ಆತ್ಮದ ಶಕ್ತಿ

 

ಆತ್ಮದ ಶಕ್ತಿ

(Translation of the book ‘’ THE POWER OF SOUL ‘’ BY DR.ZHI GANG SHA , from English to kannada Page xv –xxxii.)

ಸೇವೆಯೇ ಜೀವನದ ಪರಮೊದ್ದೇಶವಾಗಿದೆ. ನಾನು ಈ ಉದ್ದೇಶಕ್ಕಾಗಿಯೇ ನನ್ನ ಜೀವನವನ್ನು ಬದ್ಧಗೊಳಿಸಿರುವೆ. ಸೇವೆಯೇ ನನ್ನ ಜೀವನದ ಗುರಿ.

ನನ್ನ ಒಟ್ಟು ಜೀವನದ ಗುರಿ ಮಾನವಾಳಿಯ ಮತ್ತು ವಿಶ್ವದ ಎಲ್ಲಾ ಆತ್ಮಗಳ ಪ್ರಜ್ಞೆಯನ್ನು ಪರಿವರ್ತಿಸುವುದು ಮತ್ತು ಅವುಗಳಿಗೆ ಜ್ಞಾನೋದಯವನ್ನುಂಟು ಮಾಡುವುದು ಮತ್ತು  ಆ ಮೂಲಕ ಪ್ರೀತಿ ಶಾಂತಿ ಮತ್ತು ಸಾಮರಸ್ಯವನ್ನು ಮಾನವಾಳಿಗೆ, ಭೂಮಿ ತಾಯಿಗೆ, ಮತ್ತು ಎಲ್ಲಾ ವಿಶ್ವಗಳಿಗೂ ಪ್ರಸರಿಸುವುದು. ಈ ಗುರಿ ಮೂರು  ಸಭಲೀಕರಣ ಹಂತಗಳನ್ನು ಹೊಂದಿದೆ.

ನನ್ನ ಮೊದಲ ಗುರಿ ವಿಶ್ವಾತ್ಮಕ ಸಾರ್ವತ್ರಿಕ ಸೇವೆಯನ್ನು ಕಲಿಸುವುದು ಹಾಗೂ ಜನರನ್ನು ಷರತ್ತು ರಹಿತ ವಿಶ್ವಾತ್ಮಕ ಸೇವೆಕರಾಗಿ ಸಬಲೀಕೃತರನ್ನಾಗಿಸುವುದು. ವಿಶ್ವಾತ್ಮಕ ಸೇವೆಯ ಸಂದೇಶ :

ನಾನು ನಿಸ್ವಾರ್ಥವಾಗಿ  ಮಾನವಾಳಿಗೆ ಮತ್ತು ಇಡೀ ವಿಶ್ವಕ್ಜೆ ಸೇವೆ ಮಾಡುವೆ.

ನೀನು ನಿಸ್ವಾರ್ಥವಾಗಿ  ಮಾನವಾಳಿಗೆ ಮತ್ತು ಇಡೀ ವಿಶ್ವಕ್ಜೆ ಸೇವೆ ಮಾಡು.

ಒಟ್ಟಾಗಿ ನಾವು ಮಾನವಾಳಿ ಮತ್ತು ಎಲ್ಲಾ ವಿಶ್ವಾತ್ಮಗಳಿಗೆ ನಿಸ್ವಾರ್ಥವಾಗಿ ಸೇವೆ ಮಾಡೋಣ.

 

ನನ್ನ ಎರಡನೇ ಸಬಲೀಕರಣ ಹಂತ ಜನರಿಗೆ ಗುಣಪಡಿಸುವ ಚಿಕಿತ್ಸಕ ಶಕ್ತಿಯನ್ನು ಕಲಿಸುವುದು ಆ ಮೂಲಕ ಜನರು ತಮ್ಮನು ಹಾಗೂ ಇತರರನ್ನು ಗುಣಪಡಿಸುವಂತೆ ಮಾಡುವುದು.  ಚಿಕಿತ್ಸಕ ಶಕ್ತಿಯ ಸಂದೇಶ:

ನನ್ನನು ಗುಣಪಡಿಸಿಕೊಳ್ಳುವ ಚಿಕಿತ್ಸಕ ಶಕ್ತಿ ನನ್ನಲ್ಲಿದೆ.

ನಿನ್ನನ್ನು ಗುಣಪಡಿಸಿಕೊಳ್ಳುವ ಚಿಕಿತ್ಸಕ ಶಕ್ತಿ ನಿನ್ನಲಿದೆ.

ಒಟ್ಟಾಗಿ ಸೇರಿ ಇಡೀ ವಿಶ್ವವನ್ನೇ ಗುಣಪಡಿಸುವ ಚಿಕಿತ್ಸಕ ಶಕ್ತಿ ನಮ್ಮಲ್ಲಿದೆ.

ನನ್ನ ಮೂರನೇ ಸಭಲೀಕರಣ ಹಂತ ಆತ್ಮದ ಶಕ್ತಿಯನ್ನು ಕಲಿಸುವುದು. ಇದು ಆತ್ಮದ ರಹಸ್ಯಗಳು, ಆತ್ಮದ ವಿವೇಕ, ಆತ್ಮದ ಜ್ಞಾನ ಮತ್ತು ಆತ್ಮದ ಅಭ್ಯಾದ ಶಕ್ತಿಯ ಒಳಗೊಂಡಿದೆ. ಮತ್ತು ದೈವೀಕ ಆತ್ಮದ ಶಕ್ತಿಯನ್ನು ಪರಿವರ್ತಿಸಿ ಜನರನ್ನು ಸಭಲೀಕೃತರನ್ನಾಗಿಸಲು ಆ ಮೂಲಕ ಅವರ ಜೀವನದ ಎಲ್ಲಾ ಅಂಶಗಳನ್ನು ಪರಿವರ್ತಿಸಿಕೊಂಡು ತಮ್ಮ ತಮ್ಮ ಆತ್ಮ ಹೃದಯ ಮನಸ್ಸು ಮತ್ತು ದೇಹಗಳಲ್ಲಿ ಜ್ಙಾನೋದಯ ಉಂಟುಮಾಡಿಕೊಳ್ಳುವುದು ಆಗಿದೆ.

ಆತ್ಮ ಶಕ್ತಿಯ ಸಂದೇಶ:

ನಾನು ನನ್ನ ಪ್ರಜ್ಞೆ ಮತ್ತು ಜೀವನದ ಎಲ್ಲಾ ಅಂಶಗಳನ್ನು ಪರಿವರ್ತಿಸಿಕೊಂಡು ನನ್ನ ಆತ್ಮ ಹೃದಯ ಮನಸ್ಸು ಮತ್ತು ದೇಹದಲ್ಲಿ ಜ್ಞಾನೋದಯ ಉಂಟು ಮಾಡಿಕೊಳ್ಳುವ ಆತ್ಮ ಶಕ್ತಿಯನ್ನು ಹೊಂದಿರುವೆ.

ನೀನು ನಿನ್ನ  ಪ್ರಜ್ಞೆ ಮತ್ತು ಜೀವನದ ಎಲ್ಲಾ ಅಂಶಗಳನ್ನು ಪರಿವರ್ತಿಸಿಕೊಂಡು ನಿನ್ನ  ಆತ್ಮ ಹೃದಯ ಮನಸ್ಸು ಮತ್ತು ದೇಹದಲ್ಲಿ ಜ್ಞಾನೋದಯ ಉಂಟು ಮಾಡಿಕೊಳ್ಳುವ ಆತ್ಮ ಶಕ್ತಿಯನ್ನು ಹೊಂದಿರುವೆ.

ಒಟ್ಟಾಗಿ ನಾವಿಬ್ಬರೂ ಮಾನವಾಳಿ ಮತ್ತು ಎಲ್ಲಾ ಆತ್ಮಗಳ  ಪ್ರಜ್ಞೆ ಮತ್ತು ಜೀವನದ ಎಲ್ಲಾ ಅಂಶಗಳನ್ನು ಪರಿವರ್ತಿಸಿ , ಜ್ಞಾನೋದಯ ಉಂಟು ಮಾಡುವ ಆತ್ಮ ಶಕ್ತಿಯನ್ನು ಹೊಂದಿರುವೆವು.

 

ಈ ಮೂರನೇ ಹಂತವಾದ ಆತ್ಮ ಶಕ್ತಿಯನ್ನು ಕಲಿಸುವುದೇ ನನ್ನ ಸಭಲೀಕರಣ ಕ್ರಿಯೆಯ ಪ್ರಮುಖ ಉದ್ದೇಶ. ಇದೇ ನನ್ನ ಒಟ್ಟು ಜೀವನೋದ್ದೇಶದ ಕೀಲಿಕೈ ಆಗಿದೆ.  ಆತ್ಮದ ಶಕ್ತಿಯೇ  ಭೌತಿಕ ಮತ್ತು ಆಧ್ಯಾತ್ಮಿಕ ಜೀವನಗಳ ಪರಿವರ್ತನೆಯ ಕೀಲಿಕೈ ಆಗಿದೆ. ಎಲ್ಲಾ ವಿಶ್ವಗಳಲ್ಲಿರುವ ಪ್ರತಿಯೊಂದು ಆತ್ಮದ ಮತ್ತು ಮಾನವಾಳಿಯ ಪರಿವರ್ತನ ಮತ್ತು ಜ್ಞಾನೋದಕ್ಕೂ ಇದೇ ಕೀಲಿಕೈ ಆಗಿದೆ.

೨೧ ನೇ ಶತಮಾನದ ಪ್ರಾರಂಭಿಕ ಘಟ್ಟವು ಮಾನವಾಳಿ, ಭೂಮಿ ತಾಯಿ, ಮತ್ತು ಎಲ್ಲಾ ವಿಶ್ವಗಳ ಪರಿವರ್ತನೆಯ ಹೊಸ ಮನ್ವಂತರವಾಗಿದೆ. ಈ ಯುಗಕ್ಕೆ ಆತ್ಮದ ಬೆಳಕಿನ ಯುಗವೆಂದು ಹೆಸರು. ಈ ಹೊಸ ಆತ್ಮದ ಬೆಳಕಿನ ಯುಗವು  ಆಗಸ್ಟ್‌ ೮ ೨೦೦೩ ರಿಂದ ಪ್ರಾರಂಭವಾಗಿದೆ. ಇದು ಮುಂದಿನ ಹದಿನೈದು ಸಾವಿರ ವರ್ಷಗಳವರೆಗೂ ಮುಂದುವರೆಯಲಿದೆ. ನೈಸರ್ಗಿಕ ವಿಕೋಪಗಳಾದ ಸುನಾಮಿ, ಚಂಡಮಾರುತಗಳು, ಭೂಕಂಪನ , ಪ್ರವಾಹ, ಬೀಕರ ಸುಂಟರಗಾಳಿ, ಬೀಕರವಾದ ಆಲಿಕಲ್ಲು ಮಳೆ, ಹಿಮಪಾತಗಳು, ಅಗ್ನಿ ದುರಂತಗಳು , ಬರಗಾಲ, ಅತ್ಯಧಿಕ ತಾಪಮಾನ ಹೇರಿಕೆ, ಕ್ಷಾಮ, ಮತ್ತು ಕಾಯಿಲೆಗಳನ್ನು ಒಳಗೊಂಡಂತೆ. ರಾಜಕೀಯ ಧಾರ್ಮಿಕ ಮತ್ತು ಜನಾಂಗೀಯ ಯುದ್ಧಗಳು, ಭಯೋತ್ಪಾದನೆ, ಅಣ್ವಸ್ತ್ರಗಳ ಪ್ರಸರಣ, ಆರ್ಥಿಕ ಬಿಕ್ಕಟ್ಟುಗಳು, ಮಾಲಿನ್ಯ, ಪಕ್ಷಿ ಮತ್ತು ಪ್ರಾಣಿ ಪ್ರಭೇಧಗಳ ವಿನಾಶ ಸೇರಿದಂತೆ ಹಲವು ವಿನಾಶಕ ಕ್ರಾಂತಿಗಳು ಈ ಪರಿವರ್ತನ ಯುಗದ ಭಾಗವಾಗಿಯೇ ನಡೆಯುತ್ತಿವೆ.  ಇದರ ಜೊತೆಗೆ ಲಕ್ಷಾಂತರ ಜನರು ಖಿನ್ನತೆ, ಆತಂಕ, ಭಯ, ಕೋಪ, ಮತ್ತು ಚಿಂತೆಗಳಿಂದ ಬಳಲುತ್ತಿದ್ದಾರೆ.  ಹಾಗೇ ಅವರು ನೋವು ದೀರ್ಘಕಾಲಿಕ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಮಾನವಾಳಿಗೆ ಸಹಾಯ ಬೇಕಾಗಿದೆ. ಮಾನವಾಳಿಯ ಪ್ರಜ್ಞೆ ಪರಿವರ್ತನೆಯಾಗಬೇಕಾಗಿದೆ.  ಮಾನವಾಳಿಯ ನೋವು ಮತ್ತು ಬಳಲುವಿಕೆಗಳಿಂದ ಮುಕ್ತವಾಗಬೇಕಾಗಿದೆ.

