ಸಂಪ್ರಭಂಧ

 


 


ಪರಿವಿಡಿ

ಅಧ್ಯಾಯ                     ವಿಷಯ                                                ಪುಟ. ಸಂ  

        #                         ಪ್ರಸ್ತಾವನೆ                                                                   2-4

ಅಧ್ಯಾಯ-1                 ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ                           5-9

ಅಧ್ಯಾಯ-2                 ಅಧ್ಯಯನದ ಮಹತ್ವ                                                  10-12

ಅಧ್ಯಾಯ-3                 ತತ್ವ ಪದಕಾರರ ಬದುಕು ಮತ್ತು

                                   ಬರಹದ  ಸ್ವರೂಪ                                                     13-21

ಅಧ್ಯಾಯ-4                 ದೇಶೀ ಚಿಂತನಾ ಪರಂಪರೆ : ತತ್ವಪದ

                                   ಹಾಗೂ ತತ್ವ ಪದ ಕಾರರು                                           22-28

ಅಧ್ಯಾಯ-4:1             ತತ್ವಪದಗಳಲ್ಲಿ ವೈಚಾರಿಕ ಹಾಗೂ     

                                  ಬಂಡಾಯದ ನೆಲೆಗಳು                                                  29-41

ಅಧ್ಯಾಯ-4:2             ವಚನ ಚಳುವಳಿ ಚಿಂತನೆ                                                42-51

ಅಧ್ಯಾಯ-4:3             ಸೂಫೀ ತತ್ವ ಚಿಂತನೆ                                                    52-58

ಅಧ್ಯಾಯ-4:4             ಅಚಲ ತತ್ವ ಚಿಂತನೆ                                                     59-62

ಅಧ್ಯಾಯ-4:5             ದಾಸ ತತ್ವ ಚಿಂತನೆ                                                      63-68

ಅಧ್ಯಾಯ-5                ಸಮಾರೋಪ                                                               69-75

        #                       ಗ್ರಂಥ ಋಣ                                                                 76-78                                                                                                                                

 

ಪ್ರಸ್ತಾವನೆ

ಅವಿಭಜಿತ ಕೋಲಾರ ಜಿಲ್ಲಾ ವ್ಯಾಪ್ತಿಯ ತತ್ವಪದಕಾರರ ಬದುಕು ಬರಹಗಳ ಅಧ್ಯಯನ ಈ ಸಂಪ್ರಬಂಧದ ವಿಷಯವಾಗಿದೆ. ಪ್ರಮುಖವಾಗಿ ಕೈವಾರ ತಾತಯ್ಯ ನವರು , ಆಂಜಿನಪ್ಪ ಸ್ವಾಮಿಗಳವರು , ಸೇರಿದಂತೆ ಹಲವು ತತ್ವಪದಕಾರರ ಹಾಗೂ ತತ್ವಪದ ಗಾಯಕರ ಅಧ್ಯಾಯನ  ,ಜೀವನ , ಅವರ ತತ್ವ ಗಳನ್ನು ವಿವಿಧ ನೆಲೆಗಳಲ್ಲಿ  ಚರ್ಚೆಗೆ ಒಳಪಡಿಸುವ ಪ್ರಯತ್ನ ಇಲ್ಲಿದೆ.

೨೦೧೮-೧೯ ನೇ ಸಾಲಿನಲ್ಲಿ ದ್ವಿತೀಯ ಎಂ.. ಕನ್ನಡ ವನ್ನು  ಸ್ನಾತಕೋತ್ತರ ಕೇಂದ್ರ ಕೋಲಾರ ದಲ್ಲಿ, ಅಧ್ಯಯನ ಮಾಡುತ್ತಿರುವ ನಾನು ನಾಲ್ಕನೇ ಸೆಮಿಸ್ಟರ್ ಕನ್ನಡ ಎಂ.. ಪೂರೈಸಲು ಸಲ್ಲಿಸ ಬೇಕಾಗಿರುವ ಕಡ್ಡಾಯ ಸಂಪ್ರಭಂದ ಪತ್ರಿಕೆ ೪.೯ ಕ್ಕಾಗಿ “‘’ಅವಿಭಜಿತ ಕೋಲಾರ ಜಿಲ್ಲಾ ವ್ಯಾಪ್ತಿಯ ತತ್ವಪದಕಾರರ ಬದುಕು-ಬರಹಗಳ ಅಧ್ಯಯನ’’ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದು, ನನ್ನ ಮಾರ್ಗದರ್ಶಕರಾದ ಡಾ.ವಿ.ನಾಗರಾಜ ಸರ್ ರವರ ಸಲಹೆಗಳ ಪ್ರಕಾರ ಅಧ್ಯಯನ ವನ್ನು ನಡೆಸಿ, ಈ ಸಂಪ್ರಬಂಧ ವನ್ನು ರಚಿಸಿದ್ದೇನೆ .

ನನ್ನ ಅಧ್ಯಯನ ವಿಷಯದ ಉದ್ದೇಶ ಹಾಗೂ ಮಹತ್ವವನ್ನು ಮುಂದೆ ವಿವರವಾಗಿ ಹೇಳಿದ್ದು. ಇಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಕೋಲಾರ ಚಿಕ್ಕಬಳ್ಳಾಪುರ ಪರಿಸರಗಳು ಕನ್ನಡ, ತೆಲುಗು, ತಮಿಳು, ಉರ್ದು ಬಾಷೆಗಳ ಪರಿಸರ. ಅನಕ್ಷರಸ್ಥರು ಸಹಾ ಕನಿಷ್ಟ ಏರಡು ಭಾಷೆ ಬಲ್ಲವರಾಗಿದ್ದಾರೆ. ಇಂಥಹಾ ಪರಿಸರದಲ್ಲಿ ಅತಿ ಪ್ರಾಚೀನ ಕಾಲದಿಂದಲೂ ವಿವಿಧ ಪಂಥಗಳ ತತ್ವಪದಕಾರರು ಈ ನೆಲದಲ್ಲಿ ಬೀಡು ಬಿಟ್ಟು ಒಂದು ಪ್ರತಿಸಂಸ್ಕೃತಿಗೆ ಕಾರಣ ಹಾಗೂ ಕ್ರಿಯಾ ರೂಪಿಗಳಾಗಿದ್ದಾರೆ.

ನಮ್ಮ ನೆಲದಲ್ಲಿ ವಚನಗಳು, ವೇದಶಾಸ್ತ್ರ ಗಳಿಗಿಂತಲೂ ತತ್ವಪದ ಪ್ರಸರಣೆ ತುಂಬಾ ಹೆಚ್ಚಾಗಿಯೇ ಇದೆ, ಪ್ರತಿಯೊಂದು ಊರಿನಲ್ಲೂ ಜನರೆಲ್ಲರೂ ಜಾತಿ ಮತ ಭೇದ ವಿಲ್ಲದೇ  ಒಂದಾಗಿ ಸೇರಿ ತತ್ವಪದ ಗಳನ್ನು ಭಜನೆಯ ರೂಪದಲ್ಲಿ ಹಾಡಿಕೊಂಡು ಅವುಗಳ ವಿಚಾರಗಳನ್ನು ಚರ್ಚಿಸಿ ವಿವರಿಸಿಕ್ಕೊಳ್ಳುವುದನ್ನು ಮೇಲಿನ ಹೇಳಿಕೆಗೆ ಸಾಕ್ಷಿಯಾಗಿ ನೊಡಬಹುದಾಗಿದೆ .

೧೮-೧೯ ನೇ ಶತಮಾನದ ತತ್ವಪದಕಾರರ ಕಾಲವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕತ್ತಲೆ ಯುಗವೆಂದು ಗುರುತಿಸುತ್ತಾರೆ, ಪ್ರಾಚೀನ ಕಾಲದಿಂದಲೂ ಇಂತಹಾ ಅವೈದಿಕ ಭೌತವಾದಿ ದರ್ಶನಗಳನ್ನು ಅದುಮಿಡುತ್ತಲೇ ಬರಲಾಗಿದೆ. ಮಧ್ಯಯುಗದಲ್ಲಿ ನಾಥ ಮೊದಲಾದ ಅನುಭಾವಿ ಪಂಥಗಳನ್ನು ರಾಕ್ಷಸೀಕರಿಸಿ ಅದರ ಮುಂದುವರೆದ ರೂಪವಾಗಿ ತತ್ವಪದಗಳ ಕಾಲವನ್ನು ಕತ್ತಲೆಗೆ ತಳ್ಳಲಾಯಿತು.

ಇದಕ್ಕೆ ಪ್ರಮುಖ ಕಾರಣ ವಸಾಹತು ಚರಿತ್ರೆ, ಸಾಹಿತ್ಯ ಚರಿತ್ರೆಗಳ ಮತೀಯ ವಿಭಜಕ ಕಣ್ಣುಪಟ್ಟಿ, ಹಾಗೂ ದೇಸಿ ವಿದ್ವಾಂಸರ ವೈದಿಕ ಪರವಾದ ಮತೀಯ ದೃಷ್ಟಿಕೋನ. ತತ್ವಪದಗಳು ಸ್ಥಾಪಿತ ಧರ್ಮ ಗಳ ವಿರುದ್ಧ ಬಂಡುಕೋರ ತನವನ್ನು ಮಂಡಿಸಿದರೇ, ವಸಾಹತುಶಾಹಿ ವಿದ್ವಾಂಸರು ಕನ್ನಡ ಸಾಹಿತ್ಯ ಚರಿತ್ರೆಯನ್ನು ಧರ್ಮಾಧಾರಿತವಾಗಿಯೇ ವಿಂಗಡಿಸಿದರು. ಹೀಗಾಗಿ ಧರ್ಮಾತೀತವು, ಧರ್ಮವಿರೋಧಿಯೂ ಆದ ತತ್ವಪದಗಳನ್ನು ಸಾಹಿತ್ಯ ಪ್ರಕಾರ ವೆಂದು ಒಪ್ಪುವ, ಸಂಪಾದಿಸಿ ಚರ್ಚಿಸುವ ಕೆಲಸ ನಡೆಯಲೇ ಇಲ್ಲ.

 ಭಾರತೀಯ ಸಮಾಜದಲ್ಲಿ ಬೌದ್ಧ, ಜೈನ ದರ್ಮಗಳು ವೈದಿಕೀಕರಣ ಗೊಂಡು ಸತ್ವ ಕಳೆದುಕೊಂಡಾಗ ಅವುಗಳ ಮೂಲ ಆಶಯ ಹಾಗೂ ತತ್ವ, ಸತ್ವಗಳನ್ನು ತತ್ವಪದ ಗಳು ಮುಂದುವರೆಸಿಕೊಂಡು ಬಂದಿವೆ. ಇದು ಅಸಮಾನತೆ ಹಾಗೂ ಹಿಂಸೆಗೆ ತುತ್ತಾದ ಶೋಷಿತರ, ಕೆಳ ವರ್ಗಗಳ ಹಾಗೂ ದುಡಿಯುವ ಸಮುದಾಯಗಳ ಬದುಕಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದವು. ಅದರೊಟ್ಟಿಗೆ ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯ ಜಾಗೃತಿಯನ್ನು ಹುಟ್ಟಿಸಿದ್ದವು. ಇಂತಹ ಅನುಭಾವಿಕ ನೆಲೆಯ ಹೋರಾಟ ಹಾಗೂ ಜಾಗೃತಿಯ ಮುಂದುವರೆದ ರೂಪವಾಗಿ ತತ್ವಪದ ಸಾಹಿತ್ಯ ಇಂದು ನಮ್ಮ ಮುಂದಿದೆ .

ಹಾಗೇ ಮತ್ತೊಂದು ದೃಷ್ಟಯಲ್ಲಿ ಪರಾಮರ್ಶಿಸಿದರೇ, ತತ್ವಪದಕಾರರ ಚರಿತ್ರೆ ಅಥವಾ ಚಿಂತನೆ ಈ ನೆಲದಮಟ್ಟಿಗೆ ವಚನ ಚಳುವಳಿಗಿಂತಲೂ ಉದಾತ್ತವಾಗಿ ನಮ್ಮ ಮುಂದೆ ನಿಲ್ಲುತ್ತದೆ. ಇಲ್ಲಿ ವಚನ ಚಳುವಳಿಯು ತತ್ವಪದ ಸಾಹಿತ್ಯ ಅಥವಾ ಚಳುವಳಿಗೆ ಪ್ರೇರಣೆಯನ್ನು ನೀಡಿದ ವಿಚಾರವನ್ನು ಒಪ್ಪಿಕೊಳ್ಳುತ್ತಲೆ ಮೇಲಿನ ಮಾತನ್ನು ಹೇಳಲಾಗಿದೆ .

ಅದಕ್ಕೆ ಕಾರಣ, ವಚನ ಸಾಹಿತ್ಯ ದಲಿತರ ಹಿಂದುಳಿದವರ ಬಗ್ಗೆ ಕಾಳಜಿ ವಹಿಸಿ ಸಾಮಾಜಿಕ ಕಟ್ಟುಪಾಡುಗಳನ್ನು ಮುರಿದಂತೆ ಕಂಡು ಬಂದರೂ ಸಹಾ ಕೆಲವು ವಿಚಾರಗಳಲ್ಲಿ, ಎಂದರೆ ಆಹಾರ ಆರಾಧನೆ ಗಳಲ್ಲಿ ಜನರನ್ನು ತಮ್ಮ ಮೂಲ ಸಂಸ್ಕೃತಿಯಿಂದ ಬೇರ್ಪಡಿಸುವ ಲಕ್ಷಣಗಳನ್ನು ತೊರ್ಪಡಿಸಿದ್ದು ಸಹಾ ಕಂಡುಬರುತ್ತದೆ. ವಚನ ಸಾಹಿತ್ಯವು ಏಕದೇವೊಪಾಸನೆಗೆ ಮಹತ್ವ ನೀಡಿತು ಆದರೇ, ಅದು ಇಲ್ಲಿನ ನೆಲದ ಸಂಸ್ಕೃತಿ ಅಲ್ಲ .

ಅದಕ್ಕೆ ಪ್ರತಿಕೂಲವಾಗಿ ಏಕದೇವೂಪಾಸನೆ ಯನ್ನು ಹೇಳದೇ, ತತ್ವಪದಕಾರು ಜಾತರೆ ಮಾಡೋಣ ಶಕ್ತಿಗೆ ಜಾತರೆ ಮಾಡೋಣಎಂದು ಕೈವಾರ ನಾರೇಯಣಪ್ಪನವರು ಊರು ದೇವರು ಮಾಡಬೇಕು ಗಂಗೆದೇವರು ನಿಲ್ಲಿಸಬೇಕುಎಂದು ಆಂಜಿನಪ್ಪನವರು ಹಾಡಿದ್ದಾರೇ. ಇಲ್ಲಿ ಇಷ್ಟ ದೈವಗಳ ಆರಾಧನೆಯನ್ನು ಪ್ರೂತ್ಸಾಹಿಸುತ್ತಲೇ ಬಂದದ್ದು ಕಂಡುಬರುತ್ತದೆ .

ಆಂಜಿನಪ್ಪನವರು ಜ್ಞಾನ ವೆಂಬೊ ಖಡ್ಗ ಪಿಡಿದು ಅಜ್ಞಾನ ವೆಂಬೊ ಕುರಿಯ ಕಡಿದು ಜ್ಞಾನ ಗುರುವಿನ ಪಾದ ಪಿಡಿದು ತಾನು ಧನ್ಯಾನಾಗ ಬೇಕು’’ ಎಂದು ಊರು ದೇವರ ಜಾತ್ರೆಯ ಆಚರಣೆಯನ್ನು

ವೈಚಾರಿಕ ದೃಷ್ಟಿಯಿಂದ ಮಾಡುವ ಬಗ್ಗೆಯನ್ನು ಕಲಿಸ್ಸುತ್ತಾರೆ. ಇಂಥಹಾ ಹಲವಾರು ವಿಶೇಷಗಳನ್ನು ನಾವು ತತ್ವಪದ ಗಳಲ್ಲಿ ಗುರುತಿಸಬಹುದಾಗಿದೆ.

ಹೀಗಿದ್ದರೂ ಸಹಾ ಓದುಗರು ಹಾಗೂ ಅಭ್ಯಾಸಿಗರು ತತ್ವಪದಗಳನ್ನು ನಿರ್ಲಕ್ಷ್ಯಕ್ಕೆ ಒಳಪಡಿಸಿರುವುದೇಕೆ? ಎಂದು ವಿವೇಚಿಸಿದಾಗ ನಮಗೆ ಕೆಲವು ವಿಷಯಗಳು ಗಮನಕ್ಕೆ ಬರುತ್ತವೆ. ಪ್ರಮುಖವಾಗಿ ,

* ತತ್ವಪದಗಳ ಭಾಷೆಯ ಪ್ರಯೋಗ.

*  ಮಾಹಿತಿ/ ಪ್ರಚಾರದ ಕೊರತೆ.

*  ಶಿಷ್ಟ ಸಾಹಿತ್ಯದ ಮೇಲಾಟ.

*  ಅಜ್ಞಾನ ಅಥವಾ ಅಸಡ್ಡೆ.

*  ಗೂಡಾರ್ಥಗಳಿಂದ ಕೂಡಿದ ತತ್ವಪದಗಳು , ಇತ್ಯಾದಿ

ಕಾರಣಗಳನ್ನು ಗುರ್ತಿಸಿಕೊಳ್ಳಬಹುದಾಗಿದೆ.

ಈ ಕಾರಣಗಳಿಂದ  ನಿರ್ಲಕ್ಷಕ್ಕೆ ಓಳಗಾಗಿರುವ ತತ್ವಪದಗಳನ್ನು ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿದ್ದು , ನನ್ನ ಈ ಅಧ್ಯಯನ ವು ಕೂಡಾ ಒಂದು ಸಣ್ಣ ಆದರೇ ಅತಿ ಮಹತ್ವದ ಪ್ರಯತ್ನವಾಗಿದೆ ಎಂಬುದು ನನ್ನ ನಂಬಿಕೆ.

ಇಲ್ಲಿನ ವಿಚಾರಗಳನ್ನು ನನಗಿರುವ ಮಿತಿಗಳಲ್ಲಿಯೇ ಅಧ್ಯಾಯನ ಮಾಡಿ ಮಂಡಿಸಿದ್ದು ಓದುಗರು ಹೆಚ್ಚಿನ ಸಲಹೆಗಳನ್ನು , ಮಾರ್ಗದರ್ಶನವನ್ನು ನೀಡಿ ನನ್ನ ಅಧ್ಯಯನ ವನ್ನು ಪರಿಪೂರ್ಣತೆಗೆ ತರಬೇಕೆಂದು ವಿನಂತಿಸಿಕೋಳ್ಳುತ್ತಾ,ಈ ಸಂಪ್ರಭಂದ ರಚನೆಗೆ ಮಾರ್ಗದರ್ಶನ ನೀಡಿದ ಡಾ||ವಿ.ನಾಗರಾಜ ಸರ್ ರವರಿಗೆ ಹಾಗೂ ವಿಶೇಷ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿದ ನನ್ನೆಲ್ಲಾ ಗುರುಗಳು ಹಾಗೂ ಮಿತ್ರರಿಗೆ, ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ.

 

 

 

 

ಅಧ್ಯಾಯ-1

ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ

‘’ಅವಿಭಜಿತ ಕೋಲಾರ ಜಿಲ್ಲಾ ವ್ಯಾಪ್ತಿಯ ತತ್ವಪದಕಾರರ ಬದುಕು - ಬರಹಗಳ ಅಧ್ಯಯನ’’ ಈ ಅಧ್ಯಾಯನ ವನ್ನು ಕನ್ನಡದ ನಾಲ್ಕನೇ ಸೆಮಿಸ್ಟರ್ ಕಡ್ಡಾಯ ಸಂಪ್ರಭಂದಕ್ಕಾಗಿ ರಚನೆ ಮಾಡುತಿದ್ದು, ಈ ಅಧ್ಯಯನದ ವ್ಯಾಪ್ತಿ ಹಾಗೂ ಉದ್ದೇಶವನ್ನು ಮುಂದಿನಂತೆ ನಿರ್ದಿಷ್ಟಗೊಳಿಸಿಕ್ಕೊಳ್ಳಬಹುದು.

ಈ ಅಧ್ಯಯನದ ಶೀರ್ಷಿಕೆಯೇ ಹೇಳುವಂತೆಅವಿಭಜಿತ ಕೋಲಾರ ಜಿಲ್ಲೆ ಎಂದರೆ ಈಗಿನ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ತತ್ವಪದ ರಚನಾಕಾರರು ಹಾಗೂ ಹಾಡುಗಾರರು ಎರಡು ಗುಂಪಿನವರನ್ನು ಸಹಾ ನಮ್ಮ ಅಧ್ಯಾಯನದ ವ್ಯಾಪ್ತಿಗೆ ತೆಗೆದುಕೊಂಡು ತತ್ವಪದ ಗಾಯಕರಿಂದ ತತ್ವಪದಕಾರರ ಬಗೆಗಿನ ಮಾಹಿತಿಯನ್ನು ಅವರ ಬಗ್ಗೆಗಿನ ಕಥೆಗಳನ್ನು ಪವಾಡಗಳನ್ನು ಹಾಗೂ ಇನ್ನಿತರೇ ಸೂಕ್ಷ್ಮ ವಿಚಾರಗಳನ್ನು ಮೌಖಿಕವಾಗಿ ತಿಳಿದು ಅದನ್ನು ಆಕರವಾಗಿ ನಮ್ಮ ಅಧ್ಯಯನದಲ್ಲಿ ಬಳಸಿ ಕೊಳ್ಳಲಾಗಿದೆ.

ಅದಕ್ಕೂ ಮುಖ್ಯವಾಗಿ ತತ್ವಪದ ಗಾಯಕರನ್ನು ತತ್ವಪದಗಳ ಉಳಿವಿಗಾಗಿ ಶ್ರಮಿಸ್ಸುತ್ತಿರುವ ಕಾರಣ ಅಂತಹವರನ್ನು ಪರಿಚಯಿಸುವವರೆಗೆ ನಮ್ಮ ವ್ಯಾಪ್ತಿಯನ್ನ ವಿಸ್ತರಿಸಿಕೂಳ್ಳಲಾಗಿದೆ. ಇಲ್ಲಿ ಕೈವಾರ ನಾರಯಣಪ್ಪನವರಂತಹಾ ಕೆಲವು ಪ್ರಮುಖ ತತ್ವಪದಕಾರರ ಜೊತೆಗೆ ವೆಂಕಟದಾಸು ರಂತಹಾ ನಿರ್ಲಕ್ಷಿತ ತತ್ವಪದಕಾರರನ್ನು ಸೇರಿ ಇತ್ತೀಚಿನ ಮುನಿಯಪ್ಪ ಸ್ವಾಮಿಗಳು , ಕೃಷ್ಣಾನಂದ ರಂತಹಾ ಅಚಲ ರನ್ನು ಸಹಾ ಒಳಗೊಂಡಂತೆ ಕೆಲವು ತತ್ವಪದಕಾರರ ಜೀವನ ಕಥನವನ್ನು ಹೇಳಲಾಗಿದೆ, ಹಾಗೆಯೇ ಅವರು ರಚಿಸಿದ ತತ್ವಪದಗಳನ್ನು ಸಹಾ ವಿಷಯವಾರು ಚರ್ಚೆಯ ಸಂದರ್ಭದಲ್ಲಿ ತೆಗೆದುಕ್ಕೊಳಲಾಗಿದೆ .

ಜಿಲ್ಲೆಯ ಎಲ್ಲಾ ತತ್ವಪದಕಾರರನ್ನು ಒಳಗೊಳ್ಳಬೇಕೆಂಬ ಹಠ ಅಥವಾ ನಿಯಮವನ್ನು ಅದೇ ರೀತಿ ಇಂತಿವರನ್ನು ಈ ಅಧ್ಯಾಯನದಲ್ಲಿ ತೆಗೆದುಕೂಳ್ಳಬಾರದೆಂಬ ಚಿಂತನೆಯಾಗಲಿ, ಇಲ್ಲದೇ ಲಭ್ಯವಿರುವ ಮಾಹಿತಿ, ಆಕರಗಳು, ಹಾಗೂ ಸಮಯದ ವ್ಯಾಪ್ತಿ ಹಾಗೂ ಮಿತಿಗಳಲ್ಲಿ  ಈ ಅಧ್ಯಯನ ವನ್ನು ನಡೆಸಲಾಗಿರುವ ವಿಷಯವನ್ನು ಪ್ರಾಮಾಣಿಕವಾಗಿ ಒಪ್ಪಿಕ್ಕೊಳುತ್ತೇನೆ.

ಇಲ್ಲಿ ತತ್ವಪದಕಾರರ ಜೀವನವನ್ನು ಹೇಳುವಾಗ ಅವರ ಜೀವನ ಕಥನವನ್ನು ಕೇವಲ ಮುಖ್ಯಾಂಶಗಳ ರೀತೀಯಲ್ಲಿ ಹೇಳಲಾಗಿದೆ, ಇದಕ್ಕೆ  ಪ್ರಮುಖ ಕಾರಣ ಕೈವಾರ ನಾರೇಣಪ್ಪನವರು ಹಾಗೂ ವೀರಬ್ರಹ್ಮಯ್ಯ ನವರು ಮುಂತಾದವರ  ಜೀವನ ಕಥನಗಳು  ದೊಡ್ಡ ಕೃತಿಗಳ ರೂಪದಲ್ಲಿ ಲಭ್ಯವಿವೆ, ಹೀಗಾಗಿ ಅವನ್ನು ಮತ್ತೆ ಮತ್ತೆ ಕಾಫಿ ಪೇಸ್ಟ ಮಾಡುವುದು ಬೇಡ ಎಂಬ ಉದ್ದೇಶದಿಂದ  ಹಾಗೇ  ಇವರು ಜೀವನ ಕಥನಗಳನ್ನು ಪವಾಡಗಳ ರೂಪದಲ್ಲಿ ಮಂಡಿಸಲಾಗಿದ್ದು ,

ಪವಾಡಗಳಿಂದ ಹೊರತಾಗಿ ತತ್ವಪದಕಾರರನ್ನು ನೊಡಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿರುವುದು, ಹಾಗೇ ಮತ್ತೊಂದು  ಕಾರಣವೆಂದರೇ  ತತ್ವಪದಕಾರರ ನುಡಿದಂತೆ ನಡೆದು ಬಾಳಿದವರು ಅವರ ಬರಹಗಳನ್ನು ವಿವಿಧ ನೆಲೆಗಳಲ್ಲಿ ಮುಂದಿನ ಅಧ್ಯಯನಗಳಲ್ಲಿ ಚರ್ಚಿಸುವಾಗ ಅವರ ಜೀವನ ಚರಿತ್ರೆಯನ್ನು ಸಹಾ ಚರ್ಚಿಸಲಾಗಿದೆ.

ಕೈವಾರ ನಾರಣಪ್ಪನವರು, ಆಂಜಿನಪ್ಪನವರು ಹಲವಾರು ತತ್ವಪದಗಳನ್ನು ರಚಿಸಿದ್ದರೇ, ವೆಂಕಟದಾಸುರಂತವರು ಕೇವಲ 38 ತತ್ವಪದಗಳನ್ನು ರಚಿಸಿದ್ದಾರೆ, 1-2 ತತ್ವಪದಗಳನ್ನು ರಚಿಸಿರುವ ಉದಾಹರಣೆಗಳು ಉಂಟು. ಈ ಹಿನ್ನೆಲೆಯಲ್ಲಿ ಎಲ್ಲಾ ತತ್ವಪದಗಳನ್ನು ಚರ್ಚೆಗೆ  ತೆಗೆದುಕ್ಕೊಳ್ಳುವುದು ಸಮಯದ ಮತ್ತು ಕೃತಿಯ ಗಾತ್ರದ ದೃಷ್ಠಯಿಂದ ಕಷ್ಟಕರವಾಗಿರುವುದರಿಂದ ಸಂಧರ್ಬಕ್ಕೆ ತಕ್ಕಷ್ಟೆ ಚರ್ಚೆಗೆ ತೆಗೆದುಕೂಳ್ಳಲಾಗಿದೆ.

ಹಾಗೆಯೇ ವೆಂಕಟದಾಸು, ಕೃಷ್ಣಾನಂದ ಮುಂತಾದವರ ಜೀವನ ಚಿತ್ರಣವನ್ನು ಇಲ್ಲಿ ಚರ್ಚೆಗೆ ತೆಗೆದುಕ್ಕೊಳ್ಳುತ್ತಾ, ತತ್ವಪದ ಹಾಡುಗಾರರ ಪರಂಪರೆಯೊಂದಿಗೆ ತತ್ವಪದ ರಚನೆಗಾರರ ಪರಂಪರೆ ಈ ನೆಲದಲ್ಲಿ ಜೀವಂತವಾಗಿರುವುದನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ಅದೆ ರೀತಿ ಇದೇ ಅವಿಭಜಿತ ಕೋಲಾರ ಜಿಲ್ಲೆಯ ಪಾಪಾಗ್ನೀ ಮಠದ ಮೂಲದವರಾದ ಶ್ರೀ ವೀರಬ್ರಹ್ಮಯ್ಯ ನವರ ವಿಚಾರಗಳನ್ನು ಸಹಾ ಚರ್ಚೆಗೆ ತೆಗೆದುಕೊಂಡು ನಮ್ಮ ಅಧ್ಯಯನ ಸಾಗುತ್ತದೆ .

ನಮ್ಮ  ಅಧ್ಯಯನದ ವ್ಯಾಪ್ತಿಯನ್ನು ನಿರ್ದಿಷ್ಟ ಗೊಳಿಸಿಕೊಳ್ಳುತಲೇ, ಮತ್ತೊಂದು  ಕಡೆ ಅಧ್ಯಯನದ ಮಿತಿಗಳನ್ನು ಸಹಾ ಗುರ್ತಿಸಿಕೊಂಡ್ಡಿದ್ದು ಅವು ಈ ಮುಂದಿನಂತಿವೆ.

*          ಕೋಲಾರ ಜಿಲ್ಲೆಯ ಎಲ್ಲಾ ತತ್ವಪದಕಾರರನ್ನು ಇಲ್ಲಿ ಚರ್ಚೆಗೆ   ತೆಗೆದುಕೊಳ್ಳಲಾಗಿಲ್ಲ .

*       ಸೂಫಿ ತತ್ವಪದಕಾರರ ಅಧ್ಯಯನದಲ್ಲಿ ಸ್ಥಳೀಯ ಸೂಫಿಗಳ ಮೇಲೆ ಅಧ್ಯಯನ ಮಾಡಿದ್ದರೂ ಸಹಾ ಹೆಚ್ಚು ಒತ್ತು ನೀಡಲು ಸಾಧ್ಯವಾಗಿಲ್ಲ.

 *        ಹೆಚ್ಚು ತತ್ವಪದಗಳು ತೆಲುಗಿನಲ್ಲಿ ರಚನೆ ಆಗಿ, ಅವು ಗೂಡಾರ್ಥಗಳಿಂದ ಕೂಡಿರುವುದರಿಂದ ಅವನ್ನು ಬಾಷಾಂತರಿಸಿಕೊಂಡು ಚರ್ಚಿಸುವಾಗ ಹಲವು ಮಿತಿಗಳು ಇವೆ .

*          ಆಕರಗಳ ಅಲಭ್ಯತೆ ಮತ್ತು ತತ್ವಪದಕಾರರು ಪ್ರಚಾರ ಪ್ರಿಯ ರಲ್ಲದಿರುವುದು.                  .                                                                                                                                                   ಮುಂತಾದವು

 ಈ ಅಧ್ಯಯನವು ನಮ್ಮ ಪರಿಸರ ಮತ್ತು ನಮ್ಮ ಸಂಸ್ಕೃತಿ ನಮ್ಮ ಭಾಷೆ ಹಾಗೂ ನಮ್ಮ ಜೀವನ ನಮ್ಮ ಪರಂಪರೆ ಮುಂತಾದವುಗಳ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ ಅಧ್ಯಯನವಾಗಿದೆ. ನಮ್ಮ              ಸಂಸ್ಕೃತಿಯ ಹೆಸರಿನಲ್ಲಿ ನಮ್ಮ ದೇಶದ ಬಹುತ್ವವನ್ನು ತುಳಿದು ಏಕರೂಪತೆಯನ್ನು ಹೇರಿತ್ತಿರುವ ವರ್ತಮಾನದ ಪರಿಸ್ಥಿತಿಗಳಲ್ಲಿ ನಮ್ಮ ನಡುವೆ ಯಾರಿಗೂ ತಿಳಿಯದಂತೆ ತತ್ವಪದಗಳ ಮೂಲಕ ನಡೆದು ಬಂದಿರುವ ಸುಧೀರ್ಘ ಪರಂಪರೆಯೊಂದರ ಅನಾವರಣ ಆಗಬೇಕಾಗಿದೆ. ಅದರ ಮೂಲಕ ನಮ್ಮ ದೇಶದ ಬಹುತ್ವವನ್ನು ಮರುಸ್ಥಾಪಿಸುವ ಹಾಗೂ ನಮ್ಮ ಜೀವನದ ನಿಜವಾದ ನೆಲೆಗಳನ್ನು ಹಾಗೂ ಮೂಲಗಳನ್ನು ಮರುಸ್ಥಾಪಿಸಿಕ್ಕೊಳ್ಳುವ ಅವಶ್ಯಕತೆ ಇಂದು ನಮ್ಮ ಮುಂದಿದೆ.

ಬೌಧ್ಧ ಮಾಧ್ಯಮಿಕ ಮಾರ್ಗವಾಗಿ ಬಂದ ಅಚಲ ಪರಂಪರೆ, ಸೂಫೀ ಪರಂಪರೆ, ದಾಸ ಪರಂಪರೆಯ ಪ್ರಭಾವ ದಿಂದ ಜನ್ಮ ತಾಳಿದ ಸೂಫೀ ತತ್ವಪದ ಪರಂಪರೆ ಹರಿದಾಸರ ಪ್ರಭಾವ ದಿಂದ ಬಂದ ಹರಿದಾಸ ತತ್ವಪದ ಪರಂಪರೆ, ಹನ್ನೆರಡನೇ ಶತಮಾನದ ವಚನ ಸಾಹಿತ್ಯದ ಶರಣರ ಪ್ರಭಾವದಿಂದ ಬಂದ ಕಂದ ಹಾಗೂ ಶತಕಗಳು ಹಾಗೂ ಕಾಲಜ್ಞಾನಗಳು ನಮ್ಮದೇ ನೆಲದ ಹಲವು ತತ್ವಪದಕಾರರ ಕೊಡುಗೆಗಳು ಆಗಿವೆ.

ಭಾಷಿಕ ದೃಷ್ಟಿಯಿಂದ ನೋಡುವಾಗ ನಮ್ಮ ಸ್ಥಳೀಯ ಭಾಷೆಯಾದ ಕನ್ನಡ ತೆಲುಗು ಭಾಷೆಗಳು ಬರಹದ ಅಥವಾ ಶಿಷ್ಟ ಭಾಷೆಯ ಮುಂದೆ  ಕೀಳರಿಮೆಗೆ ಒಳಗಾಗುತ್ತಲೇ ಬಂದಿರುವ ಸಂದರ್ಭದಲ್ಲಿ ಮಾತಿನಲ್ಲಿ ಆಗಾಗ ಕೆಲವು ತೆಲುಗು ಪದಗಳನ್ನು ಬೆರೆಸಿ ಕನ್ನಡ ಪದಗಳನ್ನು ಬೆರೆಸಿ ಮಾತನಾಡುವ ಇಲ್ಲಿನ ಜನರನ್ನು ಅನಾಗರೀಕರಂತೆ ಕಾಣುವ  ವರ್ತಮಾನದ ಸಂದರ್ಭದಲ್ಲಿ  ಅದೇ ರೀತಿಯ ಭಾಷೆಯಲ್ಲಿ ಒಂದು ಬಹು ದೊಡ್ಡ ಆಧ್ಯಾತ್ಮಿಕ, ದಾರ್ಶನಿಕ ಹಾಗೂ ವೈಚಾರಿಕ ಪರಂಪರೆಯೊಂದು ಸಾಗಿ ಬಂದಿರುವುದನ್ನು ಪ್ರಪಂಚಕ್ಕೆ ಪರಿಚಯಿಸುವುದರ ಮೂಲಕ ಸ್ಥಳೀಯ ಭಾಷೆಯ ಮಹತ್ವವನ್ನು ಅದೇ ರೀತಿ ತತ್ವಪದಗಳಲ್ಲಿ ಅಡಗಿರುವ ಕ್ರಾಂತಿಕಾರಿ ಹಾಗೂ ಪ್ರಗತಿಶೀಲ, ಬಂಡಾಯ ಹಾಗೂ ವೈಚಾರಿಕ ದೃಷ್ಟಿಕೋನಗಳನ್ನು ಜಗತ್ತಿಗೆ ತಿಳಿಸುವಲ್ಲಿ ಈ ಅಧ್ಯಯನ ಬಹಳ ಮಹತ್ವಪೂರ್ಣವಾದದ್ದಾಗಿದೆ .

ವೈದಿಕ ಸಂಸ್ಕೃತಿಯನ್ನು ಕೆಲವು ಹಿತಾಸಕ್ತಿಗಳು ತಮ್ಮ ಅನುಕೂಲ ಕ್ಕಾಗಿ ಜನರ ಮೇಲೆ ಹೇರುವ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿರುವ ಸಂಧರ್ಭದಲ್ಲಿ ನಮ್ಮ ತತ್ವಪದ ಸಾಹಿತ್ಯ ಹಾಗೂ ಸಂಸ್ಕೃತಿಗಳು ಹಾಗೂ ಮೌಲ್ಯಗಳು ಮೂಲೆಗುಂಪಾಗುತ್ತಿದ್ದು ವೈದಿಕ ಸಾಹಿತ್ಯ, ಹಾಗೂ ಸಂಸ್ಕೃತಿಗೆ ಪರ್ಯಾಯ ವಾಗಿ ಬೆಳೆದು ಬಂದಿರುವ ಬೌದ್ಧ ಹಾಗೂ ದ್ರಾವಿಡ ಸಂಸ್ಕೃತಿ ಹಾಗೂ ಅದರ ತತ್ವ ಸಿದ್ಧಾಂತ ಗಳ ಹಿನ್ನೆಲೆಯಲ್ಲಿ ಹಾಗೂ ವಚನ ಕ್ರಾಂತಿಯ ವೈಚಾರಿಕತೆ ಹಿನ್ನಲೆಯಲ್ಲಿ ಬೆಳೆದು ಬಂದಿರುವ ತತ್ವಪದಕಾರರ ಪರಂಪರೆಯ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ .

ಕೇವಲ ಶಿಷ್ಟ ಸಂಶೋಧನೆ ಅಷ್ಟೆ ಅಲ್ಲದೆ ಜಾನಪದ ಸಂಶೋಧನೆಗಳು ಕೂಡಾ ತತ್ವಪದಕಾರರನ್ನು ನಿರ್ಲಕ್ಷ್ಯಕ್ಕೆ ಒಳಪಡಿಸಿರುವುದನ್ನು ಕಾಣಬಹುದಾಗಿದೆ. ಕನ್ನಡ ನಾಡಿನ ತತ್ವಪದ ಕಾರರ ಚರಿತ್ರೆ ಹಾಗೂ ಸಾಹಿತ್ಯ ದ ಅಧ್ಯಯನವು ಕನ್ನಡದ ಜನಪದ ಸಂಶೋಧನಾ ಕ್ಷೇತ್ರವನ್ನು ವಿಸ್ತರಿಸುವ ಕೆಲಸ ಮಾಡುವುದರಿಂದ, ಈ ನಿಟ್ಟಿನಲ್ಲಿ ಈ ಅಧ್ಯಯನ ಅತ್ಯಂತ ಮಹತ್ವದ್ದು ಹಾಗೂ ಉಪಕಾರಿಯೂ , ಪ್ರಯೊಜನಕಾರಿ ಆದದ್ದು ಆಗಿದೆ. ನಮ್ಮ ಅಸ್ತಿತ್ವ ಹಾಗೂ ನಮ್ಮ ಪರಂಪರೆಯ ಅಸ್ತಿತ್ವದ ಉದ್ದೇಶದಿಂದಾಗಿ  ಈ ಅಧ್ಯಯನದ ಮಹತ್ವ ಮತಷ್ಟು ಹೆಚ್ಚಿದೆ ಎಂಬುದು ನನ್ನ ನಂಬಿಕೆ .

ಕೋಲಾರ ಚಿಕ್ಕಬಳ್ಳಾಪುರ ಪ್ರಾಂತ್ಯದಲ್ಲಿ ವಚನ ಸಾಹಿತ್ಯಕ್ಕಿಂತ ಹೆಚ್ಚು ಮಹತ್ವವಾದ ಪರಂಪರೆಯೊಂದು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ, ಇಂತಹ ಪರಂಪರೆ ಹಲವು ಕಾರಣಗಳಿಂದಾಗಿ ಮುಖ್ಯ ವಾಹಿನಿಯಿಂದ ಪ್ರಮುಖವಾಗಿ ವೈದಿಕ ಧರ್ಮದ ಮೇಲಾಟ ಬ್ರಿಟೀಷ್ ಆಡಳಿತದ ಕಾರಣಗಳಿಂದ ಗುರುಶಿಷ್ಯ ಪರಂಪರೆಯಲ್ಲಿ ಹಲವು ಗಾಢ ಆಧ್ಯಾತ್ಮಿಕ ಹಾಗೂ ವೈಚಾರಿಕ ವಿಚಾರಗಳು ಗುಪ್ತಗಾಮಿನಿಯಾಗಿ  ಅಡಗಿ ಹರಿದು ಬಂದಿವೆ.

ಇಂತಹ ಪ್ರಾಚೀನ ಹಾಗೂ ಮಹತ್ವದ ತತ್ವಪದಕಾರರ ಪರಂಪರೆ ನಮ್ಮ ನೆಲದಲ್ಲಿಯೇ ಇರುವುದು ಎಷ್ಟೊಜನರಿಗೆ ತಿಳಿದೇ ಇಲ್ಲ. ಎಷ್ಟೂಜನ ತತ್ವಪದಕಾರರು ಎಲೆ ಮರೆಯ ಕಾಯಿಗಳಂತೆ ಆಗಿ ಹೋಗಿದ್ದಾರೆ, ಇವರುಗಳು ರಚಿಸಿರಬಹುದಾದ ಅಮೂಲ್ಯ ಸಾಹಿತ್ಯ ಮುಂದಿನವರ ನಿರ್ಲಕ್ಷಕ್ಕೆ ಸಿಲುಕಿ ಉಳಿದು ಬರದೇ ಹೋಗಿದೆ. ಅಳಿದು ಉಳಿದಿರುವ ಕೆಲವು ತತ್ವ ಪದಕಾರರ ಪರಿಚಯ, ಅಧ್ಯಯನ, ಸಂಶೋಧನೆಗಳು ಈಗೀಗ ಪ್ರಾರಂಭವಾಗಿದ್ದರೂ ಸಹ ಹೇಳಿಕೊಳ್ಳುವಂತಹ ಪ್ರಯೋಜನಗಳು ಆಗದೇ ಇರುವುದು ದುಃಖದ ಸಂಗತಿ ಆಗಿದೆ.

ಈ ಹಿನ್ನೆಲೆಯಲ್ಲಿ ನಮ್ಮದೇ ನೆಲದ ತತ್ವ ಪದಕಾರರ ವಿಚಾರಗಳನ್ನು ಹುಡುಕಿ ತೆಗೆಯುವ ಹಾಗೂ ಅವರ ಜೀವನ ವಿಚಾರಗಳನ್ನು ಹಾಗೂ ಅವರ ಬರಹಗಳನ್ನು ವಿವಿಧ ನೆಲೆಗಟ್ಟುಗಳಲ್ಲಿ ವರ್ತಮಾನದ ಸಮಸ್ಯಗಳ ಮುಂದಿಟ್ಟುಕೊಂಡು ಚರ್ಚಿಸುವ ಹಾಗೂ ಪ್ರಯೋಜನಗಳನ್ನು ಪಡೆಯುವುದು ಇಂದಿನ ಕಾಲಕ್ಕೆ ಅತ್ಯಂತ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಸಂಪ್ರಬಂಧದ ಅಧ್ಯಯನವು ಒಂದು ಪುಟ್ಟ ಹೆಜ್ಜೆ ಎಂದು ನಾನು ಭಾವಿಸುತ್ತೇನೆ .

ತತ್ವ ಪದಕಾರರ ಅಧ್ಯಯನವನ್ನು ತೆಗೆದುಕೊಂಡಾಗ ಕೇವಲ ಹಿಂದೆ ಆಗಿ ಹೋದ ಒಂದಿಬ್ಬರು ತತ್ವಪದಕಾರರನ್ನು ಮಾತ್ರ ಚರ್ಚೆಗೆ ತೆಗೆದುಕೊಳ್ಳುವುದು ಸಾಮಾನ್ಯವಾದ ವಿಷಯ ಆದರೆ ಬೆಳಕಿಗೆಬಾರದ ಹಲವರನ್ನು ಅವರ ತತ್ವಪದಗಳನ್ನು ಸಂಶೋಧನೆಗಳ ಮೂಲಕ ಬೆಳಕಿಗೆ ತಂದು ನಮ್ಮ ಮುಂದಿನ ಪೀಳಿಗೆಗೆ ಇಂತಹ ಪರಂಪರೆಯನ್ನು ಗೌರವಿಸುವ ಹಾಗೂ ಮುಂದುವರೆಸಿಕೊಂಡು ಹೋಗುವ ಅರಿವನ್ನು ಉಂಟುಮಾಡುವ ಉದ್ದೇಶ ಈ ಅಧ್ಯಯನಕ್ಕಿದೆ.

            ಈ ಉದ್ದೇಶದ ಹಿನ್ನೆಲೆಯಲ್ಲಿ  ಕೆಲವು ತತ್ವಪದಕಾರರನ್ನು ಶೋಧಿಸುವ ಕೆಲಸ ಮಾಡಲಾಗಿದೆ. ಪ್ರಮುಖವಾಗಿ ವೆಂಕಟದಾಸು, ಮುನಿಯಪ್ಪಸ್ವಾಮಿ, ಕೃಷ್ಣಾನಂದ, ಮೊದಲಾದವರ ಪರಿಚಯ ಹಾಗೂ ಅವರ ಚಿಂತನೆಗಳನ್ನು ಇಲ್ಲಿ ನೀಡಲಾಗಿದೆ. ಹಾಗೇ ಹಲವು ತತ್ವಪದ ಗಾಯಕರ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಈ ಭಾಗದ ತತ್ವಪದಕಾರರು ಎಂದರೇ ಅವರು ಅಚಲರು ಎಂಬಷ್ಟು ಗಾಢವಾದ  ಅಚಲತತ್ವದ ಪ್ರಭಾವವನ್ನು ಗುರ್ತಿಸಬಹುದಾಗಿದೆ.

           ಹೀಗಾಗಿ ಅಚಲರನ್ನು ಮುಖ್ಯ ನೆಲೆಯಾಗಿ ತೆಗೆದುಕೊಂಡು ಅವರೊಟ್ಟಿಗೆ ಸೂಫೀ ತತ್ವಪದಕಾರರು, ದಾಸ ತತ್ವಪದ ಸಾಹಿತ್ಯ, ವಚನ ಸಾಹಿತ್ಯ, ಕಾಲಜ್ಞಾನ ಸಾಹಿತ್ಯ ಮುಂತಾದವುಗಳ ಅಧ್ಯಯನವನ್ನು ಸೇರಿಸಿಕೊಂಡಂತೆ ನಮ್ಮ ಅಧ್ಯಯನವನ್ನು ನಡೆಸಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

ಅಧ್ಯಾಯ -2

ಅಧ್ಯಯನದ  ಮಹತ್ವ

       ಈ ಅಧ್ಯಯನವು ನಮ್ಮ ಪರಿಸರ ಮತ್ತು ನಮ್ಮ ಸಂಸ್ಕೃತಿ ನಮ್ಮ ಭಾಷೆ ಹಾಗೂ ನಮ್ಮ ಜೀವನ ನಮ್ಮ ಪರಂಪರೆ ಮುಂತಾದವುಗಳ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ ಅಧ್ಯಯನವಾಗಿದೆ .

          ನಮ್ಮ ಸಂಸ್ಕೃತಿಯ ಹೆಸರಿನಲ್ಲಿ ನಮ್ಮ ದೇಶದ ಬಹುತ್ವವನ್ನು ತುಳಿದು ಏಕರೂಪತೆಯನ್ನು ಹೇರಿತ್ತಿರುವ ವರ್ತಮಾನದ ಪರಿಸ್ಥಿತಿಗಳಲ್ಲಿ ನಮ್ಮ ನಡುವೆ ಯಾರಿಗೂ ತಿಳಿಯದಂತೆ ತತ್ವಪದಗಳ ಮೂಲಕ ನಡೆದು ಬಂದಿರುವ ಸುಧೀರ್ಘ ಪರಂಪರೆಯೊಂದರ ಅನಾವರಣ ಆಗಬೇಕಾಗಿದೆ. ಅದರ ಮೂಲಕ ನಮ್ಮ ದೇಶದ ಬಹುತ್ವವನ್ನು ಮರುಸ್ಥಾಪಿಸುವ ಹಾಗೂ ನಮ್ಮ ಜೀವನದ ನಿಜವಾದ ನೆಲೆಗಳನ್ನು ಹಾಗೂ ಮೂಲಗಳನ್ನು ಮರುಸ್ಥಾಪಿಸಿಕ್ಕೊಳ್ಳುವ ಅವಶ್ಯಕತೆ ಇಂದು ನಮ್ಮ ಮುಂದಿದೆ .

           ಬೌಧ್ಧ ಮಾಧ್ಯಮಿಕ ಮಾರ್ಗವಾಗಿ ಬಂದ ಅಚಲ ಪರಂಪರೆ, ಸೂಫೀ ಪರಂಪರೆ, ದಾಸ ಪರಂಪರೆಯ ಪ್ರಭಾವ ದಿಂದ ಜನ್ಮ ತಾಳಿದ ಸೂಫೀ ತತ್ವಪದ ಪರಂಪರೆ ಹರಿದಾಸರ ಪ್ರಭಾವ ದಿಂದ ಬಂದ ಹರಿದಾಸ ತತ್ವಪದ ಪರಂಪರೆ, ಹನ್ನೆರಡನೇ ಶತಮಾನದ ವಚನ ಸಾಹಿತ್ಯದ ಶರಣರ ಪ್ರಭಾವ ದಿಂದ ಬಂದ ಕಂದ ಹಾಗೂ ಶತಕಗಳು ಹಾಗೂ ಕಾಲಜ್ಞಾನಗಳು ನಮ್ಮದೇ. ನೆಲದ ಹಲವು ತತ್ವಪದಕಾರರ ಕೊಡುಗೆಗಳು ಆಗಿವೆ.

         ಭಾಷಿಕ ದೃಷ್ಟಿಯಿಂದ ನೋಡುವಾಗ ನಮ್ಮ ಸ್ಥಳೀಯ ಭಾಷೆಯಾದ ಕನ್ನಡ ತೆಲುಗು ಭಾಷೆಗಳು ಬರಹದ ಅಥವಾ ಶಿಷ್ಟ ಭಾಷೆಯ ಮುಂದೆ  ಕೀಳರಿಮೆಗೆ ಒಳಗಾಗುತ್ತಲೇ ಬಂದಿರುವ ಸಂದರ್ಭದಲ್ಲಿ ಮಾತಿನಲ್ಲಿ ಆಗಾಗ ಕೆಲವು ತೆಲುಗು ಪದಗಳನ್ನು ಬೆರೆಸಿ ಕನ್ನಡ ಪದಗಳನ್ನು ಬೆರೆಸಿ ಮಾತನಾಡುವ ಇಲ್ಲಿನ ಜನರನ್ನು ಅನಾಗರೀಕರಂತೆ ಕಾಣುವ   ವರ್ತಮಾನದ ಸಂದರ್ಭದಲ್ಲಿ  ಅದೇ ರೀತಿಯ ಭಾಷೆಯಲ್ಲಿ ಒಂದು ಬಹು ದೊಡ್ಡ ಆಧ್ಯಾತ್ಮಿಕ, ದಾರ್ಶನಿಕ ಹಾಗೂ ವೈಚಾರಿಕ ಪರಂಪರೆಯೊಂದು ಸಾಗಿ ಬಂದಿರುವುದನ್ನು ಪ್ರಪಂಚಕ್ಕೆ ಪರಿಚಯಿಸುವುದರ ಮೂಲಕ ಸ್ಥಳೀಯ ಭಾಷೆಯ ಮಹತ್ವವನ್ನು ಅದೇ ರೀತಿ ತತ್ವಪದಗಳಲ್ಲಿ ಅಡಗಿರುವ ಕ್ರಾಂತಿಕಾರಿ ಹಾಗೂ ಪ್ರಗತಿಶೀಲ, ಬಂಡಾಯ ಹಾಗೂ ವೈಚಾರಿಕ ದೃಷ್ಟಿಕೋನ ದಲ್ಲಿ ಈ ಅಧ್ಯಯನ ಬಹಳ ಮಹತ್ವಪೂರ್ಣವಾದದ್ದಾಗಿದೆ .

           ವೈದಿಕ ಸಂಸ್ಕೃತಿಯನ್ನು ಕೆಲವು ಹಿತಾಸಕ್ತಿಗಳು ತಮ್ಮ ಅನುಕೂಲ ಕ್ಕಾಗಿ ಜನರ ಮೇಲೆ ಹೇರುವ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿರುವ ಸಂಧರ್ಭದಲ್ಲಿ ನಮ್ಮ ತತ್ವಪದ ಸಾಹಿತ್ಯ ಹಾಗೂ ಸಂಸ್ಕೃತಿಗಳು ಹಾಗೂ ಮೌಲ್ಯಗಳು ಮೂಲೆಗುಂಪಾಗುತ್ತಿದ್ದು ವೈದಿಕ ಸಾಹಿತ್ಯ, ಹಾಗೂ ಸಂಸ್ಕೃತಿ ಗೆ ಪರ್ಯಾಯ ವಾಗಿ ಬೆಳೆದು ಬಂದಿರುವ ಬೌದ್ಧ ಹಾಗೂ ದ್ರಾವಿಡ ಸಂಸ್ಕೃತಿ ಹಾಗೂ ಅದರ ತತ್ವ ಸಿದ್ಧಾಂತ ಗಳ ಹಿನ್ನೆಲೆಯಲ್ಲಿ ಹಾಗೂ ವಚನ ಕ್ರಾಂತಿಯ ವೈಚಾರಿಕತೆ ಹಿನ್ನಲೆಯಲ್ಲಿ ಬೆಳೆದು ಬಂದಿರುವ ತತ್ವಪದಕಾರರ ಪರಂಪರೆಯ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ. ಕೇವಲ ಶಿಷ್ಟ ಸಂಶೋಧನೆ ಅಷ್ಟೆ ಅಲ್ಲದೆ ಜಾನಪದ ಸಂಶೋಧನೆ ಗಳು ಕೂಡಾ ತತ್ವಪದಕಾರರನ್ನು ನಿರ್ಲಕ್ಷ್ಯಕ್ಕೆ ಒಳಪಡಿಸಿರುವುದನ್ನು ಕಾಣಬಹುದಾಗಿದೆ. ತತ್ವಪದ ಸಮಾನತೆಯ ಆಶಯದ ಅಧ್ಯಾತ್ಮ ಪರಂಪರೆ ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಶ್ರವಣ ಸಂಸ್ಕೃತಿಯ ಪ್ರತೀಕ.

          ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿದ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ ಸಾಹಿತ್ಯ ಕಲೆಯು ತತ್ವ, ಸಿದ್ಧಾಂತ ಹಾಗೂ ಜನರ ಸಂಸ್ಕೃತಿಯನ್ನು ಹೊಂದಿದೆ ಮಾತ್ರವಲ್ಲ ತತ್ವಪದಗಳು ನೋಡಲು ಸರಳವಾಗಿದ್ದರೂ ಜಾತೀಕರಣ ಹಾಗೂ ಸಾಮ್ರಾಜ್ಯಶಾಹಿಗಳ ವಿರುದ್ಧದ ಬಂಡಾಯ ಚಿಂತನೆಯನ್ನು ಸಹಾ ಹೊಂದಿವೆ.    

            ಕರ್ನಾಟಕದ ಭಕ್ತಿ ಪಂಥಗಳಿಗೆ 3000 ವರ್ಷದ ಪರಂಪರೆಯಿದ್ದು, ತತ್ವಪದಗಳು 13 ನೇ ಶತಮಾನದಲ್ಲಿ ಹುಟ್ಟಿಕೊಂಡಿವೆ. ಈ ತತ್ವಪದಗಳಲ್ಲಿ ಸೂಫಿ ಪರಂಪರೆ, ಶಿಶುನಾಳ ಪರಂಪರೆ, ಅವಧೂತ ಪರಂಪರೆಯಂತಹ ಹಲವಾರು ಪರಂಪರೆಗಳಿದ್ದು, ಇವು ಸೌಹಾರ್ದತೆಯನ್ನು ಉಂಟುಮಾಡುವುದಷ್ಟೆ ಅಲ್ಲ ಮೌಲ್ಯಗಳನ್ನು ಕೂಡ ನೀಡಿವೆ. ಸಂತಶಿಶುನಾಳ ಶರೀಫ, ಬಿದನೂರಿನ ಗಂಗಮ್ಮ, ಕಲ್ಲೂರಿನ ತಾಯಮ್ಮ, ಮುಂತಾದ ತತ್ವಪದಕಾರರು, ದಲಿತ ತತ್ವಪದಕಾರರು, ಮಹಿಳಾ ತತ್ವಪದಕಾರರು ಹಾಗೂ ಇಸ್ಲಂ ತತ್ವಪದಕಾರರು ಅದ್ಭುತ ಕ್ರಾಂತಿಯನ್ನು ತತ್ವಪದಗಳಲ್ಲಿ ಮಾಡಿದ್ದಾರೆ.

          ಆದರೆ ಈ ಕೊಡುಗೆಗಳಿಗೆ ಯಾವುದೇ ಸಾಹಿತ್ಯಿಕ ಕುರುಹುಗಳಿಲ್ಲ.  ಇಂದು ಜಾಗತೀಕರಣ ಹಾಗೂ ದೇಶೀಕರಣ ಮುಖ್ಯವಾಗಿದ್ದು, ಕೆಲವೊಂದು ಸಾಮಾಜಿಕ ಪರಿಭಾಷೆಯನ್ನು ಆಧ್ಯಾತ್ಮಿಕ ಪರಿಭಾಷೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಜ್ಞಾನವನ್ನು ಪಸರಿಸುವುದು ಧರ್ಮವಾದರೆ ಅದನ್ನು ಕೆಡಿಸುವುದು ಅಧರ್ಮ. ಅಂತಹ ಜ್ಞಾನವನ್ನು ಪಸರಿಸುವ ಧರ್ಮದ ಕಾರ್ಯವನ್ನು ಈ ತತ್ವ ಪದಕಾರರು ಮಾಡಿದ್ದಾರೆ. ವಿವಿಧ ತೋಟದಳಲ್ಲಿ ಬೆಳೆದ ತತ್ವಪದಗಳ ಪರಿಮಳವು ದೇಶಿ ಸುವಾಸನೆಯನ್ನು ನೀಡುವುದರ ಜೊತೆಗೆ ಸಾಮಾಜಿಕ ಆಧ್ಯಾತ್ಮಿಕ ಪರಿಮಳವನ್ನು ನೀಡುತ್ತಿದೆ.

          ಕನ್ನಡದ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಅನುಭಾವ ಸಾಹಿತ್ಯ ಕನ್ನಡದಲ್ಲಿ ಜೈನಸಾಹಿತ್ಯದೊಂದಿಗೆ ಆರಂಭವಾಯಿತು ಎನ್ನಬಹುದು. ಆದರೂ ಜೈನ ಸಾಹಿತ್ಯಕ್ಕೆ ರಾಜಾಶ್ರಯದೊರೆತ ಕಾರಣದಿಂದಾಗಿ ಅಲ್ಲಿ ಅನುಭಾವದ ಅಂಶ ಅಷ್ಟಾಗಿ ತೋರದೆ ಸಾಹಿತ್ಯಿಕ ಅಂಶಗಳೇ ಹೆಚ್ಚಾಗಿ ಕಾಣಬರುತ್ತವೆ. ಅನುಭಾವ ಸಾಹಿತ್ಯದ ರಸ, ಕೇವಲ ಬುದ್ದಿ ಮತ್ತು ಮನಸ್ಸನ್ನು ಮಾತ್ರ ತೃಪ್ತಿ ಪಡಿಸುವುದಾಗಿ ಉಳಿಯುವುದಿಲ್ಲ. ಅದು ಹೃದಯವನ್ನು ಅರಳಿಸಿ ಸತ್ಯದ ಪ್ರತ್ಯಕ್ಷ ದರ್ಶನ ಪಡೆಯವ ಹಂಬಲವನ್ನೂ ಜಿಜ್ಜ್ನಾಸೆಯನ್ನೂ ತುಂಬಿಸುತ್ತದೆ. ಮತ್ತು ಅತೀ ಮುಖ್ಯವಾಗಿ ಅನುಭಾವ ಸಾಹಿತ್ಯ, ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದದ್ದು. ಮಾತು ಮನಗಳಿಗೆ ಮೀರಿದ್ದು. ಕನ್ನಡದಲ್ಲಿನ ಅನುಭಾವ ಸಾಹಿತ್ಯ ಅತ್ಯಂತ ವಿಶಾಲವಾದದ್ದು. ದಾಸ ಸಾಹಿತ್ಯ ಮತ್ತು ಶರಣಸಾಹಿತ್ಯ ಎರಡು ಪ್ರಮುಖ ಘಟ್ಟಗಳಷ್ಟೆ.

               ಕನ್ನಡ ನಾಡಿನ ತತ್ವಪದ ಕಾರರ ಚರಿತ್ರೆ ಹಾಗೂ ಸಾಹಿತ್ಯ ದ ಅಧ್ಯಯನವು ಕನ್ನಡದ ಜನಪದ ಸಂಶೋಧನಾ ಕ್ಷೇತ್ರವನ್ನು ವಿಸ್ತರಿಸುವ ಕೆಲಸ ಮಾಡುವುದರಿಂದ, ಈ ನಿಟ್ಟಿನಲ್ಲಿ ಈ ಅಧ್ಯಯನ ಅತ್ಯಂತ ಮಹತ್ವದ್ದು ಹಾಗೂ ಉಪಕಾರಿಯೂ, ಪ್ರಯೊಜನಕಾರಿ ಆದದ್ದು ಆಗಿದೆ. ನಮ್ಮ ಅಸ್ತಿತ್ವ ಹಾಗೂ ನಮ್ಮ ಪರಂಪರೆಯ ಅಸ್ತಿತ್ವ ದ ಉದ್ದೇಶದಿಂದಾಗಿ ಈ ಅಧ್ಯಯನದ ಮಹತ್ವ ಮತಷ್ಟು ಹೆಚ್ಚಿದೆ ಎಂಬುದು ನನ್ನ ನಂಬಿಕೆ.

                                                                                                                                              

 

 

 

 

 

 

 

 

 

 

 

 

 

 

ಅಧ್ಯಾಯ-3

ತತ್ವ ಪದಕಾರರ ಬದುಕು ಮತ್ತು ಬರಹದ ಸ್ವರೂಪ

 ವೀರಬ್ರಹ್ಮೇಂದ್ರಸ್ವಾಮಿ                                                                                                        

ಶ್ರೀ ವೀರಬ್ರಹ್ಮಯ್ಯ ನವರು ಮೂಲತಃ ಚಿಕ್ಕಬಳ್ಳಾಪುರದ ಹತ್ತಿರದ ಪಾಪಾಗ್ನೀ ಮಠದಲ್ಲಿ ಸ್ವಲ್ಪ ಕಾಲ ಇದ್ದು ಅಲ್ಲಿಯೇ ದಿವ್ಯ ಜ್ಞಾನವನ್ನು ಪಡೆದರೆಂದು ಶ್ರೀ ವೀರಬ್ರಹ್ಮಯ್ಯ ನವರ ಚರಿತ್ರೆ ನಿರೂಪಿಸುತ್ತದೆ  .

ವೀರಬ್ರಹ್ಮೇಂದ್ರ ಸ್ವಾಮಿಯು ಕರ್ನೂಲು ಜಿಲ್ಲೆಯಲ್ಲಿನ ಬನಗಾನಪಲ್ಲಿ ಮಂಡಲದಲ್ಲಿ ಗರಿಮಿರೆಡ್ಡಿ ಅಚಮ್ಮ ಮನೆಯಲ್ಲಿ ಪಶುಗಳು ಕಾವಲಾಗಿದ್ದು, ರವ್ವಕಬೆಟ್ಟದಲ್ಲಿ ಕಾಲಜ್ಞಾನವನ್ನು ಬರೆದರು. ಗೋವುಗಳ ಸುತ್ತ ಒಂದು ಗೆರೆಯನ್ನು ಬರೆದು ರವ್ವಕಬೆಟ್ಟದ ಮೇಲೆ ಕಾಲಜ್ಞಾನ ಬರೆದರು. ರವ್ವಲಕೊಂಡ ಬನಗಾನಪಲ್ಲಿಗೆ ಕೇವಲ 1.5 ಕಿ.ಮೀ ದೂರದಲ್ಲಿದೆ ಒಂದು ಬೆಟ್ಟದ ಮೇಲೆ ಇದೆ. ಈ ಬೆಟ್ಟದ ಗುಹೆಯಲ್ಲಿ ಕುಳಿತುಕೊಂಡು ಸ್ವಾಮಿಯು ಕಾಲಜ್ಞಾನವನ್ನು ಬರೆದಾದ್ದರಿಂದ "ಬ್ರಹ್ಮಗಾರಿ ಕೊಂಡಲು" ಎಂದೇ ಕರೆಯುತ್ತಾರೆ.

ವೀರಬ್ರಹ್ಮೇಂದ್ರ ಸ್ವಾಮಿಯು ತೆಲುಗು ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿರುವ ಪುಣ್ಯ ಪುರುಷ. ಇವರು ದೇಶ ಪರ್ಯಾಟನೆ ಮಾಡಿ ಕಾಲಜ್ಞಾನವನ್ನು ಬರೆದರು. ಪ್ರಾಣಿಗಳ ಕಾವಲುಗಾರನಾಗಿಯೂ ಕೂಡ ತನ್ನ ಭಾದ್ಯತೆಗಳನ್ನು ನಿರ್ವಹಿಸಿದರು. ಸ್ವಾಮಿಯು ಭವಿಷ್ಯತ್ತಿನಲ್ಲಿ ನಡೆಯುವ ಅನೇಕ ಸಂಘಟನೆಗಳನ್ನು, ವಿಷಯಗಳನ್ನು ಮೊದಲೇ ತಿಳಿದುಕೊಂಡು ತಾಳೆ ಗ್ರಂಥದಲ್ಲಿ ಭದ್ರಗೊಳಿಸಿದರು.

 ಪಶುಗಳ ಕಾವಲುಗಾರನಾಗಿ ಮಾರ್ಪಟಾದ ವೀರಬ್ರಹ್ಮೇಂದ್ರ ಸ್ವಾಮಿ ಅವರು ದಿನನಿತ್ಯವು ರವ್ವಲಬೆಟ್ಟದ ಮೇಲೆ ಪಶುಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಪ್ರದೇಶವು ಅತ್ಯಂತ ಪ್ರಶಾಂತವಾಗಿ ಇದ್ದ ಕಾರಣವಾಗಿ ಅಲ್ಲಿಯೇ ಕಾಲಜ್ಞಾನವನ್ನು ಬರೆಯಬೇಕು ಎಂದು ನಿಶ್ಚಯಿಸಿಕೊಂಡರು.

ತಾನಷ್ಟಕ್ಕೆ ತಾನು ಕಾಲಜ್ಞಾನವನ್ನು ಬರೆದುಕೊಂಡು ಕುತರೆ ಪಶುಗಳ ಸಂಗತಿ ಏನು? ಎಂದು ಗ್ರಹಿಸಿದ ವೀರಬ್ರಹ್ಮೇಂದ್ರ ಸ್ವಾಮಿಯವರು ಅವುಗಳನ್ನು ಒಂದು ಮೈದಾನದಲ್ಲಿ ಬಿಟ್ಟು ಅವುಗಳ ಸುತ್ತ ಒಂದು ಗೆರೆಯನ್ನು ಹಾಕುತ್ತಿದ್ದರು. ಗೋವುಗಳು ಆ ಗೆರೆಯನ್ನು ದಾಟದೇ ಮೇವುಗಳನ್ನು ಸ್ವೀಕರಿಸುತ್ತಿದ್ದರು.

ಒಂದು ದಿನ ಈ ವಿಷಯವನ್ನು ಗ್ರಹಸಿದ ಕೆಲವು ಮಂದಿ ಜನರು ಅಚ್ಚಮ್ಮಳಿಗೆ ಈ ವಿಷಯವನ್ನು ಹೇಳಿದರು. ಅಚ್ಚಮ್ಮ ಬೆಟ್ಟದ ಮೇಲೆ ಹೋಗಿ ನೋಡಿದರೆ ಪಶುಗಳು ಏಕಾಗ್ರತೆಯಾಗಿ ಹುಲ್ಲು ಮೇಯುವುದನ್ನು ಗ್ರಹಿಸಿದಳು. ಗುಹೆಯಲ್ಲಿ ಹೋಗಿ ನೋಡಿದರೆ, ವೀರಬ್ರಹ್ಮೇಂದ್ರ ಸ್ವಾಮಿಯು ಧ್ಯಾನ ಮುದ್ರೆಯಲ್ಲಿ ಇದ್ದು ಎಲೆಗಳ ಮೇಲೆ ಕಾಲಜ್ಞಾನವನ್ನು ಬರೆಯುತ್ತಾ ಕಾಣಿಸಿಕೊಂಡರು. ಅದನ್ನು ಕಂಡ ಆಕೆಯು ಆತನನ್ನು ಒಂದು ಜ್ಞಾನಿಯಾಗಿ ಭಾವಿಸಿದಳು.

 ತಾನು ಇಷ್ಟು ದಿನಗಳ ಕಾಲ ಸೇವೆಗಳನ್ನು ಮಾಡಿಕೊಂಡಿದ್ದು ಒಂದು ಜ್ಞಾನಿಯ ಕೈಯಲ್ಲಿಯೇ? ಎಂದು ನೊಂದುಕೊಂಡಳು. ಸ್ವಾಮಿಯ ಬಳಿ ಹೋಗಿ ತನ್ನನ್ನು ಕ್ಷಮಿಸು ಎಂದು ಕೇಳಿಕೊಂಡಳು. ತಮಗೆ ಜ್ಞಾನದ ಭೋದನೆಯನ್ನು ಮಾಡು ಎಂದು ಕೇಳಿಕೊಂಡಳು. ವೀರಬ್ರಹ್ಮೇಂದ್ರ ಸ್ವಾಮಿಯು ವಿವಿಧ ಸಂದರ್ಭದಲ್ಲಿ ಜ್ಞಾನ ಭೋದನೆಯನ್ನು ಮಾಡಿದ್ದಾರೆ.ಅವರುಗಳಲ್ಲಿ ಅಚ್ಚಮ್ಮ, ಬನಗಾನಪಲ್ಲಿ ನವಾಬ, ಹೈದ್ರಾಬಾದ್ ನವಾಬರು ಮುಖ್ಯ. ನವಾಬರಿಗೆ ಅವರ ಅಧೀನದಲ್ಲಿಯೇ, ಅಚ್ಚಮಾಂಬಳಿಗೆ ಯಾಂಗಟಿ ಕ್ಷೇತ್ರದಲ್ಲಿ ಮುಚ್ಚಟ್ಲ ಗುಡ್ಡದ ಮೇಲೆ ಜ್ಞಾನವನ್ನು ಭೋದನೆಯನ್ನ ಮಾಡಿದರು.

ಮುಂದೆ ಹಲವು ಪವಾಡಗಳನ್ನು ಮೆರೆಯುತ್ತಾ ಕಾಲಜ್ಞಾನ ಸೇರಿದಂತೆ ಹಲವು ಕಂದ. ಶತಕಗಳನ್ನು ರಚಿಸಿ ತಮ್ಮ ಇಳೆ ವಯಸ್ಸಿನಲ್ಲಿ ತಮ್ಮ ಶಿಷ್ಯವೃಂದಕ್ಕೆಲ್ಲಾ ತಿಳಿಸಿ ಜೀವಂತ ಸಮಾಧಿಯಾಗುತ್ತಾರೆ. ಶ್ರೀ ವೀರಬ್ರಹ್ಮಯ್ಯ ನವರು ಮುಸ್ಲೀಂ ಮತದವನಾದ ಸಿದ್ಧಯ್ಯನನ್ನು ಶಿಷ್ಯನಾಗಿ ಹೊಂದಿದ್ದು, ಆಗಿನ ಕಾಲದ ಮತ ಸಾಮರಸ್ಯ ವನ್ನು ಎತ್ತಿ ತೋರಿಸುತ್ತದೆ.

ಶ್ರೀ ವೀರಬ್ರಹ್ಮಯ್ಯ ನವರು ಸ್ವಾಮಿಗಳಾಗಿ ತತ್ವಭೋಧೆಯನ್ನು ನೀಡುತ್ತಿದ್ದರೂ ಸಹಾ, ವಿವಾಹ ಮಾಡಿಕೊಂಡು ಸಂಸಾರಿಕ ಜೀವನವನ್ನು ನಡೆಸುತ್ತಿದದ್ದು ಮತ್ತೂಂದು ವಿಶೇಷ. ತಮ್ಮ ಶಿಷ್ಯನಾದ ಸಿದ್ಧಯ್ಯನಿಗೆ ತಮ್ಮ ಮಗಳಾದ ವೀರನಾರಾಯಣಮ್ಮ ನನ್ನು ವಿವಾಹ ಮಾಡಿಸಿ ಮುಂದೆ ಅತನನ್ನು ತನ್ನ ಉತ್ತರಾಧಿಕಾರಿಯಾಗಿ ಮಾಡಿಕೊಂಡರು.

ಇಂದಿಗೂ ಸಹಾ ವೀರಬ್ರಹ್ಮಯ್ಯ ನವರು ಸಮಾಧಿ ಹೊಂದಿದ ಸ್ಥಳವಾದ ಪೋತಲೂರು ಆಂಧ್ರ ಪ್ರದೇಶದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ ಹಾಗೇ ಚಿಕ್ಕಬಳ್ಳಾಪುರದ ಹತ್ತಿರದ ಪಾಪಾಗ್ನೀ ಮಠವೂ ಸಹಾ ಪ್ರಸಿದ್ಧ ಯಾತ್ರಾ ಸ್ಥಳವಾಗಿ, ಶ್ರೀ ವೀರಬ್ರಹ್ಮಯ್ಯ ನವರ ಮಹಿಮೆಯನ್ನು ಸಾರುತ್ತಿದೆ.

 

ಕೈವಾರ ಯೋಗಿನಾರೇಯಣ(ತಾತಯ್ಯ) ಯತೀಂದ್ರ

೧೭೨೬ ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ಕುಲದೇವರಾದ ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡುತ್ತಾನೆ.

ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮದಲ್ಲಿ ಚಿಂತನ ಮಂಥನ ನಡೆಸುವುದರಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ವಿಷಯೋಪ ಭೋಗಗಳೆಂದರೆ ವಿರಕ್ತಭಾವವೇ.

ಊರಿನ ಕೂಲಿಮಠದಲ್ಲಿ ಸಂಸ್ಕೃತಕನ್ನಡತೆಲುಗು ಭಾಷೆಗಳನ್ನು ಕಲಿತು ಪಾರಂಗತನಾಗಿ ಪ್ರೌಢ ವಯಸ್ಕನಾದಾಗ, ಹಿರಿಯರು ಮುಂದೆ ನಿಂತ ಸೋದರತ್ತೆಯ ಮಗಳು ಮುನಿಯಮ್ಮನನ್ನು ಕೊಟ್ಟು ವಿವಾಹ ನೆರವೇರಿಸಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿಸಿದ್ದರು. ಮುದ್ದಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿ ಗಂಡ ದುಡಿಮೆಸ್ತನಲ್ಲ ಸದಾ ಮೂಗು ಹಿಡಿದು ದೇವರ ಧ್ಯಾನ ಮಾಡುತ್ತ ಕುಳಿತರೆ ಹೊಟ್ಟೆ ತುಂಬುವುದಾದರೂ ಹೇಗೆ..? ಹೆಂಡತಿ ಮುನಿಯಮ್ಮನ ವರಾತ ಹೆಚ್ಚಿತ್ತು. ಬಳೆ ಮಲಾರ ಕೈಗಿತ್ತು ವ್ಯಾಪಾರಕ್ಕೆ ಹೋಗಿ ದಿನಕ್ಕಿಷ್ಟು ತರಲೇ ಬೇಕೆಂದು ತಾಕೀತು ಮಾಡುತ್ತಿದ್ದಳು.

ಲೋಕದ ಸ್ತ್ರೀಯರೆಲ್ಲ ತಾಯಿ ಸಮಾನರೆಂದು ಭಾವಿಸತೊಡಗಿದ್ದ ನಾರಾಣಪ್ಪ ಹೆಣ್ಣುಮಕ್ಕಳಿಗೆ, ಸುಮಂಗಲಿಯರಿಗೆಲ್ಲ ಶುದ್ಧಭಾವದಿಂದ ಬಳೆತೊಡಿಸುತ್ತಿದ್ದರು. ಅವರು ಕಾಸುಕೊಟ್ಟಷ್ಟೇ.. ಕೊಡದೇ ತಾತಯ್ಯ ಕಾಸಿಲ್ಲವೆಂದರೆ ಎಲ್ಲ ಅವನಿಚ್ಛೆ ಎಂದು ಮುನ್ನಡೆದು ಸಂಜೆ ವೇಳೆಗೆ ಬಳೆಯಲ್ಲ ಮಾರಿ ಬರಿಗೈಲಿ ಮನೆಸೇರುತ್ತಿದ್ದರು. ಹೆಂಡತಿ ಮುನಿಯಮ್ಮ ಶುದ್ಧ ಮುಠ್ಠಾಳ ಗಂಡ ದೊರೆತನೆಂದು ಗೊಣಗುತ್ತ ಹೇಗೋ ಸಂಸಾರ ನೀಚುವುದಾಗಿತ್ತು.. ದಾಂಪತ್ಯದಲ್ಲಿ ವಿರಸವೇರ್ಪಟ್ಟಿತ್ತು.  

-ಅದೊಂದು ದಿನ ನಾರಾಣಪ್ಪ ಬಳೆ ಮಲಾರ ಹೆಗಲಿಗೇರಿಸಿ ಮೂಗೊಳಿ ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ದಿವ್ಯ ತೇಜಸ್ಸಿನ ಪ್ರಖರತೆಯಲ್ಲಿ ಸ್ವಾಮಿಗಳೊಬ್ಬರಿಂದ ಓಂ ನಮೋ ನಾರಾಯಎಂಬ ಬೀಜಾಕ್ಷರಿ ಮಂತ್ರೋಪದೇಶ ಪಡೆದಿದ್ದರು. ಬಾಯಲ್ಲಿ ಬೆಣಚು ಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂದು ಹರಸಿದ್ದರು.

ಅನಂತರ, ತಪಸ್ಸಿಗೆ ಪ್ರಶಸ್ತವೆನಿಸಿದ ನರಸಿಂಹ ಗುಹೆಯಲ್ಲಿ ಕುಳಿತು ಬೀಜಾಕ್ಷರಿ ಮಂತ್ರ ಜಪಿಸುವಾಗ ಅದು ಬೆಣಚುಕಲ್ಲಿದ್ದ ಬಾಯಲ್ಲಿ ಓಂ ನಮೋ ನಾರೇಯಣಾಯಎಂಬ ಉಚ್ಛಾರವಾದಾಗ ಗಾಬರಿಯಿಂದ ಮತ್ತೆ ಧ್ಯಾನಮಗ್ನರಾಗುತ್ತಿದ್ದಂತೆ ಅದನ್ನೇ ಮುಂದುವರೆಸು "ನೀನು ಯೋಗಿ ನಾರೇಯಣ" ಎಂದೇ ಹೆಸರಾಗುವೆ ಎಂಬ ಅಶರೀರವಾಣಿಯಾಯಿತು. ಮೂರುವರುಷಗಳ ಕಠಿಣ ತಪದ ಫಲವಾಗಿ ಬೆಣಚು ಕಲ್ಲು ಸಕ್ಕರೆಯಾಗಿತ್ತು. ಅಮರ ನಾರಾಯಣನ ಪರಮ ಭಕ್ತರಾದರು.

ಆಧ್ಯಾತ್ಮಿರಹಸ್ಯಗಳನ್ನು ಅನುಭವವೇದ್ಯ ಸತ್ಯಸಂಗತಿಗಳನ್ನು ಅರಿತು ಜನತೆಗೆ ವೇದಾಂತದ ವಿಷಯಗಳನ್ನು ಬೋಧಿಸುತ್ತಾ ದೈವಿಕ ಪವಾಡಗಳನ್ನೆ ಮಾಡಿದರು. ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸಿದರು.

 ಸನ್ಮಾರ್ಗ ತೋರುತ್ತ ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿದರು. ಅದು ಇಂದಿನ ಕಾಲಕ್ಕೆ ಪ್ರಸ್ತುತವೆನಿಸುತ್ತದೆ. ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾದರು. ತಾತಯ್ಯನವರು ೧೧೦ ವರುಷಗಳಷ್ಟು ಸುದೀರ್ಘ ಕಾಲ (೧೭೨೬-೧೮೩೬) ಇಲ್ಲಿ ನೆಲೆಸಿದ್ದರು.

ಶ್ರೀ ಕೈವಾರ ನಾರಾಣಪ್ಪ ನವರು ಕನ್ನಡ ದಲ್ಲಿ ೧೮ ಕೀರ್ತನೆಗಳನ್ನು ರಚಿಸಿದ್ದಾರೆ ಅದರ ಜೊತೆ ಕಾಲಜ್ಞಾನ , ನಾದಬ್ರಹ್ಮಾ ನಂದ ನಾರಾಯಣ ಕವಿ ಶತಕ , ವೇದಾಂತ ಸಾರಾವಳೀ, ತಾರಕ ಬ್ರಹ್ಮಾನಂದ ದ್ವಯಕಂದ ಶತಕ , ಬ್ರಹ್ಮಾಂಡಪುರೀ ಶತಕ , ಅಮರ ನಾರೇಯಣ ಶತಕ , ವಿಮಲಾತ್ಮ ನಾರೇಯಣ ಕವಿ ಶತಕ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಾಗೇ,ಶ್ರೀ ಕೈವಾರ ಯೋಗಿ ನಾರೇಣಪ್ಪನವರು ನವರ ಹೆಸರಿನಲ್ಲಿ ಹಲವರು ಜೀವನ ಚರಿತ್ರೆ, ಮಹಾತ್ಮೆ ಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಶ್ರೀ ಕೈವಾರ ನಾರಾಯಣಪ್ಪ ನವರು ಜೀವಂತ ಸಮಾಧಿಯ ನಂತರ ಅವರ ಶಿಷ್ಯನಾದ ಮುತ್ತಯ್ಯನು ಮಠವನ್ನು ನಡೆಸಿಕೊಂಡು ಬಂದಿದ್ದು ,ಇಂದಿಗೂ ಸಹಾ ಕೈವಾರ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.

ಗಟ್ಟ ಹಳ್ಳಿ ಪರಮಹಂಸ ಆಂಜಿನಪ್ಪ ಸ್ವಾಮಿಗಳು

ತಮಿಳುನಾಡಿನ ಹೊಸೂರು ತಾಲೂಕಿನ ಶೀಕನಪಲ್ಲಿ ಗ್ರಾಮಮದಲ್ಲಿ ಶ್ರೀ ಗವಿಯಪ್ಪ ಕಾಳಮಾಂಬ ದಂಪತಿಗಳ ಮೂರನೇ ಮಗನಾಗಿ ಶ್ರೀ ಆಂಜಿನಪ್ಪಸ್ವಾಮಿಗಳು ೧೮೬೯ರಲ್ಲಿ ಜನಿಸಿದರು. ತಂದೆ ತಾಯಿಗಳು ಮಕ್ಕಳಿಗಾಗಿ ಹಲವು ವ್ರತ ಉಪವಾಸಗಳನ್ನು ಮಾಡಿ, ಚಿಕಿತ್ಸೆ ಪಡೆದು ನಂತರ ಮಕ್ಕಳನ್ನು ಪಡೆದ್ದಿದರು.

ಮಕ್ಕಳು ಜನಿಸಿದ ಕೆಲವು ಕಾಲದಲ್ಲಿಯೇ ತಂದೆ ಗವಿಯಪ್ಪ ನವರು ನಿಧನ ಹೊಂದಲು ತಾಯಿ ಹೊಟ್ಟೆ ಪಾಡಿಗಾಗಿ ಮಕ್ಕಳನ್ನು ಕರೆದುಕೊಂಡು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಕೆರೆ ಗ್ರಾಮಕ್ಕೆ ಬಂದು ಕೂಲಿ ನಾಲಿ ಮಾಡುತ್ತಾ ಜೀವನ ನಡೆಸುತ್ತಿದರು. ಮಗನಾದ ಆಂಜಿನಪ್ಪನು ಮಾತ್ರ ಹತ್ತಿರದ ಚೌಡಮ್ಮನ ಗುಡಿಯಲ್ಲಿ ಧ್ಯಾನಾಸಕ್ತ ನಾಗಿ ಕೂರುವುದು ಅಥವಾ ತುಳಸಿ ಗಿಡಗಳಿಗೆ ನೀರು ಹಾಕುವುದು ಇದೆ ಕಾಯಕದಲ್ಲಿ ಕಾಲ ಕಳೆಯುತ್ತಿದ.

            ಬಡತನದಲ್ಲಿದ ಇವರ ಸಂಸಾರಕ್ಕೆ ಮಗ ಸಹಾಯಕನಾಗದೇ ಹೀಗೆ ಕಾಲ ಕಳೆಯುವುದು. ತಾಯಿಗೆ ಚಿಂತೆ ಆಗ್ಗಿತು. ನೀನು ಹೀಗೆ ಕಾಲಕಳೆಯುವ ಬದಲು ಯಾವುದಾದರೂ ಪ್ರಯೊಜನಕ್ಕೆ ಬರುವ ಕೆಲಸ ಮಾಡಬಾರದೇಎಂದು ತಾಯಿ ಮಗನಿಗೆ ಬುದ್ಧಿ ಹೇಳುತ್ತಿದರು. ಆದರೇ ಮಗನ ಚಿಂತನೆಯೇ ಬೇರೆ ‘’ಬರಿಯ ಹೊಟ್ಟೆ ಹೊರೆಯುವುದೇ ಜೀವನ ಅಲ್ಲ, ಸಂಸಾರ ನಿಸ್ಸಾರ ವಾದದ್ದು ಎಂದುತಾಯಿಯಲ್ಲಿ ವಿವರಿಸಿದ.  ಆದರೂ ತಾಯಿಯ ಮಾತಿಗೆ ಮಣಿದು, ಪರಿಚಿತರೊಬ್ಬರ ಮನೆಯಲ್ಲಿ ಊಳಿಗಕ್ಕೆ ನಿಂತರು.

            ಇಲ್ಲಿ, ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಾ, ಧನ ಮೇಯಿಸುತ್ತಾ, ಊಟ ಮಾಡಿ ರಾತ್ರಿ ಸಮಯದಲ್ಲಿ ಧ್ಯಾನ ಮಾಡುತ್ತಾ ತನಗೆ ವರವಾಗಿ ಸಿಕ್ಕ ಪುಸ್ತಕದಲ್ಲಿ ತನ್ನ ಅನುಭವಗಳನ್ನು ಕೀರ್ತನೆ, ತ್ರಿಪದಿ ಗಳ ರೂಪದಲ್ಲಿ ದಾಖಲಿಸುತ್ತಾ, ತನ್ನ ಇಷ್ಟ ದೈವ ಆಂಜಿನೇಯ ಸ್ವಾಮಿಯ ಧ್ಯಾನ, ಸ್ಮರಣೆ ಗಳಲ್ಲಿ ಕಾಲ ಕಳೆಯುತ್ತಿರಲು ತನ್ನ ೨೦ ನೇ ವಯಸ್ಸಿನಲ್ಲಿ ತನ್ನ ಪೊಷಕನಾದ ವೆಂಕಟಪ್ಪನವರ 10 ವರ್ಷ ವಯಸ್ಸಿನ ಮಗಳಾದ  ಪಂಪಮ್ಮನೊಂದಿಗೆ  ವಿವಾಹ ಮಾಡಿಕೊಂಡರು. ಆದರೇ ಇವರ ವೈವಾಹಿಕ ಜೀವನ ಅಷ್ಟೇನು ಸುಖಕರವಾಗಿರಲಿಲ್ಲ, ಗಂಡ ಹೆಂಡಿರಂತೆ ಯಾವುದೇ ವಿಶೇಷವಾದ ಸಂಭಂಧವಿಲ್ಲದೇ ಪಂಪಮ್ಮನು ಬದುಕಿ ತನ್ನ ಐವತ್ತನೇ ವಯಸ್ಸಿನಲ್ಲಿ ಎಂದರೇ 1938 ರಲ್ಲಿ ನಿಧನರಾದರು .

ಇನ್ನು, ಆಂಜಿನಪ್ಪ ನವರು ತಮ್ಮ 35 ನೇ ವಯಸ್ಸಿನಲ್ಲಿ ಅಂದರೇ 11-10-1903 ರ ಶುಭ ದಿನದಂದು ತಮ್ಮ ಕಾರಣಗುರು ರಾಮಕೃಷ್ಣಾರ್ಯ ರನ್ನು ಭೇಟಿಯಾಗಿ ನಂತರದ ಮೂರನೇ ದಿನದಲ್ಲಿ ‘’ಐಕ್ಯಸಂಧಾನಯೋಗ’’ ಎಂಬ ಒಂದು ಯೋಗ ವಿಧಾನವನ್ನು ಗುರುವಿನಿಂದ ಉಪದೇಶ ವಾಗಿ ಆಂಜಿನಪ್ಪನವರು ಪಡೆದರು, ಆ ಯೋಗ ಸಾಧನೆಯ ಫಲವಾಗಿ ಸಾಧನೆಯ ಸಿದ್ಧಿಯನ್ನು ಪಡೆದು ಹಲವಾರು ಪವಾಡಗಳನ್ನು ಮೆರೆದು ಗಟ್ಟಹಳ್ಳಿಯಲ್ಲಿ ಆಶ್ರಮ ನಿರ್ಮಿಸಿ ಜನರ ಕಷ್ಟ ಸುಖಗಳನ್ನು ಪರಿಹರಿಸುತ್ತಾ 107 ವರ್ಷಗಳ ತುಂಬು ಜೀವನವನ್ನು ನಡೆಸಿ 1971 ನೇ ಇಸ್ವೀ ಏಪ್ರಿಲ್ 30 ರಂದು ಶುಕ್ರವಾರ ಇಹಲೋಕವನ್ನು ತ್ಯಜಿಸಿದರು.

 ಶ್ರೀ ಪರಮಹಂಸ ಗಟ್ಟಹಳ್ಳಿ ಆಂಜಿನಪ್ಪ ಸ್ವಾಮಿಗಳವರು ಅನುಭವ ವೇದಾಂತ ರತ್ನಾವಳಿಎಂಬ ತತ್ವಪದಗಳ ಸಂಕಲನ ಗ್ರಂಥ ವನ್ನು ರಚಿಸಿದ್ದು ಮೇಲೆ ಮಂಟಪದಲ್ಲಿ ನೋಡಣ್ಣ” “ಊರು ದೇವರ ಮಾಡಬೇಕಣ್ಣಾಸೇರಿದಂತೆ ಹಲವು ಪ್ರಸಿದ್ದ  ಕೀರ್ತನೆಗಳನ್ನು ಈ ಸಂಕಲನ ಒಳಗೊಂಡಿದೆ. ಅದರ ಜೊತೆಗೆ ಆಂಜಿನಪ್ಪ ಸ್ವಾಮಿಗಳವರು ಕಾಲಜ್ಞಾನ ಶತಕ, ಪರಮಾತ್ಮ ಕವಿ ಶತಕ, ಮುಂತಾದ ಕೃತಿಗಳನ್ನು    ನಿರ್ಮಲಾತ್ಮಎಂಬ ಅಂಕಿತದಲ್ಲಿ ರಚಿಸಿದ್ದಾರೆ. ಇಂದಿಗೂ ಶ್ರೀ ಗಟ್ಟಹಳ್ಳಿ ಆಂಜಿನಪ್ಪ ನವರ ಕಾರ್ಯ ಕ್ಷೇತ್ರ ಅವರ ಪವಾಡ ಹಾಗೂ ವೈರಾಗ್ಯ ಭೂಮಿ ಆದ ಗಟ್ಟಹಳ್ಳಿ ಆಂಜಿನಪ್ಪ ಸ್ವಾಮಿಗಳ ಮಠ ಒಂದು ಪ್ರಸಿದ್ದ ಯಾತ್ರಾ ಸ್ಥಳವಾಗಿದೆ.

 

ಶ್ರೀಪಾದರಾಜರು

‘’ಹರಿ ದಾಸ ಪಿತಾಮಹ” ರೆಂಬ ಗೌರವಕ್ಕೆ  ಪಾತ್ರರಾದಶ್ರೀ ಶ್ರೀಪಾದರಾಜರು ದಾಸ ಶ್ರೇಷ್ಠರುಗಳೆಲ್ಲರೂ ಇವರನ್ನು ಹೊಗಳಿದ್ದಾರೆ.  ಕರ್ಣಾಟಕದಲ್ಲಿ 13 ನೇ ಶತಮಾನದಲ್ಲಿ ಶ್ರೀ  ಮಧ್ವಾಚಾರ್ಯರು ಬಿತ್ತಿದ  ವೈಷ್ಣವ  ಭಕ್ತಿಬೀಜ  ನರಹರಿ ತೀರ್ಥರ ಕಾಲದಲ್ಲಿ  ಮೊಳಕೆ  ಯೊಡೆದು  ಅದು ಚಿಗುರಿ ಹೆಮ್ಮರ ವಾಗತೊಡಗಿದ್ದು  ಶ್ರೀಪಾದರಾಜರ  ಕಾಲದಿಂದಲೇ.  ಇಂದು ನಾವು ಬಹುವಾಗಿ  ಕೊಂಡಾಡುವಸಾಹಿತ್ಯ ಕ್ಷೇತ್ರಕ್ಕೆ ಕನ್ನಡದ  ಕೊಡುಗೆಗಳಲ್ಲೊಂದು  ಎಂದು   ಹೆಮ್ಮೆಯಿಂದ  ಬೀಗುವ  ಹರಿದಾಸ ಸಾಹಿತ್ಯ ಲಭ್ಯವಾದುದು ಶ್ರೀ ಪಾದರಾಜರು  ಪಟ್ಟ ಶ್ರಮದಿಂದ ಇಟ್ಟ ದಿಟ್ಟಹೆಜ್ಜೆಯಿಂದ.

ದಾಸ ಸಾಹಿತ್ಯ  ಸಾಮ್ರಾಜ್ಯ ಸ್ಥಾಪಕ ರಾದ ಶ್ರೀಪಾದ  ರಾಜರ ಪೂರ್ವಾಶ್ರಮದ  ಹೆಸರು  “ಲಕ್ಷ್ಮೀನಾರಾಯಣ” ಎಂಬುದಾಗಿತ್ತು. ತಂದ ಶೇಷ ಗಿರಿಯಪ್ಪ ಹಾಗೂ ತಾಯಿ ಗಿರಿಯಮ್ಮ. ಇವರ ಪುತ್ರ ನಾಗಿ ಚನ್ನಪಟ್ಟಣ ತಾಲೂಕಿನ  ಅಬ್ಬೂರಿನಲ್ಲಿ ಕ್ರಿ.ಶ.1404 ರಲ್ಲಿ ಜನಿಸಿದರು. ಅವರ ಸ್ಥಿತಿ-ಗತಿ ಅಷ್ಟಕಷ್ಟೆ ಯಾಗಿತ್ತು. ಒಮ್ಮೆ ಸ್ವರ್ಣ ವರ್ಣತೀರ್ಥ  ಎಂಬ ಸ್ವಾಮಿಗಳು  ಸಂಚಾರ  ಮಾರ್ಗವಾಗಿ   ಅಬ್ಬೂರಿನ ಬಳಿ  ಬಂದಾಗ ದನ ಕರು ಗಳನ್ನು ಹೊಡೆದು ಕೊಂಡು ಹೋಗುತ್ತಿದ್ದ,   ಬಾಲಕನನ್ನುಕಂಡು  "ಮಗು ಅಬ್ಬೂರು ಇನ್ನೂ  ಎಷ್ಟು  ದೂರವಿದೆಯಪ್ಪ?  ಎಂದುಕೇಳಲುಬಾಲಕನು, “ಇಗೋ ನನ್ನನ್ನು  ನೋಡಿದನಗಳನ್ನು ನೋಡಿ, ಸೂರ್ಯನನ್ನು ನೋಡಿ.  ಎಷ್ಟು ದೂರವೋ ಗೊತ್ತಾಗುತ್ತದೆ” ಎಂದು ಚಮತ್ಕಾರ ವಾಗಿ  ಉತ್ತರಿಸಿದ   ಬಾಲಕನಲ್ಲಿ ವಿಶಿಷ್ಟ ಪ್ರತಿಭೆಯನ್ನು  ಗುರುತಿಸುತ್ತಾರೆ.

 ಮುಂದೆ ಸ್ವರ್ಣ ವರ್ಣ  ತೀರ್ಥರ ಆಶ್ರಯದಲ್ಲಿ ಲಕ್ಷ್ಮೀ ನಾರಾಯಣರ  ಬ್ರಹ್ಮೋಪನಯನ,  ವಿದ್ಯಾಭ್ಯಾಸ  ಇವುಗಳ ನಂತರ ಸಂನ್ಯಾಸ  ದೀಕ್ಷೆಯನ್ನು  ಕೊಟ್ಟು ಪೀಠಾಧಿಕಾರಕ್ಕೆ  ತಕ್ಕ  ವೇದಾಂತ ವ್ಯಾಸಂಗಕ್ಕಾಗಿ    ಲಕ್ಷ್ಮೀ ನಾರಾಯಣ ತೀರ್ಥರನ್ನು ಸುಪ್ರಸಿದ್ಧರಾದ ರಾಘವೇಂದ್ರ  ಮಠದ ಪೂರ್ವ  ಪೀಳಿಗೆಯ  ವಿಬುಧೇಂದ್ರ  ತೀರ್ಥರಲ್ಲಿಗೆ  ಕಳುಹಿಸಿ  ಕೊಟ್ಟರು.

ರಂಗ ವಿಠಲಅಂಕಿತ ದೊಂದಿಗೆ  ಅನೇಕ  ಕೀರ್ತನೆಗಳನ್ನು ರಚಿಸಿದರು.  ಸ್ವತಃ  ಭ್ರಮರಗೀತೆ,  ವೇಣುಗೀತೆ,  ಗೋಪಿ ಗೀತೆ ಗಳಂಥ ಭಕ್ತಿ ಗೀತೆಗಳನ್ನು  ಹಾಗೂ  ಶ್ರೀ  ವಾಯು ದೇವರ  ಮೂರು  ಅವತಾರಗಳನ್ನು ವರ್ಣಿಸುವ  “ಶ್ರೀಮಧ್ವನಾಮ” ವನ್ನು ರಚಿಸಿದ್ದಾರೆ.               

 ಅನೇಕ  ಉಗಾಭೋಗಗಳು,  ಕೀರ್ತನೆಗಳು,  ಸುಳಾದಿಗಳು,  ವೃತ್ತನಾಮ,  ದಂಡಕಗಳೆಂಬ ಪ್ರಕಾರಗಳನ್ನು ರಚನೆ ಮಾಡಿದ್ದಾರೆ.  ಶ್ರೀಪಾದರಾಜರ  ಕನ್ನಡ  ಕೃತಿಗಳಲ್ಲಿ ಪದ ಲಾಲಿತ್ಯ,  ಅಲಂಕಾರ  ಪ್ರೌಢಿಮೆ,  ಶೃಂಗಾರ,  ಶಾಂತಿ,  ಭಕ್ತಿ ರಸ ಗಳ ನಿರೂಪಣೆ  ಇವು  ಓದುಗರ  ಚಿತ್ತವನ್ನೂ  ಹೃದಯವನ್ನು  ಆಕರ್ಷಿಸುವವು.  ಮತ್ತು ಸುಪ್ರಸಿದ್ಧವಾಗಿವೆ.

                            ಕ್ರಿ.ಶ 1502ರಲ್ಲಿ ವೃಂದಾವನಸ್ಥರಾದ ಶ್ರೀಪಾದರಾಜರು ಭಾಗವತ ಧರ್ಮ ಕನ್ನಡ    ಭಕ್ತ ಸಾಹಿತ್ಯಗಳಿಗೆ ಜೀವತುಂಬಿ ಧೃವತಾರೆಯಂತೆ ಬಾಳಿಬೆಳಗಿದ್ದಾರೆ. ಗುಣನಿಧಿ ಶ್ರೀಪಾದರಾಜರನ್ನು ಜ್ಞಾನಶ್ರೇಷ್ಠರ ಗುಣ ಗಾನವು ಜ್ಞಾನ ಜ್ಯೇಷ್ಠ ರಿಂದ  ಮಾಡಲ್ಪಟ್ಟರೇನೇ  ಚಂದ ಅದನ್ನು  ನುಡಿದವನಿಗೆ ದೊರೆಯುವದು ಆನಂದ ಎಂದು ಜ್ಞಾನಿಗಳು ಹೇಳುತ್ತಾರೆ.|

ವೆಂಕಟ ದಾಸು

ಅವಿಭಜಿತ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಯ ಕೃಷ್ಣಂಕೊತ್ತೂರು ಗ್ರಾಮದವರು. ಯಾದವ ವಂಶದ ದೂಡ್ಡ ವೇಮ್ಮನಗೌಡ  ಪಟೇಲ್ ವೃತ್ತಿಯನ್ನು ಹಾಗೂ ಚಿಕ್ಕವೇಮನಗೌಡ  ವ್ಯವಸಾಯ ವೃತ್ತಿಯನ್ನು ಮಾಡಿಕೊಂಡು  ಇರಲು ಹಲವು ಕಾಲದ ನಂತರವೂ ಇಬ್ಬರಿಗೂ ಸಂತಾನವಿಲ್ಲದೇ ತಿರುಪತಿ ತಿಮ್ಮಪನಿಗೆ ಹರಕೆ ಮಾಡಿಕೊಂಡುದ್ದರ ಫಲವಾಗಿ ಮುನಿಯಮಾಂಬ ಹಾಗೂ ವೇಮನಗೌಡರ ಮಗನಾಗಿ ವೆಂಕಟದಾಸು ರವರು ಜನಿಸಿದರು .

ತಿರುಪತಿ ತಿಮ್ಮಪನ ಕೃಪೆಯಿಂದ ಜನಿಸಿದ ಕಾರಣ ವೆಂಕಟರಾಯನೆಂದು ಮಗುವಿಗೆ ತಂದೆ ತಾಯಿಗಳು ನಾಮಕರಣ ಮಾಡಿದರು. ಮಗುವನ್ನು ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದರು. ಮುಂದೆ ಕಾರಣಾಂತರಗಳಿಂದ ವಿದ್ಯೆ ಅಪೂರ್ಣವಾಗಲು ತಂದೆ ತಾಯಿಗಳು ಮಗನ ವಿವಾಹಕ್ಕಾಗಿ ಪ್ರಯತ್ನ ಶುರು ಮಾಡಿದರು. ಹೀಗಿರುವಾಗ ಗೀತವಾಣಿ ಎಂಬ ಪುಸ್ತಕವನ್ನು ದೊಡ್ಡ ವೆಂಕಟಪ್ಪ ಎನ್ನುವವರಿಂದ ಪಡೆದು ಅದನ್ನು ಓದಿ ಕೆಲವು ಸಂದೇಹಗಳ ನಿವಾರಣೆಗೆ ಆ ಪುಸ್ತಕದ ಲೇಖಕರಾದ ಶಂಕರಾನಂದ ಭಾರತಿ ಸ್ವಾಮಿಗಳನ್ನು  ಹುಡುಕುತ್ತಾ ಕಾಳಹಸ್ತಿ ಗೆ ಹೋಗಿ ಅವರ ಸಂದೇಹಗಳನ್ನು ಪರಿಹರಿಸಿಕೊಂಡರು .

ಮುಂದೆ ಕಾರಣಾಂತರಗಳಿಂದ ಅಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಸ್ನೇಹಿತರಾದ ದೊಡ್ಡವೆಂಕಟಪ್ಪ ನವರ ಸಲಹೆಯ ಮೇರೆಗೆ ದೇವನಹಳ್ಳಿಯ ಬಳಿ ತಮ್ಮ ಗುರುಗಳನ್ನು ಸಂಧಿಸಿ ಅವರಿಂದ ಒಂದು ಶ್ರಾವಣ ಮಾಸದ ಶನಿವಾರ ರಾತ್ರಿ ದೀಕ್ಷೆ ಪಡೆದರು.

 

ನಂತರದಲ್ಲಿ ಮುತ್ಸಂದ್ರದ ಪಾಪಮಾಂಭ ಹಾಗೂ ವೆಂಕಟೇಗೌಡನ ಪುತ್ರಿ ಮುನಿಯಮ್ಮನನ್ನು ವಿವಾಹ ಮಾಡಿಕೊಂಡರು. ಮುಂದೆ ತಮ್ಮ ಗುರುಗಳ ಆಜ್ಞೇಯ ಮೇರೆಗೆ ಕ್ರಿಷ್ಣಂನಕೊತ್ತೂರು ಗ್ರಾಮದಲ್ಲಿ ಹಲವು ಭಕ್ತರ ಸಹಕಾರದಿಂದ ಒಂದು ಆಶ್ರಮವನ್ನು ಕಟ್ಟಿಕೊಂಡು ಗುರುಗಳಿಂದ ಸಾಂಖ್ಯ, ತಾರಕ, ಅಮನಸ್ಕ,ಸಚ್ಚಿತಾನಂದ, ಪರಿಪೂರ್ಣ ಅಚಲ ಭಾವಗಳ  ದೀಕ್ಷೆ ಪಡೆದರು. ನಂತರ ೫-೧೦-೧೯೮೮ ರಲ್ಲಿ ಗುರುಗಳು ಪರಮ ಪದವಿಯನ್ನೇರಲು ಮುಂದೆ ವೆಂಕಟದಾಸು ರವರು ಗುರು ಮಾರ್ಗವನ್ನು ಮುಂದುವರೆಸಿಕೊಂಡು ಬಂದರು. ಇಂದಿಗೂ ಕೃಷ್ಣಂಕೋತ್ತೂರು ಗ್ರಾಮದ ಆಶ್ರಮ ವೆಂಕಟದಾಸು ರವರ ಸಾಧನೆಯ ದ್ಯೂತಕವಾಗಿ ನಮ್ಮ ಮುಂದಿದೆ.

ವೆಂಕಟದಾಸು ರವರು  ಅನುಭವ ಸಾರಎಂಬ ಕೃತಿಯನ್ನು ರಚಿಸಿದ್ದು ,ಇದು ಅವರ ಆತ್ಮಕತೆ, ಕೆಲವು ಅಚಲ ತಾತ್ವಿಕ ವಿಚಾರಗಳು, ಸೇರಿದಂತೆ ಅವರೇ ರಚಿಸಿರುವ 32 ತೆಲುಗು ತತ್ವಪದಗಳನ್ನು ಒಳಗೊಂಡಿದೆ. ಇದರೊಂದಿಗೆ ಹಲವು ಬಿಡಿ ಕೀರ್ತನೆಗಳನ್ನು ಹಾಗೂ ಕಂದಗಳನ್ನು ಇವರು ರಚಿಸಿದ್ದಾರೆ.

ಮಂಚಿಕಾಲಮು ಮಿಂಚಿಪೋತುಂದಿ | ಓ ಮನುಜುಲಾರ |

ಮಾಯಮೈಪೋತುಂದಿ ದೇಹಂಬು .........

ಮಾಯಬೊಮ್ಮನು ನಮ್ಮಬೋಕಂಡಿ |ಓ ಮನುಜುಲಾರ |

ಮಾಯಮೈಪೋತುಂದಿ ತೆಲಿಯಂಡಿ

 ಮುಂತಾದ ಗಾಢ ಆಧ್ಯಾತ್ಮದ ಭಾವದ ಕೀರ್ತನೆಗಳನ್ನು ಇವರು ರಚಿಸಿದ್ದಾರೆ.

ಮುನಿಯಪ್ಪ ಸ್ವಾಮಿಗಳು

ಶ್ರೀ ಮುನಿಯಪ್ಪಸ್ವಾಮಿಗಳು ತಮ್ಮ ಗುರುಗಳಾದ ಕೆ . ಹೊಸೂರು ವೆಂಕಟರಾಯ ಸ್ವಾಮಿಗಳಿಂದ ತಮ್ಮ ೨೫ ನೇ ವಯಸ್ಸಿನಲ್ಲಿ ಅಚಲ ದೀಕ್ಷೆಯನ್ನು ಪಡೆದು, ತಮ್ಮ ಸ್ವಗ್ರಾಮ ವಾದ ವೇಮಗಲ್ ಬಳಿಯ ರಾಜಕಲ್ಲಹಳ್ಳಿ ಗ್ರಾಮದಲ್ಲಿ ಅಚಲ ಆಶ್ರಮವನ್ನು ನಿರ್ಮಿಸಿಕೊಂಡು ಆಧ್ಯಾತ್ಮಿಕ ತತ್ವ ಪ್ರಸಾರದಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ.

