ನನ್ನ ಕವಿತೆಗಳು - ವರುಣ್ ರಾಜ್ ಜೀ.
ರಾಮ ನಾಮ ಜಪ
ನನಗೂ ರಾಮ ನಾಮ ಜಪಿಸುವ ಆಸೆ,
ರಾಮ ನಾಮ ಪರಮ ಪಾವನ ನಾಮ
ಆಹಾ, ಮೈ ರೊಮಾಂಚನ !
ರಾಮ ನಾಮ ಜಪಿಸುತ್ತಾ ಧ್ಯಾನಕ್ಕೆ ಕುಳಿತೆ.
ಅಯ್ಯೋ, ಏನದು ಆಕ್ರಂಧನ ?
ವನ ದೇವತೆ ತಾಟಕಿಯ ರೋಧನೆಯಹಾಗಿದೆ ?
ಆಗಲಿ ಬಿಡು , ನನಗೇನು ?
ಧ್ಯಾನ ಮುಂದುವರೆಸಿದೆ....
ಅಯ್ಯೋ , ಇದೇನು ರೋಧನೆ ?
ಅಣ್ಣತಮ್ಮರು ಸೇರಿ ನನ್ನ ಕಿವಿಮೂಗು
ಕುಯ್ದರೆಂದು ರೋಧಿಸುತ್ತಿರುವಳು!
ಯಾರಿವಳು ? ಯಾರಾದರೆ ನನಗೇನು ?
ಧ್ಯಾನ ಮುಂದುವರೆಸಿದೆ.....
ಇವನ್ಯಾರೋ ಗಾಯಗೊಂಡು, ಬಿದ್ದು
ಹೊರಳಾಡುತ್ತಿರುವನು, ಯಾರಿವನು ?
ಗಡ್ಡ ಬಿಟ್ಟು ತಪಸ್ವಿಯ ಹಾಗಿದಾನಲ್ಲ !
ಶಂಭುಕನೇ ? ಆಗಲಿ ಬಿಡು, ನನಗೇನು ?
ಧ್ಯಾನ ಮುಂದುವರೆಸಿದೆ...
ಯಾರೀಕೆ ? ಬೆಂಕಿಯಲ್ಲಿ ಬಿದ್ದು ಅಳುತ್ತಿರುವಳು ?
ಯಾರೀಕೆ? ಕಾಡಿನಲ್ಲಿ ಅಲೆಯುತ್ತಿರುವಳಲ್ಲ !
ಗರ್ಭಿಣಿಯ ಹಾಗೇ ಇದ್ದಾಳೆ.
ಆದರೇನು ಬಿಡು, ನನಗೇನು ?
ನಾನು ರಾಮ ನಾಮ ಜಪ ಮಾಡಬೇಕು !
ಧ್ಯಾನ ಮುಂದುವರೆಸಿದೆ....
ಅಯ್ಯೋ , ಯಾರೀತ ಹೀಗೆ ಅಳುತ್ತಿದ್ದಾನೆ ?
ರಾಮನೇ ? ಹೌದು, ರಾಮ ! ನನ್ನ ರಾಮ !
ಏಕೆ ಅಳುತ್ತಿರುವೆ ರಾಮ ? ಏನಾಯಿತು !
ನಾನು ಅಳುತ್ತಾ ಕೇಳಿದೆ !
ಧರ್ಮದ ಮತ್ತಿನಲ್ಲಿ ಸಾಕಷ್ಟು
ಅನ್ಯಾಯ ಮಾಡಿದೆ ಮಗುವೇ .
ಇನ್ನೇನಿದೆ ನನಗೆ ಮಾರ್ಗ ? ಈಗ ಅಳುವುದನ್ನು ಬಿಟ್ಟು !
ನಾನು ಹೇಳಿದೆ .ಅಳಬೇಡ ರಾಮ
ಅಳಬೇಡ. ನಾನೇನು ಮಾಡಲಿ ?
ಎಲ್ಲಾ ಮರೆತು ಜಾಣ ಕುರುಡು ತೋರಲು
ನನಗೂ ಬೇರೇನಿದೆ ಮಾರ್ಗ ?
ನಿನ್ನ ನಾಮ ಜಪ ಮಾಡುವುದನ್ನು ಬಿಟ್ಟು. - ವರುಣ್ ರಾಜ್ ಜೀ
ಕವಿತೆ
,
ಕವಿತೆ
ಬರೆಯಬೇಕು...
ಕವಿತೆ
ಬರೆಯಬೇಕು ಎಂಬ ಆಸೆ.
ಬರೆದೆ,
ಕವಿತೆ.
ಪ್ರಶ್ನೆಯೊಂದು
ಹುಟ್ಟಿತ್ತು!
ಯಾರಿಗಾಗಿ
ಕವಿತೆ ? ಯಾತಕ್ಕಾಗಿ?
ಉತ್ತರ
ಹುಡುಕಬೇಕಲ್ಲವೇ...