ಈ ಆತ್ಮ ಶಕ್ತಿಯ ಸರಣಿಯ ಪುಸ್ತಕಗಳನ್ನು ಹೆವೆನ್ಸ ಲೈಬ್ರರೀ ಮತ್ತು ಆತ್ರಿಯ ಬುಕ್ಸ ರವರು ಪ್ರಕಟಿಸಿ ನಿಮ್ಮ ಬಳಿ ತಂದಿದ್ದು, ಈ ಸರಣಿ ಪುಸ್ತಕಗಳು ಆತ್ಮದ ರಹಸ್ಯಗಳನ್ನು ಬಹಿರಂಗಗೊಳಿಸುವ, ಮತ್ತು ಪ್ರತಿನಿತ್ಯದ ಅಭ್ಯಾಸಕ್ಕಾಗಿ  ಆತ್ಮದ ವಿವೇಕವನ್ನು, ಆತ್ಮ ಜ್ಞಾನವನ್ನು  ಮತ್ತು ಆತ್ಮಶಕ್ತಿಯ ಅಭ್ಯಾಸವನ್ನು ಕಲಿಸುವ ಕೆಲಸಮಾಡುತ್ತವೆ. ಆತ್ಮದ ಶಕ್ತಿಯು ಗುಣಪಡಿಸುವ, ಕಾಯಿಲೆಗಳನ್ನು ತಡೆಯುವ, ಪುನರ್‌ ಯೌವ್ವನಗೊಳಿಸುವ, ದೀರ್ಘಾಯುಷ್ಯ ನೀಡುವ, ಹಣಕಾಸಿನ ವಿಚಾರಗಳಲ್ಲಿ ಮತ್ತು ಸಂಭಂಧಗಳಲ್ಲಿ ಸೇರಿದಂತೆ ಜೀವನದ ಪ್ರತಿಯೊಂದು ಅಂಶಗಳಲ್ಲಿ ಮತ್ತು ಪ್ರಜ್ಞೆಯಲ್ಲಿ ಪರಿವರ್ತನೆಯನ್ನು ತರುವ ವಿಶೇಷ ಶಕ್ತಿಯನ್ನು ಹೊಂದಿದೆ. ಈ ಪರಿವರ್ತನೆಯ ಕಾಲದಲ್ಲಿ ಆತ್ಮದ ಶಕ್ತಿಯ ಮಾನವಾಳಿಯ ಮತ್ತು ಭೂಮಿ ತಾಯಿಯ  ಸೇವೆಗಳು ಪ್ರಮುಖ್ಯತೆ ಪಡೆದಿದೆ.  ಈ ಆತ್ಮದ ಶಕ್ತಿಯು ಮಾನವಾಳಿಯ ಮತ್ತು ಎಲ್ಲಾ ವಿಶ್ವಾತ್ಮಗಳ ಪ್ರಜ್ಞೆಯನ್ನ ಎಚ್ಚರಿಸುವ ಮತ್ತು ಪರಿವರ್ತಿಸುವ ಕಾರ್ಯ ಮಾಡುತ್ತದೆ.

ಇಪ್ಪತನೇ ಶತಮಾನ ಮತ್ತ ಅದಕ್ಕೆ ಹಿಂದಿನ ಕಾಲಘಟ್ಟದಲ್ಲಿ ಗುಣಪಡಿಸುವ, ಪುನರ್ಜೀವನಗೊಳಿಸುವ, ಮತ್ತು ಜೀವನ ಪರಿವರ್ತಿಸುವಲ್ಲಿ ಮನಸ್ಸು ( ಮೈಂಡ್‌ ಒವರ್‌ ಮ್ಯಾಟರ್‌ ) ಪ್ರಮುಖ ಪಾತ್ರವನ್ನು ವಹಿಸಿತ್ತು. ಈಗಿನ ಆತ್ಮದ ಬೆಳಕಿನ ಯುಗದಲ್ಲಿ ಆತ್ಮ ( ಸೋಲ್‌ ಒವರ್‌ ಮ್ಯಾಟರ್‌ ) ವು ಗುಣಪಡಿಸುವ, ಪುನರ್ಜೀವನಗೊಳಿಸುವ, ಮತ್ತು ಎಲ್ಲರ ಜೀವನ ವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಭೂಮಿ ತಾಯಿಯ ಮೇಲೆ ಅಸಂಖ್ಯಾತ ಆತ್ಮಗಳು ಇವೆ- ಮನುಷ್ಯ ಜೀವಿಗಳ ಆತ್ಮಗಳು, ಪ್ರಾಣಿಗಳ ಆತ್ಮಗಳು, ಇತರೆ ಜೀವಿಗಳ ಆತ್ಮಗಳು, ನಿರ್ಜೀವ ವಸ್ತುಗಳ ಆತ್ಮಗಳು ಇವೆ. ಪ್ರತಿಯೊಂದು ಜೀವಿ ಮತ್ತು ಪ್ರತಿಯೊಂದು ವಸ್ತುವಿಗೂ ಒಂದೊಂದು ಆತ್ಮವಿರುತ್ತದೆ.

ಪ್ರತಿಯೊಂದು ಆತ್ಮವೂ ಸಹಾ ತನ್ನದೇ ಆದ ಕಂಪನ ಮತ್ತು ಶಕ್ತಿಯನ್ನು ಹೊಂದಿರುತ್ತೆ.‌ ತಂದೆ ಜೀಸಸ್ ಅದ್ಬುತವಾದ ಪವಾಡ ಶಕ್ತಿಯನ್ನು ಹೊಂದಿದ್ದ. ಮಾತೆ ಗ್ವಾನ್‌ ಇನ್‌ ರವರು ಸಹಾನುಭೂಯಿಂದ ಹಲವಾರು ಜನರ ಜೀವನವನ್ನು ರಕ್ಷಿಸಿದ ಹೃದಯ ಮುಟ್ಟುವ ಪವಾಡ  ಕಥೆಗಳನ್ನು ನಾವು ಕೇಳಿದ್ದೇವೆ. ಮಾತೆ ಮೇರಿಯ ಪ್ರೀತಿ ಹಲವು ಹೃದಯ ತಟ್ಟುವ ಕಥೆಗಳನ್ನು ಸೃಷ್ಟಿಸಿದೆ.  ಇಂತಹಾ ಎಲ್ಲಾ ಶ್ರೇಷ್ಠ ಆತ್ಮಗಳಿಗೂ ಮಾನವಾಳಿಯ ಸೇವೆಗಾಗಿ ದೈವೀಕ ಆತ್ಮ ಶಕ್ತಿಯನ್ನು ನೀಡಲಾಗಿದೆ.  ಭೌದ್ಧ,ಕ್ರೈಸ್ಥ,ಇಸ್ಲಾಂ ಹಿಂದು, ದ್ಹಾವಿಸಂ, ಜುಡಾಯಿಸಂ ಸೇರಿದಂತೆ  ಪ್ರಪಂಚದ ಎಲ್ಲಾ ಶ್ರೇಷ್ಠ ಧರ್ಮಗಳು ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳು ಒಂದೇ ರೀತಿಯ ಮತ್ತು ಒಂದೇ ಮೊತ್ತದ ಆಧ್ಯಾತ್ಮಿಕವಾದ ಗುಣಪಡಿಸುವ ಮತ್ತು ಆಶಿರ್ವದಿಸುವ ಶಕ್ತಿಯನ್ನು  ಹೊಂದಿವೆ.

ನಾನು ಪ್ರತಿಯೊಂದು ಧರ್ಮ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಸಮಾನವಾಗಿ ಗೌರವಿಸುತ್ತೇನೆ. ಅದಾಗ್ಯೂ ನಾನು ಯಾವುದೇ ಧರ್ಮವನ್ನು ಕಲಿಸುತ್ತಿಲ್ಲ. ನಾನು ಆತ್ಮದ ರಹಸ್ಯಗಳು, ಆತ್ಮದ ವಿವೇಕ, ಆತ್ಮದ ಜ್ಞಾನ ಮತ್ತು ಆತ್ಮ ಶಕ್ತಿಯ ಅಭ್ಯಾಸಗಳನ್ನು ಒಳಗೊಂಡಿರುವ ಆತ್ಮ ಶಕ್ತಿಯನ್ನು ಕಲಿಸುತ್ತಿದ್ದೇನೆ.  ನಿಮ್ಮ  ಆತ್ಮ ಗುಣಪಡಿಸುವ, ಪುನರ್ಜೀವನಗೊಳಿಸುವ, ಮತ್ತು ಜೀವನ ಪರಿವರ್ತನ ಗೊಳಿಸುವ ಶಕ್ತಿಯನ್ನು ಹೊಂದಿದೆ. ಒಂದು ಪ್ರಾಣಿಯ ಆತ್ಮವು ಗುಣಪಡಿಸುವ, ಪುನರ್ಜೀವನಗೊಳಿಸುವ, ಮತ್ತು ಜೀವನ ಪರಿವರ್ತನ ಗೊಳಿಸುವ ಶಕ್ತಿಯನ್ನು ಹೊಂದಿದೆ. ಸೂರ್ಯ, ಚಂದ್ರ ,ಸಮುದ್ರ, ಪರ್ವತ ಮತ್ತು ಮರ ಗಿಡಗಳಿಗೂ ಅವುಗಳದ್ದೇ ಆತ್ಮಗಳಿದ್ದು ಅವು ಸಹಾ ಗುಣಪಡಿಸುವ, ಪುನರ್ಜೀವನಗೊಳಿಸುವ, ಮತ್ತು ಜೀವನ ಪರಿವರ್ತನ ಗೊಳಿಸುವ ಶಕ್ತಿಯನ್ನು ಹೊಂದಿವೆ. ಚಿಕಿತ್ಸಕ ದೇವತೆಗಳು ಮೇಲು ಹಂತದ ಗುರುಗಳು, ಪವಿತ್ರ ಸಾಧುಗಳು ,ಹಿಂದೂ ಬೌದ್ಧ ಮತ್ತು ದಾವ್‌ ಸಾಧುಗಳು ಮತ್ತು ಇತರೆ ಮೇಲು ಹಂತದ ಆಧ್ಯಾತ್ಮಿಕ ಜೀವಿಗಳು ಅತಿ ಶ್ರೇಷ್ಠವಾದ  ಗುಣಪಡಿಸುವ, ಪುನರ್ಜೀವನಗೊಳಿಸುವ, ಮತ್ತು ಜೀವನ ಪರಿವರ್ತನ ಗೊಳಿಸುವ ಶಕ್ತಿಯನ್ನು ಹೊಂದಿದ್ದಾರೆ.