ಈಗ ಮುನಿಯಪ್ಪ ಸ್ವಾಮಿಗಳವರಿಗೆ ಸು.78 ವರ್ಷ ವಯಸ್ಸು ಇಂದಿಗೂ ಸಹಾ ಪ್ರತಿವರ್ಷ ಹಂಸಧ್ಯಾನ ಸೇರಿದಂತೆ ಹಲವು ವ್ರತಗಳನ್ನು ನೇಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮುನಿಯಪ್ಪನವರಿಗೆ ೫ ಜನ ಮಕ್ಕಳು ೧೦ ಜನ ಮೋಮ್ಮಕಳು ಇದ್ದು ದರ್ಮಪತ್ನಿ ಶ್ರೀಮತಿ ಶಾರದಾಂಭ ಸ್ವಾಮಿಗಳ ಜೊತೆ ಅಚಲ ಸಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಶ್ರೀ ಮುನಿಯಪ್ಪ    ಸ್ವಾಮೀಜಿ ರವರು ಕೆಲವು ಬಿಡಿ ಕಂದ ಹಾಗೂ ಕೆಲವು ಕೀರ್ತನೆಗಳನ್ನು ಸ್ವತಃ ರಚಿಸಿದ್ದು, ತತ್ವಪದ ಪ್ರಸಾರದಲ್ಲಿ ಕುಟುಂಬ ಸಮೇತರಾಗಿ ತೊಡಗಿಸಿಕೊಂಡು ಎಲೆ ಮರೆಯ ಕಾಯಿಯಂತೆ ಜೀವಿಸುತ್ತಿದ್ದಾರೆ . ಶ್ರೀ ಮುನಿಯಪ್ಪಸ್ವಾಮಿರವರಿಗೆ ಅಪಾರ ಶಿಷ್ಯವರ್ಗ ಹಾಗೂ ಭಕ್ತ ವರ್ಗವಿದ್ದು. ಅವರನ್ನು ಸಹಾ ತತ್ವಪದ  ಪ್ರಸರಣಕ್ಕೆ ಸ್ವಾಮಿಯವರು ಅಣಿಗೊಳಿಸ್ಸಿದ್ದಾರೆ.

ಶ್ರೀ ಕೃಷ್ಣಾನಂದ ಸ್ವಾಮಿಗಳು

ಶ್ರೀ ಕೃಷ್ಣಾನಂದಸ್ವಾಮಿಗಳು ಇವರು ೧೯೩೨ ರಲ್ಲಿ ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ಜನಿಸಿದರು. ತಂದೆ ಸೊಣ್ಣಪ್ಪ  ತಾಯಿ ನಾಚಮ. ಕಿರಿವಯಸ್ಸಿನಲ್ಲಿಯೇ ಮನೆಯನ್ನು ತೊರೆದು ತೀರ್ಥ ಕ್ಷೇತ್ರಗಳನ್ನೇಲ್ಲಾ ಸಂದರ್ಶಿಸಿ ಸ್ವಗ್ರಾಮಕ್ಕೆ ವಾಪಸ್ಸಾದರು.

ನಂತರ ಶ್ರೀ ಬೇರಕಿ ಬುಟ್ಟಪ್ಪ ಸ್ವಾಮಿಗಳ ಶಿಷ್ಯರಾದ ಶ್ರೀ ವೆಂಕಟಗಿರಿ ಸ್ವಾಮಿಗಳಿಂದ ದೀಕ್ಷೇ ಪಡೆದು ವೇಮಗಲ್ ಹಾಗೂ ಎಚ್ ಕ್ರಾಸ್ ನಲ್ಲಿ ಆಶ್ರಮವನ್ನು ನಿರ್ಮಿಸಿ ಧರ್ಮಪತ್ನಿ ಶ್ರೀಮತಿ ಲಲಿತಮಾಂಬ ರವರು ಹಾಗೂ 6 ಜನ ಹೆಣ್ಣು ಮಕ್ಕಳೂಂದಿಗೆ ತಮ್ಮ 75 ನೇ ವಸಂತವನ್ನು ಸ್ವಾಮಿಯವರು ಕಳೆಯುತ್ತಿದ್ದಾರೆ,

ಶ್ರೀ ಕೃಷ್ಣಾನಂದಸ್ವಾಮಿಗಳು  ರವರು ಕೆಲವು ಬಿಡಿ ಕಂದ ಹಾಗೂ ಕೆಲವು ಕೀರ್ತನೆಗಳನ್ನು ಸ್ವತಃ ರಚಿಸಿದ್ದು, ತತ್ವಪದ ಪ್ರಸಾರದಲ್ಲಿ ಕುಟುಂಬ ಸಮೇತರಾಗಿ ತೊಡಗಿಸಿಕೊಂಡು ಎಲೆ ಮರೆಯ ಕಾಯಿಯಂತೆ ಜೀವಿಸುತ್ತಿದ್ದಾರೆ. ಶ್ರೀ ಸ್ವಾಮಿರವರಿಗೆ ಅಪಾರ ಶಿಷ್ಯ ವರ್ಗ ಹಾಗೂ ಭಕ್ತ ವರ್ಗ ವಿದ್ದು. ಅವರನ್ನು ಸಹಾ ತತ್ವಪದ ಪ್ರಸರಣಕ್ಕೆ ಸ್ವಾಮಿಯವರು ಅಣಿಗೊಳಿಸ್ಸಿದ್ದಾರೆ.

ಶ್ರೀ ಕೃಷ್ಣಾನಂದರು "ಉಪದೇಶಾಮೃತ " ಎಂಬ ಕೃತಿಯನ್ನು ರಚಿಸಿದ್ದು ಇದು ಅವರ ಜೀವನ ಚರಿತ್ರೆ, ಅವರ ಉಪದೇಶ ಹಾಗೂ ಕೆಲವು ಕೀರ್ತನ ರಚನೆಗಳನ್ನು ಒಳಗೊಂಡಿದೆ. ಶ್ರೀ ಸ್ವಾಮಿರವರು ಕೊನೆಯ ಮಗಳಾದ ಶೋಭ ರವರು ದೃಷ್ಟಿ ಹೀನರಾಗಿದ್ದರೂ ಸಂಗೀತ ವಿದ್ವತ್ತನ್ನು ಗಳಿಸಿಕೊಂಡು ತಮ್ಮ ಜೀವನವನ್ನು ತತ್ವಪದ ಗಾಯನಕ್ಕೆ ಮೀಸಲಾಗಿಸಿದ್ದಾರೆ.

 

 

 

 

 

 

ಅಧ್ಯಾಯ-4

ದೇಶೀ ಚಿಂತನಾ ಪರಂಪರೆ : ತತ್ವಪದ ಹಾಗೂ ತತ್ವ ಪದ ಕಾರರು

                                                                                                                                                                            ಕನ್ನಡ ಸಾಹಿತ್ಯದಲ್ಲಿ ಹದಿನಾರರಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಸಮೃದ್ಧವಾಗಿ ಬೆಳೆದು ಕೊಂಡು ಬಂದ ತತ್ತ್ವಪದ ಸಾಹಿತ್ಯವು ಶರಣರ ವಚನ, ದಾಸರ ಕೀರ್ತನೆಗಳಂತೆ ಕಂಡರೂ ಜನಸಾಮಾನ್ಯರ ನಾಲಗೆಯ ಮೇಲೆ ಸುಲಭವಾಗಿ ಹರಿದಾಡಿ ಭಜನೆ ಮೊದಲಾದ ಸಂದರ್ಭಗಳ ಮೂಲಕ ಹೆಚ್ಚು ಜನಮುಖಿಯಾಯಿತು.

          ನವೋದಯ ಆರಂಭದ ಕನ್ನಡ ಕಾವ್ಯವನ್ನು ರೂಪಿಸಿದವರು ಯಾರು ಎಂಬ ಬಗ್ಗೆ ಮುಖ್ಯ ಪ್ರಶ್ನೆಯನ್ನು ಹಾಕಿಕೊಂಡು ಉತ್ತರಕ್ಕಾಗಿ ನಿಂತಾಗ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ 18-19ನೆಯ ಶತಮಾನದಲ್ಲಿ ಕನ್ನಡ ಕಾವ್ಯ ಲೋಕವನ್ನು ಬೆಳಗಿದ ಅನುಭಾವಿ ಕವಿಗಳಾದ ತತ್ತ್ವ ಪದಕಾರರು, ಲಾವಣಿಕಾರರು ಮುಖ್ಯರಾಗುತ್ತಾರೆ.  ತತ್ತ್ವಪದಗಳನ್ನು ಅನುಭಾವ ಸಾಹಿತ್ಯವೆಂದೂ ಕರೆಯಲಾಗುತ್ತಿದೆ. ತತ್ತ್ವಪದ ಸಾಹಿತ್ಯವನ್ನು ಶಿಷ್ಟಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕೆ? ಜನಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕೆ? ಎಂಬ ಗೊಂದಲಗಳು ಇವೆ.

ಬಸವರಾಜ ಸಬರದ ಅವರು ಹೈದರಾಬಾದ್ ಕರ್ನಾಟಕದ ತತ್ತ್ವಪದಗಳುಕೃತಿಯಲ್ಲಿ ಈ ಪ್ರಶ್ನೆ ಎತ್ತಿಕೊಂಡು  ಚರ್ಚಿಸಿದ್ದಾರೆ. ಅವರ ಒಟ್ಟು ಚರ್ಚೆಯ ಸಾರವನ್ನು ಹೀಗೆ ಮಾಡಬಹುದು. ತತ್ತ್ವಪದ ಸಾಹಿತ್ಯದ ಪ್ರಾರಂಭದ ಘಟ್ಟವನ್ನು ಅಂದರೆ 12ನೆಯ ಶತಮಾನದಲ್ಲಿ ಸ್ವರ ವಚನಗಳನ್ನು ರಚಿಸಿದ. ಸಕಲೇಶ ಮಾದರಸ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಈ ಮುಂತಾದ ವಚನಕಾರರನ್ನು ಈಗಾಗಲೇ ಶಿಷ್ಟ ಸಾಹಿತ್ಯ ಪರಂಪರೆಗೆ ಸೇರಿಸಲಾಗಿದೆ.

 ಎರಡನೆಯ ಘಟ್ಟದಲ್ಲಿ ತತ್ತ್ವ ಪದಗಳನ್ನು ರಚಿಸಿ ತತ್ತ್ವಪದ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ನಿಜಗುಣ ಶಿವಯೋಗಿಗಳು, ಸರ್ಪಭೂಷಣ ಶಿವಯೋಗಿಗಳು, ಮುಪ್ಪಿನ ಷಡಕ್ಷರಿಗಳು, ಬಾಲಲೀಲಾ ಮಹಾಂತ ಶಿವಯೋಗಿಗಳನ್ನು ಕೂಡಾ ಶಿಷ್ಟ ಸಾಹಿತ್ಯ ಪರಂಪರೆಯಲ್ಲಿಯೇ ಸೇರಸಲಾಗಿದೆ. ಈ ಎರಡೂ ಘಟ್ಟಗಳು ಶಿಷ್ಟ ಸಾಹಿತ್ಯ ಚರಿತ್ರೆಯಲ್ಲಿ ಸೇರ್ಪಡೆಯಾಗಿರುವುದು ಸೂಕ್ತವೇ ಆಗಿದೆ.

‘’ಹೊಸಗನ್ನಡ ಅರುಣೋದಯವನ್ನು ಕೆಂಪು ನಾರಾಯಣ, ಮುದ್ದಣರಿಂದ ಆರಂಭಿಸುವುದನ್ನು ಕೈಬಿಟ್ಟು ಹೊಸಗನ್ನಡ ಸಾಹಿತ್ಯದ ಪ್ರಾರಂಭವನ್ನು ತತ್ತ್ವಪದಕಾರರಿಂದ ಪ್ರಾರಂಭಿಸಬೇಕಾಗಿದೆ’’ ಎಂದು ಕಿ.ರಂ. ನಾಗರಾಜ ಅವರು ಅಭಿಪ್ರಾಯ ಪಡುತ್ತಾರೆ. ಕಿ.ರಂ. ನಾಗರಾಜ ಅವರ ಅಭಿಪ್ರಾಯಕ್ಕೆ  ಭಿನ್ನವಾಗಿ ತತ್ತ್ವಪದ ಅಥವಾ ಭಜನೆ ಹಾಡಿನ ಸಾಹಿತ್ಯವನ್ನು ಜನಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕಾಗುತ್ತದೆ ಎಂದು ಅನೇಕ ಜಾನಪದ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.

ಎಂ.ಎಸ್.ಸುಂಕಾಪುರ, ಪಿ.ವಿ.ಮಲ್ಲಾಪುರ, ಎಂ. ಜಿ. ಬಿರಾದಾರ ಹಾಗೂ  ಶಾಂತರಸ ಅವರು ಈ ತತ್ತ್ವಪದ ಸಾಹಿತ್ಯವನ್ನು ಜನಪದ ಸಾಹಿತ್ಯದ ಭಾಗವೆಂದೇ ಗುರುತಿಸುತ್ತಾರೆ. ಲಾವಣಿಕಾರರಂತೆ ಜನಪದ ಸಾಹಿತಿಗಳಾಗುತ್ತಾರೆ ಎಂದು ಇವರ ವಿಶ್ಲೇಷಣೆ.

ಒಟ್ಟಾರೆ ಈ ಚರ್ಚೆಯ ಫಲಿತ ಇಷ್ಟು:ತತ್ತ್ವಪದ ಸಾಹಿತ್ಯವು ಶಿಷ್ಟ ಹಾಗೂ ಜನಪದ ಎರಡೂ ಸಾಹಿತ್ಯ ಪರಂಪರೆಗೆ ಸೇರಿದ್ದಾಗಿದೆ. ಧರ್ಮ ಸಮನ್ವಯ, ಭಾಷಾ ಸಮನ್ವಯ ಪ್ರಾದೇಶಿಕ ಸಮನ್ವಯವನ್ನು ಸಾಧಿಸುವುದರೊಂದಿಗೆ ತತ್ತ್ವಪದವು ಸಾಹಿತ್ಯ ಸಮನ್ವಯವನ್ನು ಸಾಧಿಸಿದೆ. ಇದು ತತ್ತ್ವ ಪ್ರೌಢವಾದುದೂ, ಶಿಷ್ಟ ಪರಂಪರೆಗೆ ಸೇರಿದುದು ಆದರೆ, ಇದರ ಅಭಿವ್ಯಕ್ತಿಯ ಕ್ರಮ ಜನಪದವಾಗಿದೆ. ಇಲ್ಲಿ ಉಲ್ಲೇಖಿಸಿದ ಮೊದಲ ಹಾಗು ಎರಡನೆಯ ಘಟ್ಟಗಳನ್ನು ಶಿಷ್ಟ ಸಾಹಿತ್ಯ ಪರಂಪರೆಗೆ ಸೇರಿಸುವುದು, ಇತ್ತೀಚಿನ ಬೆಳವಣಿಗೆಯಾದ ಮೂರನೆಯ ಘಟ್ಟವನ್ನು ಜನಪದ ಸಾಹಿತ್ಯ ಪರಂಪರೆಗೆ ಸೇರಿಸುವುದು.

            ಈ ಚರ್ಚೆಯು ತತ್ತ್ವಪದ ಸಾಹಿತ್ಯವು ಜನಪದ ಸಾಹಿತ್ಯದ ಹೊಸ ಸಾಧ್ಯತೆಗಳನ್ನು ತೆರೆದು ತೋರಿತು. ಜಾನಪದ ಪ್ರಜ್ಞೆಯ ಅಭಿವ್ಯಕ್ತಿಯೇ ಪ್ರಧಾನವಾಗಿ ಗುರುತಿಸಿಕೊಂಡಿತು ಮತ್ತು ಜನಪದ ರೂಪವೇ ಆಗಿ ಆಧುನಿಕ ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದಿತು. ಶಿಷ್ಟ ಕವಿಗಳಿಂದ ಪ್ರಾರಂಭವಾದ ತತ್ತ್ವಪದ ಸಾಹಿತ್ಯ ಪ್ರಕಾರ 19-20ನೆಯ ಶತಮಾನದಲ್ಲಿ ಜನಪದ ಕವಿಗಳ ವಶವಾಯಿತು.

ಕನ್ನಡ ಶಿಷ್ಟ ಸಾಹಿತಿಗಳ ಮೇಲೆ ಜಾನಪದದ ಪ್ರಭಾವ ದಟ್ಟವಾಗಿರುವಂತೆ, ಕನ್ನಡ ಜನಪದ ಸಾಹಿತಿಗಳ ಮೇಲೆ ಶಿಷ್ಟ ಸಾಹಿತ್ಯದ ಪ್ರಭಾವವೂ ಆಗಿದೆ. ಇದಕ್ಕೆ ತತ್ತ್ವಪದ ಸಾಹಿತ್ಯ ಪ್ರಕಾರವೇ ಪ್ರಮುಖ ಸಾಕ್ಷಿಯಾಗಿದೆ. ಇವೆರಡೂ ಸಂಸೃತಿಗಳಲ್ಲಿ ಕೊಡು ಕೊಳ್ಳುವಿಕೆಯ ಕೆಲಸ ನಡೆದೇ ಇರುತ್ತದೆ. ತತ್ತ್ವಪದ ರಚನೆ ಜನಪದ ಕವಿಗಳಿಂದ ಪ್ರಾರಂಭವಾದ ಕೂಡಲೇ ಹಳ್ಳಿಗಳಲ್ಲಿ ಭಜನಾ ಮಂಡಳಿಗಳು ಹುಟ್ಟಿಕೊಂಡವು.

ಅನೇಕ ಆಶು ಕವಿಗಳು ಬೆಳೆದು ನಿಂತರು. ಭಜನಾ ಮೇಳವಿಲ್ಲದ ಹಳ್ಳಿಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ಈ ಮಾಧ್ಯಮ ಬೆಳೆದು ನಿಂತಿತು. ಶಿಶುನಾಳ ಷರೀಫ್, ಕಡಕೋಳ ಮಡಿವಾಳಪ್ಪನಂತಹ ತತ್ತ್ವಪದಕಾರರು ಜನಪದ ಪರಂಪರೆಗೆ ಸೇರಿದರೂ ತಮ್ಮ ಪದಗಳಲ್ಲಿ ಗಹನವಾದ ತತ್ತ್ವಗಳನ್ನು ಹೇಳಿದ್ದಾರೆ. ಅನುಭಾವದೆತ್ತರವನ್ನು ತಲುಪಿದ್ದಾರೆ. ಇವರು ಪಡೆದ ಸಂಸ್ಕಾರವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಶಿಷ್ಟ ಪರಂಪರೆಯಲ್ಲಿ ಬರುವ ತತ್ತ್ವಪದಕಾರರಿಗೆ ವಿಶೇಷವಾದ ಗುರು ಕಂಡು ಬರುವುದಿಲ್ಲ. ಆದರೆ ಜನಪದ ಪರಂಪರೆಯಲ್ಲಿ ಬರುವ ತತ್ತ್ವಪದಕಾರರು ಗುರುವಿನ ಸಂಸ್ಕಾರದಿಂದ ತಾವು ಕವಿಗಳಾಗಿ ಬೆಳೆದು ನಿಂತಿದ್ದಾರೆ. ಅದನ್ನವರು ಭಕ್ತಿಯಿಂದ ಸ್ಮರಿಸಿದ್ದಾರೆ. ಒಬ್ಬೊಬ್ಬ ತತ್ತ್ವಪದಕಾರನ ಹಿಂದೆ ಒಬ್ಬೊಬ್ಬ ಗುರು ಇದ್ದಾನೆ ಜನಪದ ಪರಂಪರೆ ಅದನ್ನು ಸ್ವೀಕರಿಸಿಕೊಂಡು ಬೆಳೆದಿದೆ.

           ಮೌಖಿಕ ಪರಂಪರೆಯ ತತ್ತ್ವಪದ ಸಾಹಿತ್ಯವನ್ನು ಜನಸಮುದಾಯಗಳು ತಮ್ಮ ಒಡಲ ಕೂಸಿನಂತೆ ಜತನ ಮಾಡಿಕೊಂಡು ಬಂದರು. ತತ್ತ್ವಪದಕಾರರಾಗಲಿ, ಸೂಫಿ ಸಂತರಾಗಲಿ, ಜನಸಾಮಾನ್ಯರ, ಕೆಳವರ್ಗದವರ ಜತೆ ಬೆರತು ಜಾತಿ ಮತವನ್ನು ಮೀರಿ ನಿಲ್ಲುವ ಶಕ್ತಿಯನ್ನು ಸೃಷ್ಟಿಸಿದರು. ಎಚ್. ಎಸ್. ಶಿವಪ್ರಕಾಶ್ ಅವರು ಇದನ್ನೇ ಎಲ್ಲ ಜಾತಿಯ ಮರಗಳು ಕಾಡುಎಂದು ಕರೆದು ಗ್ರಾಮೀಣ ಸೊಗಡಿನ ಬಂಧುತ್ವ, ಬಾಂಧವ್ಯಕ್ಕೆ ಈ ಕಾವ್ಯದ ಅಪ್ಪಟ ದೇಸಿತನವನ್ನು ಪ್ರಕಟಿಸಿದರು.

         ಭಜನೆಗಳ ಮೂಲಕ ತತ್ತ್ವಪದಗಳು ಬಳಕೆಯಾಗುತ್ತ ಉಳಿದುಕೊಂಡು ಬಂದವು. ನಮ್ಮ ಗ್ರಾಮಗಳಲ್ಲಿ ಭಜನೆ ಹಚ್ಚುವಸಂದರ್ಭಗಳಿಗೆ ಇಂಥದೇ ಕಾರಣ ಎಂಬುದಿಲ್ಲ. ಅಮವಾಸ್ಯೆ, ಹಣ್ಣಿಮೆ, ಹಬ್ಬ ಹರಿದಿನ, ಸಾವು, ಸಂಭ್ರಮ, ಕಾರ್ತಿಕ, ಕಾರಣಿಕ- ಹೀಗೆ ಮನೆ, ಮಠ, ಗುಡಿ ಗುಂಡಾರವೆನ್ನದೆ ಎಲ್ಲಿ ಬೇಕಾದಲ್ಲಿ ಹಾಡುವುದು ಇದೆ.

 ಶುಭ ಕಾರ್ಯಗಳಿಗೆ ಹೆಚ್ಚು ಬಳಕೆಯಾಗುವ ಈ ಭಜನೆ ಹಳ್ಳಿಗರ ಜ್ಞಾನ ಕ್ಷೇತ್ರವನ್ನು ವಿಸ್ತರಿಸುವ ಮತ್ತು ಬದುಕು ಹಸನುಗೊಳಿಸುವ ದಿಸೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಭಜನಾ ಸಮುದಾಯಗಳು ತತ್ತ್ವಪದಗಳ ವಾಹಕರಾಗಿ ಪರಂಪರೆಯಲ್ಲಿ ಬೆಳೆದುಕೊಂಡು ಬಂದವು. ಭಜನೆಕಾರರ ಮೂಲಕ ಮೌಖಿಕವಾಗಿ ಉಳಿದುಕೊಂಡು ಬಂದ ಈ ಪದಗಳು ವಿವಿಧ ನೆಲೆಗಳಲ್ಲಿ ಭಿನ್ನರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ತತ್ತ್ವಪದಕಾರರು ತಮ್ಮ ಸಾಹಿತ್ಯವನ್ನು ಮೌಖಿಕವಾಗಿ ಹಾಡಿದರು. ಅದನ್ನು ಬಳಸುವ ಸಂದರ್ಭಗಳು ಬಂದಾಗ ಬಳಸುವವರು ಮೋಡಿ, ಕನ್ನಡ ಲಿಪಿಯಲ್ಲಿ ಬರೆದುಕೊಳ್ಳುತ್ತಿದ್ದರು.

ಬಹು ಭಾಷೆಯಲ್ಲಿ ತತ್ತ್ವಪದಗಳನ್ನು ಕವಿಗಳೇ ಹಾಡಿರುವುದು ಸರಿಯಷ್ಟೇ. ಜನ ಸಮುದಾಯಗಳೂ ತತ್ತ್ವಪದಗಳನ್ನೂ ತಮಗೆ ಪ್ರಿಯವಾದ ಭಾಷೆಗೆ ಪರಿವರ್ತಿಸಿಕೊಂಡು ಹಾಡಿದ್ದಾರೆ. ಬೇರೆ ಬೇರೆ ಪ್ರದೇಶದ ಭಜನಾ ಮೇಳಗಳು ತಮಗೆ ಹತ್ತಿರದ ಸ್ಥಳೀಯ ತತ್ತ್ವಪದಕಾರರ ಹಾಡುಗಳನ್ನು ಬಳಸಿಕೊಂಡು ಹಾಡುತ್ತಿದ್ದವು.

ಇಂಥ ಭಜನಾ ಮೇಳಗಳು ಸೊಲ್ಲಾಪುರ, ಪಚಿಡಾರಾಪುರ, ಕಲಬುರ್ಗಿ, ಗಾಣಾಗಾಪುರ, ಶ್ರೀಶೈಲ, ಹಂಪಿ, ಮಂತ್ರಾಲಯ, ಮುಂತಾದ ಪ್ರಸಿದ್ಧ ದೇವರ ದರ್ಶನಕ್ಕೆ ಪ್ರಯಾಣಿಸುತ್ತಿದ್ದವು. ಇಂಥ ಸಂದರ್ಭದಲ್ಲಿ ಬೇರೆ ಭಾಷೆಯ ಹಾಡುಗಳು ಪ್ರಿಯವಾದರೆ ಅಂಥ ಹಾಡುಗಳನ್ನು ತಮ್ಮ ಭಾಷೆಗೆ ಪರಿವರ್ತಿಸಿಕೊಂಡು ಹಾಡುತ್ತಿದ್ದವುಎಂಬುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿದ್ದಾರೆ. ತತ್ತ್ವಪದಗಳು ಕನ್ನಡದಲ್ಲಿ ಬಗೆ ಬಗೆಯ ಹೆಸರುಗಳಿಂದ ಬೆಳೆದುಕೊಂಡು ಬಂದಿವೆ. ಪರಮಾತ್ಮನ ಬಗೆಗಿನ    ಅನುಭಾವ ಈ ಪದಗಳಲ್ಲಿ ವ್ಯಕ್ತಗೊಂಡುದರಿಂದ ಇದಕ್ಕೆ ಅನುಭಾವ ಪದಗಳೆಂದೂ, ಇವನ್ನು ಏಕತಾರಿಯಂತಹ ವಾದ್ಯದೊಂದಿಗೆ ಸ್ವರವೆತ್ತಿ ಹಾಡುವುದರಿಂದ ಇವಕ್ಕೆ ಸ್ವರ ವಚನಗಳೆಂದೂ, ಅಂತರಂಗದ ಅರಿವಿನ ಮೂಲಭೂತ ತತ್ತ್ವಗಳನ್ನು, ಆಧ್ಯಾತ್ಮಿಕ ತತ್ತ್ವಗಳನ್ನು ಇವು ಒಳಗೊಂಡಿರುವುದರಿಂದ ಇವಕ್ಕೆ ತತ್ತ್ವಪದಗಳೆಂದೂ, ಇವನ್ನು ಜನಸಾಮಾನ್ಯರು ಭಜನಾ ಸಂದರ್ಭದಲ್ಲಿ ಹಾಡುವುದರಿಂದ ಭಜನೆಯ ಪದಗಳೆಂದೂ ಕರೆದುಕೊಂಡು ಬರಲಾಯಿತು. ಒಟ್ಟಿನಲ್ಲಿ ಇವು ಮೌಖಿಕ ಸಾಹಿತ್ಯದ ಗಮನಾರ್ಹ ಕಾವ್ಯ ಪ್ರಕಾರಗಳಗಿವೆ.

       ತತ್ತ್ವಪದ ಪರಂಪರೆಯಲ್ಲಿ ಮುಪ್ಪಿನ ಷಡಕ್ಷರಿ , ಚಿದಾನಂದ ಅವಧೂತರು ರಾಮಪುರದ ಬಕ್ಕಪ್ಪ , ಸಾರವಾಡ ಚಿಕ್ಕಪ್ಪಯ್ಯ , ಹಾಗಲವಾಡಿ ಮದ್ವೀರೆ ಸ್ವಾಮಿಗಳು , ಮೈಲಾರದ ಬಸವಲಿಂಗ ಶರಣರು , ನಿಂಬರಗಿ ಮಹಾರಾಜರು , ಶಂಕರಾನಂದರು , ನೀರಲಕೇರಿ ಪಂಚಾಕ್ಷರಿ , ಕೂಡಲೂರು ಬಸವಲಿಂಗ ಶರಣರು , ಸರ್ಪಭೂಷಣ ಶಿವಯೋಗಿ, ಬಾಲಲೀಲಾ ಮಹಾಂತ ಶರಣರು, ಶಿಶುನಾಳ ಶರೀಫ್ ಸಾಹೇಬ, ಕಡಕೋಳ ಮಡಿವಾಳಪ್ಪ ಕೈವಾರ ಯೋಗಿನಾರೇಯಣ(ತಾತಯ್ಯ) ಯತೀಂದ್ರ, ಗಟ್ಟ ಹಳ್ಳಿ ಪರಮಹಂಸ ಆಂಜಿನಪ್ಪ ಸ್ವಾಮಿಗಳು  ಮೊದಲಾದವರು ಪ್ರಮುಖರಾಗಿದ್ದಾರೆ.

            ಈ ಪರಂಪರೆಯಲ್ಲಿ ಮುಸ್ಲಿಂ ತತ್ತ್ವಪದಕಾರರ ಸಾಧನೆ ಗಮನಾರ್ಹವಾದುದು. ಕರ್ನಾಟಕದ ಉತ್ತರ ಭಾಗದಲ್ಲಿ ದೀರ್ಘಕಾಲ ಹಿಂದೂ-ಮುಸ್ಲಿಂಎರಡೂ ಸಮುದಾಯಗಳು ಕೂಡಿ ಬಾಳುತ್ತ ಬಂದಿವೆ. ಎರಡು ಸಂಸ್ಕೃತಿ ಗಳ ನಡುವೆ ಸಂಘರ್ಷ ಸಾಮರಸ್ಯಗಳು ಏರ್ಪಟ್ಟಿವೆ. ಮುಖ್ಯವಾಗಿ ಮುಸ್ಲಿಂ ತತ್ತ್ವಪದಕಾರರು ಎರಡು ಸಂಸ್ಕೃತಿ ಗಳ ಸಾಮರಸ್ಯ ಮತ್ತು ಬಾಂಧವ್ಯಕ್ಕೆ ಅಪರೂಪದ ಕೊಡುಗೆ ನೀಡಿದರು. ಚನ್ನೂರ ಜಲಾಲಸಾಬ , ಮೇಟ್ನಳ್ಳಿ ಹಸನಸಾಬ , ಕೋಹಿನೂರ ಹಸನ , ದೇಗಾವಿ ಹಜರತ್ , ಮಂಜಿಲಾನ ಖಾದರಸಾಬ , ಅರವಲಿ ಬಿಜಲಿ ವಸ್ತಾದಿ , ಸಾವಳಗಿ ಮಹಮ್ಮದಸಾಬ , ಸಾಹಿಬಣ್ಣ ತಾತಾ, ಸಾಲಗುಂದಿ ಗುರು ಖಾದರಿ ಮೊದಲಾದವರು ಹೆಸರಾಗಿದ್ದಾರೆ.

ಮುಸ್ಲಿಂ ಪ್ರಭುತ್ವವಾದಿಗಳ ಆಳ್ವಿಕೆಯ ಅಧಿಕೃತ ಭಾಷೆ ಉರ್ದು ಇದ್ದುದರಿಂದ ಕನ್ನಡ ಸಾಹಿತ್ಯ ರಚನೆಗೆ ತೊಂದರೆಯಾಯಿತೆಂದು ಆಧುನಿಕರ ಹೇಳಿಕೆಗೆ ಅನುವು ಸಿಗದಂತೆ ಈ ಮುಸ್ಲಿಮ್ ತತ್ತ್ವಪದಕಾರರು ಕನ್ನಡದಲ್ಲಿ ತತ್ತ್ವಪದಗಳನ್ನು ಹಾಡಿರುವುದು ವಿಶೇಷವಾಗಿದೆ. ಹೀಗೆ ಹಲವು ನೆಲೆಯಲ್ಲಿ ಹರಿದು ಬಂದ ತತ್ತ್ವಪದ ಸಾಹಿತ್ಯ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದಾಗ ಮೂಡಿ ಬಂದ ಕನ್ನಡದ ಕಾವ್ಯ ಚರಿತ್ರೆಯಲ್ಲಿ ಪ್ರತಿಷ್ಠಿತ ಸ್ಥಾನ ಪಡೆದುಕೊಳ್ಳುತ್ತಿರುವುದು ಇಲ್ಲಿ ದೇಸೀ ಅಧ್ಯಯನಗಳು ಹೆಚ್ಚು ವ್ಯಾಪಕವಾಗಿ ನಡೆದಾಗ ಸಾಧ್ಯವಾಯಿತು.

            ತತ್ತ್ವಪದ ಸಾಹಿತ್ಯ ನವೋದಯ ಕಾವ್ಯದ ಅಪ್ಪಟ ಮಾದರಿಗಳಿಗೆ ಪೂರಕವಾಗಿವೆ. ಸೃಜನಶೀಲ ಕಾವ್ಯದ ಎಲ್ಲ ಬಗೆಯ ಲಕ್ಷ ಲಕ್ಷಣ ರೀತಿ ನೀತಿಗಳನ್ನು ಆಗಲೇ ಕಟ್ಟಿಕೊಂಡಿದ್ದ ಈ ರಚನಕಾರರು ಎಲ್ಲ ಬಗೆಯ ವಸ್ತು ಸಂಗತಿಗಳಿಗೆ ಪ್ರತಿಸ್ಪಂದಿಸಿದರು. ಅವರ ಕವಿತೆಗಳು ಸಾಮಾಜಿಕ ಬದುಕನ್ನು, ಬದುಕಿನ ಜಂಜಾಟ, ತಾಪತ್ರಯಗಳಿಗೆ ಉತ್ತರ ರೂಪವಾಗಿ ಉದಾಹರಣ ಸಂದರ್ಭಗಳನ್ನು ಬಳಸಿಕೊಂಡು ಹಾಡಿಕೊಂಡು ಬಂದರು.

ಪ್ರಕೃತಿ, ಪಕ್ಷಿ, ಪ್ರಾಣಿ, ಸೂರ್ಯ, ಚಂದ್ರ, ಹೊಳೆ ಹಳ್ಳ, ಸಾವು, ಬದುಕು ಎಲ್ಲ ಎಲ್ಲಕ್ಕೂ ಪ್ರತೀಕ, ಹೋಲಿಕೆ, ಆಧ್ಯಾತ್ಮ, ಅನುಭಾವ ಬಳಸಿ ಸರಳ, ಸುಲಭವಾಗಿ ಯಾರೂ ಹಾಡಿಕೊಂಡು ಆಡಿಕೊಂಡು ಸಂಭ್ರಮಿಸುವ ರೀತಿಯಲ್ಲಿ ಕಟ್ಟಿ ಹಾಡಿದರು. ಡಾ. ಕೆ. ಸಿ. ಶಿವಾರೆಡ್ಡಿ ಅವರ ಅಭಿಪ್ರಾಯದಂತೆ ತತ್ತ್ವಪದಕಾರರ ಪ್ರಧಾನ ಸಾಮಗ್ರಿ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಚಳವಳಿಯಾದ ವಚನ ಹಾಗೂ ದಾಸ ಸಾಹಿತ್ಯದ ನೆಲೆಯಿಂದ ಬಂದದ್ದು. ಆದರೆ ಆ ಸಾಮಗ್ರಿಯನ್ನು ವರ್ತಮಾನದ ಸಂದರ್ಭವನ್ನು ಹೊರತುಪಡಿಸುವಂತೆ ಅವರು ಪುನರ್ ನಿರ್ಮಾಣ ಮಾಡುತ್ತಾರೆ.

ಹೀಗಾಗಿ ತತ್ತ್ವಪದಕಾರರ ರಚನೆಗಳು ಪಾಂಡಿತ್ಯದ ಪ್ರಭಾವದಿಂದ ಪಾರಾಗಲು ಸಾಧ್ಯವಾಗದೆ ಹೋಗಿವೆ. ಆದರೂ ತತ್ತ್ವಪದಕಾರರ ಒಟ್ಟು ಸೃಷ್ಟಿ ಕನ್ನಡ ಸಂಸ್ಕೃತಿಯ ಸಂದರ್ಭದಲ್ಲಿ ಗಂಭೀರವಾದ ಸೃಜನಶೀಲ ದಾಖಲೆಯಾಗಿವೆ  ಎಂದಿರುವುದು ತತ್ತ್ವಪದಕಾರರ ಹಿರಿಮೆಯನ್ನು ಸಾರಲಾಗಿದೆ.

           ಆಧುನಿಕ ಕಾಲದ ಅನೇಕ ಸಂವೇದನೆಗಳಿಗೆ ತತ್ತ್ವಪದಕಾರರ ಸ್ಪಂದನವಿದೆ. 20ನೇ ಶತಮಾನದ ಸಂವೇದನೆಯೂ ಮೌಖಿಕ ಸಾಹಿತ್ಯದಲ್ಲಿ ಮೂಡಿ ಬಂದಿದೆ. ರಾಷ್ಟ್ರೀಯವಾದ, ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಪಿಡುಗು, ಭ್ರಷ್ಟಾಚಾರ, ಹೋಟೇಲ್, ವಕೀಲ, ಕೋರ್ಟ್ ಮುಂತಾದವು ತತ್ತ್ವಪದ ಸಾಹಿತ್ಯದಲ್ಲಿ ಕುತೂಹಲಕಾರಿಯಾಗಿ ವ್ಯಕ್ತವಾಗಿದೆ. ಅಷ್ಟೇ ಏಕೆ ನವೋದಯ ಕಾವ್ಯದ ಅನೇಕ ಲಕ್ಷಣಗಳು ಕೂಡಲೂರು ಬಸಲಿಂಗಪ್ಪನ ತತ್ತ್ವಪದಗಳಲ್ಲಿ ಆಧುನಿಕತೆ ಉಂಟು ಮಾಡಿದ ಬಿಕ್ಕಟ್ಟುಗಳು ,ವಡಕಿ ತಾತಪ್ಪಯ್ಯನ ತತ್ತ್ವಪದಗಳಲ್ಲಿ ವ್ಯಕ್ತವಾಗಿವೆ.

ಆಧುನಿಕರಲ್ಲದ ಆದರೆ ಆಧುನಿಕ ಕಾಲಘಟ್ಟದಲ್ಲಿ ಬದುಕಿ ಬಾಳಿದ ವಡಕಿ ತಾತಪ್ಪಯ್ಯ, ನಿಜಲಿಂಗ ಭದ್ರೇಶ್ವರ, ಶಿಲ್ಲಪ್ಪ ಮುಂತಾದ ತತ್ತ್ವಪದಕಾರರ ಸಾಹಿತ್ಯದಲ್ಲಿ ತಾಂತ್ರಿಕವಾದ  ಆಧುನಿಕ ಸಂವೇದನೆಗಳಿರುವುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿರುವುದು ತತ್ತ್ವಪದಕಾರರು ಕನ್ನಡ ನವೋದಯದ ಮೊದಲ ಹರಿಕಾರರಾಗುತ್ತಾರೆಂಬುದು ಇನ್ನೂ ಸ್ಪಷ್ಟವಾಗುತ್ತದೆ.

     ಗ್ರಾಮ್ಯವನ್ನು ಬಳಸಿ ಈ ತತ್ತ್ವಪದಕಾರರು ತಮ್ಮ ಅಂತರಂಗದ ಸೂಕ್ಷ್ಮ ಭಾವನೆಗಳನ್ನು, ಆರೋಗ್ಯಕರ ಪ್ರೇಮವನ್ನು, ಬ್ರಿಟಿಷರ ದಬ್ಬಾಳಿಕೆ ಮತ್ತು ಕ್ರೂರಯಂತ್ರ ನಾಗರಿಕತೆಯ ಸಂದರ್ಭದಲ್ಲಿ ಅಭಿವ್ಯಕ್ತಿಸಿದರು. ತಮ್ಮ ಸುತ್ತಣ ಸಮುದಾಯದ ಸಂದರ್ಭಗಳಲ್ಲಿ ನಾಶಗೊಳ್ಳುತ್ತಿದ್ದ ಮನುಷ್ಯ ಸಂಬಧಗಳನ್ನು ಕುರಿತು ಅವರು ಪದ ಕಟ್ಟಿ ಹಾಡಿದರು.

ಗಡಗಿ ತೊಳೆದು ಅಡಗಿ ಮಾಡಮ್ಮ | ತನುವೆಂಬ

ಗಡಗಿ ತೊಳೆದು ಅಡಗಿ ಮಾಡಮ್ಮ

ಅನುಭಾವದಡುಗೆಯ ಮಾಡಿ ಎಡಿಯ ಮಾಡಮ್ಮ

ದೇವರಿಗೆಡಿಯ ಮಾಡಿ ಗಂಡಗುಣಿಸಮ್ಮಾ

ಕರ್ಮವೆಂಬ ಜೋಳ ಬೀಸವ್ವ | ನೀ

ಧರ್ಮ ಜರಡಿಯಿಂದ ಹಿಟ್ಟ ಸೋಸವ್ವ

ನಿರ್ಮಳಾತ್ಮ ನೀರ ಹಾಕವ್ವಾ | ನೀ

ನೇಮದಿಂದ ಕಣಕ ನಾದವ್ವಾ

   ಹೀಗೆ ಸಾಗುವ ಕಡಕೋಳ ಮಡಿವಾಳಪ್ಪ ನವರ ತತ್ತ್ವಪದದಲ್ಲಿ  ದೇಹವನ್ನು ಗಡಿಗೆಗೆ, ಅನುಭಾವವನ್ನು ಅಡಿಗೆಗೆ ಹೋಲಿಸಿದ್ದಾರೆ. ಅನುಭಾವದಡಿಗೆಯನ್ನು ಮಾಡಲು ಕರ್ಮವೆಂಬ ಜೋಳ ಬೀಸಿ ಧರ್ಮವೆಂಬ ಜರಡಿಯಿಂದ ಹಿಟ್ಟು ಸಾರಣಿಸಿ ಅದರಲ್ಲಿ ನಿರ್ಮಳಾತ್ಮ ನೀರು ಹಾಕಿ ನಾದಬೇಕು., ನಾದಿ ಸಂಚಿತ ಕರ್ಮದ ಹಂಚನ್ನು ತೊಳೆದು ಹಂಚಿಕಿಂದ ಜ್ಞಾನದ ಅಗ್ನಿ ಉರಿಸಿ ಸಂಚಿನಿಂದ ಪರರೊಟ್ಟಿ ಬೇಯಿಸಬೇಕೆನ್ನುವಲ್ಲಿ ಅರ್ಥಪೂರ್ಣ ಅನುಭಾವವನ್ನು ಪ್ರಕಟಿಸುತ್ತಾರೆ.

ಶಿಶುನಾಳ ಶರೀಫ್ ಸಾಹೇಬರ ತತ್ತ್ವಪದಗಳು ಕನ್ನಡದಲ್ಲಿ ಜನಪ್ರಿಯತೆಯಿಂದ ಮೆರೆಯುತ್ತಿವೆ. ಈ ಜನಪ್ರಿಯತೆಗೆ ಕಾರಣ ಮೂಲದಲ್ಲಿ ಮೌಖಿಕ ಕಾವ್ಯವಾಗಿದ್ದ ಈ ಪದಗಳು ಪಠ್ಯ ರಚನೆಗಳಾಗಿ ಉಳಿದುಕೊಂಡಾಗ ನಮ್ಮ ಕನ್ನಡದ ಪ್ರಸಿದ್ಧ ಗಾಯಕರು ಅವನ್ನು ಹಾಡಿ ತೋರಿಸಿದಾಗ ಶರೀಫ್‍ರ ಕಾವ್ಯ ಕೀರ್ತಿ ಬೆಳಗಿತು.

ಸದ್ಗುರು ಸಾಕಿದ ಮದ್ದಾನೆಎಂದು ಹೆಸರಾದ ಶರೀಫ್‍ರಿಗೆ ಗೋವಿಂದ ಭಟ್ಟರು ಗುರುಗಳು. ಶರೀಫ್‍ರ ತತ್ತ್ವಪದಗಳಲ್ಲಿ ಜೀವನ ಮತ್ತು ಆಧ್ಯಾತ್ಮ ಹಾಸು ಹೊಕ್ಕಾಗಿದೆ. ಜನಪದರ ಎಲ್ಲಾ ಬಗೆಯ ಸತ್ವ, ಶಕ್ತಿಗಳನ್ನು ಮೈದುಂಬಿಕೊಂಡು ರಚಿತವಾದ ಅವರ ಕಾವ್ಯ ಅದನ್ನು ತೊಟ್ಟಿಕ್ಕಿದೆ.

  ಸಂಸಾರಿಕನ ಮನಸ್ಸನ್ನು ಈ ಲೋಕದಿಂದ ಆ ಲೋಕಕ್ಕೆ ಕರೆದೊಯ್ಯುವ ಶರೀಫ್‍ರ ಗೀತೆಗಳಲ್ಲಿ ಅನುಭಾವ ತತ್ತ್ವ ಸೂಸಾಡಿದೆ. ಜೀವ ಪರಮದ ಐಕ್ಯ, ಬಾಳಿನ ಆಶ್ವಾಸತತೆ, ಅಸಾರಗಳ ಸೃಷ್ಟಿ ಚಿತ್ರಣವಿದ್ದರೂ ಅವು ಬರೀ ಉಪದೇಶಕ್ಕಾಗಿ ಮಾತ್ರ ಬರೆದವುಗಳಲ್ಲ, ಅದರೊಳಗೆ ಕೇವಲ ಆತ್ಮ ವಿಚಾರವೊಂದೇ ಇಲ್ಲ, ತತ್ತ್ವಜ್ಞಾನದ ಜೊತೆಗೆ ಸಾಹಿತ್ಯದ ಸವಿ ಸೊಗಸು ಸೂಸುವುದನ್ನು ಕಾಣುತ್ತೇವೆ. ಅವುಗಳನ್ನು ನಾಡಿನ ಗಾಯಕರೂ ಭಜನಾ ಮೇಳದವರೂ ಹಾಡಿ ನಲಿಯುತ್ತಾರೆ. ಶರೀಫ್‍ರ ಹಾಡುಗಳೆಂದರೆ ಅರುಹಿನ ಅತ್ಮರತಿಯಲ್ಲಿ ಬಿಗಿಯಾಗಿ ಬಿರುಕಿಲ್ಲದಂತೆ ನೇಯ್ದ ಆತ್ಮಗೀತೆಗಳುಎಂದು ಕರೆದಿರುವ ಡಾ. ಮಲ್ಲಿಕಾರ್ಜುನ ಸಿಂದಗಿ ಅವರು ಒಂದು ನಿಟ್ಟಿನಲ್ಲಿ ಅವು ವ್ಯಕ್ತಿಗತ, ಮಗದೊಂದು ನಿಲುವಿನಲ್ಲಿ ಸರ್ವಮಾನ್ಯ, ವಿಶ್ವಮಾನ್ಯ, ಇಹದ ಪಡಿ ಪದಾರ್ಥಗಳಿಗೆ ಪರದ ಅಮೃತ ಲೇಪನ ಲೇಪಿಸಿ, ಅಸತ್ಯವಾದವುಗಳಿಗೆ ನಿತ್ಯತ್ವವನ್ನು ಕೊಟ್ಟು, ಎಲ್ಲಿಯೂ ಅರ್ಥ ಕೆಡದಂತೆ, ಅಸಹ್ಯವೆನಿಸದಂತೆ, ಶಿವಲೋಕದ ಹಿರಿಮೆಯನ್ನು ಸರಳವಾಗಿ ತತ್ತ್ವದಲ್ಲಿ ಹಣೆದ ದೈವೀ ನೇಕಾರರು ಎಂದು ಕರೆದುದರಲ್ಲಿ ಸಾರ್ಥಕತೆ ಇದೆ.

ಅಳಬ್ಯಾಡ ತಂಗಿ ಅಳಬ್ಯಾಡ | ನಿನ್ನ

ಕಳುಹ ಬಂದವರೆಲ್ಲ ಉಳುವಿಕೊಂಬುವರೇನೆ||

 ಗ್ರಾಮ್ಯ ಭಾಷೆಯ ನುಡಿ ಸಾಲುಗಳಲ್ಲಿ ಹೆಣೆದಿರುವ ಈ ಪದ ಮದುವೆಯಾದ ಹೆಣ್ಣು ಮೊದಲ ಸಲ ಅತ್ತೆಯ ಮನೆಗೆ ಹೋಗುವ ಭಾವಮಯವಾದ ಸನ್ನಿವೇಶವನ್ನು ಸೃಜಿಸಿದರೂ ಕೊನೆಗೆ ಅನುಭಾವದ ನೆಲೆಗೆ ತಂದು ಹಚ್ಚುತ್ತವೆ. ಮಿಡಿಕ್ಯಾಡಿ ಮದಿವ್ಯಾದಿ, ಹುಡುಕಾಡಿ ಮಾಯದ ಮರವೇರದಿಎಂತೆಲ್ಲ ಮಾತುಗಳು ಜೀವ ತಾನಾಗಿ ಭೋಗಕ್ಕೆ, ಮಾಯೆಗೆ ಒಲಿದದ್ದನ್ನು ಸೂಚಿಸುತ್ತದೆ. ತವರು ಮನೆ ಜೀವದ ನಿಜ ನೆಲೆಗೆ ರೂಪಕವಾಗುತ್ತದೆ. ತತ್ತ್ವಪದಕಾರರು ಬಳಸುವ ಭಾಷೆಯಲ್ಲಿ ಜನರಾಡುವ ಮಾತಿಗೆ ಕಾವ್ಯತ್ವವನ್ನು ತುಂಬಿದರು.

ಹಾಲ ಕಾಸವ್ವ ತಂಗಿ ಹಾಲು ಕಾಸು

ನಿಂದ ಒಳ್ಳೆ ಮನಸ

ಹಾಲ ಕಾಸಿ ಹೆಪ್ಪ ಹಾಕಿ ಕೆನಿಯ ಬಡಸ

ಇದು ಬಹಳ ಸೊಗಸ

ಹದವಾಗಿ ಹದಿಮೂರು ತೂತಿಂದ ಹುಟ್ಟಿ ಬಂದದ ಗಡಗಿ

ಮಾಡಲಾಕ ಕಲ್ತರ ನೀಡಲಾಕ ಬರತಾದ ಅನುಭಾವದ ಅಡಗಿ

            …….ಹೀಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ಮೌಖಿಕ ಕಾವ್ಯ ಸೃಷ್ಟಿಯ ಸಂದರ್ಭವು ಜನಪದದ ನುಡಿ, ಪದ ಬಳಕೆ, ಜನಪದರ ಆಶಯದೊಂದಿಗೆ ಮೂಡಿ ಬಂದವು. ಒಬ್ಬೊಬ್ಬ ಪದಕಾರನು ತನ್ನ ರಾಚನಿಕ ವಿಶಿಷ್ಟತೆಯಿಂದ ಜಾನಪದ ಲೋಕವನ್ನು ಬೆಳೆಸಿದರು. ಉದ್ದಕ್ಕೂ ಬೆಳೆದು ಬಂದ ಈ ಪರಂಪರೆ ಆಧುನಿಕ ಕನ್ನಡ ಕಾವ್ಯ ರೂಪವನ್ನು ಯಾವ ಬಿಗುವು ಇಲ್ಲದೆ ಕಟ್ಟಿ ಕೊಟ್ಟಿತು. ಆಧುನಿಕ ಕಾವ್ಯ ಇಂಥ ರೂಪ ರಚನೆಗಳನ್ನೇ ಹೊತ್ತಕೊಂಡು ಮುದ್ರಣ ಸಂಸ್ಸತಿಯಲ್ಲಿ ಒಡಮೂಡಿ ಬಂದವು.

 

ಅಧ್ಯಾಯ-4.1     

ತ್ವಪದಗಳಲ್ಲಿ  ವೈಚಾರಿಕ ಹಾಗೂ ಬಂಡಾಯದ ನೆಲೆಗಳು.

ತತ್ವಪದ ಸಾಹಿತ್ಯ ನಮ್ಮ ನಾಡಿನ ಅತಿ ಶ್ರೀಮಂತವಾದ ಜ್ಞಾನ ವಿಭಾಗವಾಗಿದೆ. ತತ್ವಪದಗಳಲ್ಲಿ ನಮ್ಮ ತತ್ವಪದಕಾರರು ಸಮಾಜದ ಪ್ರತಿಯೊಂದು ವಿಚಾರವನ್ನು ಸಹಾ ಬಹಳ ವಿಚಾರಮನೋಭಾವನೆ ಯಿಂದ ಅಳೆದು ತೂಗಿ ನೋಡುತ್ತಾ ತಮಗೆ ಒಪ್ಪದ ವಿಚಾರಗಳನ್ನು ವಿಢಂಬಿಸಿ ತತ್ವಪದಗಳನ್ನು ರಚಿಸಿದ್ದಾರೆ.

ಕೆಲವು ಉದಾಹರಣೆಗಳನ್ನು ನೋಡುವುದಾದರೇ , ಶ್ರೀ ಕೈವಾರ ತಾತಯ್ಯನವರು ತಮ್ಮ ಆನಂದವೋ ನಿತ್ಯಾನಂದವೋ ಎಂಬ ಒಂದು ತೆಲುಗಿನ ಕೀರ್ತನೆಯಲ್ಲಿ ಬಿತ್ತರಿ ಗುರುವುಲು ಬೆತ್ತಲು ಬಟ್ಟುಕ ಕಟ್ಟಲ ಮೀದನು ನಡಚೇರುರಾಎಂದರೇ, ಗುರುಗಳಾದವರು ಯಾವಾಗಲೂ ಶಿಷ್ಯರನ್ನು ದಂಢಿಸಲು ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಓಡಾಡುತ್ತಿರುತ್ತಾರೆ, ಎಂದು ಇದರ ಅರ್ಥ ಇಲ್ಲಿ ಗುರುಗಳಾದವರು  ಶಿಷ್ಯರಿಗೆ ಪ್ರೀತಿಯಿಂದ ಭೋಧಿಸಬೇಕೆಂಬುದನ್ನು ತಾತಯ್ಯ ನವರು ಈ ರೀತಿ ಹೇಳಿದ್ದಾರೆ.