ಹುಡುಕಿದೆ
ಹುಡುಕಿದೆ ಹುಡುಕಿದೆ
ಸಿಗಲೇ
ಇಲ್ಲ,
ನಿಮಗೆ
ಸಿಕ್ಕಿತೇ ?
ಸಿಗಬಹುದು,
ಸಿಗದೇ ಇರಬಹುದು !
ಕನಿಷ್ಟ
ಪ್ರಶ್ನೆಯೊಂದು ಹುಟ್ಟಿತಲ್ಲ !
ಅದೇ
ಸಾರ್ಥಕತೆ...
ಇದೋ
ನನ್ನ ಕವಿತೆ. - ವರುಣ್ ರಾಜ್ ಜೀ
ದೀಪ
ಕವಿತೆಯೊಂದ
ಬರೆಯಬೇಕು
ದೀಪದ
ಕುರಿತು !
ದೀಪ
ಬೆಳಗಿಸಿ ಕಾಯಿಲೆ ಓಡಿಸಿದ ಕುರಿತು.
ಹೌದು
!
ಬರೆಯಬೇಕು.
ಮತೇನು
ಸಮಸ್ಯೆ ?
ಬರೆಯಬಹುದು
ಕವಿತೆ
ದೀಪದ
ಬಗ್ಗೆ ,
ದೀಪದ
ಬೆಳಕಿನ ಬಗ್ಗೆ !
ಆದರೆ
ಮನಸ್ಸು ಒಪ್ಪುತಿಲ್ಲವಲ್ಲ
ಏಕೆ
?
ದೀಪದ
ನೆರಳಿನ ಕತ್ತಲೆಯಲ್ಲಿ ನರಳುತ್ತಿರುವವರ,
ದೀಪದ
ಬೆಂಕಿಗೆ ಕೈ ಸುಟ್ಟುಕೊಂಡವರ ಆಕ್ರಂಧನ
ಕಿವಿಯಲ್ಲಿ
ಅನುರಣಿಸುವಾಗ
ಹೇಗೆ
ಬರೆಯಲಿ ಕವಿತೆ ?
ದೀಪದ
ಮೇಲೆ ! -
ದಾನಧರ್ಮವ ಮಾಡಬೇಕಣ್ಣ
ಹುಟ್ಟಿದ ಮೇಲುಪಯುಕ್ತನಾಗಿ ಹೋಗಬೇಕಣ್ಣ.
ದಾನ ಧರ್ಮವ ಮಾಡಬೇಕು ದಾನಿ ನೀನೆಂದೆನಿಸಬೇಕು, ದಾನ ಮಾಡಿದ ಪುಣ್ಯನಿನ್ನ ಸಂತತಿಗೆ ಶುಭ ತರುಲುಬೇಕು..
//ದಾನ//
ರಕ್ತದಾನ ಶ್ರೇಷ್ಠದಾನ, ಪ್ರಾಣ ಉಳಿಸುವ ಜೀವದಾನ.
ರಕ್ತದಾನ ಮಾಡಿದವನಿಗೆ ಇಲ್ಲವಣ್ಣ ರೋಗಗುಜಿನ. /ದಾನ/
ನೇತ್ರದಾನ ಶ್ರೇಷ್ಠದಾನ , ದಾನದಲ್ಲಿಯೇ ದೊಡ್ಡದಾನ.
ನೇತ್ರದಾನ ಮಾಡಿ ನೀನು ಎರಡು ಜೀವವ ಬೆಳಗಬಹುದು. /ದಾನ/
ದೇಹ ದಾನವ ಮಾಡಬೇಕು, ದೇಶ ಸೇವೆಯ ಮಾಡಬೇಕು.
ದೇಶವೆಂದರೆ ದೇಶವಲ್ಲ ,ಜನತೆಯೆಂಬುದ ತಿಳಿದು ನೀನು. /ದಾನ/
ದಾನ ಧರ್ಮವ ಮಾಡು ನೀನು, ನಿನ್ನ ದೇಹವ ಜನರ ಸೇವೆಗೆ. ಸತ್ತಮೇಲೆ ಮಾಡುವಂತಹ ಪುಣ್ಯತರುವ ದಾನವಣ್ಣ. /ದಾನ/
ಮಣ್ಣಿನಲ್ಲಿ ಮಣ್ಣ ಸೇರಿ, ಬೆಂಕಿಯಲ್ಲು ಬೂದಿಯಾಗಿ ಕೆಡುವ ದೇಹವ ನಾಲ್ಕು ಜನರ ಒಳಿತಿಗೇ ನೀ ದಾನಮಾಡು.
ದಾನಧರ್ಮವ ಮಾಡಬೇಕಣ್ಣ
ಹುಟ್ಟಿದ ಮೇಲುಪಯುಕ್ತನಾಗಿ ಹೋಗಬೇಕಣ್ಣ
- ವರುಣ್ ರಾಜ್ ಜೀ.



Comments
Post a Comment