ಪ್ರತಿಯೊಂದು ಆತ್ಮಕ್ಕೂ ತನ್ನದೇ ಆದ ಒಂದು ಹಂತ ಇರುತ್ತದೆ. ಆಧ್ಯಾತ್ಮಿಕ ಹಂತ ಅಥವಾ  ಆತ್ಮದ ಹಂತಗಳು ಅಸಂಖ್ಯಾತ ಪದರುಗಳನ್ನು ಒಳಗೊಂಡಿದೆ. ಆತ್ಮ ಶಕ್ತಿಯೂ ಸಹಾ ಹಲವಾರು ಪದರುಗಳನ್ನು ಒಳಗೊಂಡಿದೆ. ಎಲ್ಲಾ ಆತ್ಮಗಳೂ ಸಹಾ ಜೀಸಸ್‌, ತಾಯಿ ಗ್ವಾನ್‌ ಈನ್‌, ಮದರ್‌ ಮೇರಿಯರ ಹಾಗೇ ಪವಾಡಗಳನ್ನು ಮಾಡಲಾಗುವುದಿಲ್ಲ. ಆತ್ಮದ ಶಕ್ತಿಯು ಸ್ವರ್ಗದಲ್ಲಿ ಆ ಆತ್ಮ ತಲುಪಿರುವ  ಆಧ್ಯಾತ್ಮಿಕ ಹಂತವನ್ನು ಆಧರಿಸಿರುತ್ತದೆ. ಒಂದು ಆತ್ಮ ಸ್ವರ್ಗದ ಆಧ್ಯಾತ್ಮಿಕ ಹಂತಗಳಲ್ಲಿ ಎಷ್ಟು ಎತ್ತರದ ಹಂತದಲ್ಲಿ ಇರುವುದೂ ಅಷ್ಟು ಶಕ್ತಿಯನ್ನು ದೈವ ಆ ಆತ್ಮಗಳಿಗೆ ನೀಡುವುದು. ಜೀಸಸ್‌, ತಾಯಿ ಗ್ವಾನ್‌ ಈನ್‌ , ತಾಯಿ ಮೇರಿ ಮುಂತಾದವರೆಲ್ಲರೂ ಅತಿ ಎತ್ತರದ ಆಧ್ಯಾತ್ಮಿಕ ಹಂತದಲ್ಲಿ ಇರುವವರಾಗಿದ್ದಾರೆ.

 

 ಒಂದು ಆತ್ಮದ ಆಧ್ಯಾತ್ಮಿಕ ಹಂತವನ್ನು ನಿರ್ಧರಿಸುವವರಾರು ? ಒಂದು ಆತ್ಮಕ್ಕೆ ಸೂಕ್ತವಾದ ಆತ್ಮ ಶಕ್ತಿಯನ್ನು ನೀಡುವವರಾರು ? ಮಾನವಾಳಿಯ, ತಾಯಿ ಭೂಮಿಯ ಮತ್ತು ವಿಶ್ವಗಳಿಗೆ ನಿರ್ದೇಶನವನ್ನು ನೀಡುವವರಾರು ? ಆಧ್ಯಾತ್ಮಿಕ ಜಗತ್ತಿನ ಅತಿ ಎತ್ತರದ ನೇತಾರನೇ ಇವೆಲ್ಲವನ್ನು ನಿರ್ಧರಿಸುವವನಾಗಿದ್ದಾನೆ. ಈ ನೇತಾರನೇ ಧೈವ. ದೈವವೇ ಎಲ್ಲಾ ವಿಶ್ವಗಳ ನಿರ್ಮಾಪಕನು, ನಿರ್ವಾಹಕನೂ ಆಗಿದ್ದಾನೆ.

ಆತ್ಮದ ಬೆಳಕಿನ ಯುಗದಲ್ಲಿ ಎಲ್ಲಾ ಆತ್ಮಗಳು ಒಂದಾಗಿ ಸೇರಿ ಅವುಗಳ ಪ್ರಜ್ಞೆಯನ್ನು ಧೈವತ್ವದ ಪ್ರಜ್ಞೆಯೊಂದಿಗೆ ಒಂದಾಗಿಸಿಕೊಳ್ಳುತವೆ. ಇಂತಹಾ ಐತಿಹಾಸಿಕ ಸಮಯದಲ್ಲಿ ದೈವವು  ಈ ಪರಿವರ್ತನೆಯ ಕಾಲದಲ್ಲಿ ಮಾನವಾಳಿಗೆ ಮತ್ತು ತಾಯಿ ಭೂಮಿಯ ಪರಿವರ್ತನೆಗೆ ಒಳಗಾಗುವ ಎಲ್ಲಾ ಆತ್ಮಗಳಿಗೆ ಸಹಾಯ ಮಾಡಲು ತನ್ನ ದೈವೀಕ ಆತ್ಮ ಶಕ್ತಿಯ ಖಜಾನೆಯನ್ನು ಮಾನವಾಳಿಗೆ ಮತ್ತು ಎಲ್ಲಾ ಆತ್ಮಗಳಿಗೆ ಪ್ರಸಾರ ಮಾಡಲು ನಿರ್ಧರಿಸಿದೆ.

ನಾನು ಈ ವಿಷಯವನ್ನು ಹೇಗೆ ತಿಳಿದುಕೊಂಡೆ ಎಂಬುದನ್ನು ನಿಮಗೆ ಅರ್ಥಮಾಡಿಸಲು ಎರಡು ವೈಯಕ್ತಿಕ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಮೊದಲ ಘಟನೆ, ಎಪ್ರಿಲ್‌ ೨೦೦೩ ರಲ್ಲಿ ಚಿಕಿತ್ಸಕ ದೇವನಾದ ಮೆಡಿಸಿನ್‌ ಬುದ್ಧನ ಪವಿತ್ರ ನೆಲವಾದ ಕ್ಯಾಲಿಪೋರ್ನೀಯಾದ ಸೊಕ್ಯುಲ್‌ ನಲ್ಲಿ ನೂರಕ್ಕೂ ಹೆಚ್ಚು ಜನರನ್ನು ಒಳಗೊಂಡಂತೆ ಒಂದು ಶಕ್ತಿ ಚಿಕಿತ್ಸಕ ಪ್ರಾತ್ಯಕ್ಷಿಕಾ ಶಿಬಿರವನ್ನು ನಡೆಸುತ್ತಿದ್ದೆ. ನಾನು ಶಿಬಿರದಲ್ಲಿ ಬೋಧನೆ ಮಾಡುತ್ತಿದ್ದಾಗ , ದೈವವು ನನ್ನ ಮುಂದೆ ಪ್ರತ್ಯಕ್ಷವಾಯಿತು. ಆಗ ನಾನು ನನ್ನ ವಿದ್ಯಾರ್ಥಗಳಿಗೆ ದೈವವು ಇಲ್ಲಿ ಪ್ರತ್ಯಕ್ಷವಾಗಿದೆ ನನಗೆ ಸ್ವಲ್ಪ ಸಮಯ ನೀಡಿ ಎಂದು ಹೇಳಿದೆ. ನಾನು ದೈವಕ್ಕೆ ಗೌರವ ಸೂಚಕವಾಗಿ ಶಿರಭಾಗಿ ಪ್ರಣಾಮವನ್ನು ಮಾಡಿದೆ. ( ಒಬ್ಬ ಚೀನೀಯನಾಗಿ ನಾನು ನನ್ನ ಬಾಲ್ಯದಿಂದಲೇ ಹಿರಿಯರಿಗೆ ಗೌರವಸೂಚಕವಾಗಿ ತಲೆಬಾಗಿ ನಮಸ್ಕರಿಸುವುದನ್ನು ಕಲಿತಿದ್ದೆ,  ನನ್ನ ೬ ನೇ ವಯಸ್ಸಿನಲ್ಲಿ ನನ್ನ  ಥಾಯ್‌ ಚೀ ಗುರುಗಳಿಗೆ ಶಿರಭಾಗಿ ನಮಸ್ಕರಿಸುವುದನ್ನು ಕಲಿತೆ, ನನ್ನ ಹತ್ತನೇ ವಯಸ್ಸಿನಲ್ಲಿ ನನ್ನ ಕೂ ಗೋಂಗ್‌ ಗುರುಗಳಿಗೆ ಮತ್ತು ೧೨ ನೇ ವಯಸ್ಸಿನಲ್ಲಿ ಕುಂಗ್‌ ಪೂ ಗುರುಗಳಿಗೆ ಶಿರಭಾಗಿ ನಮಸ್ಕರಿಸುತ್ತಿದೆ. ) ನಂತರ ನಾನು ನನ್ನ ವಿದ್ಯಾರ್ಥಿಗಳಿಗೆ “ದಯವಿಟ್ಟು ಅರ್ಥಮಾಡಿಕೊಳ್ಳಿ , ಇದೇ ರೀತಿ ಶಿರ ಭಾಗಿ ನಮಿಸುವುದರ ಮೂಲಕವೇ ನಾನು ನನ್ನ ಆಧ್ಯಾತ್ಮಿಕ ಪಿತೃಗಳನ್ನು , ಮತ್ತು ಆಧ್ಯಾತ್ಮಿಕ ಮಾತೆಯರನ್ನು ಹಾಗೂ ಧೈವವನ್ನು ವಂದಿಸಿ ಅವರಿಗೆ ಗೌರವ ಸೂಚಿಸುತ್ತೇನೆ. ಈಗ ನಾನು ದೈವದೊಂದಿಗೆ ಸಂಭಾಷಣೆ ನಡೆಸಲಿರುವೆ” ಎಂದು.

ನಾನು ನಿಧಾನವಾಗಿ “ ಪ್ರೀತಿಯ ದೈವವೇ, ಇಲ್ಲಿ ನಿನ್ನ ಇರುವಿಕೆ ನನಗೆ ಅತ್ಯಂತ  ಗೌರವವನ್ನು ಹಾಗೂ ಸಂಪ್ರೀತಿಯನ್ನು ಉಂಟುಮಾಡಿದೆ” ಎಂದು ಹೇಳಿದೆ.

ನನ್ನ ಮುಂದೆ ಎತ್ತರದಲ್ಲಿ ಇದ್ದ ಧೈವವು “ ಜೀ ಗಂಗ್‌ , ಒಂದು ಆಧ್ಯಾತ್ಮಿಕ ನಿಯಮವನ್ನು ನಿನಗೆ ತಿಳಿಸಲು ನಾನು ಇಂದು ಇಲ್ಲಿಗೆ ಬಂದಿರುವೆ” ಎಂದು ಪ್ರತಿಕ್ರಿಯಿಸಿತು.

ನಾನು “ ಈ ಆಧ್ಯಾತ್ಮಿಕ ನಿಯಮವನ್ನು ತಿಳಿಯಲು ಧನ್ಯತಾಭಾವದಿಂದಿರುವೆ “ ಎಂದು ಹೇಳಿದೆ.