ಮುಂದುವರೆದು ಬ್ರಾಹ್ಮಣವಾದವು ಶೂದ್ರರಿಗೆ ವೇದಗಳನ್ನು ನಿರಾಕರಿಸಿದ್ದರಿಂದ  ಹಾಗೆ ಒಂದು ವೇಳೆ ತಳಜಾತಿಯವರು ಅಪ್ಪಿ ತಪ್ಪಿ ವೇದವನ್ನು ಕೇಳಿಸಿಕೊಂಡರೇ ಅವರ ಕಿವಿಯಲ್ಲಿ  ಸೀಸವನ್ನು ಕಾಯಿಸಿ ಹಾಕಿ ಹಿಂಸಿಸುತ್ತಿದ್ದರಿಂದ ತಾತಯ್ಯನವರು ಅಂಥಹ ವೇದಗಳನ್ನು,                                                  

ಕಾಕುಲ ವಿಧಮುನ ಕೂತಲು ಕೂಸೇರು ವೇದಮುಲವಿಯೇವೋ ತೆಲಿಯದು ರಾ            ಎಂದರೇ ಕಾಗೆಗಳು ಕೂಗುವ ರೀತಿಯಲ್ಲಿ ಕೂಗುವರು ವೇದಗಳು ಅವು ಯಾವೋ ತಿಳಿದಿಲ್ಲವೊಎಂದರೇ,  ಇಲ್ಲಿ ತಾತಯ್ಯನವರು ವೇದ ಪರಾಯಣವನ್ನು ಕಾಗೆಗಳ ಕೂಗಿಗೆ ಹೋಲಿಸಿ ವೇದಗಳ ಘನತೆಯನ್ನೇ ಕಳೆದುಬಿಡುತ್ತಾರೇ. ಇದೇ ರೀತಿಯ ಚಿಂತನೆ ವಚನ ಸಾಹಿತ್ಯದಲ್ಲಿಯೂ ಇದ್ದು ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುಧ್ಧಿ, ಪುರಾಣ ವೆಂಬುದು ಪುಂಡರ ಗೋಷ್ಟೀ .............ಎಂದು ವಚನಕಾರರು ಹಾಡಿದ್ದಾರೆ.

 ವಚನಕಾರರಲ್ಲಿ ವೇದದ ಬಗ್ಗೆ ಸ್ವಲ್ವ ಗೌರವ ಅಥವಾ ನಂಬಿಕೆ ಇರಬಹುದಾದ ಅವಕಾಶವನ್ನು ಪದಪ್ರಯೊಗದ ಹಿನ್ನೆಲೆಯಲ್ಲಿ ಗುರ್ತಿಸಬಹುದಾದರೊ ಸಹಾ ತಾತಯ್ಯನವರಷ್ಟು ಕಟು ಟೀಕೆ ಅಲ್ಲಿ ಕಂಡುಬರುವುದಿಲ್ಲ. ಮುಂದೆ ಯಜ್ಞ ಯಾಗಾಧಿಗಳನ್ನು ಉದ್ದೇಶಿಸಿ ಅದೇ ಆನಂದವೋ ನಿತ್ಯಾನಂದವೋ ಎಂಬ ಕೀರ್ತನೆಯಲ್ಲಿ

ಗುಂಡೆಮುಲೊ ಮಂಟರೇಗಿ ಮಂಡೇವೇಳ ನೇಯಿ ಚಿದಗೀಲೊ ವೇಸೆದೆಂದುಕುರಾ

ಎಂದರೇ ಕುಂಡದಲ್ಲಿ ಹತ್ತಿ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಹಾಕುವುದು ಏಕೆ ? ಎಂದು ಪ್ರಶ್ನಿಸುವುದರ ಮೂಲಕ ಯಜ್ಞಯಾಗಗಳನ್ನು ವೈಚಾರಿಕ ಹಿನ್ನಲೆಯಲ್ಲಿ ಖಂಡಿಸುತ್ತಾರೆ. ಮುಂದೆ ಅದೇ ಕೀರ್ತನೆಯ ಮುಂದುವರೆದ ಭಾಗದಲ್ಲಿ  ಉದರ ವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಷ ಭಕುತಿ ಇಲ್ಲಎಂಬ ದಾಸರ ಕೀರ್ತನೆಯಂತೆ ತೆಲುಗಿನಲ್ಲಿ ತಾತಯ್ಯನವರು,

ಗುದ್ದ ಕಡಿಗೇ ಚೇತ ಸುದ್ದ ಪೆಂಟಲು ರುದ್ದಿ ಪಟ್ಟೆ ನಾಮಲು ವೇಸ್ತೆ ಫಲಮೇಮಿರಾ?”

 ಎಂದು ಹೇಳಿದ್ದಾರೆ, ಇದರ ಅರ್ಥ ಎಡಗೈಯಲ್ಲಿ ಸುಣ್ಣದ ಕಲ್ಲನ್ನು ತೀಡಿಕೊಂಡು ಪಟ್ಟೆ ನಾಮಗಳನ್ನು ಹಾಕುವುದರಿಂದ ಒದಗುವ ಫಲವೇನು ? ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ತರ್ಕ ಶಾಸ್ತ್ರವನ್ನು ಉದ್ದೇಶಿಸಿ,

ತರ್ಕ ಶಾಸ್ತ್ರಮು ನೇರ್ಚಿ ತಾಮೇ ಗನುಲಂದುರು ತರ್ಕಮು ಕುಕ್ಕಲ ಕೊಟ್ಲಾಟರಾ

ಎಂದಿದ್ದಾರೆ. ಇದರ ಅರ್ಥ ತರ್ಕ ಶಾಸ್ತ್ರ ವನ್ನು ಕಲಿತು ತಾವೇ ಗನರೆಂಬರು, ತರ್ಕವು ನಾಯಿಗಳ ಹೊಡೆದಾಟವೋಎಂದು ತರ್ಕ ಶಾಸ್ತ್ರ ವನ್ನು ತರ್ಕದ ಹೆಸರಿನಲ್ಲಿ ಮಾಡುವ ವಿತಂಡವಾದವನ್ನು ನಾಯಿಗಳ ಕಿತ್ತಾಟಕ್ಕೆ ಹೋಲಿಸಿ ಹೇಳಿದ್ದಾರೆ ತಾತಯ್ಯನವರು .

ಮುಂದೆ ಲಿಂಗಪುರಮು ಭಾಟ ಜಂಗಾಲು ಯೆರುಗರು ಲಿಂಗಾಲು ಕಟ್ಟೇದಿ ವ್ಯರ್ಥಮುರಾಎಂದರೇ ನಿಜವಾದ ದೇವರ ಕುರುಹು ಅರಿಯದೇ ಕೇವಲ ಯಾಂತ್ರಿಕವಾಗಿ ಲಿಂಗ ಧಾರಣೆ ಮಾಡುವುದು ವ್ಯರ್ಥವೆಂದು ತಾತಯ್ಯನವರು ಹೇಳಿದ್ದಾರೆ.

ಇನ್ನು ಮುಖ್ಯವಾಗಿ ಅದೇ ಕೀರ್ತನೆಯ ಮುಂದಿನ ಭಾಗದಲ್ಲಿ,

ಮುಖ್ಯಮು ಶೂದ್ರುಡು ಮೂಜಗಮುಲಕೆಲ್ಲ ತಕ್ಕಿನವಿರೆಲ್ಲ ತಕ್ಕುವರಾ

ಎಂದರೇ ಮೂರು ಲೋಕಗಳಿಗೂ ಶೂದ್ರನೇ ಮುಖ್ಯನಾದವನ್ನು ಉಳಿದವರೆಲ್ಲ ಅವನಿಗಿಂತ ಕಡಿಮೆ ಎಂದು, ಇಲ್ಲಿತಾತಯ್ಯನವರು ಚತುರ್ವಣ ಪದ್ಧತಿಯಾದ ಬ್ರಾಹ್ಮಣ, ನಂತರ ಕ್ಷತ್ರಿಯ ನಂತರದಲ್ಲಿ ವೈಷ್ಯ ಕೊನೆಯವನು ಶೂದ್ರ ಎಂಬ ಏಣೀ ಶ್ರೇಣಿ ವ್ಯವಸ್ಥೆಯನ್ನು ತಿರಸ್ಕರಿಸಿ ಶೂದ್ರನೇ ಮೂರು ಲೋಕಗಳಲ್ಲಿಯೂ ಶ್ರೇಷ್ಟನಾಗಿದ್ದು ಉಳಿದವರೆಲ್ಲಾ ಅವನಿಗಿಂತ ಕಡಿಮೆ ಎಂದು ಹೇಳಿದ್ದಾರೆ.

ಸಮಾಜದ ಎಲ್ಲ ಆಗು ಹೋಗುಗಳನ್ನು ನೋಡುವ ಶ್ರಮಿಕರು, ಕಾರ್ಮಿಕರು, ದುಡಿಯುವ ವರ್ಗ, ರೈತರು ಎಲ್ಲರನ್ನೂ ಬ್ರಹ್ಮಣವಾದ ಶೂದ್ರರೆಂದು ಗುರ್ತಿಸಿ ಅವರಿಂದಲೇ ಎಲ್ಲಾ. ಕೆಲಸಗಳನ್ನು ಮಾಡಿಸಿಕೊಂಡು ಆದರೇ ಅವರನ್ನೇ ಸಾಮಾಜಿಕವಾಗಿ ದೂರ ಇಟ್ಟ ಸಂದರ್ಭದಲ್ಲಿ ತಾತಯ್ಯನವರು ಈ ಶೂದ್ರರನ್ನೇ ಎಲ್ಲರಿಗಿಂತಲೂ ಶ್ರೇಷ್ಟರೆಂದು ಕರೆದು ದುಡಿಯುವ ಸಮುದಾಯಗಳ ಘನತೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದ್ದಾರೆ.         

ಮುಂದೆ ಅದೇ ಕೀರ್ತನೆಯಲ್ಲಿ ಬೇಡನಾದ ಕಣ್ಣಪ್ಪನು ತಂದಿರಿಸಿದ ಮಾಂಸವನ್ನು ಶಿವನ್ನು ತಿಂದ ಪ್ರಸಂಗವನ್ನು ನೆನಪಿಸುತ್ತ ಬೇಡಾರ ಮನೆ ಊಟ ಮಾಡಿದ ನಂಜುಂಡ ಇದಷ್ಟು ಹೇಳಿದೆ ಇದ ಕೇಳಿರೊಎಂದು ಕನ್ನಡದಲ್ಲಿಯೇ ಹೇಳಿದ್ದಾರೆ. ಅದೇ ರೀತಿ ಇಂದಿನ ಸಮಾಜದ ಆಸೆ ಭ್ರಾಂತಿಗಳನ್ನು ಉದ್ದೇಶಿಸಿ ಹೇಳಿರಬಹುದೇನೋ,  ಎಂಬಂತಿರುವ      

ಮುಂಗೈಲಿ ಗಿಣಿ ಇದ್ದು ಎತ್ತ ಹೊಯಿತು ಎಂದು ಅಂಬರ ನೋಡಿದ ಇದ ಕೇಳಿರೊ

ಎಂದು ಹೇಳಿದ್ದಾರೇ, ಇದು ಇಂದಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನೇ ಉದ್ದೇಶಿಸಿ, ಇರುವುದೆಲ್ಲವ ಬಿಟ್ಟು ಇಲ್ಲದರ ಚಿಂತೆಯಲ್ಲೇ ಜೀವನವನ್ನೆಲ್ಲಾ ಕಳೆದು ಬಿಡುವವರನ್ನು ವಿಮರ್ಶಿಸಿದಂತೆ ಇದು ತೊರುತ್ತದೆ.  ಮುಂದೆ ಜಾತಿಯ ಬಗ್ಗೆ ಪ್ರಸ್ತಾಪಿಸುವ,

 ತಾತಯ್ಯನವರು  ಏಜಾತಿವಾರಮೋ ಯೆರುಗಲೇಮಯ್ಯ ‌/

ಸ್ತ್ರೀ ಪುರುಷ ಜಾತಿಲಿವಿ ಸೃಷ್ಟಲೋ ರೆಂಡು //

ಎಂದರೇ

ನಾವು ಯಾವ ಜಾತಿಯವರೊ ತಿಳಿಯದು

ಸ್ತ್ರೀ ಪುರುಷ ಜಾತಿಗಳು ಸೃಷ್ಟಯಲ್ಲೆರಡು

ಎಂದು ಹೇಳುವ ಮೂಲಕ ತಾತಯ್ಯನವರು ಇಡೀ ಜಾತಿ ವ್ಯವಸ್ಥೆ ಯನ್ನೇ ನಿರಾಕರಿಸುವುದನ್ನು ಕಾಣಬಹುದು.

ಮುಂದೇ ಅದೇ ಕೀರ್ತನೆಯಲ್ಲಿ

ಮಾಜಾತಿ ಹೆಚ್ಚನುಚು ಮೀಜಾತಿ ಪಿಚ್ಚನು / ತಕಟವಾದಮು ಸೇಯತಗದು ಮೀಕು //

ಎಂದರೇ ‘’ನಮ್ಮ ಜಾತಿ ಹೆಚ್ಚೆಂದು ನಿಮ್ಮ ಜಾತಿ ಕಡಿಮೆ ಎಂದು ತರ್ಕಮಾಡುವುದು ಸರಿಯಲ್ಲ ನಿಮಗೆಎಂದು ಜಾತಿಯ ಹೆಗ್ಗಳಿಕೆಯನ್ನು ಹೇಳಿಕೊಳ್ಳುವವರಿಗೆ ಸೂಚನೆಯನ್ನು ಸಹಾ ತಾತಯ್ಯನವರು ನೀಡಿದ್ದಾರೆ.  ಹಾಗೇ ಅದಕ್ಕೆ ಪೂರಕವಾಗಿ,

ವುಚ್ಚ  ದ್ವಾರಮು ದೂರಿ ವೂಚ್ಚಿರಿ ಈ ನರುಲು

ಉತ್ತಮ ಕುಲಮು ವಾರೆವರು ಲೇರು

ಉತ್ತಮ ಕುಲಮನುಟ ವುಚಿತಮು ಕಾದುರಾ

ನಾದ ಬ್ರಹ್ಮಾನಂದ ನಾರಾಯಣ ಕವಿ

ಎಂದು ನಾದ ಬ್ರಹ್ಮಾನಂದ ನಾರಾಯಣಕವಿ ಶತಕದಲ್ಲಿ ಶ್ರೀ ಕೈವಾರ ನಾರಾಯಣಪ್ಪನವರು ಹೇಳಿದ್ದಾರೆ. ಇದರ ಅರ್ಥ ಮೂತ್ರ ದ್ವಾರದಿಂದ ಬಂದರು ನರರು, ಉತ್ತಮ ಕುಲದವರು ಯಾರೂ ಇಲ್ಲ, ಉತ್ತಮ ಕುಲವೆಂಬುದು ಉಚಿತವಲ್ಲ ಎಂದು.

ಬ್ರಾಹ್ಮಣರು ಬ್ರಹ್ಮನ ತಲೆಯಲ್ಲಿ, ಕ್ಷತ್ರಿಯರು ಬ್ರಹ್ಮನ ಬುಜದಲ್ಲಿ ವೈಷ್ಯರು ಅವನ ತೊಡೆಯಲ್ಲಿ ಹಾಗೂ ಶೂದ್ರರು ಪಾದಗಳಲ್ಲಿ ಹುಟ್ಟಿ ಬಂದವರೆಂದು ಬ್ರಾಹ್ಮಣವಾದ ವಿವರಿಸಿದರೇ, ತಾತಯ್ಯನವರು ಇಂಥಹಾ ಅಮೂರ್ತ ಚಿಂತನೆಗಳನ್ನು ಖಂಡಿಸಿ, ವಾಸ್ತವದಲ್ಲಿ ಎಲ್ಲರೂ ಸಹಾ ತಾಯಿಯ ಮೂತ್ರ ದ್ವಾರದಿಂದಲೇ ಹೊರ ಬಂದವರೆಂಬುದನ್ನು  ಹೇಳುತ್ತಾ ,

ಯಾರೂ ಮೇಲು ಅಲ್ಲ ಯಾರೂ  ಕಡಿಮೆ ಅಲ್ಲ ಎಲ್ಲರೂ ಸಮಾನರು ಎಂಬ ಸಮಾನತೆಯ ತತ್ವವನ್ನು ಇಲ್ಲಿ ವಿವರಿಸಿದ್ದಾರೆ. ಮುಂದೆ ಅದಕ್ಕೆ ಪೂರಕವಾಗಿ ಮತ್ತೂಂದು ಪದ್ಯದಲ್ಲಿ ಮಗವಾರು ವಕ ಕುಲಮು -ಮಗುವಲು ವಕ ಕುಲಮು ವೆದಿಕಿ ಚೂಚಿನ ವೇರೆ ಕುಲಮು ಲೇದು

ಎಂದು ನಾದ ಬ್ರಹ್ಮಾನಂದ ನಾರಾಯಣ ಕವಿ ಶತಕದ ೬ ನೇ ಪದ್ಯದಲ್ಲಿ ವಿವರಿಸಿದ್ದಾರೆ, ಅದರ ಅರ್ಥ ಗಂಡು ಒಂದು ಕುಲ ಹೆಣ್ಣು ಒಂದು ಕುಲ ಹುಡುಕಿ ನೋಡಿದರೆ ಮತ್ತೂಂದು ಕುಲವಿಲ್ಲ ಎಂಬುದಾಗಿದೆ.  ಮುಂದೇ ಅದೇ ಶತಕ ಕೃತಿಯಲ್ಲಿ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ವಿಡಂಬಿಸುತ್ತಾ ,

ಕಲ್ಲು ಕಡವ ವದ್ದ -ಸಂದಡಿಗ ವುಂಡು

ಚೆಲ್ಲ ಕಡವ ವದ್ದ ಎವರು ಲೇರು

ಕಲ್ಲು ಮುಖ್ಯಮಾಯೆ -ಚೆಲ್ಲು ಚೆವುಕಾಯೆರಾ

ನಾದ ಬ್ರಹ್ಮಾನಂದ ನಾರಾಯಣ ಕವಿ

ಎಂದು ಹೇಳಿದ್ದಾರೆ.

ಇದರ ಅರ್ಥ ಕಲ್ಲು ಎಂದರೇ ಮಧ್ಯದ ಮಡಿಕೆ ಇದ್ದಲಿ  ಜನರು ಅದನ್ನು ಕೊಂಡುಕೊಳ್ಳಲು ಹೆಚ್ಚಾಗಿ ಸೇರಿರುತ್ತಾರೆ, ಅದೇ ಮೊಸರಿನ ಗಡಿಗೆ ಇದ್ದರೇ ಅದನ್ನು ಕೊಳ್ಳುವವರು ಯಾರೂ ಇರುವುದಿಲ್ಲ. ಅದೇ ರೀತಿ ಓಳ್ಳೆಯ ವಿಚಾರಗಳು ಹಾಗೂ ಓಳ್ಳೆಯ ವ್ಯಕ್ತಿಗಳಿಗೆ ಜನರು ಹೆಚ್ಚು ಬೆಲೆ ನೀಡುವುದಿಲ್ಲ  ಎಂಬುದನ್ನು ಈ ಕಂದ ವಿವರಿಸುತ್ತೆ. ಹಾಗೆಯೇ ಮೂರ್ತಿ ಪೂಜೆಯನ್ನು ಹೇಳುತ್ತಾ

ತ್ಸಚ್ಚಿನ ಪಶುವುಲ ಚರ್ಮಮು

ವಿಧ ವಿಧನಾದ ಧ್ವನುಲ ಪಲುಕುಲು ಪಲುಕುನ್

ಶಿಲವೇಲ್ಪುಲು ಪಲುಕವಯ್ಯ

ನಾದ ಬ್ರಹ್ಮಾನಂದ ನಾರಾಯಣ ಕವಿ ಎಂದಿದ್ದಾರೆ.

ಇದರ ಅರ್ಥ ಸತ್ತ ಪಶುಗಳ ಚರ್ಮವಾದರೂ ಸಹಾ ವಿವಿಧ ನಾದಗಳನ್ನು ಮಾಡುತ್ತದೆ , ಆದರೇ ದೇವರು ಎಂದು ಗುಡಿಯಲ್ಲಿ ಪೂಜಿಸುವ ಕಲ್ಲು ಒಂದು ಮಾತನ್ನು ಆಡುವುದಿಲ್ಲ ವೆಂದು ತಾತಯ್ಯನವರು ಮೂರ್ತಿಪೂಜೆಯನ್ನು ನಿರಾಕರಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ಮುಂದೆ ಬ್ರಹ್ಮನನ್ನು ಕುರಿತು ಹೇಳಲಾಗುವ,  ಹಣೆಯ ಬರಹವನ್ನು ವಿಮರ್ಶಿಸುತ್ತಾ,

ವಲ್ಲನಿ ಸತಿ ವಲ್ವನಿ ಪತಿ

ತಲವ್ರಾತಲು ವಕ್ಕಟಾಯೇ ತಪ್ಪದು ವೈರಂ /

ಅಜುಡೆಂತ ಅಲ್ಪುಡಾಯೆನು

ನಾದ ಬ್ರಹ್ಮಾನಂದ ನಾರಾಯಣ ಕವಿ .ಎಂದಿದ್ದಾರೆ.

ಇದರ ಅರ್ಥ ಒಲ್ಲದ ಗಂಡನಿಗೆ ಒಲ್ಲದ ಹೆಂಡತಿ

            ಅವರಿಬ್ಬರಿಗೂ ಗಲಾಟೆ ತಪ್ಪಲಿಲ್ಲ, ಇಂತಹಾ ಬರಹವನ್ನು ಬರೆದವನು ಬ್ರಹ್ಮನು ಅದೆಷ್ಟು ವಿವೇಚನೆಯಿಲ್ಲದೇ ಅಲ್ಪನು? ಎಂದು ಹೇಳುವ ಮೂಲಕ ಪ್ರತಿ ವಿವಾಹವು ಸ್ವರ್ಗದಲ್ಲಿಯೇ ನಿಶ್ಚಯಿಸಲ್ಪಟ್ಟಿರುತ್ತೆ ಎಂಬ ಬ್ರಾಹ್ಮಣವಾದಿ ಚಿಂತನೆಯನ್ನು ತಾತಯ್ಯ ನವರು ಅಂತಹಾ ಹಣೆಬರಹ ಬರೆಯುವ ಬ್ರಹ್ಮ ನನ್ನು ನಿರಾಕರಿಸುವುದನ್ನು ಇಲ್ಲಿ ನಾವು ಗುರ್ತಿಸಬಹುದು.

ಮುಂದೆ ಮತ್ತೂಂದು ಕಂದ ದಲ್ಲಿ

ಮಾಲವಾಡನಿ ಜನಲು -ಯೇಲ ನಿಂದಿಂತುರು

ಮಾಲವಾನಿ ಆತ್ಮ ಮಂದಿರಮುನ /

ಸಕಲ ದೇಹವಿಹಾರಿ ಸದ್ಗುರುಡು ವುಂಡುರಾ

ನಾದ ಬ್ರಹ್ಮಾನಂದ ನಾರಾಯಣ ಕವಿ //

ಎಂದು ಹೇಳಿದ್ದಾರೆ, ಇದರ ಅರ್ಥ ಹೊಲೆಯ ಹೊಲೆಯ ಎಂದು ಜನ ಹೊಲೆಯನನ್ನು ನಿಂದಿಸುತ್ತಾರೆ, ಆದರೇ ಹೊಲೆಯನ ಹೃದಯ ಮಂದಿರದಲ್ಲಿಯೂ ಸಹಾ ಸಕಲ ದೇಹಸಂಚಾರಿ ಆದ ದೇವನು ಗುರು ರೂಪನಾಗಿ ಇರುತ್ತಾನೆ. ಎಂದು ತಾತಯ್ಯನವರು ಹೇಳುತ್ತಾರೆ.

ಬಡವನ ದುರ್ಬಲನ ಹೃದಯದಲ್ಲಿರುವ ದೇವರನ್ನಲ್ಲದೇ ಬೇರೆ ದೈವವನ್ನು ನಾನು ಮಾನ್ಯ ಮಾಡುವುದಿಲ್ಲ, ಇಂತಹಾ ಧೀನ ದುರ್ಬಲನ ಸೇವೆಯ ಮೂಲಕ ಸತ್ಯ ಸ್ವರೂಪನಾದ ದೇವರನ್ನು ಪೂಜಿಸುತ್ತೇನೆ  ಎಂಬ ಮಹಾತ್ಮ ಗಾಂಧಿರವರ ಮಾತು ಈ ಚರ್ಚೆಯಲ್ಲಿ ಪ್ರಸ್ತುತ ವೆನಿಸುತ್ತದೆ.

ಇದೇ ಚಿಂತನೇ ಕೈವಾರ ತಾತಯ್ಯನವರದ್ದು ಸಹಾ,

ಹಾಗೇ ಮುಂದೆ ತಾತಯ್ಯನವರು

ಮಾನವನ ಕೊನೆ ಕ್ಷಣಗಳ ಬಗ್ಗೆ ಹೇಳುತ್ತಾ,

ಕಾಟಕಿ ತ್ಸನುವೇಳ -ಕನಕಾಭರಣಮುಲು

ದೋಚುಕೊಂದುರು ಇಂಟಿ ದೊಂಗಲಂತಾ /

ಕಟಕಟ ಇಟುವಂಟಿ- ವಿಶ್ವಾಸ ಘಾತಕುಲು

ನಾದ ಬ್ರಹ್ಮಾನಂದ ನಾರಾಯಣ ಕವಿ //

ಎಂದಿದ್ದಾರೆ.

ಇದರ ಅರ್ಥ ಮನುಷ್ಯ ಸತ್ತಮೇಲೆ ಅವನನ್ನು ಸ್ಮಶಾನಕ್ಕೆ ಒಯ್ಯುವ ಸಮಯದಲ್ಲಿ ಅವನ ಮೈಮೇಲಿನ ವಸ್ತು ಒಡವೆಗಳನ್ನೆಲ್ಲಾ ಮನೆಯವರೇ ದೋಚಿಕೊಂಡು ಬಿಡುತ್ತಾರೆ. ಇಂತಹಾ ವಿಶ್ವಾಸ ಘಾತಕರು ಬೇರೆಲ್ಲಿಯೂ ಸಿಗುವುದ್ದಿಲ್ಲ.

ಎಂದರೇ ಮನುಷ್ಯ ತನ್ನ ಜೀವನವನ್ನೆಲ್ಲಾ ಹಣಕ್ಕಾಗಿ ದುಡಿಯುತ್ತಾ ಕಳೆದು ಒಂದು ದಿನ ಮರಣ ಹೊಂದಿದಾಗ ತನ್ನ ಸ್ವಂತ ಮಕ್ಕಳು ಅದೇ ಹಣಕ್ಕಾಗಿ ಶವದ ಮೇಲಿನ ಒಡವೆಗಳನ್ನು ಕಿತ್ತುಕೊಂಡು, ಆಸ್ತಿಗಾಗಿ ಕಿತ್ತಾಡುವುದನ್ನು ನಾವು ನೋಡುತ್ತೇವೆ. ಇದಕ್ಕೆ ಕಾರಣ ಒಂದು ರೀತಿಯಲ್ಲಿ ಅವರನ್ನು ಬೆಳೆಸಿದ ತಂದೆ ತಾಯಿಗಳೇ ಆಗಿರುತ್ತಾರೆ. ಮಕ್ಕಳನ್ನು ಚಿಕ್ಕಂದಿನಿಂದಲೇ ಪ್ರೀತಿ ವಿಶ್ವಾಸ ಹಾಗೂ ಆದರ್ಶಗಳಿಂದ ಬೆಳೆಸಿದರೇ ಮುಂದೆ ಮಕ್ಕಳು ಒಳ್ಳೆಯವರಾಗಿ ಬಾಳುತ್ತಾರೆ. ಎಂಬ ಸಂದೇಶದ ಜೊತೆ ಜೀವನವೆಲ್ಲಾ ಹಣಕ್ಕಾಗಿ ಜೀವಿಸುವವರು ಕಡೆಗೆ ಸತ್ತಾಗ ಏನನ್ನು ತೆಗೆದುಕೊಂಡು ಹೊಗುವುದಿಲ್ಲ ಎಂಬ ಉಪದೇಶವವೂ ಇಲ್ಲಿ ಅಡಗಿದೆ.

ಹಾಗೇ ಮುಂದೇ ಮತ ಸಾಮರಸ್ಯದ ವಿಚಾರವನ್ನು ಹೇಳುತ್ತಾ ,

 ವಿಷ್ಣು ಮತಮುವಾರು ಹೀನುಲೈಪೊಯಿರಿ

ಶಿವಮತಮುವಾರಿಕಿ ಶಿಗ್ಗು ಲೇದು

ಯೋಗ ಮತಮುವಾರು ಹೆಚ್ಚೈನ ವಾರಯಾ

ನಾದ ಬ್ರಹ್ಮಾನಂದ ನಾರಾಯಣ ಕವಿ ಎಂದಿದ್ದಾರೆ.

ಇದರ ಅರ್ಥ ವಿಷ್ಣು ಮತದವರು ವಿಷ್ಣುವಿನ ಸರ್ವೋತ್ತಮ ವಾದವನ್ನು ಹಿಡಿದಿದ್ದರಿಂದ ತಾರತಮ್ಯದ ಅಲ್ಪತೆ ಉಂಟಾಗಿ ಕೆಟ್ಟರು,ಶಿವ ಮತ ದವರಿಗಾದರೂ ಶಿವನೋಬ್ಬನೇ  ಇತರೆ ದೇವತೆಗಳಿಗಿಂತ ಹೆಚ್ಚಿನವನೆಂದು ವಾದಿಸುವಲ್ಲಿ ನಾಚಿಕೆಯುಂಟಾಗಲಿಲ್ಲ ಇಂತಹಾ ಬಿನ್ನತೆಗಳಿಂದ ಮತಗಳವರು ತಮ್ಮ ಶ್ರೇಷ್ಟತೆಯನ್ನು ಪ್ರತಿಪಾದಿಸ ಕ್ಕೊಳ್ಳುತ್ತಲೇ ತಾವು ಕಡಿಮೆಯವರಾದರೂ ಹಾಗೇ ಕಾಯಕ ಯೋಗಿಗಳು ತಮ್ಮಷ್ಟಕ್ಕೆ ತಾವಿದ್ದು ಶ್ರೇಷ್ಟರಾದರು ಎಂದು ತಾತಯ್ಯನವರು ಹೇಳಿದ್ದಾರೆ. ಮುಂದುವರೆದು ಮತ್ತೂಂದು ಪದ್ಯದಲ್ಲಿ ಮಾನವೀಯತೆಯ ಧರ್ಮವನ್ನು ಹೇಳುತ್ತಾ,

ಪುಟ್ಟಯೆಕ್ಕಿನವಾನಿ -ಪೂರಿ ಕರಿಚಿನ ವಾನಿ

ಪಾರಿ ಪೋಯೇವಾನಿ -ಚಂಪರಾದು

ತನಯುಲು ವೀರನಿ -ದಬ್ಬುಕೋವಲೆನಯ್ಯಾ

ನಾದ ಬ್ರಹ್ಮಾನಂದ- ನಾರೇಯಣ ಕವಿ.

ಇಲ್ಲಿ ತಾತಯ್ಯನವರು ಮಾನವ ಧರ್ಮ ಹಾಗೂ ದಯೆ ಕರುಣೆಗಳನ್ನು ದಯವೇ ದರ್ಮದ ಮೂಲಎಂಬ ಬಸವಣ್ಣನ ನುಡಿಯಂತೆ ದಯೆ ಹಾಗೂ ಕರುಣೆಯ ಮಹತ್ವವನ್ನು ಇಲ್ಲಿ ಹೇಳಿದ್ದಾರೆ. ಈ ಕಂದಪದ್ಯದ ಅರ್ಥ ಓಡಿ ಹೋಗುತ್ತಿರುವ, ಕಷ್ಟದಲ್ಲಿರುವ, ಸೋತು ಶರಣಾದ ಯಾರೇ ಆಗಿರಲೀ ಅವನನ್ನು ಮತಷ್ಟು ಭಾಧಿಸದೇ ಅವರನ್ನು ಮಕ್ಕಳಂತೆ ಪ್ರೀತಿಯಿಂದ ಕಂಡು ಗೌರವಿಸಬೇಕೆಂದು ತಾತಯ್ಯನವರು ಹೇಳಿದ್ದಾರೆ.  ಮುಂದೇ ದೈವ ಹಾಗೂ ಪೂಜಾರಿಯ ಬಗ್ಗೆ ಹೇಳುತ್ತಾ ..

ತಬ್ಬಲಿ ದೇವರಕು -ದಬ್ಬರ ಪೂಜಾರಿ

ವರಮಿಚ್ಚೇ ದೇವುಡು ವಕಡು ಲೇಡು

ತಮಲೋನಿ ದೇವರನು ತಾಮು ಕನಲೇರಯ್ಯ

ನಾದ ಬ್ರಹ್ಮಾನಂದ- ನಾರಾಯಣ ಕವಿ

ಎಂದರೇ, ಗೊತ್ತು ಗುರಿಯಿಲ್ಲದ ದೈವಕ್ಕೆ, ವೇಶದಾರಿಯಾದ ಸುಳ್ಳು ಪೂಜಾರಿಯೊಬ್ಬ, ಇಂಥಹ ಎಷ್ಟೋ ದೇವರುಗಳು ಎಷ್ಟೋ ಮಂದಿ ಪೂಜಾರಿಗಳು ಕಂಡು ಬರುತ್ತಾರೆ, ಲೋಕದಲ್ಲಿ, ಆದರೇ ಇವರಲ್ಲಿ ವರವನ್ನು ಕೊಡುವ ದೇವರು ಒಬ್ಬರೂ ಇಲ್ಲ,ಜನರು ತಮ್ಮಲೇ ಅಡಗಿರುವ ಆ ದೇವರನ್ನು ತಾವು ಕಾಣಲಾರದಾಗಿದ್ದಾರೆ. ಎಂದು ಇಲ್ಲಿ ಹೇಗೆ ಪೂಜಾರಿಗಳು ದೇವರ ಹೆಸರಿನಲ್ಲಿ ಜನರನ್ನು ದಿಕ್ಕುತಪ್ಪಸುತ್ತಾರೆ ಎಂಬುದನ್ನು ತಾತಯ್ಯನವರು ವಿವರಿಸಿದ್ದಾರೆ. ಮುಂದೆ

ಮಾಯವಾದಿ ನರುಲು ಮತಮುನಕು ಲೋನೈರಿ

ಮಾಯಗುರುನಿ  ಭೋದ ಮಂಚಿದನುಚು

ಚೆಡಿರಿ ಯೇಡು ಚೇಟ್ಲು ಚೆಪ್ಪೇದಿ ಯೇಲರಾ

ನಾದ ಬ್ರಹ್ಮಾನಂದ ನಾರಾಯಣ ಕವಿ

ಮಾಯವಾದವನ್ನು ನಂಬುವ ನರರು ಮತಗಳಿಗೆ ಒಳಗಾದರು, ಮಾಯವಾದಿ ಗುರುಗಳನ್ನು ನಂಬಿ ಕೊಂಡು ಅವರು ಕೆಟ್ಟರು, ಇಂತಹವರ ಬಗ್ಗೆ ಏನು ಹೇಳಲಿ?  ಎಂದು ತಾತಯ್ಯನವರು ಮಾಯವಾದವನ್ನು ಖಂಡಿಸುವುದನ್ನು ಇಲ್ಲಿ ನೋಡಬಹುದು ಅಲ್ಲದೇ ಮತ ಎಂಬುದು ಒಂದು ಮಾಯವಾದ ಎಂದು ಅದನ್ನು ಸಹಾ ತಾತಯ್ಯನವರು ತಿರಸ್ಕರಿಸಿದ್ದಾರೆ. ಮುಂದೆ,

ವಿನ್ನವಾರಂದರೂ ವೆರ್ರಿವಾಡಂದರು

ತಮಕು ಪಟ್ಟಿನ ವೆರ್ರಿ ದೇವುಡೆರುಗು

ಮೂರ್ಖುಡಾ ವೆರ್ರಿ ಮೂಲಮು ತೆಲುಸುನಾ ?

ನಾದ ಬ್ರಹ್ಮಾನಂದ ನಾರಾಯಣ ಕವಿ

ಇಲ್ಲಿ, “ಹುಚ್ಚುತನವೇ ಅನುಗ್ರಹ  ಎಂಬ ನೀಷೆಯವರ ಮಾತಿನಂತೆ ತಾತಯ್ಯನವರು ಎಲ್ಲರೂ ನಮ್ಮನು ಹುಚ್ಚನೆಂದು ಕರೆಯುತ್ತಾರೆ. ಆದರೇ ಹುಚ್ಚುತನದ ಮೂಲ ಅಥವಾ ಅದರ ಅನುಭವ ಮೂರ್ಖರಿಗೆ ಸಿಗುವುದೇ?  ಎಂದು ತಾತಯ್ಯನವರು ಕೇಳುತ್ತಾರೆ. ಹಾಗೇ ಕಲ್ಲು ದೇವರುಗಳ ಬಗ್ಗೆ ಕುರಿತು ತಾತಯ್ಯನವರು ಮತ್ತೂಂದು ಕಡೆ,

ಉಂಡ ಚೂಚೇನಂಟೆ -ಉಚ್ವಾಸಮುಲು ಲೇವು

ಅನಮೈನನು ಅರಗಿಂಚರಾದು

ಮಾಟಲಾಡನಿ ಮಂಕು -ಬೊಮ್ಮಲವಿ ಯೇಲರಾ

ನಾದ ಬ್ರಹ್ಮಾನಂದ ನಾರಾಯಣ ಕವಿ

ಎಂದರೇ ಗುಡಿಯಲ್ಲಿರುವ ದೇವರುಗಳು ಉಚ್ವಾಸ ನಿಚ್ವಾಸ ಗಳ್ಳಿಲ್ಲದ ಅನ್ನವನ್ನು ಉಣ್ಣದ ಮಂಕು ಬೊಂಬೆಗಳು ಏಕೆ ಬೇಕು ಎಂದು ತಾತಯ್ಯನವರು ಕೇಳುತ್ತಾರೆ. ಮತ್ತೊಂದು ಕಡೆ ಮಹಾಭಾರತ ಕತೆಯನ್ನು.

ಭಂಡ ಸಂಸಾರಮುನ ಭಾರತ ಕಥಲಾಯೆರಾ ಎಂದು ಹೇಳಿ,ಭಂಡ ಸಂಸಾರಿಗಳಿಂದ ಆದದ್ದು ಮಹಾ ಭಾರತ ಕತೆ ಎಂದು ಭಾರತ ಕತೆಯನ್ನು ತಾತಯ್ಯನವರು ವಿಮರ್ಶಿಸಿದ್ದಾರೆ.

ಹಾಗೆಯೇ ಕೆಲವು ಭಂಡಾಯದ ಹೇಳಿಕೆಗಳನ್ನು ಇಲ್ಲಿ ವಿವೇಚನೆಗೆ ತೆಗೆದುಕೊಳ್ಳುವುದಾದರೇ, ತತ್ವಪದಕಾರರು ಮೂಲತಃ ಭಂಡಾಯಗಾರರೇ ಆಗಿದ್ದಾರೆ, ಆಗಿನ ಕಾಲದ ಸಾಮಾಜಿಕ ಪಿಡುಗುಗಳನ್ನು, ಬ್ರಾಹ್ಮಣವಾದಿ ಆಚರಣೆಗಳನ್ನು, ಶೋಷಣೆ, ಪ್ರಭುತ್ವ, ದುರಾಡಳಿತ, ವಸಾಹತುಶಾಹಿ ವ್ಯವಸ್ಥೆಗಳ ವಿರುದ್ಧ ತತ್ವಪದದಕಾರರು ಬಂಡಾಯವನ್ನು ವ್ಯಕ್ತಪಡಿಸಿದ್ದಾರೆ. ಆದರ ಕೆಲವು ಸುಳಿವುಗಳನ್ನು ಹಿಂದೆಯೇ ಚರ್ಚಿಸಲಾಗಿದೆ.

ಇನ್ನು ಮುಂದುವರೆದು ನೋಡುವುದಾದರೇ, ಮೊದಲನೆಯದಾಗಿ  ಕೈವಾರ ತಾತಯ್ಯನವರ ಒಂದು ಕೀರ್ತನೆಯನ್ನು ನೋಡುವುದಾದರೇ,

 ಈ ಊರವೂಳಗಿಷ್ಟು ಉತ್ಪಾತವೇನೋ

ದುರಿತ ಸಂಹರ ನಾರೇಯಣ ಹರಿಯೇ

ವಿಶ್ವಾಸ ಘಾತಕನು ಇಲ್ಲಿರುವ ಶ್ಯಾನುಭೋಗ

ಕೆಟ್ಟ ಮುಂಡೆ ಗಂಡ ಗುರಿಕಾರನೊ

ಎಂದು ಆ ಊರಿನ ಶ್ಯಾನುಭೋಗನನ್ನು ಅವನ್ನು ಮಾಡುತ್ತಿದ ಮೋಸದ ಕೆಲಸಗಳನ್ನು ಇಲ್ಲಿ ಕೈವಾರ ತಾತಯ್ಯನವರು ವಿವರಿಸಿದ್ದು, ಈ ಕೀರ್ತನೆಯನ್ನು ತಾತಯ್ಯನವರು ಕನ್ನಡದಲ್ಲಿಯೇ ಹೇಳಿದ್ದಾರೆ.

ಇದು ಆ ಊರಿನ ಶಾನುಭೋಗನ ವಿರುದ್ಧ ಕೀರ್ತನೆ ರಚಿಸಿ ಅವನ ವಿರುದ್ಧ ತಮ್ಮ ಬಂಡಾಯವನ್ನು ಈ ಕೀರ್ತನೆಯ ಮೂಲಕ ಪ್ರಕಟಿಸಿದ್ದಾರೆ. ಮುಂದೆ ವಸಾಹತುಶಾಹಿ ಆಡಳಿತ ಅವರ ಕುತಂತ್ರಗಳು ಮೊದಲಾದವನ್ನು ಮತ್ತೂಂದು ಕೀರ್ತನೆಯಲ್ಲಿ,

ಕೋತ್ತಗಾ ಒಕ ಚೇಪವಚ್ಚಿ ನಿಂಡು ಚೆರುವು ನೀಳ್ಳು ಅನೀ ಮ್ರಿಂಗಿ

ಬಟ್ಟ ಬಯಲು ಜೇಸೇರಾ, ಓ ಶಿಷ್ಯಾಗ್ರಾತನಯಾ

ಮುತ್ಯಮಂತಾ ಚೇಪ ಚೂಡರಾ

ಎಂದು ಹಾಡಿದ್ದಾರೇ.

ಇಲ್ಲಿ, ಬ್ರಿಟೀಷರನ್ನೇ ಗುರಿಯಾಗಿಟ್ಟಕೊಂಡು, ಅವರನ್ನು ಮೀನಿಗೆ ಹೋಲಿಸಿರುವುದನ್ನು ಕಾಣಬಹುದಾಗಿದೆ.  ಕೀರ್ತನೆಯ ಅರ್ಥವನ್ನು ನೋಡುವುದಾದರೇ ,

ಹೊಸದಾಗಿ ಬಂದ ಒಂದು ಮೀನು ತುಂಬಿದ ಕೆರೆಯ ನೀರನೆಲ್ಲಾ ನುಂಗಿ,

ಭಟಾಭಯಲು ಮಾಡಿತ್ತೋ , ಓ ಶಿಷ್ಯಾ

ಮುತ್ತಿನಷ್ಟು ಗಾತ್ರದ ಮೀನು ಅದು ಎಂದು

ಮುಂದೆ ಅದೇ ಪದ್ಯದ ಮುಂದಿನ ಸಾಲುಗಳಲ್ಲಿ

ಮಿಂಟಿಲೋನ ಮೆರಪು ಮೆರಸೆ ಮಂಟಲೋನಾ ಮಲಕ ಮೋಲಿಚೆ

ಚೂಡಚೂಡ ಪೆರಿಗಿಪೋಯೆರಾ

ಓ ಶಿಷ್ಯಾಗ್ರಾತನಯಾ.

ಮಂಟಮಿಂಟಿಕಿ ಏಕಮಾಯೆರಾ

ಎಂದು ಹಾಡಿದ್ದಾರೆ.

ಈ ಸಾಲುಗಳಲ್ಲಿ ಮೇಲಿನವು ಬ್ರೀಟೀಷರಿಗೆ ಹಾಗೇ ನೀರನ್ನು ಇಲ್ಲಿನ ವ್ಯಾಪಾರ ಹಾಗೂ ಸಂಪತ್ತಿಗೆ ರೂಪಕವಾಗಿ ತೆಗೆದುಕೊಂಡು ಮುತ್ತಿನ ಬಣ್ಣದ ಬ್ರಿಟೀಷರು ಬಾರತ ಕೆರೆಗೆ ಬಂದು ಇಲ್ಲಿನ ಸಂಪತ್ತೆಂಬ ನೀರನ್ನು ಎಲ್ಲಾ ಕುಡಿದು ಬಟ್ಟಾ ಬಯಲಾಗಿಸಿದರೆಂದು ಹೇಳಿದರೇ, ಮುಂದಿನ ಪದ್ಯ ಬ್ರಿಟೀಷ್ ಆಡಳಿತ ತೀವ್ರಗತಿಯಲ್ಲಿ ಬೆಳೆದುದರ ವಿಚಾರವನ್ನು ರೂಪಕವಾಗಿ ಹೇಳಿದೆ.  ಬಹಳಷ್ಟು ತತ್ವಪದಕಾರರ ರಚನೆಗಳು ವಸಾಹತುಶಾಹಿ ಆಗಮನದ ಬಗ್ಗೆ ದಿವ್ಯ ಮೌನವನ್ನೇ ವಹಿಸಿವೆ. ಅವು ಕೈವಲ್ಯಾನುಭವವನ್ನೇ ಪುನರಾವರ್ತಿಸಿ ಹೇಳುವಷ್ಟಕ್ಕೇ ತೃಪ್ತಿ ಹೋಂದಿ, ಆ ಕಾಲದ ರಾಜಕೀಯ ಕ್ಷೋಭೆಗಳಿಗೆ ಕಿವಿಗೊಡದಾಗಿದೆ, ನಾರಾಯಣ ತಾತನವರು ಕೂಡ ತಮ್ಮ ಶತಕತ್ರಯಗಳಲ್ಲಿ  ಮತ್ತು ಕಾಲಜ್ಞಾನದಲ್ಲಿ ಇಂಥಹ ಕೈವಲ್ಯಾನುಭವವನ್ನೇ ಹೇಳುತ್ತಾರಾದರೂ  ವಸಾಹತುಶಾಹಿಯ ಬಗ್ಗೆಯೂ ಕರಾರುವಾಕ್ಕಾದ ಅಭಿಪ್ರಾಯಗಳನ್ನು ನೀಡಿದ್ದಾರೆ, ಅವರು ವಸಾಹತುಶಾಹಿಯ ಫಲವಾದ ಬಲತ್ಕಾರದ ಮತಾಂತರವನ್ನು ಖಂಡಿಸಿದ್ದಾರೆ.

ಪರಂಗಿಯವರಿಗೆ ಮಣ್ಣಿನ ಋಣ ತೀರಿದೆ. ಅವರ ವಿಸ್ತಾರವಾದ ಸಾಮ್ರಾಜ್ಯ ಮೊಟಕಾಗಲೇಬೇಕು. ಅಕ್ರಮಿಸಿರುವ ಭೂಮಿಯನ್ನು ಬಿಟ್ಟು ಅವರು ಜನ್ಮಭೂಮಿಗೆ ಓಡಿ ಹೋಗುವರು ಎಂದಿದ್ದಾರೆ. ಅಧಿಕಾರ ವರ್ಗದಲ್ಲಿ ಲಂಚ, ಧನದಾಹ, ಹೆಚ್ಚುವ ಹಾಗೂ ಪ್ರಕೃತಿ ಸಂಪನ್ಮೂಲಗಳು ಖಾಸಗಿ ಸ್ವಾಮ್ಯಕ್ಕೊಳಪಟ್ಟು ಕೃತಕ ಅಭಾವ  ಸೃಷ್ಟಿಯಾಗಿ ಎಲ್ಲದರ ಮೇಲೆಯೂ ತೆರಿಗೆ ವಿಧಿಸಲ್ಪಡುವುದೆಂಬ ತುಂಬಾ ಮಹತ್ವದ ಮುನ್ಸೂಚನೆಗಳನ್ನೇ ನೀಡಿದ್ದಾರೆ. ಇಂಥಹ ವಚನಗಳು ಪ್ರಕ್ಷಿಪ್ತಗಳಾಗಿದ್ದಿರಬಹುದಾದ ಸಾಧ್ಯತೆಗಳೂ ಇಲ್ಲದಿಲ್ಲ.

 ಯಾಕೆಂದರೆ ವಸಾಹತೋತ್ತರವಾದ ಆರ್ಥಿಕ ವ್ಯವಸ್ಥೆಯ  ಬಗ್ಗೆ ವಸಾಹತುಶಾಹಿಯ ಆರಂಭಘಟ್ಟದಲ್ಲಿ ಜೀವಿಸಿದ್ದ ನಾರಾಯಣ ತಾತನವರು ಇಷ್ಟು ಖಚಿತವಾಗಿ ಯೋಚಿಸಿದ್ಧಾದರೂ  ಹೇಗೆ ಸಾಧ್ಯವಾಯಿತೆಂದು  ಆಶ್ಚರ್ಯಪಡುವಂತಾಗುತ್ತದೆ. ಪ್ರಕೃತಿ ಸಂಸತ್ತಿನ ಹಾಗೂ ಸೌಂದರ್ಯತ್ಮಕ ಅಂಶಗಳ ವಾಣಿಜೀಕರಣದ ಬಗ್ಗೆ ನಾರಾಯಣ ತಾತನವರ ಶತಕಗಳು ಎಷ್ಟು ಸೂಕ್ಷ್ಮ ಗ್ರಹಿಕೆಯದ್ದಾಗಿದೆ ಎಂದರೆ, ವಸಾಹತುಶಾಹಿ ಎಲ್ಲವನ್ನೂ -ಧರ್ಮ, ಪ್ರಕೃತಿಯಿಂದ ಮೊದಲ್ಗೊಂಡು ಮನುಷ್ಯ ಸಂಬಂದಗಳವರೆಗೂ ಏನೆಲ್ಲವನ್ನೂ ವಾಣಿಜೀಕರಣಗೊಳಿಸಬಲ್ಲದೆಂಬ ಅದರ ಒಳ ಉದ್ದೇಶವನ್ನುವರು ಅರಿತಿದ್ದಾರೆಯೇನೂ ಎನ್ನುವಷ್ಟು ವಸಾಹತು ಶಾಹಿಯ ಪ್ರಧಾನ ಉದ್ದೇಶವೂ ವಸಾಹತು ಸಮಾಜವನ್ನಿಡೀ ವಾಣಿಜ್ಯ ದ ನೆಲೆಯಿಂದ ಪರಿಭಾವಿಸುವುದೇ ಆಗಿದೆಯಷ್ಟೇ .

 ಒಂದು ವಚನ ನೊಡುವುದಾದರೆ,

ಪಶುಲಮೇತ ಭೂಮಿ ಗುತ್ತ-  ಅಡವಿ ಗುತ್ತ

ಚೆಡ್ಡ ಸ್ತ್ರೀಲು ಗುತ್ತ- ಚೆಟ್ಲು ಗುತ್ತ

ಪಲವೃಕ್ಷಮುಲು ಗುತ್ತ- ಪಂಡ್ಲು ಕಾಯಲು ಗುತ್ತ

ಬಿಕ್ಷಗಾಂಡ್ಲುಕು ಗುತ್ತ- ಬೀಡುಗುತ್ತ

ಚಾಕಿರಿವಿಂಡ್ಲಕು ಗುತ್ತ- ಸಾರಾಯಿ ವಕ ಗುತ್ತ

ಮಾಲಮಗ್ಗಮು ಗುತ್ತ ಮಾನ್ಯಗಾಂಡ್ಲುಕು ಗುತ್ತ

ಚೌಟಮಂಟಿಕೆ ಗುತ್ತ ಚಮರು ಗುತ್ತ

ಗೋಮಾಳದಿಂದ ಮೊದಲುಗೊಂಡು ಕೆಟ್ಟ ಹೆಣ್ಣುಗಳು, ಅರಣ್ಯಗಳು ಹಣ್ಣು ಕೊಡುವ ಮರಗಳು, ಹಣ್ಣುಕಾಯಿಗಳು, ಭಿಕ್ಷುಕರು, ಬಂಜರು ಭೂಮಿಗಳು, ಆಳು ನೌಕರರು, ಸಾರಾಯಿ, ಹೊಲೆಯರ ಮಗ್ಗಗಳು, ದತ್ತಿ ಮಾನ್ಯಗಳು, ಚೌಳು ಮಣ್ಣು ಮತ್ತು ಎಣ್ಣೆಯವರೆಗೂ ಎಲ್ಲವೂ ಗುತ್ತಿಗೆಗೆ ಓಳಪಟ್ಟು ತೆರಿಗೆಯ ವ್ಯಾಪ್ತಿಗೆ ಬರುವುದೆಂಬುದು ಈ ಕಾಲಜ್ಞಾನ ಶತಕದ ಮುನ್ಸೂಚನೆಯಾಗಿದೆ. ವಸಾಹತುಶಾಹಿ ಆಡಳಿತ ದಲ್ಲಿನ ಆರ್ಥಿಕ ಸೂಕ್ಷ್ಮಗಳನ್ನು ನಾರಾಯಣತಾತನವರು ಹಾಗೆ ಮತ್ತೂಬ್ಬ ತತ್ವಪದಕಾರರು ದಾಖಲಿಸಿಲ್ಲ.ಇನ್ನು ಕೆಲವು ಶತಕಗಳನ್ನು ನೋಡುವುದಾದರೇ ,

ವಾನರುಲ ವಸುಧ ಪಾರನ ತೀರೇನು

ಇಕಮೀದ ಲೇದು ವಚ್ಚೇನು ಅಂತ್ಯಂ

ಪಲಾಯನಮೈಪೊದುರು //

ತಮಲೋನೆ ತಮಕು ಕಲಹಮು ಪಡಿ

ಚತ್ತರು ಪರಂಗಿವಾರು ಪಟ್ಟಮು ಪಾಡೌನು //

ಪಂಟ ಟಂಡಿನ ಕರುವು ಪಂಟ ಯೆಂಡಿನ ಕರುವು

ಪ್ರಜಲೆಟ್ಲ ಬ್ರದಿಕೇರು ಪ್ರಾಪಂಚಮುಂದು

ಶರಣುಲ ವಾಕ್ಯಾಲು ಚೇರ್ಚ ವಚ್ಚೆನು ಸುಮೀ //

ಚೋರುಲ ಪಟ್ಟಂಬಾಯೆನು ರಾಜೆವ್ವಡು ಲೇಕಪೋಯ

ರಾಜ್ಯಮು ಚೆಡೆರಾ ದೊಂಗಲ ದೋಪೈಯುನ್ಶದಿ //

ವಿಪ್ರುಲ ಪಾಲಾಯ ಇರಸಾಲು ನ್ಯಾಣಾಲು

ನಾಲ್ಗಿಂಟಿ ವಕಪಾಲು ನಗರು ಚೇರು

ವ್ಯದವ ದೊರೆತನಮಾಯೆ ಯೇಮನವಚ್ಚುರಾ

ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ //

ಎಂಬ ಈ ಶತಕಗಳು ಪರಂಗಿ ಕೋತಿಗಳ ಆಳ್ವಿಕೆ ಮುಗಿದು ಅವರ, ಪಲಾಯನ ಮಾಡುವುದರೊಂದಿಗೆ, ತಮ್ಮಲೇ ಕಲಹವುಂಟಾಗಿ ಸಾಯುವವರೆಂದು ಬ್ರಿಟೀಷ್ ವಸಾಹತುಶಾಹಿಯ ಬಗ್ಗೆಯೇ ನೇರವಾಗಿ ಕ್ರೋಧಪೂರಿತ ಭವಿಷ್ಯ ನುಡಿದಂತಿದೆ. ಬೆಳೆ ಬೆಳೆದರೂ ಕೃತಕ ಅಭಾವ ತಲೆದೋರಿ ಪ್ರಜೆಗಳು  ಬದುಕುವುದು ಕಷ್ಟವಾಗಬಹುದೆಂಬ ಶರಣರ ಮಾತುಗಳು ನಿಜವಾಗುತ್ತದೆಂಬುದು ಮತ್ತೂಂದು ವಚನದ ಸಾರಾಂಶವಾಗಿದೆ .

