Posts

Showing posts from September, 2021

ಅಜ್ಞಾತ ಅಚಲ ತತ್ವಪದಕಾರ ವೆಂಕಟದಾಸು (ಲೇಖನ) - ವರುಣ್ ರಾಜ್ ಜೀ.

Image
ಅಜ್ಞಾತ ಅಚಲ ತತ್ವಪದಕಾರ ವೆಂಕಟದಾಸು (ವೆಂಕಟದಾಸರು ಗುರುಗಳಾದ ಶ್ರೀ ವೆಂಕಟಾರ್ಯ ಸ್ವಾಮಿಗಳು) ಕೋಲಾರ ಜಿಲ್ಲೆಯು ಶ್ರೀ ಕೈವಾರ ನಾರೇಣಪ್ಪ, ಗಟ್ಟಿಹಳ್ಳಿ ಆಂಜಿನಪ್ಪ ಬೇರಿಕಿ ಬುಟ್ಟಪ್ಪ ಭೋವಿ ವೆಂಕಟಗಿರಿಯಪ್ಪ ಮುಂತಾದ ತತ್ವಪದಕಾರರ ಸಾಧನ ಕ್ಷೇತ್ರವಾಗಿದೆ. ಈ ಪರಂಪರೆಯಲ್ಲಿ  ಹಲವರು  ಸಾಧಕರು ಆಗಿಹೋಗಿದ್ದು ಬಹಳಷ್ಟು ಮಂದಿ ಇಂದಿಗೂ ಅಜ್ಞಾತರಾಗಿಯೇ ಇದ್ದಾರೆ. ಇಂತಹವರ ಸಾಲಿನಲ್ಲಿ ಒಬ್ಬರಾದ ಶ್ರೀ ವೆಂಕಟದಾಸು  ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕೃಷ್ಣಂನಕೊತ್ತೂರು ಗ್ರಾಮದವರು. ಇದೇ ಗ್ರಾಮದಲ್ಲಿ ಆಶ್ರಮ ಸ್ಥಾಪಿಸಿ ಹಲವಾರು ಅಚಲ ಸಾಧಕರಿಗೆ ಗುರು ಹಾಗೂ ಮಾರ್ಗದರ್ಶಕರಾಗಿರುತ್ತಾರೆ. ಇವರು ಹಲವಾರು ತತ್ವಪದಗಳನ್ನು ತೆಲುಗು ಭಾಷೆಯಲ್ಲಿ ರಚಿಸಿದ್ದು ಅವರ ಶಿಷ್ಯ ಬಳಗದ ಹಲವು ಗಾಯಕರು ಇವರ ತತ್ವಪದಗಳನ್ನು ಹಾಡಿ ಮೆರೆಸುತ್ತಿದ್ದಾರೆ.     ಶ್ರೀ ವೆಂಕಟದಾಸುರವರು ಸ್ವತಃ ರಚಿಸಿರುವ ಕನ್ನಡ ಲಿಪಿಯ ತೆಲುಗು ಭಾಷೆಯ “ಅನುಭವಸಾರಂ” ಎಂಬ ಹೆಸರಿನ ಒಂದು ಕೃತಿಯನ್ನು ಆಧರಿಸಿ ೩ ಭಾಗಗಳಲ್ಲಿ ಈ ಲೇಖನವನ್ನು ರಚಿಸಲಾಗಿದೆ. ಶ್ರೀ ವೆಂಕಟದಾಸುರವರ ಜೀವನ ಮತ್ತು ಸಾಧನೆಯನ್ನು ಈ ಲೇಖನದ ಒಂದನೇ ಭಾಗದಲ್ಲಿ ಹಾಗೂ  ಅವರ ಭೋಧನೆಗಳನ್ನು ವಿವರಿಸುವ ಪ್ರಯತ್ನವನ್ನು ಎರಡನೇ ಭಾಗದಲ್ಲಿ ಮತ್ತು ತತ್ವಪದಗಳನ್ನು ಪರಿಚಯಿಸುವ, ವಿಶ್ಲೇಷಿಸುವ  ಪ್ರಯತ್ನವನ್ನು ಮೂರನೇ ಭಾಗದಲ್ಲಿ ಮಾಡ...