ಬುಡಕಟ್ಟುಗಳು ಮತ್ತು ಆಧುನಿಕ ಜಗತ್ತು

 


( ಚಿತ್ರ ಕೃಪೆ : ಅಂತರ್ಜಾಲ)

ಬುಡಕಟ್ಟುಗಳು ಮತ್ತು ಆಧುನಿಕ ಜಗತ್ತು

                             

               ಬುಡಕಟ್ಟು ಸಂಸ್ಕೃತಿ : ಬಹುಶಿಸ್ತೀಯ ಅಧ್ಯಯನ ಎಂಬ ವಿಷಯದ ಬಗ್ಗೆ ನಡೆಸಲಾಗುತ್ತಿರುವ ವಿಚಾರ ಸಂಕೀರ್ಣ ಈವತ್ತಿನ ಸಂಧರ್ಭಕ್ಕೆ ಬಹಳ ಅವಶ್ಯಕವಾದದ್ದು, ಕಾರಣ ಈಗಿನ ಸರ್ಕಾರ  ಜಾರಿಗೆ ತಂದಿರುವ   ಪೌರತ್ವ ತಿದ್ದುಪಡಿ ಕಾಯ್ದೆಯೇನಿದೆ ? ಅದರಿಂದ ಹೆಚ್ಚು ತೊಂದರೆಗೆ ಬುಡಕಟ್ಟುಗಳು  ಒಳಗಾಗಬೇಕಾಗುತ್ತೆ , ಬರೀ ಬುಡಕಟ್ಟು ಜನರಿಗೆ ಅಷ್ಟೆ ಅಲ್ಲದೆ ಇಡೀ ಭಾರತದ ಪ್ರಜೆಗಳಿಗೆ ಇದರಿಂದ ತೊಂದರೆ ಇದೆ ಆದರೆ ಬುಡಕಟ್ಟು ಜನರಿಗೆ ಅದು ಹೆಚ್ಚು ಅಪಾಯಕಾರಿಯಾದದ್ದು, ಹೀಗಾಗಿ ಚರ್ಚಾ ಗೊಷ್ಟಿಯ ಆಶಯ ದಂತಿರುವ ಶತಮಾನಗಳಿಂದ ಭೂಮಿಯ ಮೇಲೆ  ನೆಲೆಸಿರುವ ಪೂರ್ವಿಕರೇ ಬುಡಕಟ್ಟುಗಳು, ಇವರೇ ನೆಲದ ಅತಿ ಪ್ರಾಚೀನ ಆದಿವಾಸಿಗಳುಎಂಬ ವಿಚಾರವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಾದ ಜರೂರಾತಿ ಇದೆ.

            ನಮಗೆ ಹತ್ತಿರದಿಂದ ಗೊತ್ತಿರುವ ಬುಡಕಟ್ಟುಗಳಾದ ಲಂಬಾಣಿಯವರು, ಬುಡಬುಡಕೆಯವರು, ಕೋಲೆಬಸವರು, ದೊಂಬರು, ಹಗಲು ವೇಷದವರು, ಮುಂತಾದ ಬುಡಕಟ್ಟು ಜನಾಂಗಗಳ ಮೂಲ ಅವರುಗಳ ಇತಿಹಾಸ ಅವರು ಬದುಕಿ ಬಾಳಿದ ರೀತಿ , ಮಂದುವರೆದು ಆಧುನಿಕ ಜಗತ್ತಿನಲ್ಲಿ ಅವರ ಸ್ಥಿತಿಗತಿಗಳು , ಪ್ರಜ್ಞಾವಂತರೆನಿಸಿಕೊಂಡವರು ಸಮುದಾಯಗಳ ಬಗ್ಗೆ ಹೊಂದಿರುವ ದೃಷ್ಟಿಕೋನ, ಅದೇ ರೀತಿ ಬುಡಕಟ್ಟು ಸಮುದಾಯಗಳು ಆಧುನಿಕತೆಯನ್ನು ಕುರಿತು ಹೊಂದಿರುವ ದೃಷ್ಟಿಕೋನ ಮತ್ತದರ ಪರಿಣಾಮಗಳನ್ನು ಇಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿದೆ.

ನಾವು ಚಿಕ್ಕವರಿದ್ದಾಗ  ಸಂಕ್ರಾಂತಿ ಸಮಯದಲ್ಲಿ  ನಮ್ಮ ಊರಿಗೆ -೧೦ ಜನ ಸುಕಾಲಿ(ಲಂಬಾಣಿ) ಮಹಿಳೆಯರು ಬರುತ್ತಿದ್ದರು. ಬಂದವರಿಗೆ ನಮ್ಮ ಮನೆಯ ವರಾಂಡದಲ್ಲಿಯೇ ವಾಸ್ತವ್ಯ ಹಗಲು ಊರಿನ ಪ್ರತಿಯೊಂದು ಮನೆಗೆ ಹೋಗಿ ಅವರದೇ ಭಾಷೆಯಲ್ಲಿ ಹಾಡುಗಳನ್ನು ಹಾಡಿ ಮನೆಯವರು ಕೊಡುವ ರಾಗಿ, ಊಟ ಮುಂತಾದವನ್ನು ತಂದು ನಮ್ಮ ಮನೆಯ ವರಾಂಡದಲ್ಲಿಯೆ ತಿಂದು ಮಲಗುತ್ತಿದ್ದರು, - ದಿನದ ನಂತರ ಮುಂದಿನ ಊರಿನ ಕಡೆ ಹೋಗುತಿದ್ದರು, ಅದೇ ರೀತಿ ಕಣಿ ಹೇಳುವವರು, ಗಂಗೆತ್ತುಗಳವರು, ಬುಡಬುಡಕಿಯವರು, ಗೋರವಯ್ಯನವರು ನಮ್ಮೂರಿಗೆ ಬರುತ್ತಿದರು,.