ಧೈವವು “ ಈ ಆಧ್ಯಾತ್ಮಿಕ ನಿಯಮದ ಹೆಸರು ʼವಿಶ್ವಾತ್ಮಕ ಸೇವೆಯ ಸಾರ್ವತ್ರಿಕ ನಿಯಮ ʼ ವಿಶ್ವದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ನಿಯಮಗಳಲ್ಲಿ ಇದೂ ಸಹಾ ಒಂದಾಗಿದೆ. ಇದು ಆಧ್ಯಾತ್ಮಿಕ ಜಗತ್ತು ಮತ್ತು ಬೌತಿಕ  ಜಗತ್ತುಗಳೆರಡಕ್ಕೂ ಅನ್ವಯಿಸುವಂತಹದಾಗಿದೆ.”  ಎಂದು ಹೇಳಿ ನಂತರ ದೈವವು ತನ್ನತ್ತ ಬೊಟ್ಟು ಮಾಡಿಕೊಂಡು “ ನಾನು ವಿಶ್ವಾತ್ಮಕ ಸೇವಕ “ ಎಂದು ಹೇಳಿತು. ನಂತರ ನನ್ನತ್ತ ಬೊಟ್ಟು ಮಾಡಿ “ ನೀನು ವಿಶ್ವಾತ್ಮಕ ಸೇವಕ “ ಎಂದು ಹೇಳಿ, ತನ್ನ ಮುಂದೆ ಕೈ ಗಳನ್ನು ಹರಡಿ  ತೋರಿಸಿ “ ಪ್ರತಿಯೊಬ್ಬ ಜೀವಿ ಹಾಗೂ ಪ್ರತಿಯೊಂದು ವಸ್ತುವೂ ಸಹಾ ವಿಶ್ವಾತ್ಮಕ ಸೇವಕರೇ,  ಒಬ್ಬ ವಿಶ್ವಾತ್ಮಕ ಸೇವಕನು , ವಿಶ್ವಾತ್ಮಕ ಸಾರ್ವತ್ರಿಕ ಸೇವೆಯನ್ನು ಯಾವುದೇ ಷರತ್ತುಗಳಿಲ್ಲದೇ ಒದಗಿಸ ಬಯತ್ತಾನೆ. ವಿಶ್ವಾತ್ಮಕ ಸೇವೆಯು ವಿಶ್ವಾತ್ಮಕ ಪ್ರೀತಿ,  ಕ್ಷಮಿಸುವಿಕೆ, ಶಾಂತಿ, ಗುಣಪಡಿಸುವಿಕೆ, ಆಶಿರ್ವದಿಸುವಿಕೆ, ಸಾಮರಸ್ಯ ಮತ್ತು ಜ್ಞಾನೋದಯವನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿ ಸ್ವಲ್ಪ ಸೇವೆಯನ್ನು ವಿಶ್ವಕ್ಕೆ ನೀಡಿದರೆ ಅವನು ನನ್ನಿಂದ ಮತ್ತು ವಿಶ್ವದಿಂದ ಸ್ವಲ್ಪ ಆಶಿರ್ವಾದ ಮತ್ತು ಹಾರೈಕೆಗಳನ್ನು ಪಡೆಯುತ್ತಾನೆ, ಒಬ್ಬನು ಹೆಚ್ಚು ಸೇವೆಯನ್ನು ವಿಶ್ವಕ್ಕೆ ನೀಡಿದರೆ ಅವನು ಹೆಚ್ಚು ಆಶಿರ್ವಾದ ಮತ್ತು ಹಾರೈಕೆಗಳನ್ನು ಪಡೆಯುತ್ತಾನೆ. ಒಬ್ಬನು ಬೇಷರತ್ತ ಆಗಿ ಅಗಣಿತ ಸೇವೆಯನ್ನು ವಿಶ್ವಕ್ಕೆ ನೀಡಿದರೆ ಅವನು ಅಗಣಿತವಾದ ಆಶಿರ್ವಾದಗಳನ್ನು ಪಡೆಯುತ್ತಾನೆ “ ಎಂದು ಹೇಳಿತು.

ನಂತರ ದೈವವು ಒಂದು ಕ್ಷಣ ತಡೆದು, ನಂತರ “ಸೇವೆಯು ಮತ್ತೊಂದು ವಿಧದಲ್ಲಿಯೂ ಇದೆ, ಅದು ಅಹಿತಕರ ಸೇವೆ . ಅಹಿತಕರ ಸೇವೆಯು ಕೊಲೆ, ಹಾನಿಗೊಳಿಸುವಿಕೆ, ಇತರರ ಪರಿಶ್ರಮದ ಲಾಭ ಪಡೆಯುವಿಕೆ, ಮೋಸ, ಕಳವು, ಇತರರನ್ನು ದೂರುವಿಕೆ ಇತ್ಯಾದಿಗಳನ್ನು ಒಳಗೊಂಡಿದೆ. ಒಬ್ಬ ಸ್ವಲ್ಪ ಮಟ್ಟದ ಅಹಿತಕರ ಸೇವೆಯನ್ನು ವಿಶ್ವಕ್ಕೆ ನೀಡಿದರೆ ಅವನು ಸ್ವಲ್ಪ ಪಾಠಗಳನ್ನು ವಿಶ್ವದಿಂದ ಮತ್ತು ನನ್ನಿಂದ ಕಲಿಯಬೇಕಾಗುತ್ತದೆ. ಒಬ್ಬ ಹೆಚ್ಚು ಅಹಿತಕರ ಸೇವೆಯನ್ನು ವಿಶ್ವಕ್ಕೆ ನೀಡಿದಲ್ಲಿ ಅವನು ಹೆಚ್ಚು ಪಾಠಗಳನ್ನು ಕಲಿಯಬೇಕಾಗುತ್ತದೆ. ಒಬ್ಬನು ಬೃಹತ್‌ ಮಟ್ಟದ ಅಹಿತಕರ  ಸೇವೆಯನ್ನು ನೀಡಿದಲ್ಲಿ ಅವನು ಅದೇ ಮಟ್ಟದ ಪಾಠಗಳನ್ನು ಕಲಿಯಬೇಕಾಗುತ್ತದೆ”  ಎಂದು ದೈವ ನುಡಿಯಿತು.

ಆಗ ನಾನು “ ಒಬ್ಬನು ಯಾವ ಯಾವ ರೀತಿಯ ಪಾಠಗಳನ್ನು ಕಲಿಯಬೇಕಾಗಬಹುದು “ ಎಂದು ಕೇಳಿದೆ.

ಅದಕ್ಕೆ ದೈವವು “ ಆ ಪಾಠಗಳು ಅನಾರೋಗ್ಯ, ಅಪಘಾತ, ಗಾಯಗಳು ,ಆರ್ಥಿಕ ಸಂಕಷ್ಟಗಳು, ಸಂಭಂಧಗಳಲ್ಲಿ ಬಿರುಕುಗಳು, ಭಾವನಾತ್ಮಕ ಮಾನಸೀಕ ಏರುಪೇರು, ಮಾನಸಿಕ ಗೊಂದಲ ಮತ್ತು ಇತರೆ ಅಸ್ವಸ್ಥತೆಗಳನ್ನು ಒಳಗೊಂಡಿದೆ “ ಎಂದು ಹೇಳಿದ ನಂತರ “ ಬ್ರಹ್ಮಾಂಡವು ಕಾರ್ಯನಿರ್ವಹಿಸುವ ವಿಧಾನ ಹೀಗೆಯೇ ಇರುತ್ತದೆ. ಈ ನಿಯಮವು ವಿಶ್ವದ ಎಲ್ಲಾ ಆತ್ಮಗಳೂ  ಅನುಸರಿಸ ಬೇಕಾದ ನನ್ನ ಪ್ರಮುಖ ಆಧ್ಯಾತ್ಮಿಕ ನಿಯಮಗಳಲ್ಲಿ ಅತ್ಯಂತ ಪ್ರಮುಖ ನಿಯಮವಾಗಿದೆ” ಎಂದು ಒತ್ತು ಕೊಟ್ಟು ಹೇಳಿತು.

ಹೀಗೆ ಧೈವವು ವಿಶ್ವಾತ್ಮಕ ನಿಯಮವನ್ನು ನನಗೆ ತಲುಪಿಸಿದ ನಂತರ ತಕ್ಷಣದಲ್ಲಿಯೇ ನಾನು ನಿಧಾನವಾಗಿ ಮುಂದಿನಂತೆ ಸಂಕಲ್ಪವನ್ನು ಮಾಡಿದೆ.

ಪ್ರೀತಿಯ ದೈವವೇ ,

ನಾನು ನಿನ್ನ ವಿಶ್ವಾತ್ಮಕ ಸೇವೆಯ ನಿಯಮವನ್ನು ಪಡೆದು ಅತ್ಯಂತ ಧನ್ಯನಾಗಿರುವೆ. ನಾನು ನಿನಗೆ, ಎಲ್ಲಾ ಮಾನವಾಳಿಗೆ ಹಾಗೂ ವಿಶ್ವದ ಎಲ್ಲಾ ಆತ್ಮಗಳಿಗೆ  ನಿಸ್ವಾರ್ಥ ಹಾಗೂ ಷರತ್ತು ರಹಿತವಾಗಿ ವಿಶ್ವಾತ್ಮಕ ಸೇವಕನಾಗಿರುತೇನೆ ಎಂದು ಪ್ರತಿಜ್ಞೆ ಮಾಡುವೆನು. ನಾನು ನನ್ನ ಎಲ್ಲಾ ಕೃತಜ್ಷತೆ ,ವಿಧೇಯತೆ ,ನಿಷ್ಠೆ ಹಾಗೂ ಭಕ್ತಿಯನ್ನು ನಿನಗೆ ಹಾಗೂ ನಿನ್ನ ಸೇವೆಗೆ ಮುಡುಪಾಗಿಡುತ್ತೇನೆ. ನಾನು ನಿನ್ನ ಹಾಗೂ ಎಲ್ಲಾ ಮಾನವಾಳಿಯ ಸೇವಕನಾಗಿರುವುದಕ್ಕೆ ಅತ್ಯಂತ ಧನ್ಯನು ಸಂಪ್ರೀತನೂ  ಆಗಿರುವೆ.

 

 

ನನ್ನ ಪ್ರತಿಜ್ಞೆಯನ್ನು ಕೇಳಿದ ದೈವವು ಮುಗುಳು ನಗೆ ನಕ್ಕು ಅಲ್ಲಿಂದ ಹೊರಟಿತು.

 

ಇದಾದ ೩ ತಿಂಗಳ ನಂತರ ನನ್ನ ಜೀವನದ ಮತ್ತೊಂದು ಘಟನೆ ನಡೆಯಿತು. ಅದು ಜುಲೈ ೨೦೦೩ ಆಗ ನಾನು ಆತ್ಮದ ಅಧ್ಯಯನದ ಒಂದು ಕಾರ್ಯಾಗಾರವನ್ನು ಟೋರಂಟೋ ದಲ್ಲಿ ನಿರ್ವಹಿಸುತ್ತಿದೆ. ಆಗ ಧೈವವು ಮತ್ತೊಮ್ಮೆ ಪ್ರತ್ಯಕ್ಷವಾಯಿತು.  ನಂತರ ಮೊದಲಿನಂತೆಯೇ ನಾನು ನನ್ನ ವಿದ್ಯಾರ್ಥಿಗಳಿಗೆ ದೈವವು ಪ್ರತ್ಯಕ್ಷವಾಗಿರುವ ಬಗ್ಗೆ ವಿವರಿಸಿದೆ. ಹಾಗೂ ಅವರಿಗೆ ಸ್ವಲ್ಪ ಕಾಲ ತಡೆಯಲು ಹೇಳಿ ೧೦೮ ಭಾರಿ ದೈವಕ್ಕೆ ಎರಗಿ ಶಿರಭಾಗಿ ನಮಿಸಿದ ನಂತರ ದೈವದ ಸಂದೇಶವನ್ನು ಆಲಿಸಿದೆ. ಆ ಸಂಧರ್ಭದಲ್ಲಿ ದೈವವು “ ಜೀ ಗಾಂಗ್‌ ಇಂದು ನಾನು ನಿನ್ನನು ನನ್ನ ನೇರ ಸೇವಕನಾಗಿ, ವಾಹನವಾಗಿ ಹಾಗೂ ಮಾಧ್ಯಮವಾಗಿ ಆಯ್ಕೆಮಾಡಿಕೊಳ್ಳಲು ಬಂದಿರುವೆ” ಎಂದು ಹೇಳಿತು.

