Posts

Showing posts from October, 2021

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.

Image
ಕೋಲಾರ ಜಿಲ್ಲಾ ಪರಿಸರದಲ್ಲಿ ವಚನ, ಕೀರ್ತನ, ತತ್ವಪದ ಮುಂತಾದ ಅನುಭಾವಿ ಸಾಹಿತ್ಯ ಪರಂಪರೆ ಹಾಗೂ ಅಚಲ, ಆರೂಢ, ಅವಧೂತ, ಸೂಫಿ, ದಾಸ ಮುಂತಾದ ಅನುಭಾವಿ ಆಧ್ಯಾತ್ಮ ಪರಂಪರೆಗಳು ಇವೆ. ಪ್ರತಿಯೊಂದು ಊರಿನಲ್ಲೂ ಜನರೆಲ್ಲ ಜಾತಿ, ಮತ, ಭೇದಗಳನ್ನು ಮರೆತು ಒಂದಾಗಿ ಸೇರಿ ತತ್ವಪದಗಳನ್ನು ಭಜನೆಯ ಹಾಡಿ, ವಿಚಾರಕ್ಕೆ ಹಾಕುವ, ಚರ್ಚಿಸಿ ವಿವರಿಸಿಕ್ಕೊಳ್ಳುವುದನ್ನು ನೊಡಬಹುದಾಗಿದೆ. ಇಂತಹಾ ತತ್ವಪದಕಾರರ ಪರಂಪರೆ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಹರಡಿದ್ದು ಜಿಲ್ಲೆಯ ಕೆಲವು ತತ್ವಪದಕಾರರನ್ನು ಅವರ ಕಾಲ ಕೃತಿ ಹಾಗೂ ವಿಚಾರಗಳೊಂದಿಗೆ ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗುವುದು.  ಕೈವಾರ ಯೋಗಿನಾರೇಯಣಪ್ಪ(ತಾತಯ್ಯ)ನವರು. ೧೭೨೬ ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳ ಮಗನಾಗಿ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಯಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮ ಚಿಂತನ - ಮಂಥನಗಳಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ಐಹಿಕ ವಿಷಯಗಳ ಕುರಿತು ಹ...

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಗುರು ; ಒಂದು ಅವಲೋಕನ (ಪರಿಷ್ಕೃತ ಪ್ರಕಟಣೆಗಾಗಿ)

Image
ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಗುರು ; ಒಂದು ಅವಲೋಕನ (ಪರಿಷ್ಕೃತ ಪ್ರಕಟಣೆಗಾಗಿ) ಹಲವು ಧರ್ಮ, ಮತ, ಪಂಥಗಳು ಹಾಗೂ ಬಹಳ ಶ್ರೀಮಂತವಾದ ಹಾಗೂ ಪ್ರಾಚೀನವಾದ ಆಧ್ಯಾತ್ಮಿಕ ಪರಂಪರೆ ಭಾರತದಲ್ಲಿದೆ. ಈ ಆಧ್ಯಾತ್ಮಿಕತೆ  ತಲೆಮಾರಿನಿಂದ ತಲೆಮಾರಿಗೆ  ಹರಿದು ಬಂದಿರುವುದು ಗುರು – ಶಿಷ್ಯ ಪರಂಪರೆಯ ಮೂಲಕ. ಈ ಕಾರಣದಿಂದ ಇಲ್ಲಿನ ಆಧ್ಯಾತ್ಮಿಕ ಪರಂಪರೆಯಲ್ಲಿ ʼಗುರುʼವಿಗೆ ಹೆಚ್ಚು ಮಾನ್ಯತೆ ಹಾಗೂ ಮಹತ್ವ ನೀಡಲಾಗಿದೆ.  ಯಾವುದೇ ಧರ್ಮ, ಅಥವಾ ಪಂಥದ ಜ್ಞಾನ ಹಾಗೂ ಸಿದ್ಧಾಂತವು ಮುಂದಿನ ಪೀಳಿಗೆಗೆ ಒಬ್ಬರಿಂದ ಒಬ್ಬರಿಗೆ ಹರಿದು ಬರುತ್ತದೆ. ಈ ಜ್ಞಾನದ ಹರಿವಿನಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದು. ತಾನು ಕೇವಲ ಒಂದು ಸಿದ್ಧಾಂತವನ್ನು ಅಥವಾ ಜ್ಞಾನವನ್ನು ತಲುಪಿಸುವ ಮಾಧ್ಯಮವಾಗಿ ಮಾತ್ರ ಕಾರ್ಯ ನಿರ್ವಹಿಸದೇ, ಆ ಜ್ಷಾನವನ್ನು ಕಾಲಕಾಲಕ್ಕೆ ಪರಿಷ್ಕರಿಸಿ, ಪಕ್ವಗೊಳಿಸುತ್ತಾ ಮುಂದಿನ ತಲೆಮಾರುಗಳಿಗೆ ದಾಟಿಸುವ ಮಹತ್ತರವಾದ ಕಾರ್ಯವನ್ನು ಗುರು ಕೈಗೊಳ್ಳುವನು.   ʼಗುರುʼ ಎಂದರೆ ಉಪಾಧ್ಯಾಯ, ಪುರೋಹಿತ, ಹಿರಿಯ, ಬೃಹಸ್ಪತಿ, ಮಠದ ಅಧಿಪತಿ, ಘನವಾದ, ಭಾರವಾದ ಆಚಾರ್ಯ, ಪ್ರಭಾವಿ ವ್ಯಕ್ತಿತ್ವದ, ಸಮೃದ್ಧ ವ್ಯಕ್ತಿತ್ವದ, ಜ್ಞಾನದಿಂದ ಆವೃತ್ತವಾಗಿರುವ, ಭಾರವಾದ, ಘನವಾದ ಇತ್ಯಾದಿ ಅರ್ಥಗಳನ್ನು ಹೇಳಬಹುದು. ʼಅದ್ವಯಾ ತಾರಕಾʼ ಎಂಬ ಉಪನಿಷತ್ತು ʼಗುರುʼಪದೋತ್ಪತ್ತಿಯನ್ನು “ಗುಕಾರೋಂಧಕಾರತ್ವಾತ್‌ ರುಕಾರೋ ತನ್ನ...