ನಮ್ಮ ಊರಿನ ಕಡೆ ತೆಲುಗು ಪ್ರಭಾವ ಹೆಚ್ಚಾಗಿರುವುದರಿಂದ ನಾವು ಲಂಬಾಣಿಯವರನ್ನು ಸುಕಾಲಿ ಅವರು ಅಂತಲೇ ಕರಿತಾ ಇದ್ದದು. ಅವರು ಆಂಧ್ರದ  ಬೋಯಿಕೊಂಡ ಸಮೀಪದ ಹಳ್ಳಿಯೊಂದರಿಂದ ಬರುತ್ತಿದರು, ಅವರ ವೇಷಭೂಷಣಗಳು ತುಂಬಾ ವಿಶೇಷವಾಗಿ ಇರುತ್ತಾ ಇದ್ದವು. ಎರಡೂ ಕೈ ತುಂಬ ಬಣ್ಣಬಣ್ಣದ ಬಳೆ , ಸಣ್ಣ ಸಣ್ಣ ಕನ್ನಡಿಗಳು ಮತ್ತೆ ನಾಣ್ಯಗಳಿಂದ ಅಲಂಕೃತವಾಗಿರುತ್ತಿದ ಬಣ್ಣ ಬಣ್ಣದ ಬಟ್ಟೆಗಳು ಎಲ್ಲಾ ನೋಡಿ ಅವರು ತುಂಬಾ ಸಾಹುಕಾರರು ಅಂಥ ನಾವು ಯೋಚನೆ ಮಾಡುತ್ತಿದ್ದೆವು . ಮುಂದೆ ಲಂಬಾಣಿಯರ ಬಗ್ಗೆ ಓದಿದಾಗ ನನಗೆ ಗೊತ್ತಾಯಿತು, ನಿಜಕ್ಕೂ ಇವರು ಸಾಂಸ್ಕೃತಿಕವಾಗಿ ನಮ್ಮಗಿಂತ ತುಂಬಾ ಹೆಚ್ಚಿನವರೇ ಅಂತ.

ಲಂಬಾಣಿಗರು, ಬಂಜಾರರು, ಸುಕಾಲಿಯವರು, ಮುಂತಾದ ಹೆಸರುಗಳಿಂದ ಗುರ್ತಿಸಲ್ಪಡುವ ಇವರಿಗೆ, ಬನಚರ>ವನಚರ>ಬಂಜಾರ. ಹೀಗೆ ಬನದಲ್ಲಿ ಸಂಚರಿಸುವವರು ಎಂಬ ಅರ್ಥದಲ್ಲಿ ಬಂಜಾರರು ಎಂದು ಅದೇ ರೀತಿ ಲವಣದ ವ್ಯಾಪಾರಿಗಳು ಎಂಬ ಅರ್ಥದಲ್ಲಿ ಲಂಬಾಣಿಗರು ಎಂದು ಹೆಸರು ಬಂದಿದೆ, ಇವರ ಇತಿಹಾಸ ಕ್ರಿ..೪೦೦ ರರ ವರೆವಿಗೂ ಇದೆ. ಇವರು ಮೂಲತಃ ರಾಜಸ್ಥಾನದ ರಜಪೂತ ವಂಶಕ್ಕೆ ಸೇರಿದವರು,  ಎಂದರೇ ಮೂಲತಃ ಕ್ಷತ್ರಿಯರು, ರಾಣಾಪ್ರತಾಪನ ಕಾಲದಲ್ಲಿ, ಅಕ್ಬರ್ ನೊಂದಿಗಿನ ಯುದ್ಧದಲ್ಲಿ ಸೋತ ರಾಣಾಪ್ರತಾಪನ ಕಡೆಯವರಾದ ಲಂಬಾಣಿಗರಿಗೆ ಹಾಗೂ ಇತರೆ ರಜಪೂತರಿಗೆ ಅಕ್ಬರ್ ಸೇನೆ ಯವರು ನೀಡುತ್ತಿದ ಕಿರುಕುಳವನ್ನು ಸಹಿಸದೆ ಕಾಡುಗಳಲ್ಲಿ ಸೇರಿದರು, ಕಾಡುಗಳಲ್ಲಿಯೆ ಸಂಚಾರಿ ಜೀವನವನ್ನು ಆರಂಭಿಸಿದ ಲಂಬಾಣಿಯವರು ತಮ್ಮ ದಷ್ಟಪುಷ್ಟವಾದ ಧನಕರುಗಳೊಂದಿಗೆ ಕಾಡುಮೇಡುಗಳಲ್ಲಿ ಅಲೆಯುತ್ತಿದರಿಂದ ಇವರ ಧೈರ್ಯ ಮತ್ತು ಸಾಹಸವನ್ನು ಮೆಚ್ಚಿದ ಮೊಗಲರು ಲಂಬಾಣಿಗರನ್ನು ತಮ್ಮ ಸೇನೆಗೆ ಸೇರಿಸಿಕೊಂಡರು.

 ಮೊಗಲರ ಸೇನೆಯಲ್ಲಿ ಲಂಬಾಣಿಗರು ತಮ್ಮ ಸಾಕು ನಾಯಿಗಳ ಹಾಗೂ ಧನಕರುಗಳ ಸಹಾಯದಿಂದ ಮೊಗಲರ ಸೇನೆಗೆ ಆಹಾರ ಪದಾರ್ಥಗಳನ್ನು ಹಾಗೂ ಇನ್ನಿತರೇ ಅವಶ್ಯಕ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಕೆಲಸ ಮಾಡುತ್ತಿದರು, ಇದರಿಂದ ಮೊಗಲರಿಗೆ ಹೆಚ್ಚು ಅನುಕೂಲವಾಗಿದಷ್ಟೇ ಅಲ್ಲದೇ ಲಂಬಾಣಿಗರಿಗೂ ಇದು ಜೀವನ ನಿರ್ವಹಣೆಗಾಗಿ ಸಹಾಯಕವಾಯಿತು.