ಆಗ ನಾನು ಆಳವಾದ ಮನಸ್ಸಿನಿಂದ “ ನಾನು ಸಂಪ್ರೀತನಾಗಿರುವೆ. ದೈವವೇ,  ನಿನ್ನ ನೇರ ಸೇವಕ ವಾಹನ ಮತ್ತು ಮಾಧ್ಯಮ ವಾಗುವುದೆಂದರೇನು ? “ ಎಂದು ಕೇಳಿದೆ.

ಅದಕ್ಕೆ ದೈವವು “ ನೀನು ಇತರರಿಗೆ ಚಿಕಿತ್ಸಕ ಶಕ್ತಿಯನ್ನು ಹಾಗೂ ಆಶಿರ್ವಾದಗಳನ್ನು ನೀಡುವಾಗ ನನ್ನನು ಕರೆ, ನಾನು ತಕ್ಷಣವೇ ಬಂದು ನನ್ನ ಚಿಕಿತ್ಸಕ ಶಕ್ತಿ ಮತ್ತು ಆಶಿರ್ವಾದಗಳನ್ನು ಅವರಿಗೆ ನೀಡುವೆ.” ಎಂದು ಹೇಳಿತು.

ನಾನು ಆಳವಾಗಿ ಸಂಪ್ರೀತನಾಗಿ “ನನ್ನನು ನಿನ್ನ ನೇರ ಸೇವಕನನ್ನಾಗಿ ಆಯ್ಕೆ ಮಾಡಿಕೊಂಡದಕ್ಕಾಗಿ ನಿನಗೆ ಅನಂತ ಧನ್ಯವಾದಗಳು” ಎಂದು ಹೇಳಿದೆ.

 ದೈವವು ಮುಂದುವರೆದು “ನಾನು ನನ್ನ ಶಾಶ್ವತವಾದ ಚಿಕಿತ್ಸಕ ಮತ್ತು ಆಶಿರ್ವದಿಸುವ ಶಕ್ತಿಯ ಖಜಾನೆಯನ್ನು ಪ್ರಸಾರ ಮಾಡುವ ಮೂಲಕ ಚಿಕಿತ್ಸಕ ಶಕ್ತಿಯನ್ನು ಮತ್ತು ಆಶಿರ್ವಾದಗಳನ್ನು ನೀಡಬಲ್ಲೆ “ ಎಂದು ಹೇಳಿತು.   

ಅದಕ್ಕೆ ನಾನು “ ನೀನು ಅದನ್ನು ಹೇಗೆ ಮಾಡುವೆ ?” ಎಂದು ಕೇಳಲು. ದೈವವು “ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೋ, ನಿನಗೆ ಇಲ್ಲೇ ನನ್ನ ಶಕ್ತಿಯ ಒಂದು ಪ್ರದರ್ಶನವನ್ನು ನೀಡುವೆ “ ಎಂದಿತು.

ಆಗ ನಾನು ಅಲ್ಲಿದವರಲ್ಲಿ ಯಾರಾದರೂ ಒಬ್ಬರು ತೀವ್ರ ಆರೋಗ್ಯ ಸಂಭಂಧಿ ವ್ಯಾಧಿಯುಳ್ಳವರು ಸ್ವ ಇಚ್ಛೆಯಿಂದ ಬರಬಹುದೆಂದು ಹೇಳಲು, ʼವಾಲ್ಟರ್‌ʼ ಎಂಬ ಹೆಸರಿನ ಒಬ್ಬ ವ್ಯಕ್ತಿ ಕೈ ಮೇಲೆ ಮಾಡಿ, ಎದ್ದು ನಿಂತು ತಾನೂ ಯಕೃತ್ತಿನ ಕ್ಯಾನ್ಸರ್‌ ನಿಂದ ಬಳಲುತ್ತಿರುವುದಾಗಿಯೂ ಹಾಗೂ ಎರಡು ಬೈ ಮೂರು ಸೆಂಟಿಮೀಟರ್ ಗಳ ಮಾರಣಾಂತಿಕ ಗಡ್ಡೆಯ ಇರುವಿಕೆ ಇತ್ತೀಚೆಗೆ   ವೈಧ್ಯರ ತಪಾಸಣೆಯಲ್ಲಿ ಧೃಡಪಟ್ಟಿದೆ ಎಂದು ವಿವರಿಸಿದ.

ಆಗ ನಾನು ಧೈವವನ್ನು ಕುರಿತು “ ದಯಮಾಡಿ ವಾಲ್ಟರ್‌ ನನ್ನು ಹರಸಿ .ಹಾಗೂ ದಯಮಾಡಿ ನೀವು ಹೇಗೆ ನಿಮ್ಮ ಶಾಶ್ವತ ವಾದ ಶಕ್ತಿಯ ಖಜಾನೆಯನ್ನು ಪ್ರಸಾರ ಮಾಡುವಿರಿ ಎಂದು ನನಗೆ ತೊರಿಸಿ” ಎಂದು ಪ್ರಾರ್ಥಿಸಿದೆ. ಕೂಡಲೇ ಧೈವವು ತನ್ನ ಹೃದಯದಿಂದ ಒಂದು ಬೆಳಕಿನ ಚಂಡನ್ನು ವಾಲ್ಟರ್‌ ನ ಯಕೃತ್ತಿಗೆ ಹರಿಸಿದನ್ನು, ಹಾಗೂ ಆ ಬೆಳಕಿನ ಚೆಂಡು ವಾಲ್ಟರ್‌ ನ ಯಕೃತ್ತಿನಲ್ಲಿ ಸೇರಿ ಬಂಗಾರದ ಬೆಳಕಿನ ಚೆಂಡಾಗಿ ಪರಿವರ್ತಿತವಾಗಿ ಜಿಗಿಯಲು ಪ್ರಾರಂಭಿಸಿ, ವಾಲ್ಟರ್ ನ ಪೂರ್ತಿ ಯಕೃತ್ತು ಸುಂದರವಾದ ಬಂಗಾರದ ಬೆಳಕಾಗಿದನ್ನು  ನಾನು ನೋಡಿದೆ.

ಮುಂದುವರೆದು ಧೈವವು ನನ್ನನು “ನಿನಗೆ ತಂತ್ರಾಂಶ ಎಂದರೆ ಏನೆಂದು ತಿಳಿದಿದೆಯೇ ?” ಎಂದು ಕೇಳಿತು.  ನಾನು ಈ ಪ್ರಶ್ನೆಯಿಂದ ಚಕಿತನಾದೆ ಮತ್ತು “ನನಗೆ ಗಣಕಯಂತ್ರಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ, ನನಗೆ ತಂತ್ರಾಂಶ ಎಂದರೇ ಗಣಕಯಂತ್ರದ ಒಂದು ಕಾರ್ಯ ವಿಭಾಗ ಎಂದು ಮಾತ್ರ ತಿಳಿದಿದೆ. ನಾನು ಲೆಕ್ಕಪರಿಶೋಧಕ ತಂತ್ರಾಂಶ, ಕಛೇರಿ ತಂತ್ರಾಂಶ , ಮತ್ತು ಗ್ರಾಫಿಕ್‌ ವಿನ್ಯಾಸ ತಂತ್ರಾಂಶಗಳ ಬಗ್ಗೆ ಕೇಳಿರುವೆ “ ಎಂದು ಉತ್ತರಿಸಿದೆ.

ದೈವವು “ಹೌದು”. “ತಂತ್ರಾಂಶ ಒಂದು ಕಾರ್ಯ ವಿಭಾಗ. ನೀನು ನನ್ನನ್ನು ಕೇಳಿದರಿಂದ ನಾನು ನನ್ನ ಆತ್ಮದ ತಂತ್ರಾಂಶವನ್ನು ವಾಲ್ಟರ್‌ ನ ಯಕೃತ್ತಿಗೆ ಪ್ರಸರಣ ಮಾಡಿದೆ ಅಥವಾ ಸಿದ್ಧಿಸಿದೆ. ಇದು ನನ್ನ ಶಾಶ್ವತವಾದ ಚಿಕಿತ್ಸಕ ಮತ್ತು ಆಶಿರ್ವಾದದ ಶಕ್ತಿಯ ಖಜಾನೆಯ ಒಂದು ಮಾದರಿಯಾಗಿದೆ. ನೀನು ಕೇಳಿದೆ. ನಾನು ನನ್ನ ಕರ್ತವ್ಯವನ್ನು ಮಾಡಿದೆ. ಇದೇ ನಾನು  ನಿನ್ನನ್ನು ನನ್ನ ನೇರ ಸೇವಕ ಹಾಗೂ ಮಾಧ್ಯಮವನ್ನಾಗಿಸಿಕೊಂಡದ್ದರ  ಅರ್ಥ ಮತ್ತು ವಿಧಾನ “ ಎಂದು ಹೇಳಿತು.

ನಾನು ಆಶ್ಚರ್ಯಚಕಿತನೂ, ಉತ್ಸುಕನೂ ,ಪ್ರಭಾವಿತನೂ ನಮ್ರನೂ ಆಗಿ “ನಾನು ನಿನ್ನ ನೇರ ಸೇವಕನಾಗಿರುವುದರಿಂದ ನಾನು ಅತ್ಯಂತ ಸಂಪ್ರೀತನಾಗಿರುವೆ. ನಾನು ಹೀಗೆ ನಿಮ್ಮಿಂದ ಆಯ್ಕೆಯಾಗಲು ಎಷ್ಟು ಆಶಿರ್ವಾದಿತನಾಗಿದ್ದೆನೋ” ಎಂದು ಹೇಳಿದೆ.  ಮುಂದೆ ಮಾತುಗಳೇ ಹೊರಡಲಿಲ್ಲ.  “ನೀನು ನನ್ನನೇ ಏಕೆ ನಿನ್ನ ನೇರ ಸೇವಕನಾಗಿ ಆಯ್ಕೆ ಮಾಡಿಕೊಂಡೆ ?” ಎಂದು ಧೈವವನ್ನು ಕೇಳಿದೆ.

ದೈವವು  “ನಾನು ನಿನ್ನನು ಆಯ್ಕೆ ಮಾಡಿಕೊಂಡೆ.  ಏಕೆಂದರೇ, ನೀನು ಒಂದು ಸಾವಿರಕ್ಕೂ ಹೆಚ್ಚು  ಜನ್ಮಾಂತರಗಳ ವರೆಗೆ ಮಾನವಾಳಿಯ ಸೇವೆಯನ್ನು ಮಾಡಿರುವೆ. ನಿನ್ನ ಎಲ್ಲಾ ಜನ್ಮಾಂತರಗಳಲ್ಲಿಯೂ ನೀನು ನನ್ನ ಗುರಿಯನ್ನು ಸಾಧಿಸಲು ತುಂಬಾ ಬದ್ಧತೆಯನ್ನು ತೊರಿರುವೆ. ಈ ಜನ್ಮದಲ್ಲಿ ನಾನು ನಿನ್ನನ್ನು ನನ್ನ ನೇರ ಸೇವಕನನ್ನಾಗಿ ಆಯ್ಕೆ ಮಾಡಿ ಕೊಂಡಿರುವೆ. ನೀನು  ಅಸಂಖ್ಯಾತವಾದ ಶಾಶ್ವತ ಚಿಕಿತ್ಸಕ ಮತ್ತು ಆಶಿರ್ವಾದಕ ಶಕ್ತಿಯ ಖಜಾನೆಯನ್ನು ನನ್ನಿಂದ   ಮಾನವಾಳಿ ಮತ್ತು ಎಲ್ಲಾ ಆತ್ಮಗಳಿಗೆ  ತಲುಪಿಸು. ಇದು ನಾನು ನಿನಗೆ ಈಗ ನೀಡುತ್ತಿರುವ ಗೌರವ.” ಎಂದು ಹೇಳಿತು.