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

Image
  ನಮ್ಮ ಸಮಾಜವನ್ನು   ಲಿಂಗಾಧಾರಿತ ತಾರತಮ್ಯ, ಲಿಂಗಾಧಾರಿತ ದ್ವೇಷ, ಲಿಂಗ ಅಸಮಾನತೆಗಳು ಅತಿ ಹೆಚ್ಚಾಗಿ ವ್ಯಾಪಿಸಿಕೊಂಡಿವೆ. ಬಲೆಯಲ್ಲಿ ಸಿಕ್ಕ   ಪಕ್ಷಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಬಲೆ ಹೆಚ್ಚು ಹೆಚ್ಚು ಬಿಗಿಯಾಗುವಂತೆ ಈ ಲಿಂಗತಾರತಮ್ಯ, ಲಿಂಗಾಧಾರಿತ ದ್ವೇಷ ಮುಂತಾದವುಗಳಿಂದ ನಾವು ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಇವು ಮತ್ತಷ್ಟು ಸಂಕೀರ್ಣವಾಗುವುದನ್ನು ಗುರುತಿಸಬಹುದು.      ನಮ್ಮ ಸಮಾಜ ಪಿತೃಪ್ರಧಾನತೆಯ   ಪುರುಷ ಕೇಂದ್ರಿತ ಸಮಾಜ. ಎಲ್ಲವನ್ನು ಪುರುಷನ ದೃಷ್ಠಿಯಿಂದಲೇ ಅಳೆದು ತೂಗಿ ನೋಡುವ ವಾಡಿಕೆ ನಮ್ಮಲಿದೆ. ಇದಕ್ಕೆ ಸ್ತ್ರೀ ಪುರುಷರಾಧಿಯಾಗಿ ಯಾರು ಹೊರತಲ್ಲ. ಸ್ತ್ರೀಯರ ಸ್ಥಾನ ನಮ್ಮಲ್ಲಿ ಎರಡನೇ ದರ್ಜೆಯದಾಗಿದೆ. ನಮ್ಮ ಸಂವಿಧಾನ ಸಮಾನತೆಯ, ಸ್ವಾತಂತ್ರ್ಯದ ಆಶಯದ ಮೇಲೆ ರಚನೆಯಾಗಿದ್ದರೂ ಸಹಾ ಸ್ತ್ರೀಯ ಸ್ಥಾನಮಾನ ಇಂದಿಗೂ ಸುಧಾರಿಸಿಲ್ಲ. ಇದಕ್ಕೆ ಕಾರಣ ಮೇಲೆ ಚರ್ಚಿಸಿದಂತೆ ಬಹಳಾ ಸಂಕೀರ್ಣ ವ್ಯಾಪ್ತಿಯಲ್ಲಿ ನಮ್ಮ ಸಮಾಜವನ್ನು ಆವರಿಸಿರುವ ಈ ಪುರುಷ ಪ್ರಧಾನ ಚಿಂತನೆ. ತಮಗೆ ಅರಿವಿದ್ದೋ ಇಲ್ಲದೆಯೋ ಪ್ರತಿಯೊಬ್ಬರೂ ಈ ಪುರುಷ ಪ್ರಧಾನತೆಯನ್ನು, ಪುರುಷ ಕೇಂದ್ರಿತ ಚಿಂತನೆಯನ್ನು‌ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಲೇ ಇದ್ದಾರೆ ಮಾತ್ರವಲ್ಲ ಅದರಿಂದ ಆಗುವ ಸಮಸ್ಯೆ ಮತ್ತು ಅಪಾಯಗಳನ್ನು ಸಹಾ ಸ್ತ್ರೀ ಪುರುಷ ಭೇದವಿಲ್ಲದೇ ಎಲ್ಲರೂ ಎದುರಿಸುತ್ತಿದ್ದಾರೆ.   ಇಂ...