ಮುಂದೆ ಕಾಲಾಂತರದಲ್ಲಿ ಮೊಗಲರ ಆಡಳಿತ ಮುಗಿದು, ಬ್ರಿಟೀಷ್ಆಡಳಿತ ಪ್ರಾರಂಭವಾಗಿ ಬ್ರಿಟೀಷ್ಆಧುನಿಕತೆ ಪ್ರಾರಂಭವಾದ ಮೇಲೆ ರೈಲು, ರಸ್ತೆ, ಮುಂತಾದ ಸಂಚಾರಿ ವ್ಯವಸ್ಥೆ ಪ್ರಾರಂಭವಾದಾಗ ಲಂಬಾಣಿಗರ ರಾಷ್ಟ್ರಕಾರ್ಯ ಸಂಪೂರ್ಣವಾಗಿ ನಿಂತುಹೋಗಿ, ಇವರ ಬದುಕು ದುರ್ಭರವಾಯಿತು. ಮುಂದೆ ತಮ್ಮ ಅಸಂಖ್ಯ ಧನಕರುಗಳ ಪಾಲನೆ ಸಾಧ್ಯವಾಗದೆ ಹಲವರು ತಮ್ಮ ಧನಕರುಗಳನ್ನು ಮಾರಿಕೊಂಡು ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಸ್ಥಳಗಳಿಗೆ ತೆರಳಿ ಬೇರೆ ಬೇರೆ ಉದ್ಯೋಗಗಳನ್ನು ಕಂಡುಕೊಂಡರು ,.

"ರೈಲುಗಳನ್ನು ಬಳಕೆಗೆ ತಂದು ತಮ್ಮ ರಪ್ತು ಕಾರ್ಯವನ್ನು ಕುಂಠಿತಗೊಳಿಸಿದ ಬ್ರಿಟೀಷ್ಸರ್ಕಾರದ ವಿರುದ್ಧ ಹೋರಾಡಿದ್ದು ಸಹಜವಾಗಿದ್ದರೂ ಇಂಥಹಾ ಬಲಾಢ್ಯ ಮತ್ತು ಸುಸಂಸ್ಕೃತ ದೇಶಭಕ್ತ ಸಮಾಜವನ್ನು ಅಪರಾಧಿ ಜನಾಂಗ (ಕ್ರಿಮಿನಲ್ಟ್ರೈಬ್ಸ) ಎಂದು ಪರಿಗಣಿಸಿದ ಬೀಟಿಷರು ಅಪರಾಧಿ ಬುಡಕಟ್ಟು ಕಾಯ್ದೆ - ೧೮೮೭ ನ್ನು ಜಾರಿಗೆ ತಂದು ಇವರ ಸಾಮಾಜಿಕ , ಶೈಕ್ಷಣಿಕ , ಆರ್ಥಿಕ ಅಭಿವೃದ್ಧಿಗೆ ಅಡ್ಡಿಯನ್ನುಂಟುಮಾಡಿದರು".

 " ಬ್ರೀಟಿಷ್ಸರ್ಕಾರದ ಅನ್ಯಾಯ ಹಾಗೂ ಅತ್ಯಾಚಾರಕ್ಕೆ ಬಲಿಯಾಗಿ ನಾಗರಿಕ ಬದುಕಿನಿಂದ ದೂರವಾದ ಲಂಬಾಣಿಗರು ಕಾಡು ಮೇಡುಗಳಲ್ಲಿ , ಗುಡ್ಡಗಾಡು ಪ್ರದೇಶದಲ್ಲಿ ತಾಂಡಗಳನ್ನು ನಿರ್ಮಿಸಿಕೊಂಡು ಸ್ವತಂತ್ರವಾದ ಬದುಕನ್ನು ಸಾಗಿಸತೊಡಗಿದರು"." ಹೀಗೆ ಇತಿಹಾಸದ ಕಾಲಚಕ್ರಕ್ಕೆ ಸಿಲುಕಿದ ಲಂಬಾಣಿಗರ ಸ್ಥಿತಿ ತುಂಬಾ ಧೀನಾವಸ್ಥೆಯನ್ನು ತಲುಪಿತು".   ( ಕರ್ನಾಟಕ ಬುಡಕಟ್ಟುಗಳು ಸಂ -, ಪುಟ ಸಂಖ್ಯೆ ೧೧೬)

ಲಂಬಾಣಿ ಬುಡಕಟ್ಟು ಸಮುದಾಯದಲ್ಲಿ ಅವರದೆ ಆದ ಆಚರಣೆಗಳು, ಆರಾಧನಾ ಪಧ್ಧತಿಗಳು ಇವೆ, ಅದೇ ರೀತಿ ಹಲವು ಒಳ ಪಂಗಡಗಳು ಇವರಲ್ಲಿವೆ . ಲೇಖನದ ಪ್ರಾರಂಭದಲ್ಲಿ ಹೇಳಲಾದ ನಮ್ಮೂರಿಗೆ ಬರುತ್ತಿದ ಮಹಿಳೆಯರು "ಡಾಢಿ" ಎಂಬ ಲಂಬಾಣಿ ವೃತ್ತಿ ಗಾಯಕ ಪಂಗಡಕ್ಕೆ ಸೇರಿದ್ದು ಲಂಬಾಣಿಗರಲ್ಲಿ ಇವರನ್ನು ಸ್ವಲ್ಪ ತಳ ಪಂಗಡವಾಗಿ ಗುರ್ತಿಸಿದ್ದಾರೆ. ಇದೇ ರೀತಿಯ ಹಲವು ವೃತ್ತಿಯ ಜನರು ದೇಶದ ವಿವಿದ್ಧ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ. ಇವರದ್ದೇ ಆದ ಸ್ವಂತ ವೈದ್ಯ ಪದ್ಧತಿಗಳು, ಮನರಂಜನಾ ಚಟುವಟಿಕೆಗಳು, ಪುರಾಣಗಳು ಇತಿಹ್ಯಗಳು ,ನಂಬಿಕೆಗಳು, ದೈವಗಳು ಇವೆ.

ಅದೇ ರೀತಿ ಹಕ್ಕಿ ಪಿಕ್ಕಿ ಯವರು,    ಇವರು ಲಂಬಾಣಿಯವರ ಸಹೋದರ ಸಂಭಂಧದಲ್ಲಿ ಗುರ್ತಿಸಿಕೊಂಡಿದ್ದಾರೆ, ಅಥವಾ ಗುರ್ತಿಸಲ್ಪಟ್ಟಿದ್ದಾರೆ. ಇವರು ಲಂಬಾಣಿಗರಂತೆ ರಾಜಪೂತ ಮೂಲದವರು, ರಾಜಸ್ಥಾನದ "ಬಾಗ್ರಾ" ಎಂಬ ಪ್ರದೇಶ ಇವರ ಮೂಲ ಸ್ಥಾನವಾದರಿಂದ ಇವರನ್ನು "ವಾಗ್ರಾ" ಗಳೆಂದು ಕರೆಯುತ್ತಾರೆ.