ಇನ್ನೂಂದು ವಚನ ಕಳ್ಳರ ಪಾಲಾದ ರಾಜ್ಯಾಧಿಕಾರದ ಬಗ್ಗೆ ಹೇಳಿದರೆ ಕೊನೆಯ ವಚನ ಕಂದಾಯವಾಗಿ ವಸೂಲಾಗಬೇಕಿದ್ದ ಹಣವನ್ನು ಬ್ರಾಹ್ಮಣರೇ ಲಪಟಾಯಿಸಿ, ನಾಲ್ಕನೇ ಒಂದು ಭಾಗ ಮಾತ್ರ ಸರಕಾರಕ್ಕೆ ಸಂದಾಯವಾಗುವುದರಿಂದ ಅದು ಅಯೋಗ್ಯರ ದೊರೆತನವಾಗುತ್ತದೆಂದಿದೆ.

ಇಷ್ಟೂ ವಚನಗಳು ವಸಾಹತುಶಾಹಿಯ ವಿವಿಧ ಮುಖಗಳನ್ನು ಅನಾವರಣ ಗೊಳಿಸುವಂತಿದೆ. ಬ್ರಿಟಿಷರು ಬಿಟ್ಟುಹೋದ ನಂತರವೂ ಉಳಿದೆಲ್ಲಾ ಪರಿಸ್ಥಿತಿಯೂ ಹಾಗೇ ಇರುವುದರಿಂದಲೇ ಇರಬೇಕು ಜನಪದರು ನಾರಾಯಣ ತಾತನವರ ಇಂತಹ ವಚನಗಳನ್ನು ಮುಂಜಾನೆ ಮುತ್ಸಂಜೆಗಳಲ್ಲಿ, ಭಜನೆ ಗಳಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಹಾಡಿಕೊಳ್ಳುತ್ತಲೇ ಇದ್ದಾರೆ. ಅವರದೇ ಸರಳ ಆಡು ಭಾಷೆಯಲ್ಲಿ ಪದ್ಯಗಳಿರುವುದರಿಂದ ಅವು ಸುಲಭಗ್ರಾಹ್ಯವೂ ಆಗಿವೆ.

ಕೈವಾರ ನಾರಾಯಣ ತಾತಯ್ಯನವರು ರಾಜಕೀಯವಾಗಿ ಹೆಚ್ಚು ಕ್ಷೋಭೆಗೊಳಪಟ್ಟಿಲ್ಲದಿದ್ದರೂ ವಸಾಹತುಶಾಹಿಯ ನೇರ ಸಂಪರ್ಕಕ್ಕೆ ಹೇಗೂ ಸಿಕ್ಕಿಲ್ಲ ದಿದ್ದಂತಹ ಗಡಿ ಪ್ರದೇಶದಲ್ಲಿದ್ದವರು, ಆದರೂ ವಸಾಹತುಶಾಹಿ ಮತ್ತದರ ಆರ್ಥಿಕ ಪರಿಣಾಮಗಳ ಬಗ್ಗೆ ಆಡಿರುವ ಮಾತುಗಳು ನೊರೈವತ್ತು ವರ್ಷಗಳ ಹಿಂದಿನ ದೇಸೀ ನೆಲೆಯ ಅತ್ಯಂತ ಶ್ರೇಷ್ಟ ಆರ್ಥಕ ಚಿಂತನೆಗಳೆಂದು ಕರೆಯಬಹುದಾಗಿದೆ.

                                 

 

 

 

 

 

 

ಅಧ್ಯಾಯ- 4.2

ವಚನ ಚಳುವಳಿ ಚಿಂತನೆ

ಜಗವು ಕಂಡ ಮೊದಲ ಬಂಡಾಯ ಸಾಹಿತ್ಯ ವಿದ್ರೋಹಿ ಸಾಹಿತ್ಯ ದೇಸಿ ಸಾಹಿತ್ಯವೇ ಶರಣ ಸಾಹಿತ್ಯ ವಚನ ಸಾಹಿತ್ಯ.

ಆರು ಮುನಿದು ನಮ್ಮನೇನು ಮಾಡುವರು?

ಊರು ಮುನಿದು ನಮ್ಮನೆಂತು ಮಾಡುವರು?

ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯನ್ನಿಕ್ಕಬೇಡ,

ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೇ?

ನಮಗೆ ನಮ್ಮ ಕೂಡಲಸಂಗಯ್ಯನುಳ್ಳನಕ್ಕ.

ಶರಣರ ಕ್ರಾಂತಿ ರಸಿಯಾ, ಫ್ರೆಂಚ್ ಕ್ರಾಂತಿಗೆ ಬಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ. ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ .ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ Karl marx has taught us the dignity of labour but Basavanna has taught us dignity and divinity of labour ,ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣ ಹೊಸ ಚೇತನ ನೀಡಿದ . ಬತ್ತಿ ಹೋಗಿದ್ದ ಬದುಕಿಗೆ ಬರವಸೆ ಆದವನು ಬಸವಣ್ಣ .

ಸಂಸ್ಕೃತ ಭೋಯಿಷ್ಟವಾದ ಸಾಹಿತ್ಯದ ಹಿಡಿತದ ಮೇಲೆ ಅಪ್ಪಟ ಕನ್ನಡದ ದೇಸಿ ಭಾಷೆ ಸವಾರಿ ನಡೆಯಿತು. ಭಾರತ ಭೂ ಖಂಡದಲ್ಲಿ ೧೨ ನೆ ಶತಮಾನದ ಶರಣ ಕ್ರಾಂತಿ ಜಗವು ಕಂಡ ಶ್ರೇಷ್ಟ ಕ್ರಾಂತಿ, ಕರ್ನಾಟಕವು ಕಂಡ ಅಧ್ಭುತ ಸಾಮಾಜಿಕ ಚಳುವಳಿ . ಶತಮಾನದಿಂದ ಶೋಷಣೆಗೆ ಒಳಗಾಗಿ ಸೊಲ್ಲೆತ್ತದೆ ಬದುಕಿದ ದಿನರ ದಲಿತರ ಶೋಷಿತರು ಒಟ್ಟಾರೆ ಬಸವ ಶಕ್ತಿಯ ನೇತ್ರತ್ವದಲ್ಲಿ ಕೈಗೊಂಡ ಬಹು ದೊಡ್ಡ ಹೋರಾಟದ ಫಲವೇ ವಚನ ಶಾಸ್ತ್ರದ ನಿರ್ಮಾಣ.

ವಚನ ಶಾಸ್ತ್ರವು ಜಗತ್ತಿನ ಮೊಟ್ಟ ಮೊದಲೆನೆಯ ದೇಸಿ ಸಾಹಿತ್ಯದ ಉಗಮವು ಇಲ್ಲಿ ಸಮಾಜದ ಎಲ್ಲಾ ವರ್ಗದ ಕೆಳಸ್ತರದ ಬಡವರ ,ನೊಂದವರ ಪರವಾಗಿ ಯಾವುದೇ ಪೂರ್ವ ಭಾವಿ ತಯಾರಿ ಇಲ್ಲದೆ ಸಮುದಾಯ ಒಳಿತಿಗೆ ಹುಟ್ಟಿಕೊಂಡ ಬಂಡಾಯ ಸಾಹಿತ್ಯ .ಪ್ರವಾಹದ ವಿರುದ್ಧ ಈಜುವ ಪ್ರಾಯಾಸದ ಕೆಲಸ ಭೂಮಿಯ ಮೇಲೆ ಮೊದಲಿಗೆ ಮಾಡಿದ್ದು ಬಸವಾದಿ ಶರಣರು .ವಚನ ಅನುಭಾವ ಸಾಹಿತ್ಯ ಗದ್ಯ ಪದ್ಯಗಳ ಸಮ್ಮಿಳನ, ಆತ್ಮ ಸಾಕ್ಷಿಯಾಗಿ ಬರುವ ನುಡಿಗೆ ಪೂರಕವಾದ ನಡೆ ರೂಪಿಸುವ ,ವ್ಯಕ್ತಿಯ ವಿಕಾಸವೇ ವಚನದ ಗುರಿ .ವಚನಗಳು ಪ್ರಜಾಸತ್ತಾತ್ಮಕ ಪಾರದರ್ಶಕ ಜನಪರ ಹೋರಾಟದ ಪ್ರತೀಕ . ಭಾರತ ದೇಶದಲ್ಲಿ ಮತ್ತು ಜಗತ್ತಿನಲ್ಲಿ ಅಕ್ಷರ ಕ್ರಾಂತಿ ಮಾಡಿದ ಈ ವಚನ ಪ್ರಕ್ರಿಯೆ ಹೆಣ್ಣು ಗಂಡು ಮೇಲು ಕೀಳು ಉತ್ತಮ ಕನಿಷ್ಟ ಎಂಬ ಭೇದವ ಹೊಡೆದು ಹಾಕಿ , ರಾಜನೇ ಆಗಿರಲಿ ರಂಕನೆ ಆಗಿರಲಿ ಅವನಿಗೆ ಅಕ್ಷರ ಜ್ಞಾನ ಕಡ್ಡಾಯವಾಗಿತ್ತು .

ವಚನಗಳು ಪ್ರತಿಜ್ಞೆ ಮತ್ತು ನುಡಿದಂತೆ ನಡೆಯುವ ಸತ್ಯದ ಹಾದಿ.ಜನಪದ ಮತ್ತು ವಚನ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಬೆಳೆದ ದೇಸಿ ಸಾಹಿತ್ಯ ,ನಿರ್ಭಿಡೆ,ಸ್ವತಂತ್ರತೆ ವಚನಗಳ ಜೀವಾಳ .

ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ?

ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ

ಆನೀ ಬಿಜ್ಜಳಂಗಂಜುವೆನೆ ಅಯ್ಯಾ? ಕೂಡಲಸಂಗಮದೇವಾ

ನೀನು ಸರ್ವಜೀವದಯಾಪಾರಿಯಾದ ಕಾರಣ ನೆನಗಂಜುವೆನಲ್ಲದೆ. 

ಇಂತಹ ಒಂದು ಮುಖ್ಯ ಆಶಯ ಹೊಂದಿದ ಬಸವಣ್ಣನವರು ಎಲ್ಲಾ ಶರಣರಲ್ಲಿ ವಿಷಯ ನಿಷ್ಠತೆ ಬೆಳೆಸಲು ಪ್ರೇರೇಪಿಸಿದರು .ವಚನಗಳು ಆತ್ಮವಾಲೋಕನದ ಪ್ರಬಲ ಅಸ್ತ್ರಗಳು ತನ್ನನ್ನು ತಾನೇ ನೋಡುವ ಮಹಾಮಾರ್ಗವಾಗಿದೆ. 

ಸಿರಿಯ ನಿತ್ತೊಡೆ ಒಲ್ಲೆ ಕರಿಯ ನಿತ್ತೊಡೆ ಒಲ್ಲೆ

ಹಿರಿದಿಪ್ಪ ಮಹಾರಾಜ್ಯವ ನಿತ್ತೊಡೆ ಒಲ್ಲೆ

ನಿಮ್ಮ ಶರಣರ ಸೂಳನುಡಿಯ ಒಂದರಗಳಿಗೆ ಇಟ್ಟರೆ

ನಿಮ್ಮನ್ನೇ ಇತ್ತೇ ಕಾಣಾ ರಾಮನಾಥ.

ಜೇಡರ ದಾಸಿಮಯ್ಯನವರ ಈ ವಚನದಲ್ಲಿ ಶರಣರ ವಚನಗಳು ಎಷ್ಟು ಮುಖ್ಯ ಅನ್ನುವದು ಗೊತ್ತಾಗುತ್ತದೆ.ಸಿರಿ ಸಂಪತ್ತು ಕರಿ ಅಂದರೆ ಆನೆ ಹಿರಿದಾದ ರಾಜ್ಯವನ್ನು ನೀಡಿದರೆ ಒಲ್ಲೆ. ನನಗೆ ಶರಣರ ವಚನಗಳು ಸೂಳನುಡಿಗಳನ್ನೂ ಒಂದು ಅರಗಳಿಗೆ ಇಟ್ಟರೆ ಅವರು ದೈವತ್ವವನ್ನೇ ಅಡುವು ಇಡುವುದಾಗಿ ಹೇಳಿದ್ದಾರೆ. 

ಆಧ್ಯಾತ್ಮವು ಬಡವರ ಶೋಷಿತರ ವಿಷಯವಾಗಿರಲಿಲ್ಲ. ಅದು ಅವರಿಂದ ಬಹೂ ದೂರವಾಗಿತ್ತು ಮಹಿಳೆಯರು ಎಲ್ಲಾ ಕ್ಷೇತ್ರದಿಂದ ವಂಚಿತರಾಗಿದ್ದರು. ಮಹಿಳೆ ಮಲದ ಬಾಂಡ,ಭೋಗದ ವಸ್ತು ಎಂದು ತಿಳಿದ ವೈದಿಕರ ಕಟ್ಟಳೆಗಳನ್ನು ಮೀರಿ ಶರಣರು ಪ್ರಮುಖವಾಗಿ ಮಹಿಳಾ ಸ್ವಾತಂತ್ರತೆ ನೀಡಿದರು.

ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸ್ವತಹ ಕಪಿಲ ಮಲ್ಲಿಕಾರ್ಜುನ.ಎಂದು ಹೇಳಿದ ಶಿದ್ಧರಾಮಶಿವಯೋಗಿ ಮಹಿಳೆಯ ಸಂಕೋಲೆಯನ್ನು ಕಿತ್ತೆಸೆದರು.ಪರಿಣಾಮವಾಗಿ ಅಕ್ಕ ಮಹಾದೇವಿ, ಅಕ್ಕ ನಾಗಮ್ಮ, ನಿಲಮ್ಮ, ಗಂಗಾಂಬಿಕೆ, ಲಕ್ಕಮ್ಮ ಕಾಳವ್ವೆ,ನಿ೦ಬೆಕ್ಕ, ಮುಕ್ತಾಯಕ್ಕ,ಸಂಕವ್ವೆ ಸತ್ಯಕ್ಕ ಅಮುಘೆ ರಾಯಮ್ಮ ಮುಂತಾದ ಮಹಿಳೆಯರು ಮುಕ್ತವಾಗಿ ಪುರುಷಪ್ರದಾನ ವ್ಯವಸ್ಥೆ ಧಿಕ್ಕರಿಸಿ ಹೆಣ್ಣು ಗಂಡು ಎಂಬ ಭೇದವ ಅಳಿದರು.

ಮೊಲೆ ಮೂಡಿ ಬಂದರೆ ಹೆಣ್ಣೆ೦ಬರು

ಗಡ್ಡ ಮೀಸೆ ಬಂದರೆ ಗಂಡೆ೦ಬರು

ಒಳಗೆ ಸುಳಿವಾತ್ಮಗಂಡು ಅಲ್ಲ ಹೆಣ್ಣೂ ಅಲ್ಲ ರಾಮನಾಥ -ಜೇಡರ ದಾಸಿಮಯ್ಯ ಜೈವಿಕ ಬದಲಾವಣೆ ಮಾತ್ರ ಗಂಡು ಹೆಣ್ಣು ಲಿಂಗ ನಿರ್ದಾರ. ಎಂತಹ ಸುನದರ ಪ್ರತಿಪಾದನೆ. ಅಕ್ಕ ಮಹದೇವಿಯ೦ತು ತನ್ನ ಗಂಡ ಶ್ರೀಶೈಲ ಮಲ್ಲಿಕಾರ್ಜುನ ಆತನೇ ಒಡನಾಡಿ ಎಂದು ನಂಬಿದ್ದಾಳೆ. ಅವಳು ಲಿಂಗವನ್ನು ಕಾಣಲು ಉಡತಡಿಯಿ೦ದ ಕಲ್ಯಾಣಕ್ಕೆ ಬಂದಳು ಗುರುವ ಕಂಡಳು, ಲಿಂಗವ, ಜಂಗಮ ಕಂಡಳು ಕೊನೆಗೆ ತಾನೇ ಲಿಂಗವಾದಳು.

ಆಧ್ಯಾತ್ಮವು ಬಡವರ ಶೋಷಿತರ ವಿಷಯವಾಗಿರಲಿಲ್ಲ. ಅದು ಅವರಿಂದ ಬಹೂ ದೂರವಾಗಿತ್ತು ಮಹಿಳೆಯರು ಎಲ್ಲಾ ಕ್ಷೇತ್ರದಿಂದ ವಂಚಿತರಾಗಿದ್ದರು.

ಮಹಿಳೆ ಮಲದ ಬಾಂಡ,ಭೋಗದ ವಸ್ತು ಎಂದು ತಿಳಿದ ವೈದಿಕರ ಕಟ್ಟಳೆಗಳನ್ನು ಮೀರಿ ಶರಣರು ಪ್ರಮುಖವಾಗಿ ಮಹಿಳಾ ಸ್ವಾತಂತ್ರತೆ ನೀಡಿದರು.

ಲಿಂಗವೆನ್ನೇ ಲಿಂಗೈಕ್ಯವೆನ್ನೆ,ಸಂಗವೆನ್ನೇ ಸಮರಸವೆನ್ನೇ

ಆಯಿತೆನ್ನೇ ,ಆಗದೆನ್ನೇ ,ನೀನೆನ್ನೆ ,ನಾನೆನ್ನೇ

ಚೆನ್ನಮಲ್ಲಿಕಾರ್ಜುನಯ್ಯ.

ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.

ಪ್ರಾಯಷ್ಯ ಅಕ್ಕನ ಈ ವಚನ ಶರಣರ ಉದಾತ್ತಿಕರಣದ ಮಹಾಕಲ್ಪನೆ ಎತ್ತಿ ತೋರುತ್ತದೆ, ನಿರಾಳತೆ, ಸರಳತೆ ಬದುಕಿನ ಸಮಗ್ರತೆಯನ್ನು ಅಕ್ಕ ಒಂದೇ ವಚನದಲ್ಲಿ ಹೇಳಿದ್ದಾಳೆ.

ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ?

ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿ

ದೊಡೆಂತಯ್ಯ?

ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?

ಚೆನ್ನಮಲ್ಲಿಕಾಜುನದೇವ ಕೇಳಯ್ಯ

ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಇಂದಿನ ತಾಪ ಬೇಸರ ಅಸಮಾಧಾನಗಳಿಗೆ ಅಕ್ಕನ ಆಶಯದ ವಚನ ಸ್ಥೈರ್ಯ ಧೈರ್ಯ ತುಂಬುತ್ತದೆ.

ಕಾಯದ ಕಪಟವು ಬಿಡದೆನಗೆಂತಯ್ಯಾ? ಮಾಯಾ ಪ್ರಪಂಚದ ಬಲೆಗೆ ಸಿಲುಕಿದೆ!

ವಾಯದ ಸಂಭ್ರಮ ಹಿಡಿದವಗೆ ಇದಾವ ಭಾವದ ಮುಖವೆಂದರಿಯದೆ ಜ್ಞಾನಶೂನ್ಯವಾಗಿರ್ದೆನಯ್ಯಾ!

ಅಷ್ಟಮದಗಳನ್ನು ಸೃಷ್ಟಿಸಿ ಇದ್ದಿರಾಗಿ ಕಟುಗ್ರದಿಂದೆ ನಿಮ್ಮ ಕಾಣಲೀಯವು ಎನ್ನ ತನುವಿನ ಗುಣವು

ಮದ ಮರ್ಕಟತನವು ಬಿಡದು ನೀನೇ ಗತಿ, ಕೂಡಲಸಂಗಮದೇವಾ,

ನಿಮ್ಮ ಶರಣರ ಇರವನರಿಯದೆ ಭವ ದುಖಿಃಯಾದೆನಯ್ಯಾ.

ಶರಣರ ಜೀವನ ಸಮುದಾಯದ ಒಳಿತು ಲೋಕ ಕಲ್ಯಾಣವೇ ಬಸವ ಕ್ರಾಂತಿಯ ವಚನಗಳ ಉದ್ದೇಶ. ಶರಣರ ಅರಿವು ಆಚಾರ ಅನುಭಾವವ ನರಿಯದೆ ಬದುಕಿದರೆ ಅದು ಮರ್ಕಟನ ಬದುಕು.ಮನುಷ್ಯ ಮೊದಲು ತನ್ನನ್ನು ಶೋದಿಸಬೇಕು ಆತ್ಮಾವಲೋಕನ, ಆತ್ಮ ಶೋಧನ ,ತನ್ನ ತಾನರಿವ ಮಹಾ ಕಾರ್ಯವೇ ಸಾಧಕನ ಸಂತೃಪ್ತ ಭಾವ .

ಆ ಭಾವವನ್ನು ಬಸವಣ್ಣ ಹೀಗೆ ಹೇಳಿದ್ದಾರೆ .

ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ

ಮನವು ನಿಂದಲ್ಲಿ ನಿಲಲೀಯದೆನ್ನ ಮನವು

ಹೊಂದಿದಲ್ಲಿ ಹೊಂದಲೀಯದೆನ್ನ ಮನವು

ಕೂಡಲಸಂಗಮದೇವಾ ನಿಮ್ಮ ಚರಣ ಕಮಲದಲ್ಲಿ

ಭ್ರಮರನಾಗಿರಿಸು ನಿಮ್ಮ ಧರ್ಮ.

ಚಂಚಲತೆ ಮನುಷ್ಯನ ಏಕಾಗ್ರತೆಯನ್ನು ಕಾಡುತ್ತದೆ ,ಅಷ್ಟಮದಗಳ ಆಶೆ ಆಮಿಷ ಬಯಕೆ ಗಳು ಮನುಷ್ಯನನ್ನು ತುಂಬಾ ಸಂಕುಚಿತನನ್ನಾಗಿ ಮಾಡುತ್ತವೆ . ದುಂಬಿ ಪರಿಮಳಕ್ಕಾಗಿ ಹೂವನ್ನು ಆರಿಸುವಂತೆ ಸಮಾಜದ ಪರಿಮಳದ ಆಕರ್ಷಣೆ ಬಸವಣ್ಣನವರ ಆಶಯವಾಗಿದೆ. ಇದು ಎಲ್ಲಾ ಶರಣರ ಕಲ್ಪನೆಯೂ ಕೂಡ .

ನಿರಾಕಾರ ನಿರ್ಗುಣ ನಿರ್ಮೋಹ ಶರಣರ ಆಶಯಗಳು -ಹೆಣ್ಣು ಹೊನ್ನು ,ಮಣ್ಣು ಶರಣರ ವಸ್ತುಗಳಲ್ಲ . ಅವರಿಗೆ ಪ್ರಾಪಂಚಿನಲ್ಲಿ ಪಾರಮಾರ್ಥಕತೆ ಕಾಣಬೇಕೆನ್ನುವ ಉತ್ಕಟ ಬಯಕೆ ಇದೆ . ಇದನ್ನು ಶ್ರೀ ಸಿದ್ದರಾಮರ ವಚನದಲ್ಲಿ ಕಾಣುತ್ತೇವೆ

ನಿನ್ನನೊರಿಸುವಡೆ ನಿರಂಹಭಾವವೇ ತೃಪ್ತಿ;

ಅನ್ಯ ಭಾವಂಗಳನೊಲ್ಲೆನಯ್ಯಾ

ಹೊನ್ನು ಹೆಣ್ಣು ಮಣ್ಣು ಮುನ್ನವೇ ,

ಸಟೆ ಮಾಡಿ ದಾಸೋಹದಲ್ಲಿ ಸುಖಿಯಾದೆನಯ್ಯಾ,

ಕಪಿಲ ಸಿದ್ಧ ಮಲ್ಲೇಶ್ವರಾ !!

ಮನ ವಿಕಾರ ಕಾಯವಿಕಾರ ಇಂದ್ರಿಯ ವಿಕಾರಗಳು ನಡಿಯೋಳಗಿನ ಸುಳಿವು ,ಆ ಸುಳಿವಿನಲ್ಲಿ ಸಿಗದೇ ಶರಣರ ಚಿಂತನೆಗೆ ಎಡೆ ಮಾಡಿಕೊಡಲು ಅಪ್ಪ ಬಸವ ವಿನಂತಿಸಿದ್ದಾರೆ .

ಕಾಯವಿಕಾರ ಕಾಡಿಹುದಯ್ಯ!

ಮನೋವಿಕಾರ ಕೂಡಿಹುದಯ್ಯ!

ಇಂದ್ರಿಯವಿಕಾರ ಸುಳಿದಿಹುದಯ್ಯ!

ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!

ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!

ಅನುಪಮಸುಖ ಸಾರಾಯ ಶರಣರಲ್ಲಿ,

ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

ಶೋತ್ರ ಸನಾತನಿಗಳ ಸುಖದ ಕಲ್ಪನೆಯನ್ನು ಸಾರ ಸಗಟಾಗಿ ಬಸವಣ್ಣ ತಳ್ಳಿ ಹಾಕಿದ್ದಾನೆ, ಅನುಭಾವ ಲಿಂಗಮುಖಿಯಾಗಿರಬೇಕು ಅಂತಹ ಅನುಭಾವವೇ ಬಸವಣ್ಣ ಜೀವಾಳ. 

ಮಾತಿನಲ್ಲಿ ಶೋತ್ರ ಸುಖದ ನುಡಿಯಬಹುದಲ್ಲದೆ,

ಮಾಡುವ ಸತ್ ಕ್ರಿಯೆಯಿಂದ ಭಕ್ತನೆನಿಸಬಾರದು;

ಅರ್ಥ-ಪ್ರಾಣಾಭಿಮಾನವಾರಿಗೆಯೂ ಸಮನಿಸದು.

ಲಿಂಗಮುಖದಲ್ಲುದಯವಾದ ಶರಣಂಗಲ್ಲದೆ,

ಅಯ್ಯಾ ಕೂಡಲಸಂಗಮನ ಶರಣರ ಭಕ್ತಿಭಂಢಾರವು ಎನಗೆಂತು ಸಾಧ್ಯವಪ್ಪುದು ಹೇಳೆನ್ನ ತಂದೆ?"

ಅಂದಿನ ವೈದಿಕ ಪದ್ದತಿಯನ್ನು ಧಿಕ್ಕರಿಸಿದ ಶರಣರು ,ವೇದ ಶಾಸ್ತ್ರ ಆಗಮಗಳನ್ನು ,ಪುರಾಣ ಪುಣ್ಯ ಕಥೆಗಳನ್ನು ಸಂಪೂರ್ಣವಾಗಿ ವಿರೋದಿಸಿದ್ದಾರೆ.

ವೇದಕ್ಕೆ ಒರೆ ಕಟ್ಟುವೆ ಶಾಸ್ತ್ರಕ್ಕೆ ನಿಗಳನಿಕ್ಕುವೆ

ಆಗಮದ ಮೂಗ ಕೊಯ್ಯುವೆ,

ನೋಡಯ್ಯ ಮಹಾದಾನಿ ಕೂಡಲಸಂಗಮದೇವ,

ಮಾದರ ಚೆನ್ನಯ್ಯನ ಮನೆ ಮಗ ನಾನಯ್ಯ,

ಬಸವಣ್ಣ ಅಂದಿನ ಜಿಡ್ಡುಗಟ್ಟಿದ ಧಾರ್ಮಿಕ ಸಾಮಾಜಿಕ ಆರ್ಥಿಕ ರಾಜಕೀಯ ವ್ಯವಸ್ಥೆಗೆ ಹೊಸ ಚೈತನ್ಯ ನೀಡಿದರು. ಆ ಚೈತನ್ಯ ಚಿಂತನ ಚಿಳುಮೆಯೇ ವಚನಗಳು 

ಮಾತಿನ ಮಾತಿಂಗೆ ನಿನ್ನ ಕೊಂದಿಹೆನೆ೦ದಿಹರು

ಎಲೆ ಹೋತೆ ಅಳು ಕಂಡ ವೇದನ್ನೊದಿದವರ ಮುಂದೆ

ಅಳು ಕಂಡ ಶಾಸ್ತ್ರವನ್ನೊದಿದವರ ಮುಂದೆ ಅಳು ಕಂಡ .

.....................

ಎಂದು ಬಸವಣ್ಣ ವೇದ ಆಗಮ ಶಾಸ್ತ್ರಗಳನ್ನು ವಿಡ೦ಬಿಸಿದ್ದಾರೆ .

ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆನಯ್ಯ. ಅಭಿವ್ಯಕ್ತಿಯ ಸ್ವಾತಂತ್ರ ಶರಣರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ.

ಅಂದು ಸಾಹಿತ್ಯ ದಲಿತರಿಗೆ ಬಡವರಿಗೆ ನಿಲುಕದ ವಸ್ತು, ಕಬ್ಬಿಣದ ಕಡಲೆಯಾಗಿತ್ತು. ಆದರೆ ಬಸವಾದಿ ಶರಣರ ಕ್ರಾಂತಿಯ ಫಲವಾಗಿ ಅಂಜಿಕೆ ಅಳಕು ಕೀಳರಿಮೆ ಹೋಗಿ ಮುಕ್ತ ಅಭಿವ್ಯಕ್ತಿ ಹೊರಹೊಮ್ಮಿತು. ಪರಿಣಾಮವಾಗಿ ೭೭೦ ಅಮರಗಣಗಳು ಮತ್ತು ೩೨ ವಚನಕಾರ್ತಿಯರು ವಚನ ಬರೆದರು.

          ಆಫ್ಘಾನಿಸ್ತಾನದ ಮೊಹಮ್ಮದ ಮರುಳ ಶ೦ಕರನಾದ, ಕಾಶ್ಮೀರ ರಾಜ ಮಹಾದೇವ ಭೂಪಾಲ -ಮೋಳಿಗೆ ಮಾರಯ್ಯನಾದ, ಕಾಶಿಯ ರಾಜ ಕಲ್ಯಾಣದಲ್ಲಿ ಶಿವ ಲೆಂಕ ಮಂಚಣ್ಣನಾದ, ಕಾಶ್ಮೀರಿ ರಾಜಕುಮಾರಿ ಬೊಂತಾದೇವಿ ಕಲ್ಯಾಣದಲ್ಲಿ ಸೇವೆಗೆ ನೆಲೆ ನಿಂತಳು. ತೆಲುಗು ಮಸಣೆಶ, ಅಂಡಾಳರು ಎಲ್ಲರೂ ಕಲ್ಯಾಣದತ್ತ ಮುಖ ಮಾಡಿದ್ದರು.

ದೇಸಿಯ ಸಾಹಿತ್ಯದಲ್ಲಿ ಅನುಭಾವ,ಆಧ್ಯಾತ್ಮ,ಚಿಂತನೆ,ಸಾಮಾಜಿಕ ಪ್ರಜ್ಞೆ,ಸಮುದಾಯದ ಏಳಿಗೆ ವ್ಯಕ್ತಿವ ವಿಕಾಸ, ಭಾವ ಭದ್ರತೆ, ವಿಡ೦ಬನೆ, ಟೀಕೆ, ಗಣಾಚಾರ, ದರ್ಶನ ವಿಜ್ಞಾನ, ಕಾಲಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಶರಣರು ಚಿಂತಿಸಿದ್ದಾರೆ, ವಚನ ಪ್ರಯೋಗ ಮಾಡಿದ್ದಾರೆ. 

ನೆಲದ ಬೊಂಬೆಯ ಮಾಡಿ ಜಲವ ಬಣ್ಣವನುಡಿಸಿ

ಹಲವು ಪರಿಯಾಶ್ರಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ

ವಾಯುವನಲಸಂಚಕ್ಕೆ ಅರಳೆಲೆಯ

ಶೃಂಗಾರವ ಮಾಡಿ ಆಡಿಸುವ ಯಂತ್ರವಾಹಕನಾರೋ ?

ಬಯಲ ಕಂಭಕ್ಕೆ ತಂದು ಸಯವೆಂದು ಪರವ ಕಟ್ಟಿದೆಡೆ

ಸಯವದ್ವಯವಾಯಿತ್ತು-ಏನೆಂಬೆ ಗುಹೇಶ್ವರ.

ಶರಣರ ವೈಚಾರಿಕ ಕ್ರಾಂತಿಯ ಹರಿಕಾರರು ಆದರೆ ಆಚಾರ್ಯರಂತೆ ಬೋಧಿಸಿದವರಲ್ಲ, ನುಡಿದಂತೆ ನಡೆದವರು.ಇಡಿ ಭೂಮಿಯನ್ನೆ ಶ್ರಿನ್ಗಾರಗೊಲಿಸಿದ ಅಲ್ಲಮರು ಬಗೆ ಬಗೆಯ ಪರಿಯಾಶ್ರಮದಲ್ಲಿ ತಮ್ಮ ಮನದ ಅನುಭವ ಕಂಡಿದ್ದಾರೆ ಆದರೆ ಕೊನೆಗೆ ಕಾಣುವ ಬಯಲು ,ಉದಾತ್ತಿಕರಣ ಶರಣರ ಮೊದಲೆನೆಯ ಮತ್ತು ಕೊನೆಯ ಆಶಯ,

ಸನಾತನಿಗಳು ವೈದಿಕರು ಜಾತಿವಾದಿಗಳು ಇಂತಹ ದೇಸಿ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕಲು ದಾರಿಕಾಯುತ್ತಿದ್ದರು. ವರ್ಣ ಸಂಕರ ಒಂದು ನೆಪ ಮಾಡಿ ಎರೆಡೆಂಬತ್ತು ಕೋಟಿ ವಚನಗಳು ಸುಟ್ಟು ಕರಕಲಾದವು. ಬಸವಣ್ಣನ ನಂತರ ಎಡೆಯೂರ ಸಿದ್ಧಲಿಂಗ ಯತಿಗಳು, ನಂತರದಲ್ಲಿ ಪ್ರೌಡ ದೇವರಾಯನ ಕಾಲದಲ್ಲಿ ಚಾಮರಸ, ಲಕ್ಕಣ್ಣವರಿಂದ ವಚನಕ್ಕೆ ತಕ್ಕ ಮಟ್ಟಿಗೆ ಪುನರ ಅಧ್ಯಯನ ನಡೆಯಿತು ಮತ್ತು ಕಾಲಮುಖಿ ಶೈವರಿಂದ ಆರಾಧ್ಯರಿಂದ ವಚನ ಸಾಹಿತ್ಯದಲ್ಲಿ ಕಲಬೆರಕೆ ಆರಂಭವಾಯಿತು. ವಚನಗಳಲ್ಲಿ ಸಂಸ್ಕೃತ ಸೇರ್ಪಡೆ ಹಾಗೂ ವೀರಶೈವ ಪದದ ಬಳಕೆ ನಡೆದು ಹೋಗಿದ್ದು ನಮಗೆ ನುಂಗಲಾರದ ತುತ್ತಾಗಿದೆ.

ಕನ್ನಡಕ್ಕೆ ನೀಡಿದ ವಿಶಿಷ್ಟ ಸಾಹಿತ್ಯಪ್ರಕಾರ ವಚನ ವೀರಶೈವ ಸಾಹಿತ್ಯದ ಮೊದಲ ಬೆಳೆ. ಈ ಸಾಹಿತ್ಯವನ್ನು ಐತಿಹಾಸಿಕವಾಗಿ ಬಸವ ಪೂರ್ವಯುಗ, ಬಸವಯುಗ, ಬಸವೋತ್ತರಯುಗ ಎಂದು ವಿಭಾಗಿಸುತ್ತಾರೆ. ಶಂಕರದಾಸಿಮಯ್ಯ, ಜೇಡರದಾಸಿಮಯ್ಯ, ಕೊಂಡಗುಳಿ ಕೇಶಿರಾಜ ಮೊದಲಾದವರು ಬಸವಪೂರ್ವಯುಗದ ಶರಣರು. ಇವರಲ್ಲಿ ಚಾಳುಕ್ಯ ಜಯಸಿಂಹನ ಅರಸಿ ಸುಗ್ಗಲೆಯ ಗುರುವಾದ ಜೇಡರದಾಸಿಮಯ್ಯನ ವಚನಗಳು ಲಭಿಸಿವೆ. 10ನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿರಬಹುದಾದ ಈತನ ಗುರು ಶಂಕರದಾಸಿಮಯ್ಯನೂ ವಚನಗಳನ್ನು ರಚಿಸಿರಬಹುದು.

ಜೇಡರ ದಾಸಿಮಯ್ಯನ ಹದಗೊಂಡ ಶೈಲಿಯೂ, ಈ ಹೇಳಿಕೆಗೆ ಪುಷ್ಟಿ ನೀಡುತ್ತದೆ. ಅದಕ್ಕಾಗಿ ಈ ಸಾಹಿತ್ಯಪ್ರಕಾರದ ಪ್ರಾಚೀನತೆ 10ನೆಯ ಶತಮಾನದಷ್ಟು ಹಿಂದೆ ಸರಿಯಬಹುದಾಗಿದೆ. ಈ ಕಾಲದ ವಚನಗಳು ಅಲ್ಲಲ್ಲಿ ಅಂಶ, ಲಯ ಒಳಪ್ರಾಸ ಯುಕ್ತವಾಗಿದ್ದು ಗಾತ್ರದಲ್ಲಿ ಚಿಕ್ಕವಾಗಿವೆ.

ಕಡೆಗೀಲಿಲ್ಲದ ಬಂಡಿ ಹೊಡೆಗಡೆಯ ದಿಪ್ಪುದೆ,

ಎತ್ತಪ್ಪೆ ಶರಣಂಗೆ ತೂತ್ತೆಪ್ಪೆ ಶರಣಂಗೆ,

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ,

ನಾನೊಂದು ಸುರಿಗೆಯನೇನೆಂದು ಹಿಡಿಯುವೆನು-

ಇತ್ಯಾದಿಯಾದ ಜೇಡರ ದಾಸಿಮಯ್ಯನ ವಚನಗಳು ಇದಕ್ಕೆ ನಿದರ್ಶನ. ಮುಂದಣ ಯುಗದ ವಚನ ಸಾಹಿತ್ಯದ ಮೇಲೆ ಇವುಗಳ ಪ್ರಭಾವ ಕೆಲಮಟ್ಟಿಗೆ ತೋರಿಬರುತ್ತದೆ. ಈ ಯುಗದ ವಚನ ಸಾಹಿತ್ಯ ಈಗ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದರೂ ಶೋಧಿಸಿದಲ್ಲಿ ಹೊಸ ವಚನಗಳು, ವಚನಕಾರರು ಹೊರಬರುವ ಸಂಭವವಿದೆ.

ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯಭಾಗದಲ್ಲಿ ಮೈಮುರಿದು ಎದ್ದ ವೀರಶೈವ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ, ಚನ್ನಬಸವ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ ಇವರು ಸುಪ್ರಸಿದ್ಧ ವಚನಕಾರರು. ಈ ಕಾಲದ ವಚನ ಸಂಖ್ಯೆ ಹಲವು ಸಾವಿರ, ಹಲವು ಲಕ್ಷ, ಕೋಟಿ ಎಂಬ ಹೇಳಿಕೆಗಳಿವೆ.

ಕನ್ನಡಭಾಷೆಯ ಅಭಿವ್ಯಕ್ತಿ ಸಾಧ್ಯತೆಯನ್ನು ತಳಮಟ್ಟ ಕೈವಶ ಮಾಡಿಕೊಂಡ ವಚನಕಾರರು ಆ ಸಾಧ್ಯತೆಯನ್ನು ಇನ್ನೂ ಹಿಗ್ಗಿಸಿದರು. ಅನುಭವ ಅಭಿವ್ಯಕ್ತಿಗಳಲ್ಲಿ ಪ್ರಾಮಾಣಿಕತೆಯನ್ನು ಸಾಧ್ಯ ಮಾಡಿ ತೋರಿಸಿದರು. ಈ ಆಂದೋಲನದ ಅಧಿನಾಯಕ ಬಸವಣ್ಣ. ಕಾರ್ಯಚಟುವಟಿಕೆಗಳ ಕೇಂದ್ರ ಸ್ಥಳ ಕಲ್ಯಾಣ.

ಅಂದಿನ ಅನುಭವಮಂಟಪದ ಅಧ್ಯಕ್ಷನಾಗಿ ಮೆರೆದವನೆಂದರೆ ಅಲ್ಲಮಪ್ರಭು. ಈತ ಹಿರಿಯ ಆತ್ಮಜ್ಞಾನಿ. ನಿಜವಾದ ವೈರಾಗ್ಯವನ್ನು ಪಡೆದವ. ತನಗಿಂತ ಕಿರಿಯರಾದ ಅಕ್ಕಮಹಾದೇವಿ. ಬಸವಣ್ಣ, ಸಿದ್ಧರಾಮ ಮೊದಲಾದವರ ಧ್ಯೇಯ ಧೋರಣೆ ಗಳಲ್ಲಿನ ಇತಿಮಿತಿಗಳನ್ನು ಎತ್ತಿ ತೋರಿಸಿ ಅವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ದು ಹಿರಿಯ.

ಈತ ತನ್ನ ವಚನಗಳಲ್ಲಿ ತಾನು ಕಂಡ ಸತ್ಯವನ್ನು ತನಗೆ ಹಿಡಿಸದ ಆಚಾರವಿಚಾರಗಳನ್ನು ತೀಕ್ಷ್ಣವಾಗಿ ಪ್ರಸ್ತಾಪಿಸಿದ್ದಾನೆ. ಇವನಿಗೆ ತನ್ನವರು ಪರರು ಎಂಬ ಹಂಗಿಲ್ಲ. ಅನಾಚಾರವನ್ನು ಎಲ್ಲೇ ಕಾಣಲಿ ಈತ ಟೀಕಿಸುತ್ತಾನೆ. ವಚನ ಸಾಹಿತ್ಯದಲ್ಲೆಲ್ಲ ಈತನ ಅತಿ ವಚನಗಳು ಅತಿ ಕಠಿಣವೆನಿಸಿವೆ. ಈತನ ಬೆಡಗಿನ ವಚನಗಳಂತೂ ಪಾರಿಭಾಷಿಕ ಸಂಕೇತಗಳಿಂದ ಕೂಡಿ, ಭೇದಿಸಲಸಾಧ್ಯವಾಗಿವೆ.

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದೊಡೇನು ?

ಹಸಿವು ಹೋಹುದೇ ? ಅಂಗದ ಮೇಲೆ ಲಿಂಗಸ್ವಾಯತವಾದರೇನು ?

ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ ಆ ಕಲ್ಲು ಲಿಂಗವೆ ?

ಆ ಮೆಳೆ ಭಕ್ತನೆ ? ಇಟ್ಟಾತ ಗುರುವೆ ? ಇಂತಪ್ಪವರ

ಕಂಡಡೆ ನಾನು ನಾಚುವೆನಯ್ಯ ಗುಹೇಶ್ವರ.

ಅಲ್ಲಮನ ವಚನಗಳು ಬಸವಣ್ಣ ಅಥವಾ ಮಹದೇವಿಯಕ್ಕನ ವಚನಗಳಷ್ಟು ಜನಪ್ರಿಯವಾಗಿರದಿದ್ದರೂ ತಮ್ಮ ಆಳವಾದ ತತ್ತ್ವಸಾರದಿಂದ, ಶೈಲಿಯಿಂದ, ಕಾವ್ಯತೆಯಿಂದ ಬಹು ಚೆನ್ನಾಗಿವೆ. ಉಳಿದವರಲ್ಲಿನ ಅತಿರೇಕಗಳಾವುವೂ ಅಲ್ಲಮನಲ್ಲಿ ಕಾಣವು. ಇದೊಂದೇ ದೃಷ್ಟಿಯಿಂದಲಾದರೂ ಇವನ ವಚನಗಳು ವ್ಯಾಸಂಗ ಯೋಗ್ಯವಾಗುತ್ತವೆ.

 ಭಕ್ತಿಭಂಡಾರಿ ಎಂಬ ಕೀರ್ತಿಗೆ ಭಾಜನನಾದ ಬಸವಣ್ಣನ ವಚನಗಳಲ್ಲಿ ಭಕ್ತಿಯ ಅತಿರೇಕವನ್ನು ಕಾಣುತ್ತೇವೆ.ಹೆಂಗರುಳಿನ ಸಹಾನುಭೂತಿಯನ್ನು ಕಾಣುತ್ತೇವೆ. ಒಂದು ದೇಶದ ಮಹಾಮಂತ್ರಿಯಾಗಿದ್ದರೂ ಆತ ಅಹಂಕಾರಪಟ್ಟವನಲ್ಲ. ಜಂಗಮಸೇವೆಯೇ ಲಿಂಗದ ಸೇವೆ ಎಂದು ತನ್ನ ತನು,ಮನ, ಧನಗಳನ್ನು ಜಂಗಮ ದಾಸೋಹಕ್ಕಾಗಿ ಮುಡಿಪಾಗಿಟ್ಟ ಭಕ್ತ ಶ್ರೇಷ್ಠನೀತ. ಅನುಕಂಪ, ಜೀವನಾನುಭವದ ಸಾರ ರಸಾದ್ರ್ರಹೃದಯ, ಲೋಕಹಿತಸಾಧನೆಯ ಉದ್ದೇಶ-ಇವು ಕ್ಷಣ ಕ್ಷಣಕ್ಕೂ ಈತನ ವಚನಗಳಲ್ಲಿ ಕಾಣುತ್ತವೆ. ಮತೋಪದೇಶಕ್ಕೆಂದೇ ಕಟ್ಟಿದವಾದರೂ ಈತನ ವಚನಗಳಲ್ಲಿ ಹೃದ್ಯವಾದ, ರಸಭಾವಗಳನ್ನು ಮಿಡಿವ ಮಾತುಗಳು ಉದ್ದಕ್ಕೂ ಬರುತ್ತವೆ.

 

 

 

 

 

 

 

 

 

 

 

 

 

 

 

 

ಅಧ್ಯಾಯ-   4.3

ಸೂಫೀ ತತ್ವ ಚಿಂತನೆ

      ಸಂತರು ಅದಕ್ಕಿಂತ ಮಿಗಿಲಾಗಿ ಅಖಂಡ ಮಾನವ ಸಮುದಾಯದ ಹಿತಾಶಕ್ತಿಯ ಬಗ್ಗೆ, ಬದುಕಿನ ಬಗ್ಗೆ, ಧರ್ಮದ ಗಡಿಗಳನ್ನು ದಾಟಿ ಚಿಂತಿಸಿದ ಮತ್ತು ಅದಕ್ಕಾಗಿ ಲೋಕಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ಸೂಫಿಗಳು ವಿಶ್ವ ಧರ್ಮಿಗಳಾಗಿದ್ದಾರೆ. ಒಂದು ಕಾಲದಲ್ಲಿ ಇವರು ಬೌದ್ಧಿಕವಾಗಿ ಎಲ್ಲೆಡೆ ಅಲೆದಾಡಿದ್ದಾರೆ. ಇಂದು ಸಂಸ್ಕತಿ ಪ್ರಿಯರು, ಮಾನವ ಕಲ್ಯಾಣಾಕಾಂಕ್ಷಿಗಳ ಚಿರಂತನ, ಸತ್ಯ ಶೋಧಕರ ಹೃದಯಗಳಲ್ಲಿ ಜೀವ ಸಂಚಾರವನ್ನು ಉಂಟು ಮಾಡುತ್ತಿರುವ ಆತ್ಮಸಾಕ್ಷಿಯ ಪ್ರತೀಕಗಳಾಗಿದ್ದಾರೆ.

ಸೂಫಿಪಂಥದಲ್ಲಿ ಆಧ್ಯಾತ್ಮಕ್ಕೆ ಪ್ರಮುಖ ಸ್ಥಾನ. ನೊಂದ ಜನರಿಗೆ ಸಾಂತ್ವನ ಹೇಳುವ ಹಾಗೂ ನೆಲೆಯನ್ನು ಕಂಡುಕೊಳ್ಳುವ ಅಂದರೆ ದೈವತ್ವದ ಜನರ ಸಂಬಂಧ, ಪ್ರೀತಿ ಪಾತ್ರದಿಂದ, ನಂಬಿಕೆಯಿಂದ, ಏನನ್ನು ಸಾಧಿಸಬಹುದು ಎಂಬುದನ್ನು ಸೂಫಿಪಂಥ ನೆಲೆಯಾಗಿ ತೋರಿಸಿಕೊಟ್ಟಿದೆ. ಈ ಹಿನ್ನೆಲೆಯಿಂದ ಭಾರತಕ್ಕೆ ಬಂದ ಮೊದಲ ಸೂಫಿ ಸಂತನಾದ ಅಲೀ ಉಲ್ ಹುಜವೇರಿ ಅವರು ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಂಡವರು.

ಸು. 11ನೇ ಶತಮಾನದಿಂದ ಕ್ರಿ.ಶ.ಸು. 18ನೇ ಶತಮಾನದವರೆಗಿನ ಹಲವಾರು ಸೂಫಿ ಸಂತರುಗಳು ಭಾರತದ ವಿವಿಧ ಸ್ಥಳಗಳಾದ ದೆಹಲಿ, ಲಾಹೋರ್, ಮುಲ್ತಾನ್, ದೌಲತಾಬಾದ್, ಕಲಬುರ್ಗಿ, ಬೀದರ್, ವಿಜಯಪುರ, ಮಂಗಳೂರು ಇತ್ಯಾದಿ ಕಡೆಗಳಲ್ಲಿ ನೆಲೆಸಿದ್ದಾರೆ. ಇವರ ಮಧ್ಯಯೇ ಮಹಿಳಾ ಸೂಫಿಗಳು ಹುಟ್ಟಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.

ವಿಶ್ವದಾದ್ಯಂತವಾಗಿ ಮಹಿಳಾ ಸೂಫಿಗಳು ರಾಬಿಯಾ ಅಲ್ ಅದವಿಯಾ, ಹಬಾ ಖಾತೂನ್, ಬೀಬಿ ನಫೀಸಾ, ಮೌಲಾನಾ ರೊಮಿಯಾ, ಹಜ್ಜಾಜಾಕಿಯ್ಯ, ಬೀಬಿ ಫಾತಿಮಾ ಸಾಮ್, ಬೀಬಿ ಜುಲೇಖಾ, ಮಾಹಿಸಾಹಿಬಾ, ಜಹನಾರಾಬೇಗಂ, ಸಂತ ಹಜರತ್ ಬಾಬಾಜಾನ್(ಗುಲ್‍ರಖ್) ಇತ್ಯಾದಿಯಾಗಿ ಗುರುತಿಸುತ್ತ ಸೂಫಿ ಪಂಥದ ಹಿಂದಿನ ಬೆಳವಣಿಗೆಯಿಂದ ಮಹಿಳೆಯರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಶತಮಾನದುದ್ದಕ್ಕೂ ಪುರುಷರು ಮತ್ತು ಮಹಿಳೆಯರು ಜೊತೆ ಜೊತೆಯಾಗಿ ಸೂಫಿ ಪಂಥವನ್ನು ಮುನ್ನೆಡಿಸಿದ್ದಾರೆ. ವಾಸ್ತವವಾಗಿ ಸೂಫಿಪಂಥ ಸೂಫಿಧರ್ಮ ಎಂದು ಹೇಳುವಷ್ಟು ತನ್ನ ಪ್ರಭಾವ ಬೀರಿಕೊಂಡಿದೆ.

ಇಸ್ಲಾಂ ಧರ್ಮವು ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ ಹುಟ್ಟಿಕೊಂಡಿರುವ ಈ ಸೂಫಿಪಂಥ ಮುಖ್ಯವಾಗಿ ಎಲ್ಲವನ್ನು ತ್ಯಜಿಸಿ ದೇಹ ದಂಡನೆಯ ಮೂಲಕ ಪರಮಾತ್ಮನನ್ನು ಆರಾಧಿಸುವುದು ಸೂಫಿ ಪಂಥದ ತತ್ವವಾಗಿದೆ. ಅರಬ್ ದೇಶಗಳಲ್ಲಿ ಹುಟ್ಟಿಕೊಂಡಿರುವ ಈ ಪಂಥವು ತನ್ನ ನಿರ್ದಿಷ್ಟ ಧೋರಣೆಗಳಿಂದ ತಮ್ಮ ಸಾರಕತ್ವ, ಪವಾಡ ಮತ್ತು ಸಿದ್ದತ್ವದಿಂದ ಜನರನ್ನು ಆಕರ್ಷಿಸುತ್ತ ಇಸ್ಲಾಂ ತತ್ವವನ್ನು ಸಾರುತ್ತಿತ್ತು.

ಆದರೆ ರಾಜಶ್ರಯದಿಂದ ಕೂಡಿದ ಸೂಫಿಸಂ ಮುಂದಿನ ದಿನಗಳಲ್ಲಿ ಇಸ್ಲಾಂ ತತ್ವಗಳ ಜೊತೆಗೂಡಿಸಿಕೊಂಡು, ಯಾವಾಗ ಪ್ರಭುತ್ವ ಜನವಿರೋಧಿಯಾದಾಗ ಸೂಫಿಸಂ ವಿರೋಧ ವ್ಯಕ್ತಪಡಿಸಿರಬಹುದು. ಹೀಗಾಗಿ ಸೂಫಿಗಳು ದೇಶದ ಬೇರೆ ಬೇರೆ ಕಡೆಗಳಲ್ಲಿ ನೆಲಸಲು ಪ್ರಯತ್ನಿಸಿದ್ದಾರೆ. ಇದರಿಂದ ಸೂಫಿಗಳು ಭಾರತಕ್ಕೆ ಪ್ರವೇಶಗೊಂಡಿದ್ದಾರೆ. ಭಾರತಕ್ಕೆ ಬಂದ ನಂತರ ಸೂಫಿಗಳ ಬೆಳವಣಿಗೆ ಬೇರೆಯಾಗಿದೆ.

