Posts

Showing posts from October, 2024

ಹಾಗೆ ಸುಮ್ಮನೆ

ಒಂದು ಕತೆ ಇದೆ. ರಾಮಾನುಜಾಚಾರ್ಯರ ಹೆಸರಿನಲ್ಲಿ... ರಾಮಾನುಜಾಚಾರ್ಯರು ತಮ್ಮ ಗುರುಗಳ ಹತ್ತಿರ ಹಲವು ವರ್ಷಗಳು ಇದ್ದು ಅವರ ಸೇವೆ ಮಾಡಿ ಕೊನೆಗೆ ಒಂದು ದಿನ ಗೌಪ್ಯ ಮಂತ್ರವೊಂದರ ಉಪದೇಶ ಪಡೆದುಕೊಂಡರಂತೆ. ಮಂತ್ರೋಪದೇಶ ಮಾಡಿದ ಗುರುಗಳು " ಸರಿಯಾಗಿ ನೆನಪಿನಲ್ಲಿ ಇಡು, ಈ ಮಂತ್ರವನ್ನ ನೀನು ಎಂದಿಗೂ ಬಾಯಿಬಿಟ್ಟು ಹೇಳಬಾರದು. ಹೇಳಿದಾಗ ಇದನ್ನ ಯಾರಾದರೂ ಕೇಳಿಸಿಕೊಂಡುಬಿಟ್ಟರೆ ಅವರು ಸತ್ತಮೇಲೆ ನೇರ ಸ್ವರ್ಗಕ್ಕೆ ಹೋಗ್ತಾರೆ ನೀನು ಮಾತ್ರ ಸೀದಾ ನರಕಕ್ಕೆ ಹೋಗ್ತೀಯ" ಅಂತ ಹೇಳಿದರಂತೆ. ಇದನ್ನ ಕೇಳಿಸಿಕೊಂಡ ರಾಮಾನುಜರು " ಗುರುಗಳೇ ಇದು ನಿಜವಾ?, ಇದನ್ನ ಕೇಳಿಸಿಕೊಂಡವರೆಲ್ಲ ನಿಜವಾಗಿ ನೇರವಾಗಿ ಸ್ವರ್ಗಕ್ಕೆ ಹೋಗ್ತಾರಾ !" ಅಂತ ಕೇಳಿದ್ರಂತೆ. ಅದಕ್ಕೆ ಗುರುಗಳು ಖಂಡಿತ ಹೌದು. ಅಂತ ಹೇಳಿದ್ದೇ ತಡ ಸೀದಾ ಶ್ರೀರಂಗಂ ನ ದೇವಸ್ಥಾನದ ದೊಡ್ಡ ಗೋಪುರ ಹತ್ತಿ ಅದರ ಮೇಲಿಂದ " ಓಂ ನಮೋ ನಾರಾಯಣಾಯ" ಅಂತ ಕೂಗಿ ಕೂಗಿ ಹೇಳೋಕೆ ಶುರು ಮಾಡಿದ್ರಂತೆ. ಗುರುಗಳಿಗೆ ಮತ್ತೆ ಅಲ್ಲಿದ್ದ ಉಳಿದ ಅರ್ಚಕರು ಇವರಿಗೆಲ್ಲ ಕೋಪ, ಆಶ್ಚರ್ಯ ಒಂದೇ ಸಲಕ್ಕೆ.  ರಾಮಾನುಜರು ಕೂಗೋ ಅಷ್ಟೂ ಕೂಗಿ ಸಮಾಧಾನ ಆದಮೇಲೆ ಕೆಳಗೆ ಇಳಿದು ಬಂದರಂತೆ. ಆಗ ಗುರುಗಳು " ಲೋ ಮೂರ್ಖ, ನಾನು ಮೊದಲೇ ಹೇಳಿಲ್ವಾ. ಇದನ್ನ ಯಾರಿಗೂ ಹೇಳಬಾರದು, ಹೇಳಿದರೆ ನೀನು ಸೀದಾ ನರಕಕ್ಕೆ ಹೋಗ್ತೀಯ. ಕೇಳುಸಿಕೊಂಡವರು ಸ್ವರ್ಗಕ್ಕೆ ಹೋಗ್ತಾರೆ ಅಂತ. ಎಂತ ಕೆಲಸ ಮಾಡಿಬಿಟ್ಟ...