 ವಾಗ್ರಾ ಗಳು ಸಹ ಲಂಬಾಣಿಗರ ಜೊತೆ ರಾಣಾಪ್ರತಾಪ ಸಿಂಹನ ಸಾಮ್ರಾಜ್ಯದಲ್ಲಿದವರ,  ಮುಂದೆ ಮೊಗಲರ ನಂತರ ಇವರು ಸಹ ಬೇಟೆ ಮಾಡಿಕೊಂಡು ಕಾಡುಗಳಲ್ಲಿ ಜೀವಿಸುತ್ತಿದ್ದರು. ಬೇಟೆ ಸಿಗದಿದ್ದಾಗ ಸಣ್ಣಪುಟ್ಟ ಕಳವುಗಳನ್ನು ಮಾಡಲು ತೊಡಗಿದ್ದರಿಂದ  ಬ್ರೀಟೀಷರು ಇವರನ್ನು ಕ್ರಿಮಿನಲ್ಟ್ರೈಬ್ಸ ಎಂದು ಗುರ್ತಿಸುತ್ತಾರೆ , ಇದರಿಂದ ಬ್ರಿಟೀಷರಿಗೆ ಹೆದರಿದ ಇವರು ಕಾಡುಗಳಲ್ಲಿ ಹರಡಿಕೊಂಡು ತುಂಬಾ ಹೈರಾಣಾದ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಹಗಲು ವೇಷದವರು, ಇವರ ಅಸ್ಥಿತ್ವವನ್ನು ಸುಮಾರು ೧೨ ನೇ ಶತಮಾನಕ್ಕೆ ಹಿಂದೆಯಿಂದ ಗುರ್ತಿಸಿದ್ದಾರೆ. ಹಾಗೇ ದೊಂಬರು ಸಹ ತಮ್ಮ ಮೂಲವನ್ನು ಕಂಪ್ಲಿ ಅರಸರಿಂದ ಗುರ್ತಿಸಿಕೊಳುತ್ತಾರೆ.

ಛಪ್ಪರಬಂದರ ಬುಡಕಟ್ಟು ಜನಾಂಗದ ಇತಿಹಾಸವು ಸಹ ಮೊಗಲರ ಆಳ್ವಿಕೆಯಲ್ಲಿ ಅವರ ಸೈನ್ಯದ ಒಂದು ಉತ್ಸಾಹ ಭರಿತ ಗುಂಪಾಗಿ ಸೈನಿಕರಿಗೆ ಗುಡಿಸಲುಗಳನ್ನು ಹಾಕುವ ಕೆಲಸದಲ್ಲಿ ನಿರತರಾಗಿದವರೆಂದು ಹೇಳುತ್ತದೆ. ಇವರು ಛಪ್ಪರವನ್ನು ಹಾಕುವ ಕಾಯಕದವರಾಗಿದ್ದರಿಂದ ಇವರಿಗೆ ಛಪ್ಪರಬಂದರು ಎಂಬ ಹೆಸರು ಬಂದಿತೆಂದು ಊಹಿಸಲಾಗಿದೆ. ಇವರು ಖೋಟ್ಟಿ ನಾಣ್ಯ ತಯಾರಿಸುವುದರಲ್ಲಿಯೂ ನಿಪುಣರಾಗಿದ್ದವರು. ಮುಂದೆ ದೇಶದ ತುಂಬೆಲ್ಲಾ ಹರಡಿಕೊಂಡು ಸಣ್ಣ ವ್ಯಾಪಾರಿಗಳಾಗಿ, ಕಪಟ ಸಾಧುಗಳಾಗಿ, ಜೀವನ ಸಾಗಿಸಲು ಪ್ರಾರಂಭಿಸಿದರು. ಅದೇ ರೀತಿ ಡುಂಗ್ರಿ ಗರಾಸಿಯ ಬುಡಕಟ್ಟು ಜನಾಂಗದವರು ಇವರು ಕಾಡುಗಳಲ್ಲಿ ವಾಸ ಮಾಡುತ್ತಿದ್ದವರು. ಪಶುಪಾಲನೇ ಬೇಟೆ ಇವರ ಪ್ರಮುಖ ವೃತ್ತಿ ಆಗಿತ್ತ.

  ಮತ್ತೊಂದು ವಿಷಯ ಸಂಧರ್ಭದಲ್ಲಿ ನೆನೆಸಿಕೊಳ್ಳಬೇಕೆನಿಸುತ್ತೆ , ಅದು ತೃತೀಯ ಲಿಂಗಿಗಳ ವಿಚಾರ,  ಭಾರತದಲ್ಲಿ ತೃತೀಯಲಿಂಗಿಗಳದೇ ಆದ ಒಂದು ಆಧ್ಯಾತ್ಮಿಕ ಗುರು ಶಿಷ್ಯ  ಪರಂಪರೆ ಇತ್ತು,  ಹಿಂದೆ ಭಾರತದಲ್ಲಿ ಶಿಖಂಡಿ ಒಬ್ಭ ರಾಜ ಆಗಿದ್ದ ,ಅದೇ ರೀತಿ ತೃತೀಯ ಲಿಂಗಿಗಳು ರಾಜಮಹಾರಾಜರ ಅರಮನೆಗಳಲ್ಲಿರುತ್ತಿದ್ದವರು, ಮಹಾರಾಣಿಯರ ಯೋಗ ಕ್ಷೇಮ ನೋಡುತ್ತಿದ್ದವರು. ಮುಂದೆ ಬ್ರಿಟೀಷ್ಆಡಳಿತದಲ್ಲಿ ಇವರು ಸಹ ಎಲ್ಲಾ ಬುಡಕಟ್ಟುಗಳಂತೆ ಅಂಚಿಗೆ ಸರಿಸಲ್ಪಟ್ಟು ಇಂದು ತುಂಬಾ ಕಷ್ಟದ ಬದುಕು ನಡಿಸುತ್ತಿರುವುದು ಕಂಡುಬರುತ್ತೆ.