ನಾನ್ನ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ತಕ್ಷಣವೇ ನಾನು ಮತ್ತೆ ೧೦೮ ಭಾರಿ ದೇವರಿಗೆ ಶಿರಭಾಗಿ ಪ್ರಣಾಮಗಳನ್ನು ಸಲ್ಲಿಸಿ ನಿಶ್ಯಭ್ಧವಾಗಿ ಮುಂದಿನಂತೆ ಸಂಕಲ್ಪವನ್ನು ಮಾಡಿದೆ.

ಪ್ರೀತಿಯ ದೈವವೇ ,

ನೀನು ನನಗೆ ನೀಡಿದ ಗೌರವಕ್ಕಾಗಿ ಎಷ್ಟು ಶಿರಭಾಗಿ ನಮಿಸಿದರೂ ಸಾಲದು. ನನ್ನ ಕೃತಜ್ಞತೆಯನ್ನು ಮಾತಿನಲ್ಲಿ ವರ್ಣಿಸಲಾರೆ. ನಾನು ನಿಮ್ಮ ನೇರ ಸೇವಕನಾಗಿ ನಿಮ್ಮ ಅಸಂಖ್ಯಾತ ಚಿಕಿತ್ಸಕ ಮತ್ತು ಆಶಿರ್ವದಕ ಶಕ್ತಿಯ ಖಜಾನೆಯನ್ನು ಮಾನವಾಳಿ ಮತ್ತು ಎಲ್ಲಾ  ಆತ್ಮಗಳಿಗಾಗಿ ಪಡೆದು ಪ್ರಸರಣ ಮಾಡಲಿರುವ ನಾನು ಎಷ್ಟು ಆಶರ್ವಾದಿತನಾಗಿದ್ದೇನೋ ? ಮಾನವಾಳಿ ಮತ್ತು ಎಲ್ಲಾ ಆತ್ಮಗಳು ನಿಮ್ಮ ಅಗಣಿತ ಆಶಿರ್ವಾದಗಳನ್ನು ನಿನ್ನ ನೇರ ಸೇವಕನಾದ ನನ್ನ ಮೂಲಕ ಪಡೆಯುವರು. ನಾನು ನನ್ನ ಪೂರ್ತಿ ಜೀವನವನ್ನು ನಿಮಗೂ ಮತ್ತು ಇಡೀ ಮಾನವಾಳಿಯ ಸೇವೆಗಾಗಿ ಮೀಸಲಿಡುವೆ. ನಾನು ನಿಮ್ಮ ಗುರಿಗಳನ್ನು ಸಾಧಿಸುವೆ. ನಾನೊಬ್ಬ ಮಾನವಾಳಿಯ ಮತ್ತು ಎಲ್ಲಾ ಆತ್ಮಗಳ ಶುದ್ಧ ಸೇವಕನಾಗಿರುವೆ.

 

ನಾನು ಮತ್ತೆ ಮತ್ತೆ ಶಿರಭಾಗಿ ನಮಿಸಿದೆ. ಮತ್ತೆ ನಾನು ದೈವವನ್ನು ಕುರಿತು ʼʼವಾಲ್ಟರ್‌ ತನ್ನ ಆತ್ಮದ ತಂತ್ರಾಂಶವನ್ನು ಹೇಗೆ ಬಳಸಬೇಕು ?” ಎಂದು ಕೇಳಿದಾಗ ದೈವವು “ವಾಲ್ಟರ್‌ ನನ್ನ ಆತ್ಮದ ತಂತ್ರಾಂಶವನ್ನು ಅಭ್ಯಾಸಮಾಡಲು ಸಮಯವನ್ನು ಮೀಸಲಿರಿಸಬೇಕು“ “ಅವನಿಗೆ ಹೇಳು,  ಕೇವಲ ನನ್ನ ಆತ್ಮದ ತಂತ್ರಾಂಶವನ್ನು ಪಡೆದಷ್ಟರಿಂದಲೇ ಅವನು ಗುಣ ಹೊಂದುವುದಿಲ್ಲ . ಅವನು  ತನ್ನ ಆರೋಗ್ಯವನ್ನು ಹಂತ ಹಂತವಾಗಿ ಮರುಸ್ಥಾಪಿಸಲು ಪ್ರತಿದಿನ ಕಡ್ಡಾಯವಾಗಿ ಈ ನನ್ನ ಖಜಾನೆಯ ಆತ್ಮ ಶಕ್ತಿಯನ್ನು ಅಭ್ಯಾಸಿಸಬೇಕು“ ಎಂದು ಹೇಳಿತು.  ಆಗ ನಾನು “ಅವನು ಆತ್ಮ ಶಕ್ತಿಯನ್ನು ಹೇಗೆ ಅಭ್ಯಸಿಸಬೇಕು”  ಎಂದು ಕೇಳಿದೆ ? ಆಗ ಧೈವವು ನನಗೆ ಮಾರ್ಗದರ್ಶನವನ್ನು ನೀಡಿತು: “ವಾಲ್ಟರ್‌ ನಿಗೆ ಮುಂದಿನಂತೆ ಜಪ ಮಾಡಲು ತಿಳಿಸು : ದೈವೀಕ ಯಕೃತ್ತಿನ ಆತ್ಮದ ತಂತ್ರಾಂಶವೇ ನನ್ನನ್ನು ಗುಣಪಡಿಸು, ದೈವೀಕ ಯಕೃತ್ತಿನ ಆತ್ಮದ ತಂತ್ರಾಂಶವೇ ನನ್ನನ್ನು ಗುಣಪಡಿಸು, ದೈವೀಕ ಯಕೃತ್ತಿನ ಆತ್ಮದ ತಂತ್ರಾಂಶವೇ ನನ್ನನ್ನು ಗುಣಪಡಿಸು, ದೈವೀಕ ಯಕೃತ್ತಿನ ಆತ್ಮದ ತಂತ್ರಾಂಶವೇ ನನ್ನನ್ನು ಗುಣಪಡಿಸು,”.

  ನಾನು ಕೇಳಿದೆ “ವಾಲ್ಟರ್‌ ನು ಹೀಗೆ ಎಷ್ಟು ಕಾಲ ಜಪ ಮಾಡಬೇಕು ?” ಎಂದು

ಅದಕ್ಕೆ ದೈವವು “ಪ್ರತಿದಿನ ಕನಿಷ್ಟ ಎರಡು ಘಂಟೆಗಳ ಕಾಲ . ಹೆಚ್ಚು ಜಪ ಮಾಡಿದಷ್ಟೂ ಉತ್ತಮವೇ. ಇದೇ ರೀತಿ ವಾಲ್ಟರ್‌ ಅಭ್ಯಾಸ ಮುಂದುವರೆಸಿದಲ್ಲಿ ಮೂರರಿಂದ ಆರು ತಿಂಗಳಲ್ಲಿ ಅವನು ಸಂಪೂರ್ಣ ಗುಣ ಹೊಂದುವನು.” ಎಂದು ಹೇಳಿತು.

ನಾನು ದೈವ ಹೇಳಿದ ಮಾಹಿತಿಯನ್ನೆಲ್ಲವನ್ನೂ ಬಹಳ ಉತ್ಸುಕನಾಗಿ ಕಾಯುತ್ತಿದ್ದ ವಾಲ್ಟರ್‌ ನಿಗೆ ವಿವರಿಸಿದೆ. ನಂತರ ವಾಲ್ಟರ್‌ “ನಾನು ಪ್ರತಿದಿನ ಎರಡೂ ಗಂಟೆಗಳಿಗೂ ಹೆಚ್ಚು ಸಮಯ ಹೀಗೆ ಜಪ ಮಾಡುವ ಅಭ್ಯಾಸವನ್ನು ಮಾಡುವೆ” ಎಂದನು.

ಕಡೆಯದಾಗಿ ನಾನು ದೈವವನ್ನು “ ಈ ಆತ್ಮದ ತಂತ್ರಾಂಶ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ?” ಎಂದು ಕೇಳಿದೆ.

ಅದಕ್ಕೆ ದೈವವು “ನನ್ನ ಆತ್ಮದ ತಂತ್ರಾಂಶವು ವಾಲ್ಟರ್‌ ನ ಯಕೃತ್ತಿನಲ್ಲಿ ಚಲಿಸಿ ಅಲ್ಲಿನ ಶಕ್ತಿಯ ಮತ್ತು ಆಧ್ಯಾತ್ಮಿಕ ಅಡೆತಡೆಗಳನ್ನು ತೆರವು ಗೊಳಿಸುವ ಒಂದು ಸ್ವರ್ಣದ ಚಿಕಿತ್ಸಕ ಶಕ್ತಿಯ ಚೆಂಡು.  ಎಂದು ಹೇಳಿತ್ತು.

ನಾನು ಪುನಃ ೧೦೮ ಭಾರಿ ಧೈವಕ್ಕೆ ಶಿರಭಾಗಿ ನಮಸ್ಕರಿಸಿ, ಎದ್ದು ನಿಂತು ಆ ಕಾರ್ಯಗಾರದಲ್ಲಿ ಹಾಜರಿದ್ದ ಎಲ್ಲರಿಗೂ ತಲಾ ಮೂರು ಆತ್ಮದ ತಂತ್ರಾಂಶಗಳನ್ನು ಹಾಗೂ ಆಧ್ಯಾತ್ಮಿಕ ಉಡುಗೊರೆಗಳನ್ನು ನೀಡಿದೆ. ಇದನ್ನು ಕಂಡ ದೈವವು ಮುಗುಳ್ನಗೆ ಬೀರೆ ಅಲಿಂದ ಅದೃಷ್ಯವಾಯಿತು.

ವಾಲ್ಟರನು ತತ್‌ ಕ್ಷಣ ದಿಂದಲೇ ಅವನಿಗೆ ದೈವವು ಮಾರ್ಗದರ್ಶನ ನೀಡಿದ ಹಾಗೇ ಪ್ರತಿದಿನ ಕನಿಷ್ಟ ಎರಡು ಘಂಟೆಗಳ ಕಾಲ ಆತ್ಮ ತಂತ್ರಾಂಶದ ಅಭ್ಯಾಸವನ್ನು ಪ್ರಾರಂಭಿಸಿದ. ಎರಡು ವರೆ ತಿಂಗಳ ನಂತರ ವೈದ್ಯರು ತಪಾಸಣೆ ನಡೆಸಿದಾಗ ಸಿ ಟಿ ಸ್ಕ್ಯಾನ್‌ ಮತ್ತು ಎಂ ಆರ್‌ ಐ ವರದಿಯಲ್ಲಿ ವಾಲ್ಟರ್ ನ ಮಾರಣಾಂತಿಕ ಕ್ಯಾನ್ಸರ್‌ ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಕಂಡು ಬಂದಿತು. ಮುಂದೆ  ೨೦೦೬ ನೇ ಇಸ್ವೀಯ ಕಡೆಯಲ್ಲಿ ನಾನು ಮತ್ತೋಮ್ಮೆ ವಾಲ್ಟರ್‌ ನನ್ನು ಟೋರೋಂಟೋ ದಲ್ಲಿ ನನ್ನ “ಆತ್ಮ, ಮನಸ್ಸು ,ದೇಹ, ಔಷದ “ ಎಂಬ ಪುಸ್ತಕದ ಪ್ರಕಟಣೆಯ ಪೂರ್ವಭಾವಿ ಕಾರ್ಯದ   ಸಂಧರ್ಭದಲ್ಲಿಒಂದು ಭಾರಿ  ಹಾಗೂ ಮೇ  ೨೦೦೮  ರಲ್ಲಿ ಮತ್ತೊಮ್ಮೆ ಟೊರೊಂಟೊ ದ ಯುವ್ನಿಟಿ ಚರ್ಚ್‌ ನಲ್ಲಿ ನಡೆದ  ನನ್ನ ಒಂದು ಕಾರ್ಯಗಾರದಲ್ಲಿ ನನ್ನನು ಬೇಟಿ ಮಾಡಿದ್ದ. ಈ ಎರಡು ಸಂಧರ್ಭಗಳಲ್ಲಿಯೂ ಸಹಾ ವಾಲ್ಟರ್‌ ನನಗೆ ಇದುವರೆಗೂ ನನ್ನ ಯಕೃತ್ತಿನಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ನ ಲಕ್ಷಣಗಳು ಮತ್ತೆ ಕಂಡು ಬರಲೇ ಇಲ್ಲ ಎಂದು ಹೇಳಿದನು. ಐದು ವರ್ಷಗಳ ಕಾಲದಲ್ಲಿ ಅವನ ಧೈವೀಕ ಆತ್ಮ ವು ಅವನ ಯಕೃತ್ತಿನ ಕ್ಯಾನ್ಸರ್‌ ಅನ್ನು ಸಂಪೂರ್ಣ ಗುಣಪಡಿಸಿತ್ತು.  ಅವನು ದೈವಕ್ಕೆ ಬಹಳ ಕೃತಜ್ಞನಾಗಿದ್ದನು.