ಭಾರತದಲ್ಲಿ ಸೂಫಿಸಂಗೆ ಇತಿಹಾಸವುಂಟು. ಮೊದಲಿಗೆ ಸೂಫಿಗಳು ನೆಲದಾರಿಯ ಮೂಲಕ ಭಾರತಕ್ಕೆ ಬರತೊಡಗಿದ್ದು 11-12ನೇ ಶತಮಾನದಿಂದ, ಯಾಕೆಂದರೆ ಅಪಘಾನಿಸ್ತಾನದ ಪರ್ಶಿಯಾಗಳ ರಾಜರುಗಳಿಂದ ಆಳುವ ವರ್ಗಗಳು ಭಾರತದ ಭೂಭಾಗಗಳನ್ನು ಜಯಿಸಿ ರಾಜ್ಯ ಸ್ಥಾಪನೆ ಮಾಡುವುದರಲ್ಲಿ ನಿರತವಾಗಿದ್ದವು. ಹಾಗಾಗಿ ಅಲ್ಲಿಯ ರಾಜಕೀಯ ವಾತಾವರಣದಿಂದ ಸೂಫಿಗಳಿಗೆ ವಿರುದ್ಧವಾದ ವಾತಾವರಣ ಅಲ್ಲಿ ಸೃಷ್ಟಿಗೊಂಡಿರಬಹುದು.

 ಇದರಿಂದ ಸೂಫಿಗಳು ಭಾರತಕ್ಕೆ ಭೂಭಾಗದಿಂದ ಪ್ರವೇಶಿಸಿವೆ. ಇದಕ್ಕೆ ಮೊದಲು ಪರ್ಶಿಯಾದಲ್ಲಿ ಸೂಫಿಗಳು ರಾಜಶ್ರಯದಿಂದ ಹೊರಬಂದಿರಬಹುದು. ಆದರೆ ಭಾರತಕ್ಕೆ ಬಂದ ನಂತರ ಸೂಫಿಗಳು ಇಸ್ಲಾಂ ತತ್ವವನ್ನು ತೇಳುವಾದ ರೀತಿಯಲ್ಲಿ ನಿರಾಕರಿಸಿದೆ? ಭಾರತದಲ್ಲಿ ಇದರ ಬೆಳವಣಿಗೆ ವಿಭಿನ್ನ ನೆಲೆಯಲ್ಲಿ ರೂಪಗೊಂಡಿದೆ.

ಆದರೆ ಭಾರತಕ್ಕೆ ಬಂದ ನಂತರ ಭಾರತದಲ್ಲಿ ಸೂಫಿಸಂಗೆ ನೆಲೆ ಬೇಕಾಗಿತ್ತು, ಹಾಗೆಯೇ ಮುಸ್ಲಿಂರು ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕಾಗಿತ್ತು ಕೂಡ. ಹಾಗಾಗಿ ಒಟ್ಟಿಗೆ ಸಾಮ್ರಾಜ್ಯ ವಿಸ್ತರಣೆ, ಸೂಫಿಗಳಿಗೆ ಆಶ್ರಯ ಹಾಗೂ ಇಸ್ಲಾಂ ತತ್ವವನ್ನು ವಿಸ್ತರಿಸುವುದು ಒಂದು ರಾಜಕೀಯವಾಗಿ ಸಾಮ್ರಾಜ್ಯಶಾಹಿ ಉಪಯೋಗಿಸಿಕೊಂಡಿರುವ ಕ್ರಮ ಬೇರೆಯಾಯಿತು.

ಸೂಫಿಗಳು ಇಸ್ಲಾಂ ತತ್ವವನ್ನು ಸಾರುವುದರ ಮೂಲಕ ಭಾರತದ ಬುಡಕಟ್ಟು ಸಮುದಾಯಗಳು ಹಾಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರು ಶೋಷಣೆಗೆ ಒಳಗಾದ ಕೆಲವು ಜನ ಸಮುದಾಯಗಳು, ಇಂಥವರಿಗೆ ಸೂಫಿಪಂಥ ಕಣ್ಣೀರು ಒರೆಸುವ ಕೆಲಸ ನೆಡೆಸಿತು.

 ಅಂತಃ ಸಮುದಾಯವೆಂದರೆ ಪಿಂಜಾರರು, ದರವೇಸು ದಲಿತರು, ಆರ್ಥಿಕವಾಗಿ ಹಿಂದುಳಿದವರು ಫಕೀರರು ಇತ್ಯಾದಿ ಸಮುದಾಯಗಳಾಗಿವೆ. ಸೂಫಿ ತತ್ವ, ಪ್ರೀತಿ, ಪ್ರೇಮ, ನಂಬಿಕೆ, ವಿಶ್ವಾಸ, ದೇವರಲ್ಲಿ ನಂಬಿಕೆ, ದೇವರ ಪ್ರಾರ್ಥನೆ, ಸತ್ಯವನ್ನು ನುಡಿಯುವುದು, ತತ್ವಗಳ ಮೂಲಕ ಸೂಫಿಪಂಥಕ್ಕೆ ಬೇಗನೇ ಈ ಸಮುದಾಯಗಳು ಪ್ರಭಾವಕ್ಕೊಳಗಾದವು. ಆದರೆ ಕೆಲವು ಸಮುದಾಯಗಳು ಇಸ್ಲಾಂ ತತ್ವವನ್ನೇ ಪಾಲಿಸದೇ ಸೂಫಿ ಪಂಥದ ತತ್ವಗಳನ್ನು ಪಾಲಿಸುದವು.

ಯಾಕೆಂದರೆ ಸೂಫಿ ಪಂಥ ಇಸ್ಲಾಂನ ಖುರಾನ್ ತತ್ವಗಳನ್ನು ಮುಂದಿಟ್ಟುಕೊಂಡು ಸ್ಥಳೀಯ ತತ್ವವನ್ನು ಅನುಸರಿಸಿಕೊಂಡಿತು. ಅಂದರೆ `ಸಂತರರೀತಿಯ ಪರಿಣಮಿಸಿಕೊಂಡಿತು. ಕರ್ನಾಟಕಕ್ಕೆ ಸೀಮಿತ ಮಾಡಿಕೊಂಡು ಹೇಳುವುದಾದರೆ ಕರ್ನಾಟಕದಲ್ಲಿ ನಾಥ, ಸಿದ್ದ, ಪರಂಪರೆ ವ್ಯಾಪಕವಾಗಿ ಹರಡಿತ್ತು. ಹಾಗೆಯೇ ಕಪಾಳ, ಕಾಳಮುಖ ಇತ್ಯಾದಿ ಪಂಥಗಳಿಗೆ ಸೂಫಿಗಳು ಪ್ರಭಾವಗೊಂಡಿರುವುದು ಕಾಣುತ್ತೇವೆ.

ಯಾಕೆಂದರೆ 12ನೇ ಶತಮಾನದಲ್ಲಿ ವಚನ ಚಳುವಳಿಯಿಂದಾದ ಅನೇಕ ಪ್ರಭಾವ ಪ್ರೇರಣೆಯಿಂದ ಹೊಸ ಪಲ್ಲಟವನ್ನೆ ಸೃಷ್ಟಿಗೊಂಡಿತು. ಇದರಿಂದ ಕಾಲದಿಂದ ಕಾಲಕ್ಕೆ ಹಲವಾರು ತತ್ವ ಸಿದ್ದಾಂತಗಳು ಬದಲಾವಣೆಯಾದವು. ಕರ್ನಾಟಕದಲ್ಲಿ ನಾಥ-ಸಿದ್ಧ ಪರಂಪರೆ ವ್ಯಾಪಕವಾಗಿ ಹರಡಿತ್ತು ಎನ್ನುವುದಕ್ಕೆ ಸಿದ್ಧರು, ಜೋಗಿಗಳು, ಭೈರವ ಇತ್ಯಾದಿ ಹಳ್ಳಿಗಳಲ್ಲಿ ಕಾಣಸಿಗುತ್ತಾರೆ. ಇಂತಹ ಕಡೆಗಳಲ್ಲಿ ಸೂಫಿ ಪಂಥವು ಒಂದು ಎನ್ನುವುದು ಪ್ರಮುಖ ಸಂಗತಿ.

 ಸೂಫಿಗಳು ಸಂದೇಶ ಸಮಾಜಮುಖಿಯಾಗಿ ಪವಾಡ ದೃಶ್ಯವಾಗಿ ನಡೆಯುವಂತದ್ದು. ಹಾಗಾಗಿ ಜನರಲ್ಲಿ ಸೂಫಿಗಳು ಮನಸೂರೆಗೊಂಡರು. ಜೊತೆಗೆ ಸ್ಥಳೀಯ ಪಂಥಗಳ ಒಡಂಬಡಿಕೆಯಿಂದ ಪ್ರಭುತ್ವ ವಿರುದ್ಧ ತೆಳುವಾಗಿ ವಿರೋಧಿಸಿತು. ಮೇಲ್ವರ್ಗದ ಉನ್ನತ ಧರ್ಮಗಳು ಮಾಡುವ ಕೆಲಸ ಕಾರ್ಯಗಳ ಮನ್ನಿಸದೆ, ಸೂಫಿಗಳು ತಮ್ಮ ಅಸ್ತಿತ್ವವನ್ನು ಮೈಗೂಡಿಸಿಕೊಂಡಿತು. ಜೊತೆಗೆ ಕೆಳಸಮುದಾಯಗಳ ಜೊತೆ ಬೆರತುಕೊಂಡಿತು. ಸಂಕರವಾಯಿತು ಎಂದು ಹೇಳಬಹುದು.

ಸೂಫಿಗಳ ಕುರಿತು ಕಪಟರಾಳ ಕೃಷ್ಣರಾಯರು, ರಹಮತ್ ತರೀಕೆರೆ, ಫಕೀರ್ ಮುಹಮ್ಮದ್ ಕಟ್ಪಾಡಿ ಅವರಿಂದ ಹೆಚ್ಚಾಗಿ ಅಧ್ಯಯನ ಮಾಡಿದ್ದಾರೆ. ಇವರ ಅಧ್ಯಯನ ಸಮೀಕ್ಷೆಯಲ್ಲಿ ನಾಥ ಸಂಪ್ರದಾಯದ ನಾಸಿರುದ್ದೀನ್ ಎನ್ನುವ ಸೂಫಿ, ನಾಗನಾಥ ಎಂಬ ಹೆಸರಾಗಿದೆ. ಚಾಂಗ್ ಫೀರನೆಂಬವುದು ಯಮನೂರಪ್ಪ ಅಥವಾ ಯಮನೂರಸ್ವಾಮಿ ಆಗಿದ್ದು, ಈ ತರಹದ ಸೂಫಿಗಳು, ಸಂಕರ ರೂಪಿಯಾಗಿ ಕರ್ನಾಟಕ ನಾಥ ಪರಂಪರೆ, ಸೂಫಿ ಪರಂಪರೆಯಲ್ಲಿ ಒಡಮೂಡಿದೆ.

 ಸೂಫಿಗಳು ಹಾಗೂ ಲಿಂಗಾಯತ ಸಂಬಂಧಗಳಾಗಿ ಹೆಚ್ಚು ಸೂಫಿಗಳ ಹೋಲಿಕೆಯಾಗಿ ಸಾಮರಸ್ಯ ವಾದಿಗಳಾಗಿ `ಹಿಂದುಸಂತನು `ಮುಸ್ಲಿಂಸಂಪ್ರದಾಯಗಳನ್ನು ಮಾಡುತ್ತಿದ್ದರೆ, `ಮುಸ್ಲಿಂಸಂತನಿಗೆ `ಹಿಂದುಶಿಷ್ಯರಿದ್ದಾರೆ. ಹಾಗೆಯೇ ಮುಸ್ಲಿಂ ಸಂತನು ಹಿಂದು ಸಂಪ್ರದಾಯವನ್ನು ಅನುಸರಿಸಿಕೊಂಡಿರುವುದು ಕಾಣುತ್ತೇವೆ.

ಹೀಗೆಯೇ ಒಂದು ಧರ್ಮದ ದೈವಕ್ಕೆ ಇನ್ನೊಂದು ಧರ್ಮದ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ಉದಾ: ದರ್ಗಾಗಳು, ಇವು ಎಲ್ಲಾ ಧರ್ಮಿಯರಿಗೂ ಸಾಮರಸ್ಯವಾಗಿವೆ. ಗೋವಿಂದಭಟ್ಟರ-`ಶಿಶುನಾಳ ಷರೀಪನ ಗುರು ಶಿಷ್ಯತ್ವ, ಸಾಮರಸ್ಯತ್ವದ ಸಂಕೇತವಾಗಿದೆ. ಹಾಗೆಯೇ ನಾಸಿರುದ್ದೀನ್-ಸಿದ್ದಲಿಂಗ, ‘ಬಂದೇನ್‍ವಾಜ್-ಶರಣಬಸವೇಶ್ವರ, ‘ಮುರ್ತುಜಾಖಾದ್ರಿಮಹಾಂತ ಶಿವಯೋಗಿ’, ‘ಶೇಕ್ ಶಾವಲಿ-ಗಾದಿಲಿಂಗ’, ‘ಕಡಕೋಳ ಮಡಿವಾಳಪ್ಪ-ಚನ್ನೂರ ಜಲಾಲಸಾಬ’, ‘ಕಡಲೂರ ಸಿದ್ದಲಿಂಗ-ಸಾಹಿಬಣ್ಣತಾತಾ, ಇತ್ಯಾದಿಯಾಗಿ ಗುರುತಿಸುತ್ತೇವೆ. ಸೂಫಿಗಳು ಮಾಡಿದ ಸಾಮಾಜಿಕ ಸಾಮರಸ್ಯತ್ವ ಎನ್ನುವುದು ಜನರಲ್ಲಿ ಅಚ್ಚಳಿಯದೇ ಒಡಮೂಡಿದೆ.

ಆದರೆ ಇಂದು ಜಾತಿ, ಧರ್ಮ ಸಾಮರಸ್ಯತ್ವದ ಜೊತೆಗೆ ಆರ್ಥಿಕ ಸಾಮರಸ್ಯತ್ವದ ಕೊರತೆ ಎದ್ದು ಕಾಣುತ್ತದೆ. ಧರ್ಮದ ವಿಧಿವಿಧಾನ ಶತಮಾನದಿಂದ ಒಂದೇ ತರವಾಗಿದ್ದರೂ, ಆದರೆ ನಾವು ಧರ್ಮವನ್ನು ಆಚರಿಸುವ ನಡೆಸುವ ವಿಧಿ-ವಿಧಾನದಲ್ಲಿ ಸೋತಿದ್ದೇವೆ. ಇದಕ್ಕೆ ಕಾರಣ ಮೂಲಭೂತವಾದಿಗಳು ಮಾಡುವ `ಅಲಕಾಕೆಲಸಕ್ಕೆ ನಾವು ನಮ್ಮಲ್ಲಿನ ಮನಸ್ಥಿತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.

ಜಾಗತೀಕರಣ ಒಂದು ಕಡೆಯಾದರೆ, ಇನ್ನೊಂದು ಕಡೆ ಕೋಮುವಾದಿಗಳು, ಸಮಾಜ ಘಾತುಕರು ಕಿಡಿಹಚ್ಚುವ ಕಾರ್ಯ ಮಾಡುತ್ತಿರುತ್ತಾರೆ. ಈ ಸ್ಥಿತಿಯಲ್ಲಿ ತಮ್ಮ ಸ್ವಾರ್ಥದ ಒಳಗೊಳ್ಳುವಿಕೆಯ ಮೂಲಕ ಜನರ ಮನಸ್ಸುಗಳು, ಮನುಷ್ಯ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಸೂಫಿಗಳು, ತತ್ಪದಕಾರರು, ನಾಥ ಸಿದ್ದರು, ಇವರೆಲ್ಲಾ ಧರ್ಮ ಸಮನ್ವಯ ದೃಷ್ಟಿಯಿಂದ ಸಾಮರಸ್ಯತ್ವ ಮೂಡಿಸಿದವರಾಗಿದ್ದರು.

ಸೂಫಿಗಳು ಇತಿಹಾಸದುದ್ದಕ್ಕೂ ಎಂದೂ ನಿಂತ ನೀರಾಗಿರದೆ ಹರಿವ ಶುದ್ಧ ನೀರಾಗಿದ್ದರು. ಅವರು ದೃಢ ವಿಶ್ವಾಸವನ್ನು ಇಟ್ಟುಕೊಂಡು, ಎಲ್ಲರ ಜೊತೆಗೆ ಹೊಂದಾಣಿಕೆಯ ಸ್ವಾತಂತ್ರ್ಯವನ್ನು ಸೂಫಿಗಳು ಪಾಲಿಸುತ್ತಿದ್ದರು. ಸೂಫಿಗಳು ಇಸ್ಲಾಂ ಧರ್ಮದ ಪಂಗಡಗಳ ಜೊತೆಗೆ ಗುರುತಿಸಿಕೊಳ್ಳುವುದಕ್ಕೆ ಇಷ್ಟ ಪಟ್ಟವರು, ಆದರೆ ಅನುಭಾವಿ ತತ್ವಗಳ ಜೊತೆಗೆ ಅನುಭಾವಿ ತತ್ವವನ್ನು ಪಾಲಿಸುವವರ ಜೊತೆಗೆ ಹೆಚ್ಚು ಇಷ್ಟು ಪಡುತ್ತಿದ್ದರು ಎಂದು ಹೇಳಬಹುದು.

ಕಟ್ಪಾಡಿಯವರು ಹೇಳುವ ಹಾಗೇ ಖ್ಯಾತ ಸಂತ ಅಬೂ ಯಾಜೀದ್ ಬಿಸ್ತಾಮಿ’’ಯವರನ್ನು ಯೂರೋಪ್‍ನಲ್ಲಿ ಕೇಳಿದರಂತೆ, `ನೀವು ಯಾವ ಪಂಗಡಕ್ಕೆ ಸೇರಿದವರು?’ ಅದಕ್ಕೆ ಅವರು `ನಾನು ಅಲ್ಲಾಹನ ಪಂಗಡದವನುಎಂದು ಹೇಳಿದರಂತೆ. ಅದಕ್ಕಾಗಿ ಈ ತರಹದ ತತ್ವ ಶಿಯಾ ಪಂಗಡದಲ್ಲಿ ಕಾಣಬಹುದು. ಆದರೆ ಇಲ್ಲಿ ಧರ್ಮ ಮುಖ್ಯವಲ್ಲ ನಂಬಿಕೆ ಮುಖ್ಯವಾಗಿದೆ.

           ಹಾಗೆಯೇ ಕಟ್ಪಾಡಿಯವರು ಕೂಡ ಕಲ್ಬುರ್ಗಿ ಬಂದೇನವಾಜ್ ದರ್ಗಾದಲ್ಲಿ ಸೂಫಿಯನ್ನು ಕೇಳಿದರಂತೆ ನೀವು ಶಿಯಾ ಅಥವಾ ಸುನ್ನಿ’’ ಯಾವ ಪಂಗಡಕ್ಕೆ ಸೇರಿದವರು, ಆಗ ಸೂಫಿ ನಾವು ಹಿಂದೂಗಳಲ್ಲ’’, “ಮುಸ್ಲಿಂರಲ್ಲ’’ ನಾವು ಸೂಫಿಗಳು, ಹಾಗಿರುವಾಗ ಸುನ್ನಿ, ಶಿಯಾ ಆಗುವುದು ಹೇಗೆ ಸಾಧ್ಯ? ಎಂದು ಹೇಳಿದರಂತೆ. ಇದೇ ತರಹ ರಹಮತ್ ತರೀಕೆರೆಯವರು `ಕಾವೇರಿ ತೀರದ ಖಾದರಲಿಂಗ ದರಗಾಕ್ಕೆ ಭೇಟಿಕೊಟ್ಟಾಗ ಉತ್ತರ ಪ್ರದೇಶ ಸೂಫಿ `ಲಿಯಾಕತ್ ಹುಸೇನ್ ಶಾ ಕೂಡ ಕೇಳಿದರಂತೆ, ಆ ಸೂಫಿ ಮುಸಲ್ಮಾನ್ ನಹಿ, ಸೂಫಿ ಹ್ಞೂಂ’’, ಎಂದು ಬಣ್ಣಿಸಿದರಂತೆ.

ಈ ತರಹ ನಡೆದ ಸನ್ನಿವೇಶಗಳು, ಘಟನೆಗಳು ಯಾಕೆ? ಸೂಫಿಗಳು ಇಸ್ಲಾಂ ತತ್ವವನ್ನು ಕುರಿತು ಅಲ್ಲಾಹನ ಅನುಗ್ರಹದ ಮಾತು ಯಾಕೆ? ಹೇಳಲಿಲ್ಲ ಎಂಬುದು ಪ್ರಶ್ನೆ. ಆದರೆ ಇಸ್ಲಾಂ ತತ್ವದಲ್ಲಿಯೇ ಸೂಫಿ ತತ್ವವನ್ನು ರೂಪಿಸಿಕೊಂಡಿರುವುದು ಮನಗಾಣಬೇಕಾಗಿದೆ. ಸೂಫಿಗಳು ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ನೆಲೆಯೂರಿದ ನಂತರ, ಕಾಲಗತಿಸಿದಂತೆ ಭಾರತದಲ್ಲಿಯೂ ಕೂಡ ಹಲವಾರು ಸಮುದಾಯ ಪಂಗಡಗಳಾಗಿದ್ದರಿಂದ ಸೂಫಿಗಳು ತಮ್ಮದೇ ಆದ ತತ್ವದ ಮೂಲಕ ಸ್ವತಂತ್ರ ಸೂಫಿಧರ್ಮ ಎಂದು ಹೇಳಿರಬಹುದು.

ಆದರೆ ದರವೇಸು ಇಸ್ಲಾಂ ಧರ್ಮದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯ, ಸಾಂಪ್ರಾದಾಯಿಕ ಧರ್ಮದ ತತ್ವಗಳನ್ನೆ ಸವಾಲು ಒಡ್ಡುವ ಸಮುದಾಯವಾಗಿ ಹೊರ ಒಮ್ಮುತ್ತದೆ. ಯಾಕೆಂದರೆ ದರವೇಸುಗಳು, ಎಂದರೆ ಭಿಕ್ಷುಕ, ದರಿದ್ರವರು, ಎಂದೇ ಹೇಳಲಾಗುತ್ತಿತ್ತು. ಹೀಗಾಗಿ ಇಂತಹ ಸಮುದಾಯಗಳಿಗೆ ಸೂಫಿಸಂ ಸಾಂಸ್ಕøತಿಕವಾಗಿ ನೆಲೆಕೊಟ್ಟಿದೆ. ಭಾರತದಲ್ಲಿ ಕೂಡ ಆಯಾ ಧರ್ಮದ ಅನೇಕ ಸಮುದಾಯಗಳು ಸವಾಲು ಒಡ್ಡುವುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ.

ಇಂಥವುಗಳಿಗೆ ಸೂಫಿ ಧರ್ಮ ಕಣ್ಣೀರು ಒರೆಸುವ ಔದಾರ್ಯ ಹೊಂದಿದೆ. ಹೀಗಾಗಿ ಸೂಫಿಗಳು ಎಲ್ಲಾ ಸಮುದಾಯಕ್ಕೆ ಹತ್ತಿರವಾಗಿ ದರಗಾ ಸಂಸ್ಕತಿ ಹಿನ್ನೆಲೆಯಿಂದ ಸೂಫಿತತ್ವ ಎಲ್ಲೆಡೆ ಸಾರುತ್ತಿದೆ. ಸೂಫಿಗಳು ಬಹುತೇಕವಾಗಿ ಸಮಾದಿಗಳಾಗಿದ್ದರಿಂದ ಅಲ್ಲಿಯೇ ಸೂಫೀ ಧರ್ಮದ ವಿಧಿ ವಿಧಾನದಂತೆ ನಡೆಯುವುದು ಕಾಣುತ್ತೇವೆ.

ಸೂಫಿಗಳು ಬೇರೆ ಬೇರೆ ಸಮುದಾಯಗಳಲ್ಲಿ ಹೇಗೆ ಪ್ರಭಾವಗೊಂಡಿದ್ದಾರೆ ಎನ್ನುವುದಕ್ಕೆ ಪ್ರಸ್ತುತವಾಗಿ ವಿಜಯಪುರದ ಸಿಂದಗಿ ತಾಲೂಕಿನ ಯೆಂಕಂಚಿಯ ದಾವಲ್ ಮಲಿಕ್ ದರಗಾದಲ್ಲಿ ಇಸ್ಲಾಂ ಧರ್ಮದ ಪೂಜಾ ವಿಧಾನವಾಗಿದ್ದು, ಆದರೆ ಕುರುಬ ಸಮುದಾಯದವರು ಪೂಜೆ ವಿಧಿ-ವಿಧಾನವನ್ನು ನಡೆಸುವುದು ವಿಶೇಷವಾಗಿದೆ. ಇದೇ ರೀತಿಯಾಗಿ ರಾಯಚೂರಿನ ಸಿಂಧನೂರು ತಾಲೂಕಿನ ಹಸಮಕಲ್ ಗ್ರಾಮದ ಹಜರತ್ ಷರೀಫ್ ಖಾನ್‍ಸಾಹೇಬ್ ದರಗಾದಲ್ಲಿ `ಜಂಗಮ’(ಅಯ್ಯನೋರು) ಸಮುದಾಯದವರು ಪೂಜಾರಿಗಳಾಗಿದ್ದಾರೆ.

ಸುರಪುರ ತಾಲೂಕಿನ ತಿಂಥಿಣಿ ಮೌನೇಶ್ವರ ದೇವಸ್ಥಾನವಿದೆ. ಅಲ್ಲಿ ಮಸೀದಿ ಹಾಗೂ ದೇವಸ್ಥಾನ, ಒಂದೇ ದೇವಸ್ಥಾನವಾಗಿದ್ದು. ಇದು ಸಂಕರ ರೂಪಿಯಾಗಿ ಒಳಗೊಂಡಿರುವುದು ಕಾಣುತ್ತೇವೆ. ಅಲ್ಲಿಯ ಭಕ್ತರು ಎರಡು ಸಂಸ್ಕತಿಯ ಒಳಗೊಳ್ಳುವ ಪರಿಯನ್ನು ಕಾಣುತ್ತೇವೆ. ಲಿಂಗಸ್ಗೂರು ತಾಲೂಕಿನ ಜಲದುರ್ಗ ಏಳು ಸುತ್ತಿನ ಕೋಟೆ ಇದ್ದು, ಹಲವು ಸಾಮ್ರಾಜ್ಯಗಳು ಆಳ್ವಿಕೆ ಮಾಡಿವೆ. ಆದರೆ ಅಲ್ಲಿ ಸಂಗಮೇಶ್ವರ ದೇವಸ್ಥಾನ ಇದೆ. ಅದು ಇಸ್ಲಾಂಮಿಕ್ ವಾಸ್ತುಶಿಲ್ಪ ಹೊಂದಿದೆ ನೋಡಿದರೆ ಮುಸ್ಲಿಂ(ದೇವಸ್ಥಾನ) ದರಗಾ ಎಂದು ಹೇಳಬಹುದು. ಆದರೆ ಸಂಗಮೇಶ್ವರ ದೇವಸ್ಥಾನವಾಗಿದೆ.

 ಮೊಹರಂ ಹಬ್ಬದ ಹಸನ್ ಹುಸೇನ್ ಮುಖಬಿಲೆಗಳು ಸೂಫಿಗಳೆ ಆಗಿವೆ. ಆದರೆ ದೇಶದಾದ್ಯಂತ ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದೆ. ವಿಶೇಷವೆಂದರೆ ಮೊಹರಂ ಹಬ್ಬದಲ್ಲಿ ಕೆಲವು ಸಮುದಾಯದವರು ಗೌಡ, ಕುಲಕರ್ಣಿ, ಪಾಟೀಲ ಮಾಲಿಗೌಡ ತಮ್ಮ ಮನೆಯ ಹಸನ್ ಹುಸೇನ್ ದೇವರುಗಳು ಕೂಡಾ ಆಗಿದ್ದು ನಿದರ್ಶನಗಳು ಇವೆ.

ಇವೆಲ್ಲವುಗಳನ್ನು ಗಮನಿಸುತ್ತಾ ಹೋದರೆ, ವಿಶೇಷವಾಗಿವೆ ಅವುಗಳದೆ ಆದ ಚಾರಿತ್ರಿಕ ಕಥನಗಳಾಗಿವೆ. ಸೂಫಿಗಳ ಮಹತ್ವ, ತತ್ವ, ಚಿಂತನೆ ಹಲವು ಸ್ತರಗಳನ್ನು ಹೊಂದಿವೆ ಎಂದು ಹೇಳಬಹುದು. ಪರಂಪರೆಯಲ್ಲಿ ಮುಸ್ಲಿಂ ತತ್ತ್ವಪದಕಾರರ ಸಾಧನೆ ಗಮನಾರ್ಹವಾದುದು. ಕರ್ನಾಟಕದ ಉತ್ತರ ಭಾಗದಲ್ಲಿ ದೀರ್ಘಕಾಲ ಹಿಂದೂ-ಮುಸ್ಲಿಂಎರಡೂ ಸಮುದಾಯಗಳು ಕೂಡಿ ಬಾಳುತ್ತ ಬಂದಿವೆ.

ಎರಡು ಸಂಸ್ಕೃತಿ ಗಳ ನಡುವೆ ಸಂಘರ್ಷ ಸಾಮರಸ್ಯಗಳು ಏರ್ಪಟ್ಟಿವೆ. ಮುಖ್ಯವಾಗಿ ಮುಸ್ಲಿಂ ತತ್ತ್ವಪದಕಾರರು ಎರಡು ಸಂಸ್ಕೃತಿ ಗಳ ಸಾಮರಸ್ಯ ಮತ್ತು ಬಾಂಧವ್ಯಕ್ಕೆ ಅಪರೂಪದ ಕೊಡುಗೆ ನೀಡಿದರು. ಚನ್ನೂರ ಜಲಾಲಸಾಬ , ಮೇಟ್ನಳ್ಳಿ ಹಸನಸಾಬ , ಕೋಹಿನೂರ ಹಸನ , ದೇಗಾವಿ ಹಜರತ್ , ಮಂಜಿಲಾನ ಖಾದರಸಾಬ , ಅರವಲಿ ಬಿಜಲಿ ವಸ್ತಾದಿ , ಸಾವಳಗಿ ಮಹಮ್ಮದಸಾಬ , ಸಾಹಿಬಣ್ಣ ತಾತಾ, ಸಾಲಗುಂದಿ ಗುರು ಖಾದರಿ ಮೊದಲಾದವರು ಹೆಸರಾಗಿದ್ದಾರೆ.

ಮುಸ್ಲಿಂ ಪ್ರಭುತ್ವವಾದಿಗಳ ಆಳ್ವಿಕೆಯ ಅಧಿಕೃತ ಭಾಷೆ ಉರ್ದು ಇದ್ದುದರಿಂದ ಕನ್ನಡ ಸಾಹಿತ್ಯ ರಚನೆಗೆ ತೊಂದರೆಯಾಯಿತೆಂದು ಆಧುನಿಕರ ಹೇಳಿಕೆಗೆ ಅನುವು ಸಿಗದಂತೆ ಈ ಮುಸ್ಲಿಮ್ ತತ್ತ್ವಪದಕಾರರು ಕನ್ನಡದಲ್ಲಿ ತತ್ತ್ವಪದಗಳನ್ನು ಹಾಡಿರುವುದು ವಿಶೇಷವಾಗಿದೆ.

 ಹೀಗೆ ಹಲವು ನೆಲೆಯಲ್ಲಿ ಹರಿದು ಬಂದ ತತ್ತ್ವಪದ ಸಾಹಿತ್ಯ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದಾಗ ಮೂಡಿ ಬಂದ ಕನ್ನಡದ ಕಾವ್ಯ ಚರಿತ್ರೆಯಲ್ಲಿ ಪ್ರತಿಷ್ಠಿತ ಸ್ಥಾನ ಪಡೆದುಕೊಳ್ಳುತ್ತಿರುವುದು ಇಲ್ಲಿ ದೇಸೀ ಅಧ್ಯಯನಗಳು ಹೆಚ್ಚು ವ್ಯಾಪಕವಾಗಿ ನಡೆದಾಗ ಸಾಧ್ಯವಾಯಿತು.

ಇಂಥಹಾ, ಸೂಫೀ ತತ್ವಪದಕಾರರು ತತ್ವಪದಗಾಯಕರ ಸುದೀರ್ಘವಾದ ಹಾಗೂ ತುಂಬಾ ಪ್ರಾಚೀನವಾದ ಪರಂಪರೆಯೋಂದು ಕೋಲಾರ ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಇದ್ದು ಚಿಂತಾಮಣಿ ಯ ಹತ್ತಿರ ದ ಮುರಗಮಲ್ಲ ಒಂದು ಪ್ರಮುಖ ಸೂಫೀ ಕೇಂದ್ರ ಹಾಗೂ ಮತ ಸಾಮರಸ್ಯ ಹಾಗೂ ಭಾವೈಕ್ಯತೆಯ ಕೇಂದ್ರವೂ ಆಗಿದೆ.ಅದೇ ರೀತಿ ಚಿಕ್ಕಬಳ್ಳಾಪುರ ಕೋಲಾರದ ಹಲವು ಕಡೆ ಅಜ್ಞಾತ ರಾಗಿ ಹಲವು. ಸೂಫೀ. ಸಂತರು ನಮ್ಮ ನಡುವೆ ಯೇ ಸಾಮಾನ್ಯ ರಲ್ಲಿ ಸಾಮಾನ್ಯ ರಂತೆ ಜೀವಿಸುತ್ತಿದ್ದಾರೆ. ಇವರ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ಆಗಬೇಕಿದೆ .

ಸಾಮಾನ್ಯ ವಾಗಿ ದರ್ಗಾ ಮಸೀದಿ ಗಳನ್ನು ತಿರಸ್ಕರಿಸಿ ಸರ್ವ ದರ್ಮ ಸಮನ್ವಯ ದೃಷ್ಟಿ ಯಿಂದ ಇವರು ಜೀವಿಸುತ್ತಾರೇ.ಇವರಿಗೆ ದೇವರು ವಿಶ್ವಾತ್ಮಕ ಅಥವಾ ಗುರುವೇ ದೇವರು. ಸೂಫೀ ಸಂತರ ಮತ್ತೊಂದು ವಿಶಿಷ್ಟವಾದ ಲಕ್ಷಣವೆಂದರೇ, ಸೂಫೀ ಸಂತರಲ್ಲಿ ತಮ್ಮದೇ ಆದ ಒಂದು ವಿಶಿಷ್ಟವಾದ ಚಿಕಿತ್ಸಾ ಪಧ್ಧತಿ ಇವರಲ್ಲಿದೆ. ಹಲವು ಕಾಯಿಲೆಗಳಿಗೆ ಇವರು ಔಷಧೀ ನೀಡುತ್ತಾರೆ ಅದೇ ರೀತಿ ಪಶುಗಳಿಗೂ ಇವರಲ್ಲಿ ಚಿಕಿತ್ಸೆ ಲಭ್ಯ.

ಚೇಳು ಹಾವು ಮುಂತಾದ ವಿಷ ಜೀವಿಗಳ ಕಡಿತಕ್ಕೂ ಸಹಾ ಇವರಲ್ಲಿ ಚಿಕಿತ್ಸೆ ಇದೆ. ಅದರ ಜೊತೆಗೆ ಮಕ್ಕಳಿಗೆ ಯಂತ್ರ ಮಂತ್ರ ಮಾಡುವುದರಲ್ಲಿ ಸಹಾ ಇವರು ನಿಷ್ಣಾತರು. ಆದರೇ ಇವರಿಗೆ ಯಾವುದೇ ಪ್ರಚಾರದ ಆಸೆ ಇಲ್ಲ, ಹಾಗಾಗಿ ತಮ್ಮ ಪರಿಸರ ದಲ್ಲಿ ತಮ್ಮ ಕೈಲಾದ ಸೇವೆ ಮಾಡಿಕೊಂಡು ಬಂದದ್ದರಲ್ಲಿ ನೆಮ್ಮದಿ ಯಾಗಿ ಜೀವನ ನಡೆಸುತ್ತಿದ್ದಾರೆ.

 

 

 

 

 

 

 

 

 

 

 

ಅಧ್ಯಾಯ -4.4    

ಅಚಲ ತತ್ವ ಚಿಂತನೆ                                                                                                           

       ಅಚಲರು ಭೂಮಿಗೆ ಭಾರವಾಗದಂತೆ ಜೀವಿಸಿದವರು. ಸಮಾಜದಲ್ಲಿಂದು ಜಾತಿ, ಧರ್ಮ,ಅಸಮಾನತೆ, ಅಹಂಕಾರ ಇವೆಲ್ಲವೂ ಸ್ಮೃತಿ ಕಾರಣಕ್ಕೆ ಕಗ್ಗಂಟಾಗಿದ್ದು, ಅಚಲ ಮಾರ್ಗದಲ್ಲಿ ಸರಿಪಡಿಸುವ ಕೆಲಸಗಳು ಆಗಬೇಕಿದೆ.

ಕಡಜ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಗಳಿಗೆ ಗೂಡಿನಲ್ಲಿ ಆಹಾರ ಇಟ್ಟ ನಂತರ ಬಾಗಿಲು ಮುಚ್ಚುತ್ತದೆ. ಅಲ್ಲಿಗೆ ಕಡಜದ ಆಯಸ್ಸು ಮುಗಿಯುತ್ತದೆ. ಹುಟ್ಟುವ ಮರಿಗಳು ತಾಯಿಯ ಮುಖವನ್ನೇ ನೋಡುವುದಿಲ್ಲ. ಆದರೆ ಅವು ಕೂಡ ಎಂದೂ ಕಂಡರಿಯದ ಅಮ್ಮನನ್ನೇ ಅನುಸರಿಸುತ್ತವೆ. ಕೀಟಗಳು ಪರಂಪರಾಕೋಶದಲ್ಲಿ ಬಚ್ಚಿಟ್ಟುಕೊಳ್ಳುವ ಸತ್ಯ ಕಂಡಾಗ ಅಚಲ ಮಾರ್ಗ ಶೂನ್ಯ ಒಂದು ಶೂನ್ಯ ಎಂಬ ತತ್ವ ಅರ್ಥವಾದೀತು.  ಪರಂಪರಾ ಸ್ಮೃತಿ ಹುಟ್ಟಿನೊಡನೆ ಬರುವಂತಹದ್ದು.

 ಇಂದು ಜಾತಿ, ಧರ್ಮ, ಅಸಮಾನತೆ, ಅಹಂಕಾರ ಇವೆಲ್ಲವೂ ಸ್ಮೃತಿಯ ಕಾರಣಕ್ಕೆ ಕಗ್ಗಂಟಾಗಿ ಪರಿಣಮಿಸಿರುವುದಲ್ಲದೆ ಪ್ಲಸ್ ಒಂದು ಪ್ಲಸ್ ಎಂಬಂತೆ ಪ್ರವಾಹದ ರೀತಿಯಲ್ಲಿ ಹರಿಯುತ್ತಿವೆ. ಜಗತ್ತಿನ ದುರಂತಕ್ಕೆ ಇದೇ ಕಾರಣ. ಆದರೆ ಅಚಲ ಮಾರ್ಗ ಪ್ಲಸ್ ಒಂದು ಪ್ಲಸ್ ಅನ್ನು ಒಂದು ಶೂನ್ಯ ಗೊಳಿಸುತ್ತಿದೆ.

ಪ್ರಜ್ಞೆಯಿಂದ ಇರುವಿಕೆ ಎಂದರೆ ಹುಟ್ಟಿನಿಂದ ಅಂಟಿಕೊಂಡು ಬಂದ ಪೊರೆ ಕಳಚಿಕೊಂಡು ಏನನ್ನೂ ಉಳಿಸಿಕೊಳ್ಳದೆ ಇದ್ದಾಗ ಇದ್ದಂಗ ಅನಿಸಲೇ ಇಲ್ಲಎಂಬ ಬೇಂದ್ರೆಯವರ ಹಾಡಿನ ಸಾಲುಗಳಂತೆ ಅಚಲ ಮಾರ್ಗ ಇದ್ದಾಗ ಇದ್ದಂಗ ಇರುವುದಷ್ಟೆ. ಅಚಲ ಮಾರ್ಗದಲ್ಲಿರುವ ಅಜ್ಞಾತವಾಸದ ಮಾರುವೇಷ ತೆಗೆದು ಹಾಕಿದರೆ ಈ ಮಾರ್ಗ ಇನ್ನಷ್ಟು ತಿಳಿಯಾಗಬಹುದು

ಕಾರುಣ್ಯ, ಮೈತ್ರಿ ಅಗತ್ಯವಿದೆ ಕಾರುಣ್ಯ ಮತ್ತು ಮೈತ್ರಿಯನ್ನು ಅಚಲಮಾರ್ಗ ತನ್ನ ಉಸಿರಾಗಿಸಿಕೊಂಡಿದೆ. ಇದೊಂದು ಸಣ್ಣ ಝುರಿಯಂತೆ ಹರಿಯುತ್ತಿದೆ. ಕಾರುಣ್ಯ ಮತ್ತು ಮೈತ್ರಿ ಜಗತ್ತಿನಲ್ಲಿ ಎಲ್ಲೆಲ್ಲೂ ಒದ್ದಾಟ, ಮಾರುವೇಷದಲ್ಲಿ, ವೈದಿಕ, ಅವೈದ್ಯಿಕದೊಳಗೆ ಇರಬಹುದು, ಧರ್ಮ, ಆದಿವಾಸಿಗಳಲ್ಲಿ ಇರಬಹುದು. ಸಣ್ಣ ಸಣ್ಣ ಝುರಿ ಕೂಡಿಸಿದರೆ ಅದು ನದಿಯಾಗಿ ಹರಿಯಬಹುದು. ಭೂಮಿಗೆ ಕಾರುಣ್ಯ ಮತ್ತು ಮೈತ್ರಿ ತುರ್ತಾಗಿ ಅಗತ್ಯವಿದೆ.

ಅಚಲ ಮಾರ್ಗದಲ್ಲಿ ಪರಿಪೂರ್ಣವಾಗಿ ಸತ್ಯ ಅರಿತಾಗ ಅಸತ್ಯದಿಂದ ದೂರ ಉಳಿಯಲು ಸಾಧ್ಯ. ಮೊದಲು ದೈವ, ಮಾನವ ಮತ್ತು ರಾಕ್ಷಸ ಎಂಬ ಮೂರು ಮತಗಳಿದ್ದವು. ಆದರೆ, ದ್ವಾಪರ ಯುಗಕ್ಕೆ ರಾಕ್ಷಸ ಮತ ಅಂತ್ಯವಾಗಿದ್ದು, ಮಾನವ ಮತವೇ ಅಂದಿನಿಂದ ಶ್ರೇಷ್ಠವಾಗಿ ಉಳಿದುಕೊಂಡು ಬಂದಿದೆ. ಇಂತಹ ಸರ್ವ ಶ್ರೇಷ್ಠರಾದ ಮನುಷ್ಯರೇ ವಂಚನೆಯಂತಹ ಕೆಟ್ಟ ಕೆಲಸಗಳಿಗೆ ಮುಂದಾಗಿರುವುದು ನೋವಿನ ಸಂಗತಿ. ಇದಕ್ಕೆಲ್ಲಾ ಅಚಲ ಮಾರ್ಗದಲ್ಲಿ ಪರಿಹಾರವಿದೆ’.

ಅಚಲ ಎನ್ನುವುದು ಹೊಸತೇನಲ್ಲ. ಭದ್ರಾಚಲ, ಹಿಮಾಚಲ, ಅರುಣಾಚಲ ಹೀಗೆ ಹೆಸರುಗಳಲ್ಲೇ ಅಚಲ ಎನ್ನುವುದು ಸೇರಿಕೊಂಡಿದ್ದು, ಹಿಂದಿನಿಂದಲೂ ಅಚಲ ಸಂಸ್ಕೃತಿ ಮುಂದುವರಿಯುತ್ತಾ ಬಂದಿದೆ. ಅಚಲ ಮಾರ್ಗಕ್ಕೆ ಸಂಬಂಧಿಸಿದಂತೆ ತತ್ವಗಳಿದ್ದರೂ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಲೋಕ ಕಲ್ಯಾಣಕ್ಕೆ ಅಚಲ ಮಾರ್ಗ ಅನುಸರಿಸುವುದು ಸೂಕ್ತ.

ಕೂಡಿಬಾಳುವ ಸಂಸ್ಕೃತಿಯನ್ನು ಮೊದಲಿಗೆ ತಿಳಿಸಿಕೊಟ್ಟವರೇ ತತ್ವ ಪದಕಾರರು. ಗುರುಪಂಥದ ಹಿನ್ನೆಲೆಯಲ್ಲಿ ಬೆಳೆದು ಬಂದ ತತ್ವ ಪದಕಾರರಿಗೆ ಇರುವ ತಿಳಿವಳಿಕೆ  ಸಂಶೋಧಕರಲ್ಲಿ ಇಲ್ಲ. ಬೋಧಕರಿಗಿಂತ ತತ್ವ ಶಾಸ್ತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸುವ ಜ್ಞಾನ ತತ್ವ ಪದಕಾರರಲ್ಲಿದೆ. ಇಂದಿನ ದ್ವೇಷ, ಅಸೂಯೆ, ವೈಷಮ್ಯ, ಕಲಹಗಳ ನಿವಾರಣೆಗೆ ಪರಿಹಾರ ನೀಡುವ ಶಕ್ತಿ ತತ್ವ ಪದಗಳಲ್ಲಿ ಅಡಗಿದೆ .

            ಸಾವಿರಾರು ಜನ ತತ್ವ ಪದಕಾರರು ನಮ್ಮಲ್ಲಿ ಇದ್ದರೂ ಅವರ ಪದಗಳೇ ಇಲ್ಲದ ಅಪೂರ್ಣಗೊಂಡ ಸಾಹಿತ್ಯ ಚರಿತ್ರೆಯನ್ನು ಓದುತ್ತಲೇ ಬಂದಿದ್ದೇವೆ. ಬದುಕಿನ ಅನುಭವಗಳಿಗೆ ಮುಖಾಮುಖಿಯಾಗುವ ಗುರು ಹಾಗೂ ಸಾಧಕರ ಚರಿತ್ರೆಯನ್ನು ಒಳಗೊಂಡ ಪದಗಳನ್ನುಸೇರಿಸುವ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಪುನರ್‍ರಚಿಸಬೇಕು

ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಇಂದಿಗೂ ಬೆಳೆಯುತ್ತಿರುವ ಪರಂಪರೆ ಎಂದರೆ ಗುರು ಪರಂಪರೆ. ಲೋಕದ ಹೊರಗೆ ಹೋಗದೆ ಗುರು ಮಾರ್ಗದಲ್ಲೇ ನಡೆದು ಮನುಷ್ಯನ ಬದುಕಿಗೆ ಸರಿದಾರಿ ತೋರಿಸುತ್ತಾರೆ. ಅವರು ಹಾಡುವ ತತ್ವ ಪದಗಳಲ್ಲಿ ಸಾಂತ್ವನದ ಮಾರ್ಗವಿದೆ ಇಂಥಹಾ ಅಚಲ ತತ್ವಪದಕಾರರು ನಮ್ಮ ಕೋಲಾರ ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಅತಿ ಹೆಚ್ಚು ಅಚಲ ಆಶ್ರಮಗಳನ್ನು ನಿರ್ಮಿಸಿಕೊಂಡು ಅಚಲ ತತ್ವ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಮುಖವಾಗಿ ವೆಂಕಟದಾಸು, ಕೃಷ್ಣಾನಂದ,ಮುನಿಯಪ್ಪ ಸ್ವಾಮಿ, ಆಂಜಿನಪ್ಪ ಸ್ವಾಮಿಗಳು ಇವರ ಜೀವನ ವಿಚಾರಗಳನ್ನು ಹಿಂದಿನ ಅದ್ಯಾಯಗಳಲ್ಲಿ ಚರ್ಚಿಸಲಾಗಿದ್ದು , ಇವರೆಲ್ಲರೂ ಅಚಲ ತತ್ವ ಸಾಧಕರಾಗಿಯೇ ಗುರ್ತಿಸಲ್ಪಟ್ಟೀರುವುದು ವಿಶೇಷ.

ಕನ್ನಡ ಮತ್ತು ತೆಲುಗು ಭಾಷೆಗಳನ್ನು ಬೇರೆ ಬೇರೆ ಭಾಷೆಗಳೆಂದುಕ್ಕೊಳ್ಳದೇ ಅವು ಒಂದೇ ಭಾಷೆಯೆಂದು ಬದುಕುವ ವಿಸ್ತಾರವಾದ ಸಂಧಿ ಭೂಮಿ ಎನ್ನ ಬಹುದಾದ  ಅವಿಭಜಿತ ಕೋಲಾರ, ತುಮಕೂರು, ಅನಂತಪುರಂ, ಮೊದಲಾದ ಪ್ರಾಂತ್ಯಗಳಲ್ಲಿ ಅಚಲಿಗರೆಂದು ಕರೆದುಕ್ಕೂಳ್ಳುವ ಒಂದು ಪ್ರಾಚೀನ ಸಾಧಕರ ಪರಂಪರೆ ಇದೆ.

ಅಚಲವೆನ್ನುವುದು ಒಂದು ಜೀವನ ಕ್ರಮ. ಬೌದ್ಧ ಮಧ್ಯಮ ಮಾರ್ಗವಾದ ಶೂನ್ಯತೆಯ ಅನುಸಂಧಾನವು ಅವರ ಮಾರ್ಗ. ಜಾತಿ, ಅಸ್ಪೃಶ್ಯತೆ, ಲಿಂಗತಾರತಮ್ಯ ದಂತಹಾ ಯಾವ ಕೇಡಿನ ಸಂರಚನೆಗಳೂ ಇವರ ಹತ್ತಿರ ಸುಳಿಯಲೂ ಇವರು ಬಿಡುವುದಿಲ್ಲ. ಮನಸ್ಸಿನ ಮೂಲೆಯಲ್ಲಿ ಕೂಡ ಲೋಕಕ್ಕೇ ಮುಚಿಟ್ಟು ಬಾಳುವುದು ಏನೂ ಇರಕೂಡದು ಎಂದು ನಂಬಿ ಬದುಕುವ ಇವರು ತಮ್ಮನ್ನು ಬಹಿರಂಗಿಗಳು ಎಂದು ಕರೆದುಕೊಳ್ಳುತ್ತಾರೆ.

ಈ ಮಾರ್ಗದ ಸಾಧಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ.

ರಾಮಾವಧೂತರು, ದಕ್ಷಿಣಾಮೂರ್ತಿ, ಗಟ್ಟಿಹಳ್ಳಿ ಆಂಜಿನಪ್ಪ, ಗಗನಾನಂದಾರ್ಯರು, ನಾಗಾರ್ಯರು, ಪೋಲಾರ್ಯರು, ವೀರದಾಸಮ್ಮ, ಬೇರಕಿ ಬುಟ್ಟಪ್ಪ, ಮುನಿಯಪ್ಪ, ವೆಂಕಟದಾಸು, ಮುಂತಾದವರು ಅಚಲ ಮಾರ್ಗದ ಸಾಧಕರೇ ಆಗಿದ್ದಾರೆ.

ಆಂಧ್ರದ ನಾಗಾರ್ಜುನ ಕೊಂಡ, ಶ್ರೀ ಶೈಲಗಳಿಂದ ಕವಲೊಡೆದ ಈ ಮಾರ್ಗದ ತಾತ್ವಿಕ ಆಕರಮೂಲವೆಂದರೇ ನಾಗಾರ್ಜುನನ ದಶಭೂಮಿಕಾ ಶಾಸ್ತ್ರ. ಲೋಕವನ್ನು ನಾವು ಗ್ರಹಿಸಬೇಕಾದ ಕ್ರಮ ಮತ್ತು ಸಾಧನೆಯ ವಿವಿಧ ಹಂತಗಳನ್ನು ಹತ್ತು ಹಂತಗಳಾಗಿ ಬೌದ್ಧ ದರ್ಮದ ದಶಭೂಮಿಕಾ ಶಾಸ್ತ್ರವು ವಿವರಿಸುತ್ತದೆ.

ಪ್ರಮುದಿತ, ವಿಮಲ, ಪ್ರಭಾಕರಿ, ಅರ್ಚಿಷ್ಮತಿ, ಸುದುರ್ಜಯ, ಅಭಿಮುಖಿ, ದೂರಾಗಮ, ಅಚಲ, ಸಾಧುಮತಿ, ಮತ್ತು ಧರ್ಮಮೇಘ. ಇವು ಹತ್ತು ಹಂತಗಳು. ಇದರಲ್ಲಿ, ಮನಸಿನ್ನಲ್ಲಿ ಸಂಗ್ರಹಗೊಂಡಿರುವ ಸಂರಚನೆಗಳಿಂದ ಮುಕ್ತನಾಗಿ  ನಡೆದುಕ್ಕೂಳುವುದೇ ಅಚಲ. ಇದರ ಸಾಧಕರೇ ಅಚಲಿಗರು .ಮನೋಕೋಶದಲ್ಲಿ ಸಂಗ್ರಹಗೊಳ್ಳುವ ಸಂರಚನೆಗಳೇ ನಮ್ಮ ತಪ್ಪು ಗ್ರಹಿಕೆಗೆ ಮತ್ತು ತಪ್ಪು ನಡೆಗೆ ಕಾರಣಗಳು. ಅವುಗಳ ಪರಿಣಾಮಗಳಿಗೆ ಒಳಗಾಗದೆ, ಅಂದರೆ ನಮ್ಮ ಮನಸ್ಸು ನೀಡುವ ನಿರ್ದೇಶನಗಳನ್ನು ತಕ್ಷಣ ಒಪ್ಪಿಕೋಳ್ಳದೇ ಅವುಗಳನ್ನು ಪಕ್ಕಕ್ಕೆ ಇಟ್ಟು ಒಳಿತು ಕೆಡಕುಗಳನ್ನು ಲೋಕಪರವಾಗಿ ಭಾವಿಸಿ ನಡೆದುಕೋಳ್ಳುವುದನ್ನು ಅಚಲಎನ್ನುತ್ತಾರೆ.