ಮೇಲಿನ ವಿಚಾರಗಳನ್ನು ನೋಡಿದ ಮೇಲೆ ನನ್ನ ಗಮನಕ್ಕೆ ಬಂದದ್ದು, ಬ್ರಿಟೀಷ್ ಆಗಮನದೊಂದಿಗೆ ನಾವು ಭಾರತದಲ್ಲಿ ಆಧುನಿಕತೆಯನ್ನು ಗುರುತಿಸುತ್ತೇವೆ, ಆದರೇ ಆಧುನಿಕತೆ ಇಂತಹ ಹಲವು ಬುಡಕಟ್ಟುಗಳ ಬದುಕುಗಳನ್ನು ಕಿತ್ತುಕೊಂಡದ್ದು, ಅವರ ಬದುಕುಗಳನ್ನು ದುರ್ಭರಗೊಳಿಸಿದ್ದು ನಮ್ಮ ಕಣ್ಣ ಮುಂದಿದೆ.

ಮುಂದುವರೆದು, )ಆಧುನಿಕ ಭಾರತದಲ್ಲಿ ಬುಡಕಟ್ಟುಗಳು ಹೇಗೆ ನಿರ್ಲಕ್ಷ್ಯಕ್ಕೆ ಒಳಗಾದವು ?         ) ಬುಡಕಟ್ಟುಗಳು ಆಧುನಿಕತೆಯನ್ನು ನೋಡಿದ ದೃಷ್ಟಿಕೋನ ಯಾವುದು ?                                                           ಎರಡು ವಿಷಯಗಳನ್ನು ಮುಂದೆ ವಿಶೇಷವಾಗಿ ನೋಡಬಹುದಾಗಿದೆ.                                                             

ಭಾರತದಲ್ಲಿ ಬುಡಕಟ್ಟುಗಳ ಇತಿಹಾಸ / ಐತಿಹ್ಯಗಳ ಹಿನ್ನೆಲೆಯಲ್ಲಿ ಅವರ ಗತ ವೈಭವವನ್ನು ನೋಡಿದ್ದೇವಿ. ಮುಂದುವರೆದು ನೋಡುವುದಾದರೇ, ಬ್ರಿಟೀಷರ ಆಗಮನದೊಂದಗೆ ಹಿಂದೆ ನೋಡಿದ ಹಾಗೆ ಇಲ್ಲಿನ ಬುಡಕಟ್ಟುಗಳು ಅಂಚಿಗೆ ಸರಿಸಲ್ಪಟ್ಟಿದು ಹೌದು ಆದರೇ ಅದಕ್ಕೆ ಕಾರಣವೇನೆಂಬುದನ್ನು ನೋಡುವುದಾದರೇ,

) ಪ್ರಭುತ್ವ ಸ್ಥಾಪನೆಗಾಗಿ ಯಾವಾಗಲೂ ಸಹ ಬಹುತ್ವವನ್ನು ತುಳಿದು ಏಕರೂಪೀಕರಣವನ್ನು ಹೇರಲಾಗುತಿರುತ್ತೆ ಎಂಬ ಒಂದು ಮಾತಿದೆ ಅದರಂತೆ, ಬ್ರಿಟೀಷರೂ ಸಹ ತಮ್ಮ ಪ್ರಭುತ್ವವನ್ನು ಭಧ್ರಪಡಿಸಿಕೊಳ್ಳಲು ಇಲ್ಲಿನ ಬಹುತ್ವವನ್ನು ತುಳಿಯುವುದಕ್ಕೆ ಪ್ರಾರಂಭಿಸಿದರು, ಅಷ್ಟೇ ಅಲ್ಲದೇ   ಅಪರಾಧಿ ಬುಡಕಟ್ಟು ಕಾಯ್ದೆಯನ್ನು ಹೇರಿ ಬುಡಕಟ್ಟು ಜನರನ್ನು ನಿಯಂತ್ರಿಸುವುದಕ್ಕೆ ಪ್ರಾರಂಭಿಸಿದರು.

ಕೆಲವು ಬುಡಕಟ್ಟು ಜನಾಂಗಗಳು ಬ್ರೀಟೀಷರ ವಿರುಧ್ಧ ಹೋರಾಟ ಮಾಡ್ಡಿದನ್ನು ಸಹ ನಾವು ನೋಡಿದ್ದೇವೆ . ತೀರ ಸ್ವಾಭಿಮಾನಿಗಳಾದ ಬುಡಕಟ್ಟು ಜನರು ಯಾವುದೇ ಆಮೀಷಗಳಿಗೆ ಒಳಗಾಗದೆ ಹೋರಾಡಿದರು,  ಅದರಲ್ಲಿ  ಲಂಬಾಣಿಗರು, ಹಕ್ಕಿ ಪಿಕ್ಕಿಯವರು ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳವರು ಇದ್ದರು. ಅದೇ ರೀತಿ ಹಲಗಲಿಯ ಬೇಡರು ನಮಗೆಲ್ಲಾ ತಿಳಿದಿರುವಂತೆ ಭಾರತದ ಸ್ವತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇವರದೊಂದು ಪ್ರಮುಖವಾದ ಘಟ್ಟ/ಪಾತ್ರ. ಹೀಗೆ ಹಲವು ಬುಡಕಟ್ಟುಗಳು ಬ್ರೀಟಿಷರ ವಿರುದ್ದ ಇದ್ದದರಿಂದ ಇವರನ್ನು ನಿಯಂತ್ರಿಸುವುದು  ಅವರಿಗೆ ಅನಿವಾರ್ಯವಾಯಿತು. ಹೀಗಾಗಿ ಬುಡಕಟ್ಟುಗಳವರ ಮೇಲೆ ಹಲವು ನಿಯಂತ್ರಕ ಕಾಯ್ದೆಗಳನ್ನು ತಂದ ಪರಿಣಾಮದಿಂದಾಗಿ ಬುಡಕಟ್ಟುಗಳು ಇವರಿಗೆ ಹೆದರಿ ಕಾಡುಗಳನ್ನು ಸೇರಿ ಅಜ್ಞಾತ ಜೀವನ ನಡೆಸಲು ಪ್ರಾರಂಭಿಸಿದರು.