ನನ್ನನು ದೈವವು ತನ್ನ ನೇರ ಸೇವಕನಾಗಿ ಆಯ್ಕೆ ಮಾಡಿಕೊಂಡ ಐತಿಹಾಸಿಕ ಘಟನೆ ಘಟಿಸಿದ್ದು ಜುಲೈ ೨೦೦೩ ರಲ್ಲಿ ಈಗಾಗಲೇ ತಿಳಿಸಿದಂತೆ ತಾಯಿ ಭೂಮಿ ಹಾಗೂ ಇಡೀ ವಿಶ್ವಕ್ಕೆ ಹೊಸ ಆತ್ಮದ ಬೆಳಕಿನ ಯುಗವು ಆಗಸ್ಟ್‌ ೮ ೨೦೦೩ ರಿಂದ ಪ್ರಾರಂಭವಾಗಿದೆ.  ಈ ಎರಡು ಘಟನೆಗಳು ಕಾಕತಾಳೀಯವೆನಿಸಿದರೂ ಸಹಾ ಅವುಗಳ ಹಿಂದೆ ಒಂದು ಸ್ಪಷ್ಟವಾದ ಆಧ್ಯಾತ್ಮಿಕ ಕಾರಣವು ಇದ್ದೇ ಇದೆ ಎಂಬುದನ್ನು ನಾವು ನಂಬಲೇಬೇಕು.  ಜುಲೈ ೨೦೦೩ ರ ನಂತರ ನಾನು ದೈವೀಕ ಪ್ರಸರಣವನ್ನು ಮಾನವಾಳಿಗೆ ಪ್ರತಿನಿತ್ಯ  ನೀಡುತ್ತಾ ಬಂದಿದ್ದೇನೆ. ನಾನು ಎಲ್ಲಾ ವಿಶ್ವಗಳ ಎಲ್ಲಾ ಆತ್ಮಗಳಿಗೂ ಹತ್ತಕ್ಕೂ ಹೆಚ್ಚು ದೈವೀಕ ಪ್ರಸರಣಗಳನ್ನು ನೀಡಿದ್ದೇನೆ.

ದೈವೀಕ ಪ್ರಸರಣಗಳ ಅಥವಾ ದೈವೀಕ ಆತ್ಮ ಸಿದ್ಧಿಯ ಶಕ್ತಿ ಹಾಗೂ ಮಹತ್ವವನ್ನು ನಿಮಗೆ ತಿಳಿಸುವ ಸಲುವಾಗಿ ನಾನು ಈ ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡೆ. ಇನ್ನು ಮುಂದೆ ಈ ಆತ್ಮ ಶಕ್ತಿ ಸರಣಿಯ ಮೊದಲ ಪುಸ್ತಕ ʼʼಆತ್ಮ ವಿವೇಕ ʼʼ ದಲ್ಲಿ ಹಾಗೂ ಇಲ್ಲಿವರೆಗಿನ ನನ್ನ ಎಲ್ಲಾ ಪುಸ್ತಕಗಳಲ್ಲಿ ನಾನು ಹೇಳಿಕೊಂಡಿರುವ ನನ್ನ ಬದ್ಧತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಇನ್ನು ಮುಂದೆ ನಾನು ಬರೆಯುವ ಪ್ರತಿಯೊಂದು ಪುಸ್ತಕದಲ್ಲಿಯೂ ದೈವೀಕ ಆತ್ಮ ಸಿದ್ಧಿಯನ್ನು ಕೊಡುಗೆಯಾಗಿ ನೀಡುವೆ.  

ದೈವೀಕ ಆತ್ಮ ಸಿದ್ಧಯು ನಿಮ್ಮ ಜೀವನವನ್ನು ಪರಿವರ್ತಿಸಿಕೊಳ್ಳುವ ಶಾಶ್ವತವಾದ ಚಿಕಿತ್ಸಕಶಕ್ತಿ ಮತ್ತು ಆಶಿರ್ವಾದಗಳ ಖಜಾನೆಯಾಗಿದೆ. ಒಂದು ಪುರಾತನ ಮಾತಿದೇ ಅದೇನೆಂದರೇ ,ʼʼನೀನು ಒಂದು ಹಣ್ಣನು ರುಚಿಯಾಗಿದೆಯೇ ಇಲ್ಲವೇ ಎಂದು ತಿಳಿಯಬೇಕಾದರೇ ಅದನ್ನು ರುಚಿ ನೊಡಬೇಕುʼʼ ಅದೇ ರೀತಿ ನೀನು ದೈವೀಕ ಆತ್ಮ ಸಿದ್ಧಿಯ ಶಕ್ತಿಯನ್ನು ತಿಳಿಯಬೇಕಾದರೇ, ಅದನ್ನು ಅನುಭವಿಸಿಯೇ ತಿಳಿಯಬೇಕು.

ದೈವೀಕ ಆತ್ಮ ಸಿದ್ಧಿಯು ದೈವೀಕ ಪ್ರೀತಿಯ, ಕ್ಷಮಾಗುಣದ,ಸಹಾನುಭೂತಿಯ ಮತ್ತು ಬೆಳಕಿನ  ತರಂಗಗಳನ್ನು ಒಳಗೊಂಡಿರುತ್ತದೆ. ಈ ದೈವೀಕ ತರಂಗಗಳು ಎಲ್ಲಾ ಜೀವಿಗಳ ತರಂಗಗಳನ್ನು ಪರಿವರ್ತಿಸುತ್ತದೆ.  ದೈವೀಕ ಪ್ರೀತಿಯು ಶಕ್ತಿಯ ಮತ್ತು ಆಧ್ಯಾತ್ಮಿಕ ಅಡೆತಡೆಗಳು ಸೇರಿದಂತೆ ಎಲ್ಲಾ ರೀತಿಯ ಅಡೆತಡೆಗಳನ್ನು ಇಲ್ಲವಾಗಿಸುತ್ತದೆ ಮತ್ತು ಎಲ್ಲಾ ಜೀವಿಗಳನ್ನು ಪರಿವರ್ತಿಸಿತ್ತದೆ.  ದೈವೀಕ ಕ್ಷಮಾಗುಣವು  ಆಂತರಿಕ ಶಾಂತಿ ಮತ್ತು ಸಂತೋಷವನ್ನು ಉಂಟುಮಾಡುತ್ತದೆ. ದೈವೀಕ ಸಹಾನುಭೂತಿಯು ಶಕ್ತಿ, ತ್ರಾಣ,ಚೈತನ್ಯ ಮತ್ತು ಪ್ರತಿರಕ್ಷಣಾ ಶಕ್ತಿಯನ್ನು ವರ್ಧಿಸುತ್ತದೆ.  ದೈವೀಕ ಬೆಳಕು ಚಿಕಿತ್ಸಕಗೊಳಿಸಿ, ಅನಾರೋಗ್ಯವನ್ನು ತಡೆದು, ಪುನರ್ಯೌವ್ವನಗೊಳಿಸಿ , ದೀರ್ಘಾಯುಷ್ಯವನ್ನು ನೀಡುತ್ತದೆ.

ಒಂದು ದೈವೀಕ ಆತ್ಮದ ಸಿದ್ಧಿಯು ದೈವದ ಹೃದಯದಿಂದ ಉದಿಸಿದ ಒಂದು ಹೊಸ ಆತ್ಮವೇ ಆಗಿದೆ. ವಾಲ್ಟರ್‌ ನಿಗೆ ಪ್ರಸರಿಸಲಾದ ದೈವದ ಸಿದ್ಧಿಯು ಒಂದು ಆತ್ಮದ ತಂತ್ರಾಂಶವಾಗಿದೆ. ಅದರ ತರುವಾಯ ನಾನು ದೈವೀಕ ಆತ್ಮಗಳ ಪುನರ್‌ ಸ್ಥಾಪನೆಯನ್ನು(ಕಸಿ ) ಒಳಗೊಂಡಂತೆ ವಿವಿದ್ಧ ರೀತಿಯ ಸಾವಿರಾರು ದೈವಿಕ ಸಿದ್ಧಿಗಳನ್ನು ಪ್ರಸರಣ ಮಾಡಿದ್ದೇನೆ.

ದೈವೀಕ ಆತ್ಮದ ಕಸಿಯು ಒಂದು ಅಂಗಾಂಗದ , ಒಂದು ಅಂಗದ , ದೈಹಿಕ ವ್ಯವಸ್ಥೆಯ , ಜೀವ ಕೋಶದ , ಡಿ ಎನ್‌ ಎ ಮತ್ತು ಆರ್ ಎನ್‌ ಎ ಗಳ , ಜೀವಕೋಶದ ಒಂದು ಸಣ್ಣ ಘಟಕದ, ಜೀವಕೋಶಗಳ ನಡುವಿನ ಸ್ಥಳದ ಆತ್ಮಕ್ಕೆ ಬದಲಾದ ಒಂದು ಹೊಸ ದೈವೀಕ ಆತ್ಮದ ಕಸಿ ಆಗಿದೆ.. ಈ ಆತ್ಮವು ಪ್ರಸರಣವಾದಾಗ ಅದನ್ನು ಪಡೆದ ವ್ಯಕ್ತಿಯ ಭಾಗದಲ್ಲಿ ಹಿಂದೆ ಇದ್ದ ಆತ್ಮಕ್ಕೆ ಪರ್ಯಾಯವಾಗಿ ಈ ಹೊಸ ದೈವೀಕ ಆತ್ಮವು ಸ್ಥಾನ ಪಡೆದುಕೊಳ್ಳುತ್ತದೆ. ಈ ರೀತಿಯಾಗಿ ಮನೆ ಹಾಗೂ ವ್ಯವಹಾರಕ್ಕೆ ಸಂಭಂಧಿಸಿದಂತೆಯೂ ಸಹಾ ದೈವೀಕ ಆತ್ಮದ ಕಸಿ ಮಾಡಬಹುದು. ಅದೇ ರೀತಿ ಹೊಸ ದೈವೇಕ ಆತ್ಮವನ್ನು ಸಾಕು ಪ್ರಾಣಿ, ಪರ್ವತ ,  ನಗರ ಅಥವಾ ಒಂದು ದೇಶಗಳ  ಆತ್ಮಗಳ ಜಾಗಕ್ಕೆ ಹೊಸ ದೈವೀಕ ಆತ್ಮಗಳನ್ನು ಕಸಿ ಮಾಡಬಹುದು.  ತಾಯಿ ಭೂಮಿಯ ಆತ್ಮದ ಜಾಗಕ್ಕೂ  ಸಹಾ ಒಂದು ದೈವೀಕ ಆತ್ಮವನ್ನು ಬದಲಾಯಿಸಬಹುದು.

