Posts

Showing posts from August, 2021

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಒಂದು ಅವಲೋಕನ- ವರುಣ್‌ ರಾಜ್‌ ಜೀ.

Image
 ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಒಂದು ಅವಲೋಕನ - ವರುಣ್‌ ರಾಜ್‌ ಜೀ. ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಾ ಬಂದಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಹಿಂದೆ ಬಹಳ ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಯೋಗ್ಯ ನಾಗರೀಕರನ್ನು ಸಿದ್ಧಪಡಿಸುವ, ವ್ಯವಹಾರ ಜ್ಞಾನ ಒದಗಿಸುವ, ಸಾಮಾನ್ಯ ಶಿಕ್ಷಣ ಹಾಗೂ ಗೀತ, ವಾದ್ಯ, ನೃತ್ಯ, ಮುಂತಾದ ೬೪ ಕಲೆಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮ ಪ್ರಾಚೀನ ಕೃತಿಗಳಲಿ ಉಲ್ಲೇಖವಿದೆ. ಹಲವು ಕಸುಬುಗಳನ್ನು ಗುರುಮುಖದಿಂದ ಕಲಿಯುವ, ಕಲಿಸುವ ವ್ಯವಸ್ಥೆ ಭಾರತದಲ್ಲಿ ಇತ್ತು. ಉನ್ನತ ಶಿಕ್ಷಣಕ್ಕಾಗಿ ತಕ್ಷಶಿಲ, ನಳಂದ, ಹಾಗೂ ಕರ್ನಾಟಕದ ನಾಗಾವಿ, ಬಳ್ಳಿಗಾವೆ ಮುಂತಾದ ಕಡೆ ಪ್ರಾಚೀನ ವಿದ್ಯಾ ಕೇಂದ್ರಗಳು ಇದ್ದದರ ಕುರಿತು ನಮಗೆ ಶಾಸನಾಧಾರಗಳು ಸಿಗುತ್ತವೆ.  ಭಾರತದಲ್ಲಿ ೧೯೮೬ ರಿಂದ ಚಾಲ್ತಿಯಲ್ಲಿದ ಶಿಕ್ಷಣ ನೀತಿಯ ಮಿತಿಗಳನ್ನು ವಿಸ್ತಾರಗೊಳಿಸುವ ಹಾಗೂ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ತರಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕೇಂದ್ರ ಕ್ಯಾಬಿನೆಟ್‌ ನಲ್ಲಿ ಅನುಮೋದನೆಗೊಂಡು ಹಲವಾರು ಪರ ವಿರೋಧ ಚರ್ಚೆಗಳಿಗೆ ಆ ಮೂಲಕ ಕೆಲವು ಗೊಂದಲಗಳಿಗೆ ಕಾರಣವಾಗಿದೆ. ಕರ್ನಾಟಕವು ಮೊದಲ ರಾಜ್ಯವಾಗಿ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕೆಂದಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ....

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

Image
 ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು.  (ಚಿತ್ರ ಕೃಪೆ : ಅಂತರ್ಜಾಲ) ೧೨ ನೇ ಶತಮಾನದಲ್ಲಿ ಪ್ರಾರಂಭವಾದ ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಅತ್ಯಂತ ಪ್ರಮುಖ ಘಟ್ಟ. ಅಂದಿನಿಂದ ಇಂದಿನವರೆಗೂ ವಚನ ಸಾಹಿತ್ಯದ ಕುರಿತಾಗಿ ಹಲವು ಸಂಶೋಧನೆಗಳು ಹಾಗೂ ಸಂಶೋಧನೆಯ ಹೊಸ ಹಾದಿಗಳು ತೆರೆದುಕೊಳ್ಳುತ್ತಲೇ ಇವೆ. ಕನ್ನಡ ಸಾಹಿತ್ಯವನ್ನು ಕಠಿಣವಾದ ಮಾರ್ಗ ಶೈಲಿಯಿಂದ ಬಿಡಿಸಿ ಜನಸಾಮಾನ್ಯರಿಗೆ ಹತ್ತಿರವಾಗುವ ಹಾಗೆ ಮಾಡಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲಬೇಕು.  ವಚನ ಸಾಹಿತ್ಯದ ಜನಪ್ರಿಯತೆಗೆ ಅದರ ಸರಳತೆ ಒಂದು ಕಾರಣವಾದರೆ ಅದರ ಅಗಾಧತೆ, ತೀಕ್ಷ್ಣ ವೈಚಾರಿಕತೆ, ಸಮಾನತೆ, ಹಾಗೂ ಸಮಕಾಲೀನತೆಯ ಗುಣ ಮತ್ತೊಂದು ಪ್ರಮುಖ ಕಾರಣವಾಗಿದೆ. ಕನ್ನಡ ಭಾಷೆಯು ಜಾಗತಿಕವಾಗಿ ಗುರುತಿಸಿಕೊಳ್ಳುವಲ್ಲಿಯೂ ವಚನ ಸಾಹಿತ್ಯದ ಪಾತ್ರ ಬಹುಮುಖ್ಯವಾದ್ದು.  ವಚನ ಸಾಹಿತ್ಯವು ಮೂಲತಃ ಒಂದು ಚಳುವಳಿ, ಇದನ್ನು ಸಮಾಜೋಧ್ಧಾರ್ಮಿಕ ಚಳುವಳಿ ಎಂದು ವ್ಯಾಖ್ಯಾನಿಸಲಾಗಿದೆ. ಇದು ಒಂದು ಹೊಸ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಾಧನಾ ಮಾರ್ಗವಾಗಿ ಪ್ರಾರಂಭವಾಗಿ ತನ್ನದೇ ಆದ ಹಲವು ಹೊಸ ಪರಿಭಾಷೆಗಳನ್ನು ಸೃಷ್ಠಿಸಿಕೊಂಡಿತು, ಅವುಗಳಲ್ಲಿ ಲಿಂಗಧಾರಣೆಯಂತಹ ಆಚರಣಾ, ಆರಾಧನಾ, ಆಧ್ಯಾತ್ಮಿಕ ಸಾದನಾ ವಿಧಾನಗಳು ಹಾಗೂ  ಕಾಯಕ, ಅನುಭಾವ, ಅಷ್ಟಾವರಣ, ಇಷ್ಟಲಿಂಗ, ಪಂಚಾಚಾರ, ಷಟ್ಸಲದ ಪರಿಕಲ್ಪನೆಗಳು ಮುಖ್ಯವಾದವು. ಇವುಗಳಲ್ಲಿ ಅಷ್ಟಾವರಣ ಬಹು ಮುಖ್ಯ, ಅವ...