) ಬ್ರೀಟಿಷರಿಗೆ ಇಲ್ಲಿನ ಕಲಾಚಾರದ ಇಲ್ಲಿನ ಬಹುತ್ವದ ಹಾಗೂ ವೈವಿಧ್ಯತೆಯ ಬಗ್ಗೆ ಏನೇನು ತಿಳಿದಿರಲಿಲ್ಲವಾದರಿಂದ , ತಮ್ಮ ಆಡಳಿತ ಅನುಕೂಲಕ್ಕಾಗಿ ತಮಗೆ ಸರಿ ಕಂಡದನ್ನು ಮಾಡುತ್ತಾ ನಡೆದರು, ಆದರ ಪರಿಣಾಮವಾಗಿ ಇಲ್ಲಿನ ಬುಡಕಟ್ಟುಗಳವರು ಹೆಚೆಚ್ಚು ಅನ್ಯಾಯಕ್ಕೆ ಈಡಾಗುತ್ತಲೇ ಬಂದರು.

)  ಬ್ರೀಟಿಷ್‌ ಆಧುನಿಕತೆಯ ಪರಿಣಾಮ ನಮ್ಮಲ್ಲಿ ಟಿ ವಿ, ರೇಡಿಯೋ , ಮುಂತಾದ ಪರಿಕರಗಳ ಹಾಗೇ ಸಿನೆಮಾಗಳ ಆಗಮನದಿಂದಾಗಿ ಹಿಂದೆ ಮನರಂಜನೆಯ ಮೂಲಗಳಾಗಿದ್ದ ಬುಡಕಟ್ಟುಗಳಾದ  ದೊಂಬರು, ಲಂಬಾಣಿಯರು, ಮುಂತಾದವರು ತಮ್ಮ ಉದ್ಯೋಗ ಹಾಗೂ ಆಹಾರ ಕಳೆದುಕೊಳ್ಳಬೇಕಾಯಿತು.

 ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೇ, ನಮ್ಮಲ್ಲಿ ಬುಡಕಟ್ಟು ಅಧ್ಯಾಯನವನ್ನು ಮೊದಲು ಕೈಗೊಂಡವರು ಸಹ ಬ್ರಿಟೀಷರೇ ಎಂಬುದು, ಆದರೆ ನನಗೆ ತೋಚಿದಂತೆ ಇಲ್ಲಿನ ಸಮಸ್ಯೆ ಏನು ಎಂದರೇ , ಇವರ ಅಧ್ಯಾಯನ ಎಲ್ಲೋ ಒಂದು ಕಡೆ ಜನರನ್ನು ಒಂದು ಸಂಶೋಧನೆಯ ವಸ್ತುಗಳಾಗಿ ಅಷ್ಟೆ ಕಂಡಿರಬಹುದು ಅಂತ ನನ್ನ ಅನುಮಾನ. ಅದೇ ರೀತಿ ನಮ್ಮ ಸಂಶೋಧನೆಗಳು ಇನ್ನು ಮುಂದುವರೆದು ಬುಡಕಟ್ಟುಗಳವರ ಜೀವನ ಸುಧಾರಣಾ ಕ್ರಮಗಳ ಬಗ್ಗೆಯೂ ಇನ್ನು ಹೆಚ್ಚಿನ ಚಿಂತನೆ ಆಗಬೇಗಾಗಿತ್ತು ಅನಿಸುತ್ತೆ.

ಇಷ್ಟೆಲ್ಲ ಸಮಸ್ಯಗಳು, ವಿಧ್ರೋಹಗಳಿಗೆ ಸಿಲುಕಿದ ಇವರ ಬದುಕುಗಳು ಭಾರತ ಸ್ವತಂತ್ರ್ಯವಾಗಿ  ಇಷ್ಟು ವರ್ಷಗಳಾದರೂ ಸಹ ಬದಲಾಗದೇ ಇರುವುದು ಶೋಚನೀಯ. ಆದರೆ ಸರ್ಕಾರಗಳು ಇವರಿಗೆ ಅನುಕೂಲ ಮಾಡುವುದಕ್ಕೆ ಬದಲಾಗಿ ಮತ್ತಷ್ಟು ಪ್ರತಿಕೂಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಕಾಣಬಹುದಾಗಿದೆ.

 ಮೊನ್ನೆ ಮೊನ್ನೆ ಲಂಬಾಣಿ, ಕೊರಚ, ಕೊರಮ ಮುಂತಾದ ಜಾತಿಗಳನ್ನು ಎಸ್‌ ಸಿ ಪಟ್ಟಿಯಿಂದ ಕೈ ಬಿಡಬೇಕೆಂದು ಸುಪ್ರೀಂಕೋರ್ಟ ನಿರ್ದೇಶನ ನೀಡಿರುವುದನ್ನು ಒಂದು ಪತ್ರಿಕೆ ವರದಿ ಮಾಡಿತ್ತು, ಇದು ಯೋಚಿಸಬೇಕಾದ ವಿಚಾರವೇ  ಎಸ್‌ ಸಿ ಮೀಸಲಾತಿಯ ಲಾಭವನ ಸಮುದಾಯಗಳು ಹೆಚ್ಚೆಚ್ಚು ಪಡೆಯುವುದಕ್ಕೆ ಬೇಕಾದ ಸೂಕ್ತ  ಕ್ರಮಗಳನ್ನು ತೆಗೆದುಕೊಳುವುದಕ್ಕೆ ಬದಲಾಗಿ ಹೀಗೆ ಮೀಸಲಾತಿ ಪಟ್ಟಿಯಿಂದ ಅವರನ್ನು ಕೈ ಬಿಡುವ ಆಲೋಚನೆ ಏನಿದೇ ?  ಅದು ಖಂಡಿತ  ತಪ್ಪು.

 ಇನ್ನು ಎನ್ಪಿ ಆರ್, ಸಿ ಕಾಯ್ದೆಗಳನ್ನು ನೋಡುವುದಾದರೇ, ಇದರ ಪರಿಣಾಮ ನೇರವಾಗಿ ಬುಡಕಟ್ಟುಗಳ ಮೇಲೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇರುವುದಕ್ಕೆ ಒಂದು ನೆಲೆಯಿಲ್ಲದ ಅಲೆಮಾರಿ ಸಮುದಾಯಗಳು ತಮ್ಮ ಇರುವಿಕೆಯ ದಾಖಲೆಯನ್ನ ಎಲ್ಲಿಂದ ತರುತ್ತಾರೆ ಎಂಬ ಒಂದು ಸಣ್ಣ ಆಲೋಚನೆ ಸಹ ನಮ್ಮ ಸರ್ಕಾರಕ್ಕೆ ಇಲ್ಲದೆ ಇರುವುದು  ನೋವಿನ ವಿಷಯವೇ ಸರಿ.