ಯಾರು ತನ್ನ ಮನೋಸಂರಚನೆಗಳಿಂದ ವಿಚಲಿತನಾಗುವುದಿಲ್ಲವೋ ಅವನು ಅಚಲ .ಮನೋಸಂರಚನೆಗಳಿಂದ ಮುಕ್ತನಾಗಿ ನಡೆದುಕ್ಕೊಳ್ಳುವುದನ್ನು ಮನೊಲಯ, ಅಮನಸ್ಕ ಮುಂತಾದ ಹೆಸರುಗಳಿಂದ ಸೂಚಿಸುತ್ತಾರೆ. ನಾಗಾರ್ಜುನ ಹೇಳುವಂತೆ ಅಚಲವು ಮಾನುಷಸಂರಚನೆಗಳನ್ನು ನಂಬದೇ ಇರುವ ಪ್ರೌಡ ಸಾಧಕ ಹಂತ. ಮನೋಸಂರಚನೆಗಳ ನಿಯಂತ್ರಣದಾಚಿನ ಸ್ಥಿತಿಯಲ್ಲಿರುವಾತನೇ ಅಚಲಿಗ.

ಇವರು ತಮ್ಮ ಗುರುವಿನ ಉಪದೇಶದಿಂದ ಪಡೆದ ದಾಟುವಿಕೆಯಲ್ಲಿ ಪಳಗಿರುವವರಾಗಿದ್ದು ಮನೋ ಸಂರಚನೆಗಳಿಂದ ಅವರ ಬುದ್ಧಿ ಚಂಚಲಗೋಳ್ಳುವುದಿಲ್ಲ.

ಶೂನ್ಯತೆಯನ್ನು ಇವರು ಆಲೋಚನೆಗಳಿಂದಾಗಲಿ ಅರಿವಿನಿಂದಾಗಲಿ, ಪಡೆದುಕೊಂಡದಲ್ಲ, ಅದು ಅವರ ಬದುಕಿನ ಕ್ರಮ, ಆಗುವಿಕೆಯ ಕ್ರಮ. ಆದ್ದರಿಂದ ಇವರು ಹಿಂದಿನ ಅಜ್ಞಾನ ಮತ್ತು ಸ್ವಾರ್ಥ ರೂಪ ಪ್ರಪಂಚದ ಕಷ್ಟಗಳನ್ನು ದಾಟಿರುವದರಿಂದ ಸಹಜ ಶಾಂತರಾಗಿರುತ್ತಾರೆ. ಇವರಿಂದ ಆಗುವ ಲೋಕೋಪಕಾರವೆಂದರೇ ಅವರು ತಮ್ಮದೆನ್ನುವ ಯಾವುದೇ ಕೇಡುಗಳನ್ನು ಇಲ್ಲಿ ಅಂಟಿಸುವುದಿಲ್ಲ. ಅನ್ಯರು ಎಷ್ಟೇ ಜ್ಞಾನಿ ಗಳಾಗಿದ್ದರೂ ಈ ಸಾಧಕರನ್ನು ಯಾರೂ ಪ್ರಭಾವಿಸಲಾರರು ಮತ್ತು ಗೆಲ್ಲಲಾರರು. ಅವರ ಪ್ರಜ್ಞೆ ಯಾವ ಹಂತದಲ್ಲಿ ರುತ್ತೆ ಎಂದರೆ ತನ್ನ ಎದುರಿಗೆ ಇರುವವರಿಗೆ ಸರಳವಾಗಿ ಅಚಲತ್ವವನ್ನು ಹೇಳಬಲ್ಲರು . ಆದರಿಂದಲೇ ಅವರು ಇಡೀ ಜೀವಕುಲದೊಂದಿಗೆ ಸ್ನೇಹ ಜೀವಿಗಳಾಗಿರುತ್ತಾರೆ.

ವಸ್ತು ಸ್ಥಿತಿಯ ವಾಸ್ತವತೆ ಸದಾ ಅವರಿಗೆ ಹೊಸ ಬೆಳಕಿನಂತಾಗಿರುತ್ತದೆ. ಇದು ಅವರು ಕಂಡುಕೊಂಡ ಪ್ರತ್ಯಕ್ಷ ಧ್ಯಾನ. ಇಂಥವರನ್ನು ಕನಸಿನಿಂದ ಎದ್ದವರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅಂದರೇ ಅವರು ಸದಾ ಎಚ್ಚೆತ್ತ ಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಅವರಲ್ಲಿ ಕಾರುಣ್ಯವು ಸಹಜ.  ಈ ಕಾರಣವೇ ಅವರನ್ನು ಪರಿಣಾಮಗಳಿಂದಾಚೆ ಕೊಂಡೊಯ್ಯಬಲ್ಲುದು ಹಾಗೂ ಎಲ್ಲಾ ಸನ್ನಿವೇಶಗಳಲ್ಲೂ ಇವರು ಸರಿಯಾದದನ್ನೇ ಮೂಡುವವರಾಗಿರುತ್ತಾರೆ.

ಅಚಲಿಗರು ಸುಮ್ಮನೇ ಬಾಳುತ್ತಿರುವುದರಿಂದ ಯಾರ ಅರಿವಿಗೂ ಬರುತ್ತಿಲ್ಲ.  ಈ ಅಚಲಮಾರ್ಗದ ಮಹಾಗುರುಗಳೆಂದು ಸರಹಪಾದ ಹಾಗೂ ಅಲ್ಲಮಪ್ರಭುವನ್ನು ಗುರ್ತಿಸುತ್ತಾರೆ, ಹೀಗಾಗಲೇ ಹೇಳಿದಂತೆ ಅಚಲಿಗರಿಗೆ ಸುಧೀರ್ಘವಾದ ಗುರುಪರಂಪರೆಯಿದೆ. ಅವರು ತಮ್ಮ ಗುರು ಪರಂಪರೆಯನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಸಾಗುತ್ತಾರೆ.

ಇದು ಅರಿವಿನ ಮಾರ್ಗವಾಗಿರುವುದರಿಂದ ಪರಿಪೂರ್ಣವನ್ನು ಸಾಧಿಸಿಕೊಂಡ ಗುರುವನ್ನು ಅರಿವಿನ ರೂಪವೆಂದೇ ಗೌರವಿಸುತ್ತಾರೆ. ನಿರಂತರ ಸಮರಸವನ್ನು ಕಾಪಾಡಿಕೊಳ್ಳುವುದು ಅವರ ಕ್ರಮ. ತಣ್ಣಗೆ ಸಮಾನತೆಯನ್ನು ಅನ್ವಯಿಸಿಕೊಂಡು ಬಾಳುವುದು ಎಂತಹ ಇಕ್ಕಟ್ಟು ಎಂಬುದು ತಕ್ಷಣಕ್ಕೆ ಅರಿವಿಗೆ ಬರುವ ಸಂಗತಿ.

ಪ್ರಕ್ಷುಬ್ಧಗೊಂಡಿರುವ ನಮ್ಮ ಆವರಣದ ಎಲ್ಲಾ ಪಂಥಗಳಿಂದ ಬಿಡಿಸಿಕೊಂಡು ಸುಮ್ಮನೆ ಬಾಳುವ ಬಗೆಗೆ ಮಾತನಾಡುವುದು ಕೂಡ ಅಪರಾಧದಂತೆ ಕೇಳಿಸುತ್ತದೆ. ಮನೋಕೇಡುಗಳಿಂದ ಮುಕ್ತ ನಾಗುವುದು ಸರಳ. ಸಂಗತಿಯಾಗಿ ಕಂಡರೂ ನಮ್ಮ ನಡುವೆ ಇಡುಕಿರಿದಿರುವ ಬಿಕ್ಕಟ್ಟುಗಳ ನಿವಾರಣೆ ಸರಳ ಸಂಗತಿಯಲ್ಲ. ಅಚಲಿಗರು ಬೌದ್ಧ ಧರ್ಮ ಮಾರ್ಗಿಗಳು, ನಮ್ಮ ನಡುವೆ ಅವರೂ ಬಾಳುತ್ತಿದ್ದಾರೆ. ಬೌದ್ಧ ಧರ್ಮವು ಈ ನೆಲದಿಂದಲೇ ಕಣ್ಮರೆಯಾಗಿ ಹೋಯಿತು ಎಂದು ಹಲುಬಬೇಕಿಲ್ಲ. ಅವರು ಯಾವುದೇ ಧಾರ್ಮಿಕ ಸಂಕೇತಗಳ ಬಂಧನಕ್ಕೆ ಒಳಗಾಗಲು ಬಯಸದ ಬಯಲಿನ ಸಾಧಕರು. ರೂಢಿಗೆ ಬಿದ್ದಿರುವ ನುಡಿಗಳ ಪುನರಾವೃತ್ತಿ ಚಲನೆಗಳ ಮೂಲಕ ತತ್ವಪದಕಾರರು ಜಗತ್ತನ್ನು ಪರಿಗ್ರಹಿಸಲು ಹೋಗುವುದ್ದಿಲ್ಲ. ಅದಕ್ಕಾಗಿಯೇ ಅವರು ಅಚಲರು !.

ಅಧ್ಯಾಯ -4.5

ದಾಸ ತತ್ವ ಚಿಂತನ

ಧರ್ಮ-ತತ್ವ-ನೀತಿಗಳನ್ನೊಳಗೊಂಡ ಭಜನೆ-ಕೀರ್ತನೆಗಳನ್ನು ಮನದಣಿಯುವತನಕ ಹಾಡಿಮೈಮರೆಯುತ್ತಾರೆ. "ಅಂಬಿಗ ನಾ ನಿನ್ನ ನಂಬಿದೆ", "ಎನ್ನ ಮನದ ಡೊಂಕು ತಿದ್ದೇಯಾ...", "ಗಿಳಿಯು ಪಂಜರದೊಳಿಲ್ಲ..", "ಮಾನವ ಜನ್ಮ ದೊಡ್ಡದೊ.." ಹಾಗು ಅನೇಕ ಹಾಡುಗಳು ಪದೇ ಪದೇ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ.

ಇಡೀ ದಾಸ ಸಾಹಿತ್ಯವನ್ನು ಅವಲೋಕಿಸಿದರೆ, ದಾಸರೆಲ್ಲಾ ಹಾಡಿದ್ದನ್ನೆ ಹಾಡಿದ್ದಾರಲ್ಲ ಎನಿಸಿಬಿಡುತ್ತದೆ. ಯಾವುದೇ ಕೀರ್ತನೆಯನ್ನು ತೆಗೆದುಕೊಳ್ಳಿ ಅದರ ಉದ್ದೇಶ ಇಷ್ಟೆ, "ಆತ್ಮವಿಮರ್ಶೆ, ಆತ್ಮನಿಂದನೆ, ಮೋಕ್ಷ, ಮುಕ್ತಿ, ತತ್ವ ಮತ್ತು ನೀತಿ." ಆಧುನಿಕ ಕನ್ನಡ ಸಾಹಿತ್ಯವನ್ನು ಹೊರತುಪಡಿಸಿದರೆ, ಇಡೀ ಕನ್ನಡ ಸಾಹಿತ್ಯದಲ್ಲಿ ಕಾಣುವ ಸಾಹಿತ್ತಿಕ ವಸ್ತು ಬರೀ "ಧರ್ಮ-ತತ್ವ-ನೀತಿ" ಮಾತ್ರ. ೧೨ನೇ ಶತಮಾನದ ವಚನಕಾರರಿಗಿಂತ ಮುಂಚೆ ಪಂಪನ ಕಾಲದಲ್ಲಿ ಕವಿಗಳು ಹೇಳಿದ್ದಿಷ್ಟೆ, "ಸಾಹಿತ್ಯ ಇರುವುದು ಜನರ ಶ್ರೇಯಸ್ಸನ್ನು ಸಾಧಿಸಲು.

ಇದು ಪಾಪ, ಇದು ಪುಣ್ಯ, ಇದು ಹಿತ, ಇದು ಅಹಿತ, - ಎನ್ನುವುದನ್ನು ತಿಳಿಯ ಹೇಳಲು. ಒಟ್ಟಿನಲ್ಲಿ ಪುರುಷಾರ್ಥ ಪ್ರಾಪ್ತಿಗೋಸ್ಕರ [ಜಿ. ಎಸ್. ಶಿವರುದ್ರಪ್ಪ, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ]." ಕೆಲವೊಮ್ಮೆ ಧರ್ಮದ ಉದ್ದೇಶವೇ ಕಾವ್ಯದ ಉದ್ದೇಶವಾಗಿದ್ದುಂಟು. ಪಂಪನ ನಂತರ ೧೨ನೇ ಶತಮಾನದಲ್ಲಿ ಬಂದ ವಚನಕಾರರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಆದರೆ ಅವರ ಸಾಹಿತ್ಯದ ವಸ್ತು ಮಾತ್ರ ಮತ್ತೆ ಅದೇ, "ಧರ್ಮ-ತತ್ವ-ನೀತಿ". ೧೫ನೇ ಶತಮಾನದಲ್ಲಿ ಬಂದ ಕುಮಾರವ್ಯಾಸನು ಕೂಡ ಸಾಹಿತ್ಯದ ವಸ್ತುವಿನ ಆಯ್ಕೆಯಲ್ಲಿ ಪಂಪನ ಹಾದಿಯನ್ನೇ ಹಿಡಿದನು.

ವಚನಕಾರರ ನಂತರ ಬಂದ ವ್ಯಾಸರಾಯರು, ಪುರಂದರದಾಸರು, ಕನಕದಾಸರು ಕೂಡ ತಮ್ಮ ಕೀರ್ತನೆಗಳ ವಸ್ತುವಿನ ಆಯ್ಕೆಯಲ್ಲಿ ಹೆಚ್ಚು ಕಮ್ಮಿ ವಚನಕಾರರ ಹಾದಿಯನ್ನೇ ಹಿಡಿದರು. ಪಂಪ-ಕುಮಾರವ್ಯಾಸರುಮತ್ತು ವಚನಕಾರರು-ದಾಸರಲ್ಲಿರುವವ್ಯತ್ಯಾಸ ಇಷ್ಟೆ, "ಪಂಪ-ಕುಮಾರವ್ಯಾಸರು ಸಂಸಾರಿಕ ಜೀವನದ ನಶ್ವರತೆಯನ್ನು ಎತ್ತಿಹಿಡಿದು, ಮೋಕ್ಷವೇ ಜೀವನದ ಅಂತಿಮ ಗುರಿ ಎಂದರು.

ಆದರೆ ವಚನಕಾರರು-ದಾಸರು ಸಂಸಾರಿಕ ಜೀವನವನ್ನು ಅತ್ಯಂತ ಸಹಾನುಭೂತಿಯಿಂದ ನೋಡಿ, ಸಂಸಾರದಲ್ಲಿದ್ದುಕೊಂಡೇ ಭಗವಂತನ ಸಹಾಯದಿಂದ ಮುಕ್ತಿಯನ್ನು ಪಡೆಯಬಹುದೆಂದರು." ನಂತರ ಬಂದ ಹರಿಹರ ಕೂಡ ರಗಳೆಗಳ ರೂಪದಲ್ಲಿ ಭಕ್ತಿಯ ಮಾರ್ಗವನ್ನೇ ಹಿಡಿದ, ರಾಘವಾಂಕ ಮತ್ತೆ ಪಂಪ-ಕುಮಾರವ್ಯಾಸರ ಹಾದಿಯನ್ನು ತುಳಿದ.

ಇಡೀ ಕನ್ನಡ ಸಾಹಿತ್ಯದಲ್ಲಿ ಆಧುನಿಕ ಕನ್ನಡ ಸಾಹಿತ್ಯ ಮಾತ್ರ ವೈವಿಧ್ಯತೆಯಿಂದ ಕೂಡಿದೆ ಅನಿಸುತ್ತದೆ. ಸಾಹಿತ್ತಿಕ ವಸ್ತುವಿನ ದೃಷ್ಟಿಯಿಂದ ಅದೇನೆ ಇದ್ದರೂ, ಸಾಮಾಜಿಕ ಮತ್ತು ಸಂಗೀತದ ದೃಷ್ಟಿಯಿಂದ ವಚನಕಾರರ ಮತ್ತು ದಾಸರ ಕೊಡುಗೆ ಅಪೂರ್ವವಾದುದು. ಬಸವಾದಿ ಶರಣರು ಕನ್ನಡ ಸಾಹಿತ್ಯಕ್ಕೆ ವಚನಗಳೆಂಬ ಅಪೂರ್ವ ಕಾಣಿಕೆ ಕೊಟ್ಟಂತೆ ಪುರಂದರಾದಿ ದಾಸರು ಕೀರ್ತನೆಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ದಾಸ ಸಾಹಿತ್ಯವು ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದು. ನೂರಾರು ಜನ ಹರಿದಾಸರು, ಸಹಸ್ರಾರು ಕೃತಿಗಳು ಇದರ ಆಸ್ತಿ. ಸಾಹಿತ್ಯದೊಂದಿಗೆ ಸಂಗೀತ ಇದರ ಇನ್ನೊಂದು ವೈಶಿಷ್ಟ್ಯ. ನವವಿಧ ಭಕ್ತಿ, ಪಂಚಭಾವಗಳು, ಸಪ್ತತಾಳಗಳು, 32 ರಾಗಗಳು, ಬೆಸಸಂಖ್ಯಾ ನುಡಿಗಳು ಇದರ ಕೆಲವು ಗುಣಲಕ್ಷಣಗಳು.

ಹೈದರಾಬಾದ್ ಕರ್ನಾಟಕದ ಪ್ರಮುಖ ಹರಿದಾಸರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವದಾದರೆ ಆನಂದದಾಸರು, ವಿಠ್ಠಲದಾಸರು, ಶ್ರಿನಿವಾಸ ದಾಸರು, ಗೋಪತಿದಾಸರು, ಟೊಂಕದಾಸರು, ಗಿರಿಧರದಾಸರು, ದಾಸಾಚಾರ್ಯರು, ಗಿರಿರಾಯಾಚಾರ್ಯರು, ಮೊದಲಾದವರು.

ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಚೀಕಲಪರವಿಯಲ್ಲಿ ಇರುವ ವಿಜಯದಾಸರ ಕಟ್ಟೆ ಅತ್ಯಂತ ಜಾಗೃತ ಸ್ಥಳವಾಗಿದೆ. ಇವರು ಪುರಂದರದಾಸರ ಅಂಶಸಂಭೂತರೆಂದೇ ಪ್ರತೀತಿ. ಕೀರ್ತನೆ, ಸುಳಾದಿ, ಉಗಾಭೋಗ ರಚಿಸಿದ ಇವರ ಅಂಕಿತ ನಾಮ ವಿಜಯವಿಠ್ಠಲ.

ಗಲಗಲಿ ಅವ್ವನವರು ಕ್ರಿ.ಶ. 1695ರ ಆಸುಪಾಸಿನಲ್ಲಿ ಬದುಕಿದ್ದರೆಂದು ತಿಳಿದುಬರುತ್ತದೆ. ಇವರು ಪ್ರಥಮ ಮಹಿಳಾದಾಸದು ಪ್ರತೀತಿ. ಇವರು ರಮೇಶ, ರಮೀಯರಸ ಎಂಬ ಅಂಕಿತದಿಂದ ಕೀರ್ತನೆಗಳನ್ನು ರಚಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಭೋಗಾಪುರ ಇವರ ತವರು ಮನೆ. ಗೋಪಾಲದಾಸರ ಹೆಸರು `ಭಕ್ತಿಯಲ್ಲಿ ಭಾಗಣ್ಣ~ ಎಂದೇ ಪ್ರಸಿದ್ಧಿ. ಇವರು ದೇವದುರ್ಗ ತಾಲ್ಲೂಕಿನ ಮೊಸರುಕಲ್ಲಿನವರು ಎಂದು ತಿಳಿದುಬರುತ್ತದೆ. ಇವರು ವಿಜಯದಾಸರ ಶಿಷ್ಯರು.

ದ್ವಿತೀಯ ಘಟ್ಟದ ಹರಿದಾಸರಲ್ಲಿ ಅತ್ಯಂತ ಪ್ರಮುಖರು ಜಗನ್ನಾಥದಾಸರು. ಇವರ ಆಧ್ಯಾತ್ಮಿಕ ಕಾವ್ಯ ಹರಿಕಥಾಮೃತಸಾರವು 32 ಸಂಧಿಗಳು ಉಳ್ಳ ಸುಮಾರು ಸಹಸ್ರ ಪದ್ಯಗಳ ಭಾಮಿನಿ ಷಟ್ಪದಿ ಕಾವ್ಯ. ಇದು ಮುಂದಿನ ಹರಿದಾಸರಿಗಷ್ಟೇ ಅಲ್ಲದೇ ಸಮಸ್ತ ದ್ವೈತ ಪರಂಪರೆಗೆ ಒಂದು ಕನ್ನಡ ಸೈದ್ಧಾಂತಿಕ ಭಕ್ತಿ ಪರ ಕೃತಿಯೂ ಆಗಿದೆ. ಕ್ರಿ. ಶ 1728ರಿಂದ 1809ರವರೆಗೆ ಇದ್ದ ಇವರು ಮಾನ್ವಿಯವರು.

 ಮಡಿಯೆಂದಡಿಗಡಿಗಾರುತಿಇದು ಉಡುಪಿಯ ಮಾಧ್ವ ಮಠಗಳ ಪರಮ ಭಕ್ತರಾದ ಪುರಂದರದಾಸರ ಪದ. ಪಂಕ್ತಿಬೇಧದ ಹಿಂದಿನ ಬೇಧ ಭಾವನೆಯ ಮೂಲಧಾರವನ್ನು ಸ್ಪಷ್ಟವಾದ ಮಾತುಗಳಲ್ಲಿ ಹೇಳಿ ಖಂಡಿಸುತ್ತಾರೆ ಪುರಂದರದಾಸರು. ಶುಚಿ-ಅಶುಚಿ ಅಥವಾ ಮಡಿ-ಮೈಲಿಗೆ ಎನ್ನುವ ಭಾವನೆ ಜಾತಿ ಪದ್ಧತಿಯ ಮೇಲು-ಕೀಳು ಭಾವನೆಯ ಪ್ರತಿಬಿಂಬ. ಯಾವುದು ಶುಚಿ ಯಾವುದು ಅಶುಚಿ ಎಂಬ ಬಗ್ಗೆ ಪುರೋಹಿತಶಾಹಿ ಜನರಲ್ಲಿ ಇರುವ ದೈನಂದಿನ ಪದ್ಧತಿಗಳನ್ನು, ಆಚರಣೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ.

ಮಣ್ಣು, ಧೂಳು, ಕೆಸರು ಅಶುಚಿ-ಮೈಲಿಗೆ, ಮಣ್ಣಿನ ಜೊತೆ, ಧೂಳಿನ ಜೊತೆ ಒಡನಾಡಬೇಕಾದ ದುಡಿಮೆಗಾರ ಜನ ಮೈಲಿಗೆ. ಅವರ ದುಡಿಮೆಯಿಂದ ಹುಟ್ಟುವ ಬೆವರು, ಬೆವರಿನ ವಾಸನೆಯೇ ಮೈಲಿಗೆ. ದಿನಕ್ಕೆ ಹಲವಾರು ಬಾರಿ ಸ್ನಾನ ಮಾಡಿ ಬೆವರ ವಾಸನೆ ಕಳೆಯುವುದಕ್ಕೆ ಗಂಧಪೂಸಿಕೊಂಡು ಊದುಕಡ್ಡಿಗಳ, ಹೂವಿನ ಸುವಾಸನೆ ಘಮಘಮವಾದ ನಡುವೆ, ಕುಳಿತು ಮಂತ್ರ ಹೇಳುವ ಅಥವಾ ಓದುವ, ಕಲಿಸುವ ಕ್ರಿಯೆ ಶುಚಿ.

ಅನ್ನ ಶುಚಿ-ದೇವರು, ಕೆಸರು ಮೈಲಿಗೆ, ಕೊಳೆ-ಕೆಸರೊಳು ತಾವರೆ ಪುಟ್ಟಲು ಅದತಂದು ಬೀಸಜನಾಭನಿಗೆ ಅಪರ್ಸಲಿಲ್ಲವೇ ಎಂದು ಪರಂದರದಾಸರು ಪ್ರಶ್ನಿಸಿದ್ದು ಇಂತಹ ಬೇಧ ಭಾವದ ಮನಸುಗಳ ಬಗ್ಗೆಯೇ. ಹೀಗೆ ಆಹಾರವನ್ನು ಬೆಳೆಯುವವವರು-ರೈತರು, ಕೂಲಿಕಾರರು, ಕಮ್ಮಾರ, ಚಮ್ಮಾರ, ಕುಂಬಾರ, ಬಡಿಗ, ಅಕ್ಕಸಾಲಿಗಳೆಲ್ಲಾ, ದನ, ಕುರಿಕಾಯುವ ಗೊಲ್ಲ, ಕುರುಬರೆಲ್ಲಾ-ವಸ್ತುಗಳನೊಡನಾಡಿ-ಮಣ್ಣು, ಸಗಣಿ, ಕಬ್ಬಿಣ, ಮರ, ಚರ್ಮ, ಚಿನ್ನ, ಇದ್ದಿಲು ಇವುಗಳನೊಡನಾಡಿ ಎಲ್ಲರಿಗೂ ಬೇಕಾದ ಅನ್ನ, ಬಟ್ಟೆ, ಮನೆ, ಉಪಕರಣ, ಆಭರಣ ಇವುಗಳನ್ನೂ ಉತ್ಪಾದಿಸುವವರು, ಬೆವರುಹರಿಸಿ ದುಡಿಯುವವರೆಲ್ಲಾ ಮೈಲಿಗೆ. ಅವರನ್ನು ಮುಟ್ಟ ಬಾರದು.

ಮುಟ್ಟಿದರೆ ಮೈಲಿಗೆ ನಮಗೂ ಅಂಟಿಬಿಡುತ್ತದೆ. ನಮ್ಮ ಮಡಿಯನ್ನೂ ಕೆಡಿಸುತ್ತದೆ ಎನ್ನುವ ಮನೋಭಾವದ ಹಿಂದೆ ದುಡಿಮೆ ಎನ್ನುವುದೇ ಕೀಳು, ದುಡಿಮೆಗಾರರೆಲ್ಲಾ ಕೀಳು ಎನ್ನುವ ಮನೋಭಾವ ಒಡೆದು ಕಾಣುತ್ತದೆ.

ವೇದವನ್ನೋದುವವರು ಮಾತ್ರ ಮೇಲು, ಉಳಿದವರೆಲ್ಲಾ ಕೀಳು ಎನ್ನುವ ಮನೋಭಾವ ರಾಜನೂ, ಆಳುವವರೂ ತಮಗಿಂತ ಕೀಳು, ವ್ಯಾಪಾರ ಮಾಡುವವನು ಅವರಿಗಿಂತ ಕೀಳು (ಏಕೆಂದರೆ ಇವರೂ ಕೂಡ ಕತ್ತಿ-ಗುರಾಣಿ ಗದೆ, ಭಜರ್ಿಯೊಡನೆ, ತಕ್ಕಡಿ, ಸೇರು, ಚೀಲ ಇವುಗಳೊಡನೆ ವ್ಯವಹರಿಸಬೇಕು.) ಎಂಬ ಭಾವನೆಗೆ ದೂಡುತ್ತದೆ. ಜಾತಿ ಪದ್ಧತಿಯಲ್ಲಿ ಒಂದರ ಕೆಳಗೆ ಒಂದು ಎನ್ನುವ ಶ್ರೇಣಿಕೃತ ಸಮಾಜವನ್ನೂ ಸೃಷ್ಟಿಸುತ್ತದೆ.

ಮಡಿ-ಮೈಲಿಗೆ ಎನ್ನುವ ತರ-ತಮ ಭಾವನೆಯ ಜೊತೆಗೆ ಆಹಾರದಲ್ಲಿ ಮೇಲು ಕೀಳನ್ನು ಕಾಣುವ-ಮಾಂಸಾಹಾರ ಕೀಳು, ಸಸ್ಯಾಹಾರ ಮೇಲು ಎನ್ನುವ ಭಾವನೆ ಜೊತೆ ಗೂಡಿ ಜಾತಿ ಪದ್ಧತಿ ಯಲ್ಲಿ ಕೆಳಗಿನ ಜಾತಿಗಳು ತಮ್ಮ ಕೀಳುತನವನ್ನು ತಾವೇ ಒಪ್ಪಿಕೊಳ್ಳುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ.

ಮನೆಯೊಳಗೆ ಮಾಂಸದ ಅಡಿಗೆ ಮಾಡಬಾರದು. ಇಂತಹ ವರ್ಗ ಅಂತಹ ವರ್ಗವೆನ್ನಬಾರದು, ಮದುವೆ, ಹಬ್ಬಗಳಲ್ಲಿ ನಿಷೇಧ ಎನ್ನುವುದನ್ನೂ ಶಾಸ್ತ್ರ, ಪುರಾಣಗಳ ಮೂಲಕ ಹೇರಿ ಮಾಂಸಾಹಾರ ಮಾಡುವವರೆಲ್ಲಾ ಕೀಳು ಎನ್ನುವ ಸರ್ವ ವ್ಯಾಪಕ ಭಾವನೆಯನ್ನೂ ಬಿತ್ತಲಾಗಿದೆ. (ಯಜ್ಞಯಾಗಾದಿಗಳಲ್ಲಿ ಹಸು, ಕುದುರೆಗಳಾದಿಯಾಗಿ ಪ್ರಾಣಿ ಬಲಿಯನ್ನೂ ವ್ಯಾಪಕವಾಗಿ ಮಾಡಲಾಗಿದೆ. ಎಂಬುವುದನ್ನೇ ಮರೆ ಮಾಚಲಾಗಿದೆ.) ತಾಮಸ ಗುಣ ರೂಪಗೊಳ್ಳುತ್ತದೆ ಎಂದು ಅವೈಜ್ಞಾನಿಕವಾಗಿ ಭೋಧಿಸುತ್ತದೆ ಭಗವದ್ಗೀತೆಯಲ್ಲಿ `ಭಗವಂತನಿಂದಲೇ ಇದನ್ನು ಹೇಳಿಸಲಾಗಿದೆ.

ಹೀಗೆ ಮಡಿ-ಮೈಲಿಗೆ ಸಾತ್ವಿಕ-ತಾಮಸ ಆಹಾರ ಇದರಿಂದ ಕೆಳ ಜಾತಿಯವರನ್ನೂ ಕಂಡರೆ ಅಸಹ್ಯ ಪಟ್ಟುಕೊಳ್ಳುವ, ಅವರು ಕಣ್ಣಿಗೆ ಬೀಳುವುದೇ ಪಾಪಕರವೆನ್ನುವ ಭಾವನೆಯನ್ನು ಬೆಳೆಸಲಾಗಿದೆ. ಇಂತಹ ಅಮಾನವೀಯ ಭಾವನೆಗಳಿಂದಾಗಿ ಯಾರ ಮನೆಯಲ್ಲಿ ಯಾರು ಊಟ ಮಾಡಬಾರದು, ಯಾರ ಮನೆಗೆ ಯಾರನ್ನೂ ಸೇರಿಸಬಾರದು, ಸೇರಿಸಿದರೆ ಅವರನ್ನು ಎಲ್ಲಿಯವರೆಗೆ ಸೇರಿಸಬಹುದು ಎನ್ನುವ ವಿಧಿ ನಿಷೇಧಗಳು ಹುಟ್ಟಿ ನಮ್ಮ ಜನರ ರಕ್ತದಲ್ಲಿಯೇ ಸೇರಿ ಬಿಟ್ಟಿದೆಯೇನೋ ಎನ್ನುವಂತೆ ಜಡವಾಗಿಬಿಟ್ಟಿವೆ. ಇಂತಹ ವಿಧಿ ನಿಷೇಧಗಳ ಒಂದು ಕುಪ್ರಸಿದ್ಧ ಮಾದರಿ ಮನುಸ್ಮೃತಿ.

ಅದೇ ಸಮಯದಲ್ಲಿ ಶಿವಶರಣರ ವಚನ ಚಳುವಳಿ, ಕದ್ರಿ, ಚುಂಚನಗಿರಿಗಳ ನಾಥ ಸಿದ್ಧರ ಪರಂಪರೆ, ಮಾಧ್ವರ ಹರಿದಾಸ ಪರಂಪರೆ, ಕಡಕೊಳ ಮಡಿವಾಳಪ್ಪ, ಕೈವಾರ ನಾರಾಯಣಪ್ಪ, ಶಿಶುನಾಳ ಶರೀಫರ ತತ್ವಪದಕಾರರ ಪರಂಪರೆ ಈ ಜಾತಿ ಬೇಧ, ಪಂಕ್ತಿಬೇಧಗಳನ್ನು ತಿರಸ್ಕರಿಸುತ್ತದೆ. ಅವುಗಳನ್ನು ಆಚರಿಸುವವರನ್ನು ಖಂಡಿಸುತ್ತದೆ.

ಹರಿದಾಸ ಭಕ್ತಿ ಚಳುವಳಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಮಹತ್ವದ ತಿರುವು ನೀಡಿತ್ತು. ಆರು ಶತಮಾನಗಳ ಅವಧಿಯಲ್ಲಿ ಹಲವು ಸಂತರು ಹಾಗು ಯೊಗಿಗಳು ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿಕರ್ನಾಟಕದ ಸಂಸ್ಕಾರ, ತತ್ವ ಹಾಗು ಕಲೆಯನ್ನು ರೂಪಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ, ಅವರು ಸಾಕಷ್ಟು ಧಾರ್ಮಿಕ ಪ್ರಭಾವವನ್ನು ಜನ ಸಮೂಹ ಹಾಗು ದಕ್ಷಿಣ ಭಾರತವನ್ನು ಆಳಿದ ರಾಜ್ಯಗಳ ಮೇಲೆ ಬೀರಿದರು.

ಈ ಚಳುವಳಿಯನ್ನು ಪ್ರಾರಂಭಿಸಿದ್ದು ಹರಿದಾಸರು(ಕನ್ನಡ:ಹರಿದಾಸರು,ಇದರ ಅಕ್ಷರಶಃ ಅರ್ಥವೆಂದರೆ 'ಹರಿಯ ಸೇವಕರು') ಹಾಗು ಆಕಾರ ಪಡೆದದ್ದು ೧೩ನೆಯ- ೧೪ನೆಯ ಶತಮಾನದ, ಕಾಲಮಾನದಲ್ಲಿ, ವಿಜಯನಗರಸಾಮ್ರಾಜ್ಯ ಆಳ್ವಿಕೆಯಾ ಕಾಲದಲ್ಲಿ ಹಾಗು ಅದರ ಮುನ್ನ. ಈ ಚಳುವಳಿಯ ಮುಕ್ಯ ಗುರಿ ಮಧ್ವಾಚಾರ್ಯರ ದ್ವೈತತತ್ತ್ವಶಾಸ್ತ್ರವನ್ನು ಜನಸಾಮಾನ್ಯರಲ್ಲಿದಾಸ ಸಾಹಿತ್ಯ ದ ಮಾಧ್ಯಮದಲ್ಲಿ ಪ್ರಸಾರಿಸುವುದು.

ಶ್ರೀಪಾದರಾಯ, ವ್ಯಾಸತೀರ್ಥ, ವಾದಿರಾಜತೀರ್ಥ,ಪುರಂದರ ದಾಸ ಹಾಗು ಕನಕ ದಾಸರಂತಹ ಪ್ರಖ್ಯಾತಹಿಂದೂ ತತ್ವಜ್ಞಾನಿಗಳು, ಕವಿಗಳು ಹಾಗು ವಿದ್ವಾಂಸ ಈ ಸಮಯದಲ್ಲಿ ಮುಖ್ಯ ಪಾತ್ರ ವಹಿಸಿದರು.  ಈ ಚಳುವಳಿ ಕನ್ನಡನಾಡಿನಲ್ಲಿ ಆರಂಭವಾಗಿ ನಂತರ ದಕ್ಷಿಣ ಭಾರತದ ಬೇರೆಡೆ ಹಬ್ಬಿದರೂ, ಇದು ಮುಂಚಿನ ಭಕ್ತಿ ಚಳುವಳಿಗಳಾದ ಬಸವಣ್ಣನವರು ೧೨ನೆಯ ಶತಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸಿದ್ದ ವೀರಶೈವ ಚಳುವಳಿ ಹಾಗು ತಮಿಳು ನಾಡಿನ ಆಳ್ವಾರ್ ಸಂತರ ೧೦ನೆಯ ಶತಮಾನದ ಚಳುವಳಿಗಳ ಫಲ. ಮುಂದೆ, ವಲ್ಲಭಾಚಾರ್ಯಗುಜರಾತ್‌ನಲ್ಲಿ ಹಾಗು ಗುರು ಚೈತನ್ಯ ಮಹಾಪ್ರಭು ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತರಾದರು. ಅವರ ಭಕ್ತರು ವಿಶ್ವಾದ್ಯಂತ ಇಸ್ಕಾನ್ ಚಳುವಳಿ ಶುರುಮಾಡಿದರು.

ಹರಿದಾಸರು ಸಂತರು, ಕೆಲವರು ಅಲೆದಾಡುವ ಹಾಡುಗರು, ಹಾಗು ತಮ್ಮನು ತಾವು - ಹರಿಯಾ ಸೇವಕರೆಂದು ಭಾವಿಸುತಿದ್ದರು. ಈ ಚಳುವಳಿ ಮುಖ್ಯವಾಗಿ ಬ್ರಾಹ್ಮಣರುನಡೆಸಿದರೂ, ಸಮಾಜದ ಎಲ್ಲ ವರ್ಗದವರು ಇದಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಹರಿದಾಸ ಚಳುವಳಿ ಕನ್ನಡ ಭಕ್ತಿ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದೆ.

ಹರಿದಾಸ ಚಳುವಳಿಯಾ ಮೂಲ ಸರಿಯಾಗಿ ಗುರ್ತಿಸಲಾಗದು, 9ನೆಯ ಶತಮಾನದಲ್ಲಿ ಈ ಚಳುವಳಿ ಶುರುವಾಯಿತು ಎನ್ನಲಾಗುತದೆ. ಆದರೆ ೧೩ನೆಯ ಶತಮಾನದಲ್ಲಿ ಉಡುಪಿಯ ಮಧ್ವಾಚಾರ್ಯರ(೧೨೩೮-೧೩೧೭) ಆಶ್ರಯದಿಂದ ದಾಸ ಕೂಟ ಎಂಬ ವೈಷ್ಣವ ಭಕ್ತಿ ಚಳುವಳಿ ಕರ್ನಾಟಕದಲ್ಲಿಶುರುವಾಯಿತು. ಈ ಕಾಲಮಾನದಲ್ಲಿ, ಈ ಚಳುವಳಿ ಒಂದು ಬಲಶಾಲಿ ಧಾರ್ಮಿಕ ಶಕ್ತಿಯಾಯಿತು, ಇದರಿಂದಾಗಿ ಹಿಂದೂಮನೋಭಾವನೆ ದಕ್ಷಿಣ ಭಾರತದಲ್ಲಿ ನವಚೈತನ್ಯಭರಿತವಾಯಿತು, ಈ ವೇಳೆ ಉತ್ತರ ಭಾರತ ಆಗಲೇ ಮುಸ್ಲಿಂ ಆಳ್ವಿಕೆಗೆ ಸಿಲಿಕಿತ್ತು. ಹರಿದಾಸರಿಗೆವಿಜಯನಗರ ಸಾಮ್ರಾಜ್ಯದಲ್ಲಿ ಪೋಷಣೆ ದೊರಕಿತು.ವ್ಯಾಸತೀರ್ಥ, ಕೃಷ್ಣದೇವರಾಯನ ಗುರುವೆಂದು ಭಾವಿಸಲಾಗುತ್ತದೆ.

ಹರಿದಾಸರು ಹಿಂದೂಧರ್ಮದ ವೈಷ್ಣವ ಭಕ್ತರು ಹಾಗು ವಿಠ್ಠಲ, ವಿಷ್ಣುವಿನ ಅವತಾರ ಹಾಗು ಕೃಷ್ಣನನ್ನುಪುಜಿಸ್ಸುತಿದ್ದರು.ಹರಿದಾಸ ಚಳುವಳಿಯಲ್ಲಿ,ಮಹಾರಾಷ್ಟ್ರದ ಪಂಢರಪುರದ ಭೀಮನದಿ ತೀರದಲ್ಲಿರುವ ವಿಠ್ಠಲನಾಥ ದೇವಸ್ತಾನ, ಕರ್ನಾಟಕದ ಹಂಪಿಯಲ್ಲಿನ ವಿಠ್ಠಲ ಸ್ವಾಮಿ ದೇವಸ್ತಾನ ಹಾಗು ಆಂಧ್ರ ಪ್ರದೇಶದತಿರುಮಲ ಬೆಟ್ಟದಲ್ಲಿರುವ ಶ್ರೀನಿವಾಸ ದೇವಸ್ತಾನ ಅತಿ ಪವಿತ್ರವಾದ ಸ್ಥಳಗಳು.

ಹರಿದಾಸರು' ಸಾಮಾನ್ಯವಾಗಿ ಕರ್ನಾಟಕದವರಾಗಿದರು, ಕೆಲವರನ್ನು ಹೊರಿತುಪಡಿಸಿ, ಜಯತೀರ್ಥ ಮಹಾರಾಷ್ಟ್ರದಪಂಢರಪುರದ ಹತ್ತಿರದ ಮಂಗಳ್ವೆಧೆ  ಹಾಗು ಶ್ರೀ ನರಹರಿ ತೀರ್ಥ (ಮಧ್ವಾಚಾರ್ಯರ ಭಕ್ತ) ಇವರು ಆಂಧ್ರ ಪ್ರದೇಶ ಅಥವಾ ಒರಿಸ್ಸಾದವರು.

ಶ್ರೀಪಾದರಾಯರು, ವ್ಯಾಸತೀರ್ಥರು ಹಾಗುವಾದಿರಾಜತೀರ್ಥರನ್ನು "ಮೂರು ವ್ಯಾಪಕದ ಸಂತರು" (ಯತಿ ರಾಜ ತ್ರಯರು, ಸನ್ಯಾಸರಾದರು ಇವರಿಗೆ ಸಮಕಾಲೀನ ರಾಜರು ವಿಶೇಷ ಸಹಾಯವನ್ನೀಡಿದರು) ಎಂದು ಹರಿದಾಸ ಚಳುವಳಿ ಭಾವಿಸಲಾಗುತ್ತದೆ ಆದರೆ "ವೈಷ್ಣವ ಕವಿ ತ್ರಿಮೂರ್ತಿ" ಗಳ ಪಟ್ಟ ಶ್ರೀಪಾದರಾಯ, ಪುರಂದರದಾಸ ಹಾಗು ಕನಕದಾಸರದ್ದು.

ಹರಿದಾಸ ಚಳುವಳಿ ಕನ್ನಡ ಸಾಹಿತ್ಯ ಭಕ್ತಿ ಸಾಹಿತ್ಯದ ರೂಪದಲ್ಲಿ ಮಹತ್ವದ ಕೊಡಿಗೆ ಮಾಡಿದೆ. ಭಕ್ತಿ ಚಳುವಳಿ ಇಂದ ಹುಟ್ಟಿದ ಸಾಹಿತ್ಯವನ್ನು ದಾಸ ಸಾಹಿತ್ಯ ಎಂದು ಕರೆಯಲಾಗುತ್ತದ್ದೆ. ಜಗನ್ನಾಥದಾಸ, ವಿಜಯ ದಾಸ ಹಾಗು ಗೋಪಾಲದಾಸ,ಕನ್ನಡ ಸಾಹಿತ್ಯದ ಬೆಳವಣಿಗೆಗೆ ದುಡಿದ ಪ್ರಸಿದ್ದ ಕವಿಗಳು. ಹರಿದಾಸ ಚಳುವಳಿ ಕರ್ನಾಟಕ ಸಂಗೀತಬೆಳವಣಿಗೆಯನ್ನು ಹಿಂದೂಸ್ತಾನಿ ಇಂದ ಬೇರೆ ಒಂದು ಪ್ರತ್ಯೇಕ ರೀತಿಯಲ್ಲಿ ಮುದುವರಿಸಿತು, ಇದರಿಂದಾಗಿ ಭಾರತದ ಶಾಸ್ತ್ರೀಯ ಸಂಗೀತ ಒಂದು ನವೋದಯವಾಯಿತು.

ಇಂಥಹಾ ಒಂದು ದೊಡ್ಡ ದಾಸ ಪರಂಪರೆಗೆ ಬೀಜ ರೂಪವಾದ ಶ್ರೀ ಪಾದರಾಯರ ಕಾರ್ಯಕ್ಷೇತ್ರ ಮುಳಬಾಗಿಲು ಪಕ್ಕದ ನರಸಿಂಹತೀರ್ಥವೇ ಆಗಿದೆ. ಶ್ರೀಪಾದರಾಯರ  ನಂತರದ ಒಂದು ದೊಡ್ಡ ಗುರು ಶಿಷ್ಯ ಪರಂಪರೆ ಮುಳಬಾಗಿಲಿನ ನರಸಿಂಹತೀರ್ಥದ ಶ್ರೀಪಾದರಾಯರ ಮಠದಲ್ಲಿ ಇಂದಿಗೂ ಕಾಣಬಹುದಾಗಿದೆ . ಇಲ್ಲಿ ಶ್ರಿಪಾದರಾಯರ ವೃಂದಾವನ ವಿದ್ದು ಒಂದು ಪ್ರಸಿದ್ದವಾದ ಯಾತ್ರಾ ಸ್ಥಳವೂ ಆಗಿದೆ.

 

 

 

 

 

 

ಅಧ್ಯಾಯ -5

 ಸಮಾರೋಪ                                                              

‘’ಅವಿಭಜಿತ ಕೋಲಾರ ಜಿಲ್ಲಾ ವ್ಯಾಪ್ತಿಯ ತತ್ವಪದಕಾರರ ಬದುಕು- ಬರಹಗಳ ಅಧ್ಯಯನ’’ ಈ ಅಧ್ಯಯನ ಸಂಪ್ರಭಂದಕ್ಕೆ ಸಂಭಂಧಿಸಿ, ಉದ್ದೇಶ ವ್ಯಾಪ್ತಿ ಮಹತ್ವ  ಒಳಗೊಂಡಂತೆ ತತ್ವಪದಕಾರರ ಬದುಕು ಬರಹದ ಸ್ವರೂಪ ಹಾಗೇ ತತ್ವಪದಕಾರರ ಹಾಗೂ ತತ್ವಪದ ಗಳ ಹಲವು ಕವಲುಗಳನು ಬೇರೆ ಬೇರೆ ನೆಲೆ ಗಳಲ್ಲಿ ಚಿಂತಿಸುವ, ಪರಾಮರ್ಶಿಸುವ ನಮ್ಮ ಪ್ರಯತ್ನ ಈ ಸಂಪ್ರಭಂಧದ ಮಟ್ಟಿಗೆ  ಮುಕ್ತಾಯದ  ಹಂತಕ್ಕೆ ಬಂದು ತಲುಪಿದೆ.

ನಮ್ಮ ಸಾಹಿತ್ಯ ಚರಿತ್ರೆ ಮತ್ತು ಸಂಸ್ಕೃತಿಯ ವಿಶ್ಲೇಷಣೆಯಲ್ಲಿ ಅನುಭಾವಿ ಕವಿಗಳ ಅಭಿವ್ಯಕ್ತಿಗೆ ತಕ್ಕ ನ್ಯಾಯ ದೊರೆತಿದೆ ಎನ್ನಿಸುವುದಿಲ್ಲ. ಈ ಕಾಲಮಾನದಲ್ಲಿ ಅಂದರೆ ಹದಿನೇಳು ಹದಿನೆಂಟನೆಯ ಶತಮಾನದಲ್ಲಿ ರಚನೆಯಾಗಿರುವ ತತ್ವಪದಗಳು ತುಂಬಾ ದೊಡ್ಡ ಕೆಲಸ. ನಾಡಿನ ತುಂಬ ಚದುರಿಹೋಗಿರುವ ಪದಗಳ ಸಂಖ್ಯೆ ಕೆಲವು ಸಾವಿರ ಸಂಖ್ಯೆಯನ್ನು ಮುಟ್ಟುತ್ತದೆ. ಕನ್ನಡ ದೇಸಿ ಛಂದೋವಿಧಾನದ ಬಳಕೆಯನ್ನು ಈ ವಲಯ ಪ್ರಕಟಪಡಿಸುತ್ತದೆ.

 ಅಲ್ಲದೆ ಆಧುನಿಕ ಕನ್ನಡ ಕಾವ್ಯದ ಮೇಲೆ ಇದು ಉಂಟುಮಾಡಿರುವ ಪರಿಣಾಮ ಹೆಚ್ಚು ಸೂಕ್ಷ್ಮವಾದ ಅಧ್ಯಯನಕ್ಕೆ ತಕ್ಕ ಭಿತ್ತಿಯನ್ನು ಒದಗಿಸಿಕೊಡುತ್ತದೆ.ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರಸಿದ್ಧ ಚಿಂತಕರಾಗಿದ್ದ ಕಿ. ರಂ. ನಾಗರಾಜ ಅವರ ಮೇಲಿನ ಮಾತು ಗಮನಾರ್ಹವಾದುದು. ಹದಿನೇಳು ಹದಿನೆಂಟನೆಯ ಶತಮಾನದಲ್ಲಿ ರಚಿತವಾದ ತತ್ವಪದ ಸಾಹಿತ್ಯವನ್ನು ಕುರಿತು ಆಡಿರುವ ಅವರ ಈ ಮಾತು ಕನ್ನಡ ಸಾಹಿತ್ಯ ಚರಿತ್ರೆಯ ನಿರೂಪಣೆಯ ನೋಟಕ್ರಮಗಳಲ್ಲಿನ ಮೂಲಭೂತ ಸಮಸ್ಯೆಯ ಕಡೆಗೆ ಬೆರಳು ತೋರುತ್ತಿದೆ.

 ಅಂದರೆ ಆರಂಭಿಕ ಕಾಲಘಟ್ಟದ ಸಾಹಿತ್ಯ ಚರಿತ್ರೆಯ ನಿರೂಪಕರಿಗೆ ಸಾಹಿತ್ಯಎಂಬುದರ ಬಗೆಗೆ ಇದ್ದ ಅರಿವಿನ ಮಿತಿಯನ್ನು ಉದ್ದೇಶಿಸಿದೆ. ಈ ಮಿತಿ ತತ್ವಪದಗಳನ್ನು ಸಾಹಿತ್ಯ ಚರಿತ್ರೆಯಿಂದ ಹೊರಗಿಡುವಂತೆ ಮಾಡಿರುವುದನ್ನು ಸೂಚಿಸುತ್ತಿದೆ. ಚರಿತ್ರೆಕಾರರಿಗೆ ಗ್ರಂಥಸ್ಥವಾಗಿದ್ದು ಯಾವುದು ಶಿಷ್ಟವೆಂದು ಕರೆಸಿಕೊಂಡಿತ್ತೋ ಅದು ಮಾತ್ರ ಕಂಡಂತಿದೆ. ಹಾಗೆಯೇ ಅರಮನೆಗೆ ಮತ್ತು ವೈದಿಕ ಪಂಡಿತರು ಹಾಗೂ ಆಚರಣಾ ಲೋಕಕ್ಕೆ ಯಾವುದು ಹೆಚ್ಚು ಹತ್ತಿರದಲ್ಲಿತ್ತೋ ಅದು ಮಾತ್ರವೇ ಸಾಹಿತ್ಯವೆಂದು ಭಾವಿಸಿದಂತಿದೆ.

 ಹಾಗಾಗಿಯೇ ತಮ್ಮ ಅನುಭವಲೋಕಕ್ಕೆ ದಕ್ಕದೆ ಹೋದ ಸಾಹಿತ್ಯವನ್ನು ಬದಿಗೆ ಸರಿಸಿ ಸಾಹಿತ್ಯ ಚರಿತ್ರೆ ನಿರೂಪಿಸಿದ್ದಾರೆ. ಇಲ್ಲಿಯೇ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಸಾಹಿತ್ಯ ಚರಿತ್ರೆಕಾರರು ಬರೆಹಗಾರರು ಮತ್ತು ನಾಯಕ ಕೇಂದ್ರಿತ ನೆಲೆಯಿಂದ ಸಾಹಿತ್ಯ ಚರಿತ್ರೆಯನ್ನು ನಿರೂಪಿಸಲು ಮುಂದಾಗಿ ಕರ್ತೃ ಮತ್ತು ನಾಯಕರಿಲ್ಲದ ಸಾಹಿತ್ಯವನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿರುವುದು ಇಲ್ಲಿ ಕಂಡುಬರುತ್ತದೆ. ಜನಪದ ಸಾಹಿತ್ಯ ಕರ್ತೃ ಮತ್ತು ನಾಯಕರಿಲ್ಲದೆಯೇ ರಚನೆಗೊಂಡಿದೆ. ಅಲ್ಲಿ ನಾಯಕರಿದ್ದರೂ ಅವರು ವೈದಿಕ ಪುರಾಣ ಕಾವ್ಯಗಳ ರಾಮ-ಕೃಷ್ಣರಂತಹ ನಾಯಕರಂತಲ್ಲ.

 ಅವರು ತಳಸಮುದಾಯಗಳಿಂದ ಹುಟ್ಟಿಬಂದ ಜನನಾಯಕರು. ಅವರ್ಯಾರು ವೈದಿಕ ಸಂಸ್ಕೃತಿಯ ವಿಸ್ತರಣೆಗೆ ದುಡಿದವರಲ್ಲ. ಬದಲಿಗೆ ಅವರೆಲ್ಲ ಶಿವ ಸಂಸ್ಕೃತಿಯನ್ನು ಬೆಳೆಸಲು ಉಳಿಸಲು ದುಡಿದ ಸಾoಸ್ಕೃತಿಕ ನಾಯಕರು. ಮಂಟೇಸ್ವಾಮಿ, ಮಾದೇಶ್ವರ ಇತ್ಯಾದಿ ಜನಪದ ಮಹಾಕಾವ್ಯಗಳಲ್ಲಿ ಇದನ್ನು ಕಾಣಬಹುದು. ಇನ್ನು ತತ್ವಪದಗಳಲ್ಲಿಯಂತೂ ಇಂತಹ ನಾಯಕರಿಗೆ ನೆಲೆಯೇ ಇಲ್ಲ. ಇಂತಹ ನಾಯಕತ್ವವನ್ನು ದಿಕ್ಕರಿಸಿಯೇ ಹುಟ್ಟಿದ ಸಾಹಿತ್ಯವಿದು. ಅಲ್ಲದೆ ಇದು ಕೂಡ ವೈದಿಕ ಸಂಸ್ಕೃತಿಗೆ ವಿರುದ್ದವಾಗಿ ಶಿವ ಸಂಸ್ಕೃತಿಯನ್ನು ಬೆಳೆಸಲು ದುಡಿದ ಪಂಥವಾಗಿದೆ.

