ, ಸಾಧಿಸಬೇಕೆಂಬ ಛಲ, ಪಡೆದ ಯಶಸ್ಸು ಎಲ್ಲವನ್ನು ಹಿಡಿದಿಡುವಲ್ಲಿ ಈ ಅಬಾಬಿಯ ಸಾಲುಗಳು ಯಶಸ್ವಿಯಾಗಿವೆ. ಮಾನ್ಯ ಹರೆಕಳ ಹಾಜಬ್ಬನವರಿಗೆ ಅರ್ಪಿಸಲ್ಪಟ್ಟಿರುವುದು ʼಅಪ್ರಮೇಯʼ ಕೃತಿಯ ಮತ್ತೊಂದು ವಿಶೇಷತೆ. ಮತ್ತೊಂದು ಅಬಾಬಿ ʼಧರ್ಮದ ಹೆಸರಿನಲ್ಲಿ ನರಮೇಧ ನಡೆಯುತ್ತಿದೆ ಬಂದೂಕು...

ಅವಧೂತ ತತ್ತ್ವಕವಿಗಳ ಬದುಕು - ಬರಹಗಳಲ್ಲಿ ಸಾಮಾಜಿಕ ಸಾಮರಸ್ಯ - ವರುಣ್‌ ರಾಜ್‌ ಜಿ

ಅವಧೂತ ತತ್ತ್ವಕವಿಗಳ ಬದುಕು - ಬರಹಗಳಲ್ಲಿ ಸಾಮಾಜಿಕ ಸಾಮರಸ್ಯ ಅವಧೂತ ಎಂದರೆ ಎಲ್ಲವನ್ನೂ ತೊರೆದವನು, ಬೈರಾಗಿ, ವೈರಾಗ್ಯಶಾಲಿ ಮುಂತಾದ ಅರ್ಥಗಳು ಇವೆ. ಆಸೆಗಳನ್ನು ಬಿಟ್ಟಿರುವುದು, ಎಂದೆಂದಿಗೂ ಶುಚಿಯಾಗಿರುವುದು, ಸದಾ ಆನಂದದಲ್ಲಿಯೇ ಇರುವುದು, ಎಲ್ಲ ಪೂರ್ವ ವಾಸನೆಗಳನ್ನು ಕಳೆದುಕೊಂಡಿರುವುದು, ವಚನದಲ್ಲಿ ಉದ್ವೇಗವಾಗಲಿ, ದೋಷವಾಗಲಿ, ಗೊಂದಲವಾಗಲಿ ಇಲ್ಲದಿರುವಿಕೆ, ವಾಸ್ತವದಲ್ಲಿ ಜೀವಿಸುವಿಕೆ, ಧೂಳಿನಿಂದ ಮುಚಲ್ಪಟ್ಟ ದೇಹ, ತೊಳೆಯಲ್ಪಟ್ಟ ಮನಸ್ಸು, ಧ್ಯಾನ – ಯೋಗ ನಿರಸನ, ತತ್ತ್ವಚಿಂತನೆ, ಅಹಂಕಾರ ಮತ್ತು ಅಹಂಗಳ ನಿವೃತ್ತಿ ಇವೇ ಮೊದಲಾದವನ್ನು ಅವಧೂತರ ಲಕ್ಷಣಗಳಾಗಿ ಹೇಳುವರು. ಇದೇ ಲಕ್ಷಣಗಳನ್ನು ನಾವು ಬಹುತೇಕ ಎಲ್ಲ ಪರಂಪರೆಗಳಲ್ಲಿ ಬರುವ ಆಧ್ಯಾತ್ಮ ಸಾಧನೆಯ ಉನ್ನತ ಹಂತವನ್ನು ದಾಟಿದ ಸಂತರಲ್ಲಿ ಗುರುತಿಸಬಹುದಾಗಿದೆ. ಶಿವನಿಂದ ಮೊದಲುಗೊಂಡು ದತ್ತಾತ್ರೇಯ, ಶಿರಡಿಯ ಸಾಯಿ ಬಾಬಾ, ಅವಧೂತ ಕಾಶಿನಾಯನ, ಯೋಗಿ ವೇಮನ, ಕವಿ ಸರ್ವಜ್ಞ, ಚಿದಾನಂದಾವಧೂತ, ಸಿದ್ಧಾರೂಡರು, ಶಿಶುನಾಳ ಶರೀಫರು, ಕೈವಾರ ನಾರಣಪ್ಪನವರು, ಶ್ರೀ ವೀರಬ್ರಹ್ಮಯ್ಯನವರು, ವೆಂಕಾವಧೂತೆ, ಹನುಮಾವಧೂತೆ, ರಾಮಾವಧೂತರು, ತಾವರೆಕೆರೆ ವೀರದಾಸಮ್ಮ, ಸೇರಿದಂತೆ ಹಲವಾರು ಸಿದ್ಧರನ್ನು ಸಾಧಕರನ್ನು ಈ ಪಟ್ಟಿಯಲ್ಲಿ ಹೆಸರಿಸಬಹುದು. ಯೋಗಿ ವೇಮನ್ನ ಅಚಲಿಗನೂ, ಕವಿ ಸರ್ವಜ್ಞ ಶೈವನು, ಕೈವಾರ ನಾರಣಪ್ಪ ಯೋಗಿ, ಶಿಶುನಾಳ ಶರೀಫರು ಸೂಫಿ ಪ್ರಭಾವದ ಸಾಧಕರು ಹೀಗೆ ವಿವಿಧ ಪಂಥಗಳಲ್ಲಿ ಇವರ...

ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯ; ಒಂದು ಮರು ಓದು. - ಶ್ರೀ ವರುಣ್ ರಾಜ್ ಜೀ.

Image
ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯ; ಒಂದು ಮರು ಓದು. - ಶ್ರೀ ವರುಣ್ ರಾಜ್ ಜೀ. ಆಧುನಿಕ ಪೂರ್ವ ಸಾಹಿತ್ಯದ ಅತ್ಯಂತ ಮಹತ್ವದ ಕೃತಿಯಾಗಿ ಹರಿಶ್ಚಂದ್ರ ಚಾರಿತ್ರ್ಯವು ನಮ್ಮ ಗಮನ ಸೆಳೆಯುತ್ತದೆ. ಈ ಕಾವ್ಯವನ್ನು ಮರು ಓದಿಗೆ ಮರು ವಿಮರ್ಶೆಗೆ ಒಳಪಡಿಸುವ ಜರೂರು ಎಂದೆಂದಿಗೂ ಇದ್ದೆ ಇರುತ್ತದೆ. ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯವು ಮೇಲ್ನೋಟಕ್ಕೆ ಒಂದು ಪುರಾಣ ಕಾವ್ಯವಾಗಿದ್ದರೂ, ಸೂಕ್ಷ್ಮವಾಗಿ ಅವಲೋಕಿಸಿದರೆ ಪುರಾಣಕ್ಕಿಂತಲೂ ಮಿಗಿಲಾದದನ್ನು, ಮಹತ್ವವಾದದನ್ನು ಇಲ್ಲಿ ಗುರುತಿಸಬಹುದು. ಈ ಕೃತಿಯ ರಚನೆಯ ಕಾಲ, ರಚನೆಗೆ ಒದಗಿಬಂದಿರಬಹುದಾದ ಪ್ರೇರಣೆಗಳು, ಆ ಕಾಲದ ಧಾರ್ಮಿಕ ಮತ್ತು ರಾಜಕೀಯ ಒತ್ತಡಗಳು ಮತ್ತು ಇವನ್ನು ಕೃತಿ ನಿಭಾಯಿಸುವ ರೀತಿ ಇವುಗಳನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಗಮನಿಸಿದಾಗ ನಮಗೆ ಈ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ. ರಾಘವಾಂಕ ಒಬ್ಬ ಜನಪರ ಕವಿ. ಜನ ಬದುಕಬೇಕೆಂದು ಕಾವ್ಯರಚಿಸಿರುವೆ ಎಂದು ಹೇಳಿಕೊಳ್ಳುವಲ್ಲಿ ಅವನ ಜನಪರ ಚಿಂತನೆ ನಮಗೆ ಸ್ಪಷ್ಟವಾಗುತ್ತದೆ. ಆದರೆ, ತನ್ನ ಕೃತಿಗೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಹಿಡಿದು ಅದರ ನಿರೂಪಣೆಯ ವಿವಿಧ ಹಂತಗಳಲ್ಲಿ ಕವಿ ಹಲವು ರೀತಿಯ ಇಕ್ಕಟ್ಟುಗಳಿಗೆ ಸಿಲುಕಿರುವುದನ್ನು ನಾವು ಸ್ವಲ್ಪ ಸೂಕ್ಷ್ಮ ಅವಲೋಕನದಿಂದ ಅರಿಯಬಹುದು. ರಾಘವಾಂಕ ಒಂದು ಹಂತದವರೆಗೆ ಈ ಇಕಟ್ಟುಗಳನ್ನು ಮೀರಿದ್ದಾನೆ ಮತ್ತು ಕೆಲವು ಕಡೆ ಅವನ್ನು ಮೀರಲಾಗದೆ ಸೋತಿದ್ದಾನೆ. ಇವುಗಳನ್ನು ಸೂಕ್ಷ್...