ಸರ್ಕಾರ ಯಾವುದೇ ರೀತಿಯ ಕಾರ್ಯಕ್ರಮವನ್ನು ಬುಡಕಟ್ಟುಗಳ ಅಭಿವೃಧ್ಧಿಗೆ ನೀಡಿಲ್ಲವೆಂದಲ್ಲಾ, ಅದರೇ ಕಾರ್ಯಕ್ರಮಗಳು ನಿಜವಾಗಿ ತಲುಪಬೇಕಾದವರಿಗೆ ತಲುಪುತ್ತಿಲ್ಲ. ಉದಾ: ಸರ್ಕಾರ ನೀಡಿರುವ ಮೀಸಲಾತಿ, ಎಸ್ಸಿ ಮೀಸಲಾತಿ ಪಟ್ಟಿಯಲ್ಲಿ ಕೆಲವು ಪ್ರಭಲ ಸಮುದಾಯಗಳು ಹಾಗೇ ತೀರ ಹಿಂದುಳಿದ ಸಮುದಾಯಗಳವರು ಇರುತ್ತಾರೆ. ಅದರಲ್ಲಿ ಎಲ್ಲಾ ಸರ್ಕಾರಿ ಸೌಲಭ್ಯಗಳು  ಸಹ ಪಟ್ಟಿಯಲ್ಲಿರುವ ಪ್ರಭಲ ಸಮುದಾಯಗಳ ಪಾಲಾಗುತ್ತೆ. ಅದೇ ರೀತಿ ಹಲವು ಬುಡಕಟ್ಟು ಸಮುದಾಯಗಳ ಮಕ್ಕಳು ಶಾಲೆಗೇ ಹೋಗುವುದಿಲ್ಲವಾದರಿಂದ ಮೀಸಲಾತಿಯ ಲಾಭ ಪಡೆಯುವುದು ಅವರ ಪಾಲಿಗೆ ಕನಸಾಗೇ ಉಳಿಯುತ್ತೆ.

ಇನ್ನು ಎರಡನೆಯದಾಗಿ, ಬುಡಕಟ್ಟುಗಳು ಆಧುನಿಕತೆಯನ್ನು ನೋಡಿದ ದೃಷ್ಟಿಕೋನ ಯಾವುದು ?  ಎಂಬುದನ್ನು ನೋಡುವುದಾದರೇ,  ಇರುಳರು ರಾಮನಗರ ,ಮಾಗಡಿ ಪ್ರಾಂತ್ಯದಲ್ಲಿ ವಾಸವಿರುವ ಬುಡಕಟ್ಟು ಜನಾಂಗದವರು, ಇವರು ಬಟ್ಟೆ ಹಾಕಿಕೊಂಡು ಯಾರಾದರು ಆ ಕಡೆ ಬಂದರೆ ತಕ್ಷಣ ಓಡಿಹೋಗಿ ತಮ್ಮ ಗುಹೆ ಒಳಗೆ  ಅಡಗಿಕೊಳುತ್ತಿದರಂತೆ,  ಇದರಿಂದ ನಮಗೆ ಏನು ತಿಳಿಯುತ್ತೆ ಅಂದರೇ , ಬುಡಕಟ್ಟು ಜನರು ಆಧುನಿಕರನ್ನು ನೋಡಿ ಭಯ ಪಡುತ್ತಿದ್ದರು , ಭಯ ಅನ್ನುವುದಕ್ಕಿಂತ ಒಂದು ರೀತಿಯ ಬಂಡಾಯವನ್ನುಅಥವಾ ತಿರಸ್ಕಾರವನ್ನು ಅವರು ತೋರುತ್ತಿದ್ದರು ಅಂತ ಅನ್ನಿಸುತ್ತೆ.

ಅದೇ ರೀತಿ ನಾವು   ಯಾವುದನ್ನು ಆಧುನಿಕತೆ ಅಂತ ನಂಬಿದೇವೋ, ಅದನ್ನು ಅವರು ಆಧುನಿಕತೆ ಅಂತ ಒಪ್ಪುವುದಿಲ್ಲ . ಅವರದೇ ಆದ ಆಧುನಿಕತೆ ಅವರಲ್ಲಿದೆ,  ಇವರಿಗಾಗಿ ಸರ್ಕಾರ ಹಲವು ಅನುಕೂಲಗಳನ್ನು ನೀಡೆದೆಯೆಂದು ಹಿಂದೆ ಹೇಳಿದ್ದೇವೆ. ಆದರೇ ಬುಡಕಟ್ಟು ಮಕ್ಕಳು ಹುಟ್ಟಿ ಬೆಳೆದ ಪರಿಸರ , ಆಧುನಿಕ ಶಾಲಾ ಪರಿಸರಕ್ಕೆ ಒಪ್ಪುವುದಿಲ್ಲ. ಅವರಿಗೆ ಒಪ್ಪುವ ರೀತಿಯಲ್ಲಿ ಅವರಿಗೆ ಅನುಕೂಲಗಳನ್ನು ಮಾಡುವ ಕಡೆ ನಾವು ಗಮನ ಹರಿಸಬೇಕಾಗಿದೆ.

ಅದಾಗ್ಯೂ ಆಧುನಿಕತೆಯ ಪ್ರಭಾವಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಕೆಲವು ಬುಡಕಟ್ಟುಗಳು ಒಳಗಾಗಿರುವುದನ್ನು ಗುರ್ತಿಸಬಹುದು, ಲಂಬಾಣಿಯರಲ್ಲಿ ಹಲವು ರಾಜಕಾರಣಿಗಳು, ಆಡಳಿತ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಇದ್ದಾರೆ. ಇದು ಆಧುನಿಕ ಶಿಕ್ಷಣ ಪದ್ದತಿಯಿಂದ ಆದದ್ದು. ಆದರೇ ಅದು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅನ್ವಯ, ಉಳಿದವರು ಅದರಲ್ಲಿಯು ಹಿಂದುಳಿದ ಕೆಲವು ಒಳಪಂಗಡಗಳು ಯಾವುದೇ ಅಭಿವೃಧ್ದಿ ಕಾಣದೆ ಹಾಗೆ ಇರುವುದನ್ನು ಇಂದಿಗೂ ಗಮನಿಸಬಹುದಾಗಿದೆ.                                                          