 ದೈವಕ್ಕಿಂತ ಹೆಚ್ಚಿನ ಆದ್ಯತೆಯನ್ನು ಗುರುವಿಗೆ ನೀಡಿ ಗುರುಮುಖೇನವಾಗಿ ಅರಿವಿನ ಹಾದಿಯಲ್ಲಿ ನಡೆದವರು. ಗುಡಿಗಳನ್ನು ದಿಕ್ಕರಿಸಿದವರು. ದೇಹವನ್ನೇ ಗುಡಿಯಾಗಿಸಿಕೊಂಡು ಅದರೊಳಗೆ ತಮ್ಮನ್ನು, ತಮ್ಮ ದೈವವನ್ನು ಕಾಣಲೆತ್ನಿಸಿದರು. ಹಾಗಾಗಿ ಅಲ್ಲಿ ನಾಯಕ ಸಂಸ್ಕೃತಿ, ವೈದಿಕ ಪುರಾಣಗಳು, ವೇದಜ್ಞಾನಪರಂಪರೆ ಇತ್ಯಾದಿಗಳನ್ನು ತಿರಸ್ಕರಿಸಿ ಸದಾ ಅರಮನೆಗಳಿಂದ ದೂರವಿದ್ದು ಜನರ ನಡುವೆ ಜೀವಿಸಿದವರು ಸಂತರು; ಮತ್ತು ಅವರ ತತ್ವಸಾಹಿತ್ಯ. ಇಂದಿಗೂ ಹಾಗೆಯೇ ತನ್ನ ಚಹರೆಯನ್ನು ಉಳಿಸಿಕೊಂಡು ಬಂದಿದೆ.

 ಆದರೆ ಜೈನ, ವೀಶೈವ ಮತ್ತು ವೈಷ್ಣವ ಪಂಥಗಳಾಚೆಗೆ ಉಸಿರಾಡಿದ ಜನರ ನಾಡಿಬಡಿತವನ್ನು ಅರಿಯದೇ ಹೋದ ಸಾಹಿತ್ಯ ಚರಿತ್ರೆಕಾರರು ಅವುಗಳನ್ನು ಸಂಪೂರ್ಣವಾಗಿ ಹೊರಗಿಟ್ಟರು. ಇಂದಿಗೂ ಹಾಗೆ ಹೊರಗಿಟ್ಟ ಚರಿತ್ರೆಯೇ ಪ್ರಮಾಣೀಕೃತ ಕನ್ನಡ ಸಾಹಿತ್ಯ ಚರಿತ್ರೆಯಾಗಿದೆ. ಇವುಗಳ ಪ್ರಮಾಣೀಕೃತ ಧೋರಣೆಯನ್ನು ಪ್ರಶ್ನಿಸುವ ಕೆಲಸವಂತೂ ನಿರಂತರವಾಗಿ ನಡೆದಿದೆ. ಜನಪದ ಮತ್ತು ತತ್ವಪದ ಸಾಹಿತ್ಯ ಪ್ರಕಾರಗಳನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಹಿತ್ಯ ಚರಿತ್ರೆಕಾರರು ಕಡೆಗಣಿಸಿದ್ದಾರೆ. ಅವರ ಸೀಮಿತ ಅರಿವಿನ ಚೌಕಟ್ಟಿನಿಂದಾಚೆಗೆ ಸಾಹಿತ್ಯದ ಪರಿಕಲ್ಪನೆಯನ್ನು ವಿಸ್ತರಿಸಿಕೊಳ್ಳಲಾಗದೆ ಒಂದೇ ಬಗೆಯ ಶಿಷ್ಟ-ಗ್ರಂಥಸ್ಥ ಮಾದರಿಗೆ ಅಂಟಿಕೊಂಡರು.

ಇದು ಕನ್ನಡ ಸಾಹಿತ್ಯದ ಹಲವು ರೆಕ್ಕೆಗಳನ್ನು ಕತ್ತರಿಸಿಹಾಕಿತು. ಸಾಹಿತ್ಯ ಚರಿತ್ರೆ ಬರೆಹದ ಪದ್ದತಿಯ ಪಕ್ಷಪಾತಿಯಾಯಿತು. ಇದರಿಂದ ಎಷ್ಟೋ ಕಾಲದವರೆಗೆ ಸಾಹಿತ್ಯದ ವಿದ್ಯಾರ್ಥಿಗಳ ಕಲ್ಪನೆ ಮತ್ತು ಅನುಭವಗಳು ವಿಸ್ತಾರಗೊಳ್ಳದೆ ಕುಬ್ಜಗೊಂಡೇ ಇರುವಂತೆ ಮಾಡಿತ್ತು. ಕನ್ನಡ ಕರ್ನಾಟಕ ಸಂಸ್ಕೃತಿಯ ಇಡಿಯಾದ ತಿಳುವಳಿಕೆ ದೊರೆಯದೇ ಒಮ್ಮುಖವಾದ ಇಲ್ಲವೇ ಪಾಶ್ರ್ವಿಕವಾದ ನೋಟ ಮಾತ್ರವೇ ದೊರೆಯುವಂತಾಗಿತ್ತು.

 ಅನೇಕ ಸಮುದಾಯಗಳ ವಿಶಿಷ್ಟ ಅನುಭವಲೋಕಗಳು ಸಾಹಿತ್ಯ ಚರ್ಚೆಯ ಕೇಂದ್ರಕ್ಕೆ ಬಾರದೇ ದೂರವೇ ಉಳಿಯುವಂತಾಗಿತ್ತು. ಇಂತಹ ಎಷ್ಟೋ ಸಮಸ್ಯೆಗಳಿಗೆ ಇದು ಕಾರಣವಾಗಿತ್ತು. ಈಚಿನ ದಶಕಗಳಲ್ಲಿ ಹೊಸಕಾಲದ ಅಗತ್ಯಕ್ಕೆ ತಕ್ಕಂತೆ ಇದರಿಂದ ಹೊರಬರುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದು ಇಂದು ಕನ್ನಡ ಸಾಹಿತ್ಯವು ವಿಸ್ತಾರವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಕನ್ನಡ ಸಾಹಿತ್ಯದ ಎಲ್ಲೆಗಳು ಇಂದು ನಿಜಕ್ಕೂ ವಿಸ್ತಾರಗೊಳ್ಳುತ್ತಿವೆ.

ನಿಡುಗಾಲದ ಚರಿತ್ರೆಯನ್ನು ಹೊಂದಿರುವ ಕನ್ನಡ ಸಾಹಿತ್ಯದಲ್ಲಿ ಬೇರೆ ಬೇರೆ ಕಾಲದಲ್ಲಿ, ವಿಭಿನ್ನ ಬಗೆಯ ಸಾಹಿತ್ಯ ಸೃಷ್ಟಿಯಾಗಿದೆ. ಅದರ ಎಲ್ಲೆಗಳು ಹಲವು ದಿಕ್ಕುಗಳಿಗೆ ಪ್ರಕಾರಗಳಿಗೆ ವಿಸ್ತರಿಸಿಕೊಂಡಿವೆ. ಇದರ ಬಹುರೂಪಗಳನ್ನು ಅರಿಯದೆ ಒಮ್ಮುಖವಾಗಿ ಸಾಹಿತ್ಯ ಚರಿತ್ರೆ ನಿರೂಪಿಸಲು ಹೊರಟ ಪಂಡಿತವರ್ಗ ಬರೆಹ ಪಕ್ಷಪಾತದ ಈ ಸಮಸ್ಯೆಯನ್ನು ಹುಟ್ಟಿಹಾಕಿದೆ. ಆದರೆ ಬರೆಹ ಪರಂಪರೆಯಲ್ಲಿಯೇ ಸಾಗಿಬಂದಿದ್ದ ತತ್ವಪದಇಲ್ಲವೇ ಅನುಭಾವಸಾಹಿತ್ಯವೂ ಒಂದು ಮುಖ್ಯ ಬಗೆಯಾಗಿದ್ದು ಅದನ್ನು ಕಡೆಗಣಿಸಿದ್ದು ಅಚ್ಚರಿಯ ಸಂಗತಿ.

 ಇಂತಹ ಜನಸಾಹಿತ್ಯವನ್ನು ಸಾಹಿತ್ಯದ ಮುಖ್ಯ ಚರ್ಚೆಗಳಿಂದ ಹೊರಗೆ ಉಳಿಸಿ ಸಾಹಿತ್ಯದ ಅರಿವು ಮತ್ತು ಚರ್ಚೆಗಳನ್ನೇ ಕುಗ್ಗಿಸಿದ್ದುದು ಎದ್ದು ಕಾಣುತ್ತದೆ. ಇದರಿಂದ ಕನ್ನಡದ ತಿಳಿವು ಒಮ್ಮುಖ ಮತ್ತು ಪಾಶ್ರ್ವಿಕವಾದ ತಿಳಿವೇ ಆಗಿತ್ತು ಎಂಬುದೂ ತಿಳಿಯುತ್ತದೆ. ಅಂದರೆ ಇಡಿಯಾದ ಕನ್ನಡ ಸಾಹಿತ್ಯ ಚರಿತ್ರೆಯ ನೋಟಕ್ರಮವನ್ನೇ ದಕ್ಕಿಸಿಕೊಳ್ಳದ ಸಾಹಿತ್ಯ ಚರಿತ್ರೆಕಾರರು ಕೆಲವು ಸಾಹಿತ್ಯ ಪ್ರಕಾರಗಳನ್ನು ಬದಿಗೆ ಸರಿಸಿ ಸಾಹಿತ್ಯ ಚರಿತ್ರೆಯನ್ನು ನಿರೂಪಿಸಿದ ಕಾರಣದಿಂದಾಗಿ ಇಂತಹ ಸಮಸ್ಯೆ ಹುಟ್ಟಿಕೊಂಡಿದೆ.

 ಇದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಪೂರ್ಣಕಲ್ಪನೆ ತಿಳಿಯದೇ ಹೋಗಿತ್ತು. ವಚನ ಮತ್ತು ಕೀರ್ತನೆಯ ಸಾಹಿತ್ಯವನ್ನು ಗಮನಿಸಿದ ಸಾಹಿತ್ಯ ಚರಿತ್ರೆಕಾರರಿಗೆ ಅಸಂಖ್ಯ ಅನುಭಾವಿ ಕವಿಗಳ ಅನುಭಾವ ಸಾಹಿತ್ಯ ಕಣ್ಣಿಗೆ ಕಾಣದೇ ಹೋದುದು ಸೋಜಿಗದ ಸಂಗತಿ. ಇದಕ್ಕೆ ಕಾರಣಗಳು ಏನೇ ಇದ್ದರೂ ಅನುಭಾವ ಸಾಹಿತ್ಯ ಪಂಥವನ್ನು ಇಲ್ಲವೇ ಪ್ರಕಾರವನ್ನು ಕಡೆಗಣಿಸಿರುವುದಂತೂ ಎದ್ದು ಕಾಣಿಸುತ್ತಿದೆ. ಈ ಅನುಭಾವಿಗಳು ರೂಪಿಸಿದ ದೇಸೀ ಸಂಗೀತವನ್ನು ಕೂಡ ಕರ್ನಾಟಕ ಶಾಸ್ತ್ರೀಯ ಸಂಗೀತದ ವ್ಯಾಪ್ತಿಯಿಂದ ಹೊರಗಿಟ್ಟದ್ದೂ ಇದೆ. ಇದು ಇಂದಿಗೂ ಮುಂದುವರೆದಿದೆ.

ಹೀಗೆ ಕಡೆಗಣಿಸಿರುವುದನ್ನು ಸಾಹಿತ್ಯ ಚರಿತ್ರೆಕಾರರು ತಮ್ಮಲ್ಲಿ ತಾವು ಕಂಡುಕೊಳ್ಳದೆ ಈ ಅನುಭಾವ ಸಾಹಿತ್ಯ ಸೃಷ್ಟಿಯಾದ ಕಾಲವನ್ನು ಕನ್ನಡ ಸಾಹಿತ್ಯದ ಕಗ್ಗತ್ತಲೆ ಕಾಲಎಂಬ ಅಭಿಪ್ರಾಯ ತಾಳಿದರು. ಕುಮಾರವ್ಯಾಸನಿಂದ ಬಿ.ಎಂ.ಶ್ರೀ ಅವರ ಕಾಲದ ನಡುವೆ ಅಂತಹ ಮಹತ್ವದ ಕವಿಗಳಾರು ಹುಟ್ಟಿಬರಲಿಲ್ಲ ಎಂದರು. ಈ ಕಾಲದಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ಕಡೆಗಣಿಸಿ ಅದನ್ನು ಚರ್ಚಿಸದೆ ತಮ್ಮ ಅಭಿಪ್ರಾಯ ಮಂಡಿಸಿದ ಪರಿಣಾಮ ಈ ಕಾಲದಲ್ಲಿ ವಿಶೇಷ ಸಾಹಿತ್ಯಸೃಷ್ಟಿಯಾಗಿಲ್ಲವೆಂಬ ಅಭಿಪ್ರಾಯವೇ ಇಂದಿಗೂ ನೆಲೆಸಿದೆ.

 ಯಾಕೆಂದರೆ ಅಭ್ಯಾಸಕ್ಕೆ ದೊರೆಯುವ ಎಲ್ಲ ಸಾಹಿತ್ಯ ಚರಿತ್ರೆಯ ಪಟ್ಯಗಳೂ ಕೂಡ ಈ ಕಾಲದಲ್ಲಿ ಸೃಷ್ಟಿಯಾಗಿರುವ ಅನುಭಾವ ಸಾಹಿತ್ಯವನ್ನು ಚರ್ಚೆಗೆ ಎತ್ತಿಕೊಳ್ಳುವುದಿಲ್ಲ. ಇಲ್ಲಿನ ಚರ್ಚೆಯಿಂದ ಗೈರುಹಾಜರಾದ ಅನುಭಾವ ಸಾಹಿತ್ಯ ಜನರ ಗಮನಕ್ಕೆ ಬಾರದೇಹೋದ ಕಾರಣ ಇಲ್ಲಿ ಸಾಹಿತ್ಯವೇ ಸೃಷ್ಟಿಯಾಗಿಲ್ಲ ಎಂಬ ಅಪಕಲ್ಪನೆ ಬೆಳೆದಿದೆ. ಚರಿತ್ರೆಯ ನಿರೂಪಕರ ಕಣ್ಣುಗಳಿಗೆ ಆವರಿಸಿಕೊಂಡ ಕತ್ತಲೆ ಸಮುದಾಯಕ್ಕೂ ದಾಟಿಕೊಂಡಿದ್ದು ಇಲ್ಲಿ ಎದ್ದು ಕಾಣುತ್ತದೆ.

ಆದರೆ ಈ ಕಗ್ಗತ್ತಲೆಯ ಕಣ್ಕಟ್ಟುದಾಟಿ ಆ ಕಾಲದಲ್ಲಿ ರಚಿತವಾದ ಸಾಹಿತ್ಯವನ್ನು ಇಂದು ತಿರುಗಿ ನೋಡಿದರೆ ಆ ಕಾಲದಲ್ಲಿ ಸಾಹಿತ್ಯ ವಿಫುಲವಾಗಿ ಸೃಷ್ಟಿಯಾಗಿರುವುದು ತಿಳಿಯುತ್ತದೆ. ಈ ಸಾಹಿತ್ಯ ಅರಮನೆಗಳ ಬಿರುದುಬಾವಲಿಗಳ ಹಂಗೂ ಇಲ್ಲದೆ ಜನರ ನಡುವೆ ಜೀವಂತವಾಗಿರುವುದು ತಿಳಿಯುತ್ತದೆ. ಅಲ್ಲದೆ ಅದು ವಾಚಿಕ ಪಟ್ಯವಾಗಿ ಮಾತ್ರವೇ ಉಳಿಯದೇ ಅದು ಗೇಯಪಟ್ಯವಾಗಿಯೂ ದೇಸೀ ಸಂಗೀತವಾಗಿ ಉಳಿದಿರುವುದು ಗೋಚರಿಸುತ್ತದೆ.

 ಅಂದರೆ ಚಾರಿತ್ರಿಕವಾಗಿ ಆ ಕಾಲ ಯಾವುದನ್ನು ನಿರೀಕ್ಷಿಸಿತೋ ಅದನ್ನು ಆ ಕಾಲದ ಅಸಂಖ್ಯ ಸಂತರು ಪೂರೈಸಿದ್ದಾರೆ. ಜನರು ಏನುಬಯಸಿದರೋ ಅದನ್ನು ಸಂತರಿಂದ ಪಡೆದುಕೊಂಡಿದ್ದಾರೆ. ಅದನ್ನು ಬದುಕಿನ ಭಾಗವಾಗಿಸಿಕೊಂಡು ಅದನ್ನು ಉಸಿರಾಡುತ್ತಿದ್ದಾರೆ. ಜನರಿಗೆ ಏನು ನೀಡಬೇಕೆನ್ನಿಸಿತೋ ಅದನ್ನು ಅರಿತು ಅನುಭಾವಿಗಳು ನೀಡಿದ್ದಾರೆ. ಇಂತಹ ಕೊಡುಕೊಳೆಯ ಸಂದರ್ಭವನ್ನು ಗಮನಿಸಿದರೆ ಅನುಭಾವಿ ಕವಿಗಳು ಸಮಾಜವಿಮುಖಿಗಳಾಗಿರಲಿಲ್ಲ ಎಂಬುದು ಖಚಿತವಾಗುತ್ತದೆ.

 ಏಕಾಂತದಲ್ಲಿದ್ದು ಲೋಕಾಂತವನ್ನು, ಲೋಕಾಂತದಲ್ಲಿದ್ದು ಏಕಾಂತವನ್ನು ಅನುಭವಿಸಿರುವುದು ಗೋಚರಿಸುತ್ತದೆ. ಊರೊಳಗಿನ ಉತ್ಪಾತವನ್ನು ಮನದೊಳಕ್ಕೂ ಎಳೆದು ತಂದರು. ಮನದೊಳಗಿನ ಉತ್ಪಾತವನ್ನು ಊರ ನಡುವೆಯೂ ಹಾಡಿದರು. ಊರು ಮತ್ತು ಮನಗಳಲ್ಲಿನ ಉತ್ಪಾತದ ಕಾರಣಗಳನ್ನು ಕಂಡು ಅದರಿಂದ ಉರಿದುಹೋಗುತ್ತಿದ್ದ ಬದುಕಿಗೆ ಸಮಾಜಕ್ಕೆ ತಣ್ಣನೆಯ ಅರಿವಿನ ಮುಲಾಮನ್ನು ಶೋಧಿಸತೊಡಗಿದರು. ಈ ಹಂತದಲ್ಲಿಯೇ ಅವರು ದಾರ್ಶನಿಕರಾಗಿ, ಕವಿಗಳಾಗಿ, ಸಂಗೀತಗಾರರಾಗಿ, ಸಮಾಜ ಸುಧಾರಕರಾಗಿ, ಲೋಕವಿರೋಧಿಗಳಾಗಿ ಕಂಡುಬರುತ್ತಾರೆ.

 ಜನರ ಜೊತೆಗೆ ಮತ್ತು ತಮ್ಮ ಒಳಗಿನೊಳಗಿನ ಸಾಕ್ಷಿಪ್ರಜ್ಞೆಯ ಜೊತೆಗೆ ಸಂವಾದ ನಡೆಸುತ್ತಲೇ ಅನುಭಾವ ಸಾಹಿತ್ಯ ಸೃಷ್ಟಿಸಿದ್ದಾರೆ. ಇದರ ಪ್ರಮಾಣವನ್ನು ಇಂದು ಲೆಕ್ಕಿಸಲು ಸಾಧ್ಯವಿಲ್ಲದಷ್ಟು ಹೇರಳವಾಗಿದೆ. ಕಗ್ಗತ್ತಲೆಯ ಕಾಲದಲ್ಲಿ ಬೆಳಕಿಗಾಗಿ, ಬಿಡುಗಡೆಗಾಗಿ ಹಂಬಲಿಸಿದ ಸಾಹಿತ್ಯ ಇಷ್ಟೊಂದು ರೂಪುಗೊಂಡಿದೆಯೇ ಎಂದು ಬೆರಗು ಮೂಡಿಸುವಷ್ಟು ಅಪಾರವಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಕನ್ನಡದ ಇತರೆ ಸಾಹಿತ್ಯ ಮಾದರಿಗಳಿಗಿಂತ ಈ ಅನುಭಾವ ಸಾಹಿತ್ಯ ಜನರ ಬಿಡುಗಡೆಗೆ ಹೆಚ್ಚು ತುಡಿದಿರುವುದು ನಮ್ಮ ಅರಿವಿಗೆ ಬರುತ್ತದೆ. ಅನುಭಾವ ಸಾಹಿತ್ಯದ ಅಭಿವ್ಯಕ್ತಿಯ ನೆಲೆಗಳು ಕಷ್ಟಕರವಾದ ಸಂಸಾರ ಸಾಗರವನ್ನು, ಪಾಪಪೂರಿತವಾದ ಐಹಿಕ ಜೀವನವನ್ನು ದಾಟಿ, ಅದರ ಆಚೆಯ ದಡವನ್ನು ತಲುಪುವುದಕ್ಕೆ ದಾರಿಯನ್ನು ಕಂಡುಹಿಡಿದು ಅನುಸರಿಸುವುದೇ ದರ್ಶನಗಳ ಪರಮೋತ್ತಮ ಗುರಿ ಎಂದು ಭಾರತೀಯ ಪರಂಪರೆ ಭಾವಿಸುತ್ತದೆ.ಎಂದು ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರು ಭಾರತೀಯ ದರ್ಶನ ಪರಂಪರೆಗಳ ಮುಖ್ಯ ಕಾಳಜಿ ಮತ್ತು ಆಶಯವನ್ನು ವಿವರಿಸುತ್ತ ಹೇಳಿರುವ ಮಾತು ಗಮನಾರ್ಹವಾದುದು.

 ಇದು ಇತರೆ ಭಾರತೀಯ ದಾರ್ಶನಿಕ ಪಂಥಗಳಿಗೆ ಹೇಗೆ ಅನ್ವಯವಾಗುತ್ತದೆಯೋ ಹಾಗೆಯೇ ಕರ್ನಾಟಕದ ಅನುಭಾವಿಗಳ ಇಲ್ಲವೇ ತತ್ವಪದಕಾರರ ಸಾಹಿತ್ಯ ಪಂಥಕ್ಕೂ ಅನ್ವಯವಾಗುತ್ತದೆ. ಅನುಭಾವ ಸಾಹಿತ್ಯವು ಹಲವು ಕವಲುಗಳಲ್ಲಿ ಸೀಳಿಕೊಂಡಿದ್ದರೂ ಆಳದಲ್ಲಿ ಅದು ಆಚೆ ದಡದ ನೆಲೆಯ ಹುಡುಕಾಟವನ್ನೇ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಸಂಸಾರ ಮತ್ತು ಲೌಕಿಕ ಜೀವನದಿಂದ ಬಿಡುಗಡೆಗೊಂಡು ಇನ್ನೊಂದು ದಡ ಇಲ್ಲವೇ ಲೋಕ ತಲುಪಬೇಕೆಂಬ ಹಂಬಲ ಇರುವುದು ಕಂಡುಬರುತ್ತದೆ.

ಇದು ಯಾವುದೇ ಅನುಭಾವ ಸಾಹಿತ್ಯದಲ್ಲಿ ಕಂಡುಬರುವ ಸಾಮಾನ್ಯ ಸಂಗತಿ ಮತ್ತು ಅವುಗಳ ಪ್ರಮುಖ ಲಕ್ಷಣ. ಆದರೆ ಈ ಅನುಭಾವಿಗಳು ಇನ್ನೊಂದು ಲೋಕಕ್ಕಾಗಿ ತುಡಿದಿದ್ದಕ್ಕಿಂತ ಅವರು ಜೀವಿಸಿದ್ದ ಸಮಾಜದ ಸಾಮಾಜಿಕ ಒತ್ತಡಗಳಿಂದ ಮತ್ತು ವ್ಯಕ್ತಿಯಲ್ಲಿ ಹುಟ್ಟಿಕೊಂಡ ಆಂತರಂಗಿಕ ಉತ್ಪಾತಗಳಿಂದ ಬಿಡುಗಡೆ ಪಡೆಯುವುದೇ ಆಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಈ ವಿಚಾರವನ್ನು ಕಿ. ರಂ. ನಾಗರಾಜ ಅವರ ಅಭಿಪ್ರಾಯದ ಮೂಲಕ ವಿವರಿಸಿಕೊಳ್ಳಬಹುದು.

 ಕನ್ನಡದ ಅನುಭಾವಿ ಸಾಹಿತ್ಯ ಕುರಿತು ಅವರೆನ್ನುವಂತೆ, “ಬದುಕಿನಿಂದ ವಿಮುಖವಾಗುವ ದೃಷ್ಟಿ ಇಲ್ಲಿ ಮುಖ್ಯವಲ್ಲ. ಅಮೂರ್ತವಾದ  ನೆಲೆಯನ್ನು ಪಲಾಯನದಿಂದ ಹೋಗಿ ತಲುಪಬೇಕೆಂಬ ಉದ್ದೇಶವೂ ಇಲ್ಲ. ಈ ನಿರಾಕರಣೆ ಅವರ ಆಂತರಿಕ ಮತ್ತು ಬಾಹ್ಯಜಗತ್ತಿನ ಘರ್ಷಣೆಯಿಂದ ಸೃಷ್ಟಿಯಾದದ್ದು.  ಎನ್ನುತ್ತಾರೆ. ಇದು ಚಟ್ಟೋಪಾಧ್ಯಾಯ ಅವರ ಹೇಳಿಕೆಗಿಂತ ಕೊಂಚ ಭಿನ್ನವಾಗಿದೆ. ಕಿರಂ ಅವರ ಮಾತಿನಲ್ಲಿರುವ ಒತ್ತು ಆಚೆ ದಡಕ್ಕೆ ಅಂದರೆ ಪರವಸ್ತುವಿಗೆ ಬದಲಾಗಿ ವ್ಯಕ್ತಿ ಮತ್ತು ಸಮಾಜದ ನಡುವೆ ನಡೆಯುತ್ತಿರುವ ದೈನಂದಿನ ಜೀವನದ ತಾಕಲಾಟಗಳೇ ಮುಖ್ಯವಾಗಿರುವುದನ್ನು ಸೂಚಿಸುತ್ತದೆ.

 ಅಂದರೆ ಆಂತರಿಕಎಂಬುದನ್ನು ವ್ಯಕ್ತಿಯೊಳಗೆ ಹುಟ್ಟುವ ಬೇಗುದಿಯೆಂದು ಮತ್ತು ಬಾಹ್ಯಜಗತ್ತು ಎಂಬುದನ್ನು ಸಮಾಜ ವ್ಯಕ್ತಿಯಲ್ಲಿ ಹುಟ್ಟಿಸುವ ತಲ್ಲಣಗಳು,  ಇಕ್ಕಟ್ಟು-ಬಿಕ್ಕಟ್ಟುಗಳು ಎಂದು ವಿವರಿಸಿಕೊಂಡಾಗ ಇದು ಸ್ಪಷ್ಟವಾಗುತ್ತದೆ. ವ್ಯಕ್ತಿ ಮತ್ತು ಸಮಾಜಗಳ ನಡುವಿನ ಸಂಘರ್ಷ ಹಲವು ಬಗೆಯ ಒಳಬೇಗುದಿಗಳನ್ನು ಹುಟ್ಟಿಹಾಕುತ್ತದೆ. ಈ ಕುದಿತವೇ ಅನುಭಾವಿಗಳ ಆಂತರಿಕ ತೊಳಲಾಟ ಮತ್ತು ಬಿಡುಗಡೆಯ ಹುಡುಕಾಟಗಳ ನಿಜವಾದ ಭಿತ್ತಿಯಾಗಿರುತ್ತದೆ. ಇದಲ್ಲದೆ ಅವರನ್ನು ಬಾಧಿಸಿರುವ ಮತ್ತೊಂದು ಸಂಗತಿಯೆಂದರೆ ಸಾವು. ಅಂದರೆ ಜೀವನದ ನಶ್ವರತೆ.

         ನಶ್ವರವಾದ ಜೀವನಕ್ಕಾಗಿ ಮನುಷ್ಯರು ಯಾಕೆ ಈ ಪರಿಯ ಸಾಮಾಜಿಕ ಮತ್ತು ಆಂತರಿಕ ಉತ್ಪಾತಗಳನ್ನು ಸೃಷ್ಟಿಸುತ್ತಾರೆ; ಅನುಭವಿಸುತ್ತಾರೆ ಎಂಬುದೇ ಅವರ ಮುಖ್ಯ ಪ್ರಶ್ನೆ, ತಲ್ಲಣ ಮತ್ತು ಹುಡುಕಾಟದ ಧ್ಯಾನ. ಅಂದರೆ ಅನುಭಾವಿಗಳು ಊರು ಸೃಷ್ಟಿಸುವ ಉತ್ಪಾತಗಳ ಜೊತೆಗೆ ಮುಖಾಮುಖಿಯಾಗದೆ ಪಲಾಯನ ಮಾಡಿದವರಲ್ಲ. ಅವುಗಳ ಜೊತೆಗೆ ನಿರಂತರವಾಗಿ ಗುದ್ದಾಡುತ್ತಲೇ ಅವುಗಳಿಂದ ಬಿಡುಗಡೆ ಪಡೆಯಲು ಬಯಸಿದವರು.

 ಸಾಮಾಜಿಕವಾಗಿ ತಮ್ಮ ಗುದ್ದಾಟವನ್ನು ಮುಂದುವರೆಸಿರುವ ಕಾರಣಕ್ಕಾಗಿಯೇ ಅವರು ನಮಗಿಂದು ಮುಖ್ಯರಾಗಿದ್ದಾರೆ. ಅಂತಹ ಗುದ್ದಾಟವೇ ಇಲ್ಲದೆ ಗಾಳಿಗೋಪುರಗಳಲ್ಲಿ ಪಾರಮಾರ್ಥಿಕ ಚಿಂತನೆಗಳನ್ನು ಮಂಡಿಸಿದ್ದರೆ ಖಂಡಿತವಾಗಿಯೂ ಇಂದು ಅಪ್ರಸ್ತುತರಾಗಿರುತ್ತಿದ್ದರು. ಅಂದೂ ಕೂಡ ಜನರಿಂದ ದೂರವೇ ಉಳಿದಿರುತ್ತಿದ್ದರು.

ಇದಲ್ಲದೆ ತಮ್ಮ ಕಾಲದಲ್ಲಿ ದೇಶದ ಒಳಹೊಕ್ಕಿದ್ದ ವಸಾಹತುಶಾಹಿಯು ಬಾಹ್ಯಜಗತ್ತಿನಲ್ಲಿ ಸೃಷ್ಟಿಸಿದ್ದ ಉತ್ಪಾತಗಳ ಬಗೆಗೂ ಅವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದರು. ಈ ಬಗೆಗೆ ಕಿ .ರಂ. ಅವರು ಹೇಳುವಂತೆ ರಾಜಪ್ರಭುತ್ವ ಮತ್ತು ಸಾಮ್ರಾಜ್ಯಶಾಹಿಗಳ ಒಳ ಒಪ್ಪಂದ ಮತ್ತು ದೇಶೀಯ ಸತ್ವದ ಉಳಿವಿಗಾಗಿ ತಮ್ಮ ಪರಿಮಿತ ಸಾಧನಗಳ ಮೂಲಕ ಹೋರಾಡಿ ಸಮುದಾಯದ ಒಳದನಿಗೆ ದನಿನೀಡುವ ಕೆಲಸವನ್ನು ಈ ಕವಿಗಳು ಮಾಡಿದರು.

 ಈ ಕಾಲಮಾನದ ದೊಡ್ಡ ಒತ್ತಡ, ಈ ಘರ್ಷಣೆ ಬದುಕನ್ನು ನುಚ್ಚುನೂರು ಮಾಡಿತ್ತಲ್ಲದೆ ನಮ್ಮ ಸಂಸ್ಕೃತಿ ಯ ವಾಸ್ತವಕ್ಕೆ ದೊಡ್ಡ ಸವಾಲಾಯಿತು. ಸಾಮ್ಯಾಜ್ಯಶಾಹಿ ಹಿಡಿತ ದೃಢಗೊಂಡ ಬಳಿಕ ಸಮುದಾಯದ ಬದುಕು ಮತ್ತೂ ಅಸ್ತಿರತೆಯತ್ತ ಸಾಗಿತು. ಬದುಕನ್ನು ಈ ಅನುಭಾವಿಗಳು ಏಕೆ ಅಸ್ತಿರವೆಂದು ಕರೆಯುತ್ತಾರೆ ಎಂಬುದಕ್ಕೆ ಈ ಹಿನ್ನೆಲೆಯಲ್ಲಿ ಉತ್ತರ ಹುಡುಕುವುದು ಮುಖ್ಯವೆನ್ನಿಸುತ್ತದೆ. ಬದುಕನ್ನು ಹಬ್ಬಿಕೊಂಡ ಭಯಾನಕತೆಯನ್ನು ಕೊನೆಗಾಣಿಸಬೇಕೆಂಬ ನಿಲುವು ಇವರದಾಗಿದ್ದರೂ ಪರಿಹಾರಗಾಣದ ಸ್ಥಿತಿಯಲ್ಲಿದ್ದರು. ಅಲ್ಲದೆ ಧರ್ಮದ, ಅದರಲ್ಲೂ ಚಾತುರ್ವಣ್ಯದ ಚೌಕಟ್ಟು ಬೇರೆ ಪರ್ಯಾಯಗಳಿಲ್ಲದಂತಹ ಬಂಧನವನ್ನು ಒಡ್ಡಿತ್ತು.

 ಹೊಸ ಸಾಮಾಜಿಕ ಮುಗ್ಗಟ್ಟೊಂದು ರೂಪುಗೊಳ್ಳಲು ಸಿದ್ದವಾಗುತ್ತಿದ್ದ ಸ್ಥಿತಿಯಿಂದಾಗಿ ಬೇರೊಂದು ಆಡಳಿತ ಪದ್ದತಿಯನ್ನು ರೂಪಿಸಲು ಹೋರಾಡುವುದು ಸಾಧ್ಯವಾಗದೇ ಹೋಗಿತ್ತು. ಆದ್ದರಿಂದ ಭಗ್ನಗೊಂಡಿದ್ದ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವುದೇ ಅಂದಿನ ಮುಖ್ಯ ಉದ್ದೇಶವಾಗಿತ್ತು.ಎನ್ನುತ್ತಾರೆ.

 ಎಂದರೆ ಅನುಭಾವಿ ಕವಿಗಳು ತಮ್ಮ ಕಾಲದಲ್ಲಿ ಎದುರಿಸಿದ ಭೀಕರ ಸಮಸ್ಯೆಗಳ ಪರಿಣಾಮ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ದೇಶೀಯ ಮತ್ತು ವಿದೇಶೀಯ ಶಕ್ತಿಗಳೆರಡೂ ಕೂಡಿ ಸಮಾಜವನ್ನು ಕಿತ್ತುತಿನ್ನುತ್ತಿತ್ತು ಎಂಬುದು ಇದರಿಂದ ತಿಳಿಯುತ್ತದೆ. ಒಟ್ಟಾರೆ ಅನುಭಾವಿ ಕವಿಗಳು ಕ್ರಿಯಾಶೀಲವಾಗಿದ್ದ ಕಾಲವು ವಸಾಹತುಶಾಹಿ ಮತ್ತು ಭೂಮಾಲಿಕ ಶಕ್ತಿಗಳು ಕೂಡಿಕೊಂಡು ಸಮಾಜವನ್ನು ಕಿತ್ತುತಿನ್ನುತ್ತಿದ್ದವು. ಇಂತಹ ಸನ್ನಿವೇಶದಲ್ಲಿ ತಮ್ಮ ಹುಡುಕಾಟದ ಹಾದಿಯಲ್ಲಿ ನಡೆದ ಸಂತರು ಸಹಜವಾಗಿಯೇ ಅಂತಹ ಸಮಾಜದ ಎಲ್ಲ ಸಾಂಸ್ಥಿಕ ನೆಲೆಗಳನ್ನು ವಿರೋಧಿಸಿದರು. ನಿರಾಕರಿಸಿದರು.

ಅನೇಕ ತತ್ವಪದಗಳನ್ನು ಗಮನಿಸಿದರೆ ಅವರು ಸಂಸಾರ-ಕುಟುಂಬ ವ್ಯವಸ್ಥೆ, ಸಂಪತ್ತು-ಖಾಸಗಿ ಆಸ್ತಿ, ಜಾತಿ-ವರ್ಗ-ವರ್ಣ ವ್ಯವಸ್ಥೆ, ಪ್ರಭುತ್ವ ಅಂದರೆ ವಸಾಹತುಶಾಹಿ ಮತ್ತು ಭೂಮಾಲಿಕರ ಅಧಿಕಾರ-ಅಹಂ; ಅವುಗಳ ಕೇಂದ್ರಗಳು, ಇಂದ್ರಿಯ ಸುಖ-ಭೋಗ ಜೀವನ, ಅಜ್ಞಾನ ಅಂದರೆ ಪ್ರಸ್ತುತ ವ್ಯವಸ್ಥೆ ಜನರಿಗೆ ನೀಡಿರುವ ಸಾಮಾಜಿಕ ಮತ್ತು ಧಾರ್ಮಿಕ ತಿಳುವಳಿಕೆ; ವೇದ, ಶಾಸ್ತ್ರ, ತರ್ಕ ಪುರಾಣಗಳನ್ನು ಒಳಗೊಂಡಂತೆ ಪುರೋಹಿತಶಾಹಿ ವ್ಯವಸ್ಥೆ; ಇತ್ಯಾದಿಯಾಗಿ ಹಲವು ಸಾಮಾಜಿಕ ಸಂಸ್ಥೆಗಳನ್ನು ನಿರಾಕರಿಸುತ್ತಾರೆ.

ಸಂತಪರಂಪರೆಯನ್ನು ಎದುರಾದಾಗಲೆಲ್ಲ ಕಾಣಿಸುವ ಒಂದು ಸಮಸ್ಯೆ ಎಂದರೆ ಅದು ಹೆಣ್ಣನ್ನು ಕುರಿತಾದ ಅವರ ಗ್ರಹಿಕೆ. ಅದರ ಬಗೆಗೆ ಎಷ್ಟೇ ಯೋಚಿಸಿದರೂ ಅಲ್ಲಿ ಮಂಡಿತವಾಗಿರುವ ವಿಚಾರಧಾರೆಯು ಹೆಣ್ಣನ್ನು ಸಮಾನವಾದ ನೆಲೆಯಲ್ಲಿ ಗ್ರಹಿಸಿಯೇ ಇಲ್ಲ. ಹಲವು ಮಹಿಳಾ ತತ್ವಪದಕಾರ್ತಿಯರು ಈ ಸಾಧಕರ ಪರಂಪರೆಯಲ್ಲಿದ್ದರೂ ಕೂಡ ಪುರುಷ ತತ್ವಪದಕಾರರಲ್ಲಿನ ವಿಚಾರಗಳನ್ನು ಹೆಣ್ಣನ್ನು ಸಮಾನವಾದ ನೆಲೆಯಲ್ಲಿ ಕಂಡಿಲ್ಲ. ಹೆಣ್ಣನ್ನು ಮಾಯೆ, ರಾಕ್ಷಸಿ, ಪೀಡಕಿ, ಸಾಧನೆಗೆ ತೊಡಕಾಗಿರುವ ಬಂಧನದ ಬಲೆ ಇತ್ಯಾದಿ ಅರ್ಥಗಳ ನೆಲೆಯಲ್ಲಿಯೇ ಪರಿಗಣಿಸಲಾಗಿದೆ.

ಇತರೆ ಹಲವು ಸಾಮಾಜಿಕ ತರತಮದ ನೆಲೆಗಳನ್ನು ವಿರೋಧಿಸಿದ ಸಂತರು ಮಹಿಳೆ ಮತ್ತು ಪುರುಷರ ನಡುವೆ ಇರುವ ಕಂದರವನ್ನು ಮಹಿಳೆಯ ನೆಲೆಯಿಂದ ನೋಡುವ ಪ್ರಯತ್ನ ಮಾಡಲೇ ಇಲ್ಲ. ಅದು ಪೂರ್ಣವಾಗಿ ಇಂದಿಗೂ ಗಂಡುನೋಟದ ನೆಲೆಯಲ್ಲಿಯೇ ನೋಡಲಾಗಿದೆ. ಅಂದರೆ ಸಂತರಲ್ಲಿಯ ವೈಚಾರಿಕತೆ ಪ್ರಖರವಾಗಿದ್ದಾಗಲೂ ಹೆಣ್ಣಿನ ಬಗೆಗೆ ಬಂದಾಗ ಅದು ನಕಾರಾತ್ಮಕ ಧೋರಣೆಯನ್ನು ಹೊಂದಿರುವುದೇ ಕಂಡುಬರುತ್ತದೆ. ಸಂತರರೊಂದಿಗೆ ಈ ವಿಚಾರದಲ್ಲಿ ಸದಾ ಭಿನ್ನಮತವನ್ನು ಇಟ್ಟುಕೊಂಡೇ ಅವರನ್ನು ಮುಖಾಮುಖಿಯಾಗಬೇಕಿದೆ.

 ಇದು ಕನಕ-ಪುರಂದರರಂತಹ ಕೀರ್ತನೆಕಾರರ ವಿಚಾರದಲ್ಲಿಯೂ ನಿಜ. ಅವರೂ ಕೂಡ ಇತರೆಲ್ಲ ಸಾಮಾಜಿಕ ತರತಮ್ಯದ ನೆಲೆಗಳನ್ನು ಬಹಳ ಕಟುವಾಗಿ ಟೀಕಿಸಿದರೂ ಹೆಣ್ಣನ್ನು ಕುರಿತು ಮಾತ್ರ ಅದು ಪುರುಷವಾದಿಯಾದ ನೆಲೆಯೇ. ಹೀಗೆ ಹೆಣ್ಣು ಮತ್ತು ಇಡೀ ಸಮಾಜ ಎಲ್ಲ ನೆಲೆಗಳನ್ನು ನಿರಾಕರಿಸುವ ಅವರು ಮಂಡಿರುವ ಪಾರಮಾರ್ಥದ ಆತ್ಯಂತಿಕ ಪರಿಹಾರಗಳ ಬಗೆಗೆ ಭಿನ್ನಮತದ ಎಚ್ಚರದೊಂದಿಗೆ ಅವರನ್ನು ಮುಖಾಮುಖಿಯಾಗಬೇಕು.

 

ಗ್ರಂಥ ಋಣ

1)      ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ ಮತ್ತು ನಾದ ಬ್ರಹ್ಮಾನಂದ ನಾರೇಯಣ ಕವಿ ಶತಕ’’ ;ಶ್ರೀ ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ ಕೈವಾರ: 1982.

2)        ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಶ್ರೀ ಅಮರ ನಾರೇಯಣ ವೇದಾಂತ ಸಾರಾವಳಿ’’ (ಕೀರ್ತನೆಗಳು) ; ಶ್ರಿ ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ- ಕೈವಾರ: 1998.

3)        ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ ಭವಿಷ್ಯವಾಣಿ’’ ;ಶ್ರೀ ಯೋಗಿ ನಾರೇಯಣ ಮಠ -ಕೈವಾರ :2013

4)        ಕೈಪು ಲಕ್ಮೀ ನರಸಿಂಹ ಶಾಸ್ರ್ತೀ ‘’ಕೈವಾರ ಶ್ರೀ ನಾರೇಯಣ ಯೋಗಿ ತಾತಯ್ಯನವರ ಜೀವನ ಚರಿತ್ರೆ’’ ; ಶ್ರೀ ಯೋಗಿ ನಾರೇಯಣ ಆಶ್ರಮ- ಕೈವಾರ :2007.

5)        ಶ್ರೀ ಯೋಗಿ ನಾರೇಯಣ ಯತೀಂದ್ರರು ‘’ತಾರಕ ಬ್ರಹ್ಮಾನಂದ ದ್ವಯಕಂದ ಶತಕಮು’’(ತೆಲುಗು); ಶ್ರೀ ಕೈವಾರ ಯೋಗಿ ನಾರೇಯಣ ಆಶ್ರಮ- ಕೈವಾರ:1982.

6)        ಶ್ರೀ ಯೋಗಿ ನಾರೇಯಣ ಯತೀಂದ್ರರು ‘’ಬ್ರಹ್ಮಾಂಡ ಪುರಿ ಶತಕ ಮತ್ತು ಅಮರ ನಾರೇಯಣ ಶತಕ’’ ; ಶ್ರೀ ಯೋಗಿ ನಾರೇಯಣ ಆಶ್ರಮ -ಕೈವಾರ :1982.

7)        ಶ್ರೀ ಗಟ್ಟಿಹಳ್ಳಿ ಆಂಜಿನಪ್ಪ ಸ್ವಾಮಿ ‘’ ನಿರ್ಮಲಾತ್ಮ ಕವಿ ಶತಕಂ’’ ; ಶ್ರೀ ಪರಮಹಂಸ ಆಂಜಿನಪ್ಪ ಸ್ವಾಮಿ ಟ್ರಸ್ಟ -ಗಟ್ಟಿಹಳ್ಳಿ :1992.

8)        ಪದ್ಮಾಲಯ ನಾಗರಾಜ್ ‘’ಗುರುಮಾರ್ಗ’’(ಮರೆತ ದಾರಿಗಳ ಅಧ್ಯಯನ);ಆದಿಮ ಪ್ರಕಾಶನ , ಕೋಲಾರ :2018.

9)        ಡಾ . ವೀರಣ್ಣ ದಂಡೆ ‘’ವಚನಗಳಲ್ಲಿ ದೇಸೀ ಗುಣ’’ ; ಕನ್ನಡ ಸಾಹಿತ್ಯ ಪರಿಷತ್ತು- ಬೆಂಗಳೂರು :2004.

10)      ಶ್ರೀ ಕೃಷ್ಣಾನಂದ ಸ್ವಾಮಿಗಳು ‘’ಉಪದೇಶಾಮೃತ’’ ; ಶ್ರೀ ಲಲಿತಾಂಬ ಗುರೂಜೀ ಆಶ್ರಮ - ವೇಮಗಲ್ :2010.

11)      ವೆಂಕಟದಾಸು ‘’ಅನುಭವಸಾರಂ’’(ತೆಲುಗು); ಅಚಲಾಶ್ರಮ ಕೃಷ್ಣಂಕೋತ್ತೂರು:1995.

12)      ‘’ಪರಮಹಂಸ ಆಂಜಿನಪ್ಪ ಸ್ವಾಮಿ ( ಜೀವನ ಚರಿತ್ರೆ )’’ ;ಶ್ರೀ ಪರಮಹಂಸ ಆಂಜಿನಪ್ಪ ಸ್ವಾಮಿ ಟ್ರಸ್ಟ -ಗಟ್ಟಿಹಳ್ಳಿ :1992.

13)      ( ವಿವಿಧ ಲೇಖಕರ ಬಿಡಿ ಲೇಖನಗಳ ಸಂಗ್ರಹ ) ‘’ಕನ್ನಡ ತತ್ವ ಪದ ಕಾರರು’’ ; ಕರ್ನಾಟಕ ಸಾಹಿತ್ಯ ಅಕಾಡೆಮಿ-ಬೆಂಗಳೂರು :1993.

14)      ಡಾ.ಶಿವಾನಂದ ಗುಬ್ಬಣ್ಣವರ (ಸಂ) ‘’ಬರಕೋ ಪದ ಬರಕೋ’’ ;ಕನ್ನಡ ಸಾಹಿತ್ಯ ಪರಿಷತ್-  ಬೆಂಗಳೂರು .

15)      ಡಾ.ಜಿ.ಎಸ್ .ಶಿವರುದ್ರಪ್ಪ ‘’ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’’(ಸಂಪುಟ -5); ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ- ಬೆಂಗಳೂರು.

16)      ಡಾ.ಎಸ್ .ತಿಪ್ಪೇರುದ್ರಸ್ವಾಮಿ ‘’ಕನ್ನಡದಲ್ಲಿ ಕೈವಲ್ಯ ಸಾಹಿತ್ಯ’’ ;ಚಿತ್ತರಗಿ ಶ್ರೀ ವಿಜಯ ಮಹಂತೇಶ್ವರ ಧರ್ಮ ಪ್ರಸಾರಕ ಮಂಡಳಿ- ಚಿತ್ತರಗಿ.

17)      ಎಂ.ಚಿದಾನಂದ ಮೂರ್ತಿ ‘’ವಚನ ಸಾಹಿತ್ಯ-ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ’’(ಸಂಪುಟ -5) ;ಬೆಂಗಳೂರು ವಿಶ್ವವಿದ್ಯಾಲಯ- ಬೆಂಗಳೂರು.

18)      ಎಚ್ . ತಿಪ್ಪೇರುದ್ರಸ್ವಾಮಿ ‘’ಕನ್ನಡದಲ್ಲಿ ಅನುಭಾವ ಸಾಹಿತ್ಯ’’  ಮೈಸೂರು ವಿಶ್ವವಿದ್ಯಾಲಯದ- ಮೈಸೂರು:1962.

19)      ಅರ್ .ನರಸಿಂಹಾಚಾರ್ ‘’ಕವಿ ಚರಿತ್ರೆ ಸಂಪುಟ -3’’ .

20)      ಕೀ . ರಂ.ನಾಗರಾಜು ‘’ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ,’’(ಸಂಪುಟ-5); ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು.

21)          ನಟರಾಜ ಹುಳಿಯಾರ್ ‘’ಕಿ. ರಂ. ನಾಗರಾಜ- ತೆರೆದ ಪಠ್ಯ’’

22)         ದೇವಿಪ್ರಸಾದ್ ಚಟ್ಟೋಪಾಧ್ಯಾಯ ‘’ಭಾರತೀಯ ದರ್ಶನಗಳು’’.

23)            ಎಂ.ಡಿ. ಒಕ್ಕುಂದ ‘’ತತ್ವಪದ ಸಾಹಿತ್ಯ ಸಂಪಾದನೆಯ ಪ್ರಸ್ತುತತೆ’’(ಲೇಖನ ಸಂಗ್ರಹ)

24)         ಡಾ.ಪ್ರಕಾಶ ಗ ಖಾಡೆ ‘’ಕನ್ನಡ ತತ್ತ್ವಪದ ಸಾಹಿತ್ಯ :ಜಾನಪದ,ಅನುಭಾವ ಮತ್ತು ಆಧ್ಯಾತ್ಮದ ಮೇರುನಿಧಿ’’(ಲೇಖನ ಸಂಗ್ರಹ)

25)      ರಂಗನಾಥ ಕಂಟನಕುಂಟೆ  ‘’ ‘ಕಗ್ಗತ್ತಲೆಯ ಕಾಲದಲ್ಲಿ ಬೆಳಕಿಗಾಗಿ ಹಂಬಲಿಸಿದ ತತ್ವಪದ ಸಾಹಿತ್ಯ’’ (ಲೇಖನ ಸಂಗ್ರಹ)

26)      ಡಾ. ಶಶಿಕಾಂತ ಪಟ್ಟಣ ‘’ ವಚನಗಳು ಜಗತ್ತಿನ ಮೊದಲ ದೇಸಿ ಸಾಹಿತ್ಯ ‘’ (ಲೇಖನ ಸಂಗ್ರಹ)

27) ತ. ಸು. ಶಾಮರಾಯರು’’ ಕನ್ನಡ ಸಾಹಿತ್ಯ ಚರಿತ್ರೆ’’ .

28) ಕೆ .ಆದಿಶಂಕರ್ " ಕೋಲಾರ ಜಿಲ್ಲಾ ಗ್ಯಾಜೆಟಿಯರ್ " ; ಕರ್ನಾಟಕ ಸರ್ಕಾರ :1968.

29) ಬಸವರಾಜ ಸಬರದ ಹೈದರಾಬಾದ್ ಕರ್ನಾಟಕದ ತತ್ತ್ವಪದಗಳು’.

30) ಎಚ್. ಎಸ್. ಶಿವಪ್ರಕಾಶ್ ಎಲ್ಲ ಜಾತಿಯ ಮರಗಳು ಕಾಡು’’ (ಲೇಖನ ಸಂಗ್ರಹ).

 31)

ಸಂದರ್ಶನಗಳು:

                  #   ಶ್ರೀ ಮುನಿಯಪ್ಪ ಸ್ವಾಮಿ , ಅಚಲ ಆಶ್ರಮ – ರಾಜಕಲ್ಲಹಳ್ಳಿ

                  #   ಶ್ರೀ ರಾಜಪ್ಪ ಸ್ವಾಮಿ , ಅಚಲ ಆಶ್ರಮ – ಚಿಕ್ಕನಹಳ್ಳಿ.

                  #    ಶ್ರೀ ಎ.ಎಂ. ಕೃಷ್ಣಪ್ಪ , ತತ್ವಪದ ಗಾಯಕರುಸುಗಟೂರು.

                   #   ಶ್ರೀ ಕೆ. ನಾರಾಯಣಸ್ವಾಮಿ, ತತ್ವಪದ ಕಾರರು ಸುಗಟೂರು

                   #    ಶ್ರೀಮತಿ ಮುನಿತಾಯಮ್ಮ , ತತ್ವಪದ ಗಾಯಕಿ ಸುಗಟೂರು.

                  #    ಶ್ರೀ ಕೃಷ್ಣಾನಂದ ಸ್ವಾಮಿ, ಅಚಲ ಆಶ್ರಮ ವೇಮಗಲ್.

                  #    ಶ್ರೀಮತಿ ಮೀನಾಕ್ಷಮ್ಮ, ತತ್ವಪದ ಗಾಯಕಿ ರಾಮಸಂದ್ರ.

                  #    ಶ್ರೀಮತಿ ಲಲಿತಮಾಂಬ ತತ್ವಪದ ಗಾಯಕಿ ವೇಮಗಲ್.

                   #   ಕುಮಾರಿ ಶುಭಾ ಕೆ , ತತ್ವಪದ ಗಾಯಕಿ ವೇಮಗಲ್.

                   #    ಶ್ರೀಮತಿ ಲಕ್ಷ್ಮಮ್ಮ, ತತ್ವಪದ ಗಾಯಕಿರಾಮಸಂದ್ರ.

                   #    ವೆಂಕಟರವಣಪ್ಪ , ಹಿರಿಯ ನಾಟಕಕಾರರು ಹಾಗೂ ತತ್ವಪದ ಗಾಯಕರು – ಪಾಳ್ಯಕೆರೆ.

                   #     ಚಿಕ್ಕ ನಂಜಪ್ಪ, ತತ್ವಪದಗಾಯಕರು - ಬಾಲೇನಹಳ್ಳಿ.

                   #      ನಾಗಮ್ಮ, ಅಚಲ ಸಾಧಕರು ಹಾಗೂ ತತ್ವಪದಗಾಯಕರು - ಬಾಲೇನಹಳ್ಳಿ.

 

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.