ಡುಂಗ್ರಿ ಗರಾಸಿಯ ಸಮುದಾಯದವರ ಬಗ್ಗೆ ಹಿಂದೆ ಹೇಳಿದ್ದೆ, ಅವರು ಬೇಟೆಯನ್ನೇ ನಂಬಿಕೊಂಡಿದ್ದವರು. ಈಗ ಪ್ಲಾಸ್ಟಿಕಾ ವಸ್ತುಗಳ ರಿಪೇರಿ, ಪ್ಲಾಸ್ಟಿಕ್ಆಯುವುದು, ಸೆಂಟ್ಮಾರಾಟ ಇತ್ಯಾದಿ ಸಣ್ಣ ಸಣ್ಣ ವ್ಯಾಪಾರಗಳನ್ನ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಹೀಗೆ ನಗರ ಪ್ರದೇಶಗಳ  ಕಡೆ ಬಂದವರು ಪುರುಷರು ಹಾಗೂ ಮಹಿಳೆಯರು ಬೀಡಿ ಸಿಗರೇಟ್ಮಧ್ಯಪಾನ ಮುಂತಾದ ಚಟಗಳಿಗೆ ಬಿದ್ದು, ಹಣ ಸಾಕಗದೇ ಇದ್ದಾಗ ಬಿಕ್ಷಾಟನೆ, ಕಳ್ಳತನ ಗಳಿಗೆ ಮುಂದಾದನ್ನು ಸಹ ಕಾಣಬಹುದಾಗಿದೆ.

ಇದೇ ರೀತಿ ಹಲವು ಬುಡಕಟ್ಟು ಪಂಗಡಗಳು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟು ಅಥವಾ ಹಾಳು ಮಾಡಿಕೊಂಡು ಜೀವಿಸುತ್ತಿದ್ದಾರೆ. ಮೇಲೆ ಹೇಳಿದಂತೆ ಕಳ್ಳತನ , ಬಿಕ್ಟಾಟನೆ, ಡೋಂಗಿ ಸಾಧು ವೇಷಗಳು(ಪರಂಪರೆಯಿಂದ ಬಂದ ವೇಷಭೂಷಣಗಳನ್ನು ಹೊರ್ತುಪಡಿಸಿ) ಹಲವು ಬುಡಕಟ್ಟುಗಳಿಗೆ ಅನಿವಾರ್ಯವಾಗಿದೆ. ಇದನ್ನೆ ಬಂಡವಾಳವಾಗಿರಿಸಿಕೊಂಡು ನಾವು ಸಹ ಕೆಲವು ಮಿಥ್ಯಾರೋಪಗಳನ್ನು ಅವರ ಮೇಲೆ ಹಾಕಿ ಖುಷಿ ಪಡುವುದನ್ನು ಸಹ ನೋಡಬಹುದಾಗಿದೆ, ಉದಾ: ಮೇಲುಕೋಟೆ ನರಸಿಂಹ ಸ್ವಾಮಿ ದೇವಾಲಯದ ಒಡವೆಗಳ ಕಳುವಿನ ಆರೋಪ ಹಕ್ಕಿ ಪಿಕ್ಕಿ ಜನಾಂಗ  ಅವರ ಮೇಲೆ ಬಂದದ್ದು .

 ಒಂದು ಕಡೆ ಸಾರ್ವಜನಿಕರು ಮತ್ತು ಸರ್ಕಾರಗಳು ಬುಡಕಟ್ಟುಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದರೇ, ಇದ್ಯಾವುದರ ಯೋಚನೆ ಇಲ್ಲದೆ  ಅವರ ಪಾಡಿಗೆ ಅವರು  ನಾಗರೀಕ ಬದುಕಿಗೆ ಸವಾಲೆನ್ನುವಂತೆ ಸಂಘರ್ಷದಲ್ಲೆ ಜೀವನ ನಡೆಸುತ್ತಲ್ಲೇ ಇದ್ದಾರೆ. ನಾವು ಅವರ ಬಗ್ಗೆ ಚರ್ಚೆ ಸಂವಾದಗಳನ್ನು ಮಾಡುತಲ್ಲೇ ಇದ್ದೇವೆ ......., ಪರಿಸ್ಥಿತಿ ಯಾವಾಗ ಬದಲಾಗುವುದೋ ಕಾದು ನೋಡಬೇಕಾಗಿದೆ.

ಪರಾಮರ್ಶನ ಗ್ರಂಥಗಳು :

) ಕರ್ನಾಟಕ ಬುಡಕಟ್ಟುಗಳು ಸಂಪುಟ - , ಪ್ರೋ.ಎಚ್.ಜೆ.ಲಕಪ್ಪಗೌಡ (ಸಂ) , ಕರ್ನಾಟಕ ಜಾನಪದ ಮತ್ತ ಯಕ್ಷಗಾನ ಅಕಾಡೆಮಿ, -೨೦೦೦

)ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು, ಡಾ, ಎಲ್, ಶ್ರೀನಿವಾಸ್(ಸಂ), ಕನ್ನಡ ವಿ ವಿ ಹಂಪಿ,-೨೦೧೦

)ಬುಡಕಟ್ಟು ಕುಲಕಸುಬುಗಳು, ಡಾ.ಕೆ.ಎಂ.ಮೈತ್ರಿ , ಕನ್ನಡ ವಿ ವಿ ಹಂಪಿ-೨೦೦೨

)ಅಲೆಮಾರಿ ಸಮುದಾಯಗಳ ಅಧ್ಯಾಯನ ಮಾಲೆ ,ಎಸ್.ಜಿ.ಸಿದ್ದರಾಮಯ್ಯ (ಪ್ರ ಸಂ ) ಕನ್ನಡ ಪುಸ್ತಕ ಪ್ರಾಧಿಕಾರ -೨೦೦೮

)  ಅಂಥರ್ಜಾಲ ಮೂಲ                                                       

                                                                                           ವರುಣ್‌ರಾಜ್ ಜೀ PH# 9448241450                                                                                      .                                                               E MAIL : MAHARISHIVARUNRAJJI@GMAIL.COM

 

    

 

 

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.