ಪ್ರತಿಯೊಂದು ಜೀವಿ ಮತ್ತು ಪ್ರತಿಯೊಂದು ವಸ್ತುವಿಗೂ ಆತ್ಮ ಇದ್ದೇ ಇದೆ.  ದೈವವು ನಾವು ಸಂಕಲ್ಪಿಸಿಕೊಂಡ ಯಾವುದೇ ಆತ್ಮವನ್ನು ಪ್ರಸರಿಸುತ್ತದೆ.. ಈ ದೈವೀಕ ಸಿದ್ಧಿ  ದೈವೀಕ ಚಿಕಿತ್ಸಕ ಶಕ್ತಿ, ಆಶಿರ್ವಾದ ಮತ್ತು ಜೀವ ಪರಿವರ್ತನೆಯ ಶಾಶ್ವತವಾದ ನಿಧಿಯಾಗಿದೆ. ಇದು ಯಾವುದೇ ಜೀವಿಯ ಮತ್ತು ಯಾವುದೇ ವಸ್ತುವಿನ ಜೀವನವನ್ನು ಪರಿವರ್ತಿಸಬಲ್ಲುದಾಗಿದೆ. ಏಕೆಂದರೇ ಈ ಆತ್ಮಶಕ್ತಿಯ ನಿಧಿಯನ್ನು ದೈವವು ಸೃಷ್ಠಿಸಿದ್ದು, ಅವು ವಿಶ್ವದ ಎಲ್ಲಾ ಆತ್ಮ ಶಕ್ತಿಗಳಲ್ಲಿ ಅತ್ಯಂತ ಶ್ರೇಷ್ಠವಾದ  ದೈವೀಕ ಆತ್ಮ ಶಕ್ತಿಯನ್ನು ಒಳಗೊಂಡವಾಗಿರುತ್ತವೆ.  ಸ್ವರ್ಗ ಲೋಕದ ಮೇಲಿನ ಹಂತದ ಎಲ್ಲಾ ಧೈವೀಕ ಆತ್ಮಗಳು ಸಹಾ ಈ ಆತ್ಮ ಶಕ್ತಿ ಸಿದ್ಧಿಗಳಿಗೆ ತಮ್ಮ ಬೆಂಬಲವನ್ನು ಹಾಗೂ ಸಹಕಾರವನ್ನು ನೀಡುತ್ತವೆ. ದೈವೀಕ ಶಕ್ತಿಯ ಸಿದ್ಧಿಯು ಆತ್ಮ ಶಕ್ತಿಯ ಮಣಿಮುಕುಟವುದ್ದಂತೆ.

ದೈವೀಕ ಆತ್ಮ ಸಿದ್ಧಿಯಲ್ಲಿ ದೈವದ ಅಸ್ತಿತ್ವ ವಿದೆ. ನೀವು ಹೆಚ್ಚು ಹೆಚ್ಚು ದೈವೀಕ ಸಿದ್ಧಿಗಳನ್ನು ಪಡೆದಂತೆ ನಿಮ್ಮ ಆತ್ಮ ಹೃದಯ ಮನಸ್ಸು ಮತ್ತು ದೇಹಗಳು ಹೆಚ್ಚು ಹೆಚ್ಚು ದೈವೀ ಶಕ್ತಿಗೆ ಪರಿವರ್ತಿತವಾಗುತ್ತವೆ. ನಿಮ್ಮ ಮನೆ ಹಾಗೂ ವ್ಯವಹಾರ ಹೆಚ್ಚು ಹೆಚ್ಚು ದೈವೀಕ ಸಿದ್ಧಿಗಳನ್ನು ಪಡೆದಂತೆ, ಅದೇ ರೀತಿ ಒಂದು ನಗರ, ದೇಶಗಳು ಹೆಚ್ಚು ಹೆಚ್ಚು ದೈವೀಕ ಸಿದ್ಧಿಗಳನ್ನು ಪಡೆದಂತೆ ಅವುಗಳ ಆತ್ಮ ಹೃದಯ ಮನಸ್ಸು ಮತ್ತು ದೇಹ ಪರಿವರ್ತಿತವಾಗುತ್ತವೆ.

 ಈ ಆತ್ಮದ ಬೆಳಕಿನ ಯುಗದಲ್ಲಿ ಮಾನವಾಳಿಯ ವಿಕಾಸವು ದೈವೀಕ ಆತ್ಮ ಶಕ್ತಿಯಿಂದ ಉಂಟಾಗುತ್ತದೆ.  ಆತ್ಮ ಶಕ್ತಿ ಮಾನವಾಳಿಯನ್ನು ಪರಿವರ್ತಿಸುತ್ತದೆ.  ಆತ್ಮ ಶಕ್ತಿಯು  ಪ್ರಾಣಿಗಳನ್ನು ಪರಿವರ್ತಿಸುತ್ತದೆ. ಆತ್ಮ ಶಕ್ತಿಯು ನಿಸರ್ಗ ಮತ್ತು ಪರಿಸರವನ್ನು ಪರಿವರ್ತಿಸುತ್ತದೆ. ಆತ್ಮ ಶಕ್ತಿಯು ಮಾನವನ ಪ್ರಯತ್ನದ  ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.   ಮಾನವಾಳಿಯು ʼಆತ್ಮವೇ ಒಡೆಯʼ ‘’soul is the boss‘ʼ ಎಂಬುದನ್ನು  ಆಳವಾಗಿ ಅರ್ಥಮಾಡಿಕೊಳ್ಳುವುದು.

ಆತ್ಮ ರಹಸ್ಯಗಳು, ಆತ್ಮ ವಿವೇಕ , ಆತ್ಮ ಜ್ಞಾನ ಮತ್ತು ಆತ್ಮ ಶಕ್ತಿಯ ಅಭ್ಯಾಸವನ್ನು ಒಳಗೊಂಡಿರುವ ಆತ್ಮ ಶಕ್ತಿಯು ಮಾನವ ಜೀವನದ ಪ್ರತಿಯೊಂದು ಅಂಶವನ್ನು ಸಹಾ ಪರಿವರ್ತಿಸುತ್ತದೆ.  ಆತ್ಮ ಶಕ್ತಿಯು ವ್ಯವಸ್ಥೆ ಮತ್ತು ಸಮಾಜದ ಪ್ರತಿಯೊಂದು ಅಂಶವನ್ನು ಸಹಾ ಪರಿವರ್ತಿಸುತ್ತದೆ.  ನಗರಗಳು, ದೇಶಗಳು, ತಾಯಿ ಭೂಮಿ, ಎಲ್ಲಾ ಗ್ರಹಗಳು, ನಕ್ಷತ್ರಗಳು , ತಾರಾಮಂಡಲಗಳು, ಮತ್ತು ಎಲ್ಲಾ ವಿಶ್ವಗಳನ್ನು ಸಹಾ  ಆತ್ಮ ಶಕ್ತಿಯು ಪರಿವರ್ತಿಸುತ್ತದೆ.  ದೈವೀಕ ಸಿದ್ಧಿಯನ್ನು ಒಳಗೊಂಡಿರುವ ದೈವೀಕ ಆತ್ಮ ಶಕ್ತಿಯು ಈ ಪರಿವರ್ತನೆಯನ್ನು ಮುನ್ನಡೆಸುತ್ತದೆ.

ಮಾನವಾಳಿಗೆ, ಮಾನವಸಂಭಂಧಗಳಿಗೆ, ಮನೆಗಳಿಗೆ, ವ್ಯವಹಾರಗಳಿಗೆ, ಸಾಕುಪ್ರಾಣಿಗಳಿಗೆ, ನಗರಗಳಿಗೆ, ದೇಶಗಳಿಗೆ, ದೈವೀಕ ಆತ್ಮ ಸಿದ್ಧಯನ್ನು ಕೊಡುಗೆ ನೀಡಲು ನನ್ನನು ನೇರ ಸೇವಕನನ್ನಾಗಿ ಆಯ್ಕೆ ಮಾಡಿಕೊಂಡಿರುವುರಿಂದ ನಾನು ಧನ್ಯನಾಗಿದ್ಧೇನೆ. ಕಳೆದ ಕೆಲವು ವರ್ಷಗಳಿಂದ ನಾನು ಈಗಾಗಲೇ ಅಸಂಖ್ಯಾತವಾದ ದೈವೀಕ ಆತ್ಮಗಳನ್ನು ಮಾನವಾಳಿ ಮತ್ತು ಎಲ್ಲಾ ವಿಶ್ವಗಳಿಗೆ ಪ್ರಸರಿಸಿರುವೆ. ನಾನು ಮತ್ತೊಮ್ಮೆ ಪುನರುಚ್ಚರಿಸುವೆ. ಇನ್ನು ಮುಂದೆ ನಾನು ಬರೆಯುವ ಪ್ರತಿಯೊಂದು ಪುಸ್ತಕದಲ್ಲಿಯೂ ದೈವೀಕ ಆತ್ಮ ಸಿದ್ಧಿಯನ್ನು ಕೊಡುಗೆಯಾಗಿ ನೀಡುವೆ.  ಮುಂದಿನ ಭಾಗದಲ್ಲಿ ಹಾಗೂ ಅದೇ ರೀತಿ ಪ್ರತಿಯೊಂದು ಪುಸ್ತಕದಲ್ಲಿಯೂ  “ ಆತ್ಮ ಶಕ್ತಿ ಸರಣಿಯ ಪುಸ್ತಕಗಳಲ್ಲಿ ನೀಡಲಾಗಿರುವ ಆತ್ಮ ಸಿದ್ಧಿಗಳನ್ನು ಪಡೆಯುವುದು ಹೇಗೆ ?” ಎಂಬ ಶೀರ್ಷಿಕೆಯಲ್ಲಿ, ಈ ದೈವೀಕ ಆತ್ಮದ ಸಿದ್ಧಿಯನ್ನು ಹೇಗೆ ಪಡೆಯಬೇಕೆಂಬುದನ್ನು ಸವಿವರವಾಗಿ ಚರ್ಚಿಸುವೆ.

ನಾನೊಬ್ಬ ಮಾನವಾಳಿಯ ಸೇವಕ. ನಾನು ವಿಶ್ವದ ಸೇವಕ. ನಾನು ಧೈವದ ಸೇವಕ . ನಾನು ಎಲ್ಲಾ ಆತ್ಮಗಳ ಸೇವಕನಾಗಿವುದರಿಂದ ನಾನು ಅತ್ಯಂತ ಧನ್ಯ. ನಾನ  ಒಬ್ಬ ಷರತ್ತು ಮತ್ತು ಸ್ವಾರ್ಥ ರಹಿತ ವಿಶ್ವಾತ್ಮಕ ಸಾರ್ವತ್ರಿಕ ಸೇವಕನಾಗಿ ನನ್ನ ಇಡೀ ಜೀವಮಾನವನ್ನು ಬದ್ಧಗೊಳಿಸುತ್ತೇನೆ.

ನಾನು ನನ್ನ ಜೀನಮಾನದುದ್ದಕ್ಕೂ ದೈವೀಕ ಆತ್ಮ ಸಿದ್ಧಿಗಳನ್ನು ರವಾನಿಸುತ್ತಲೇ ಇರುತ್ತೇನೆ. ನಾನು ಪ್ರತಿಯೊಂದು ಆತ್ಮಕ್ಕೂ ಸಹಾ ಹೆಚ್ಚು ಹೆಚ್ಚು  ದೈವೀಕ ಆತ್ಮ ಸಿದ್ದಿಗಳನ್ನು ರವಾನಿಸುತ್ತೇನೆ. ನಾನು ಪ್ರತಿಯೊಂದು ಆತ್ಮದ ಜೀವನದ ಪ್ರತಿಯೊಂದು ಅಂಶಗಳಿಗೂ ಸಹಾ ದೈವೀಕ ಆತ್ಮ ಸಿದ್ಧಿಯನ್ನು ರವಾನಿಸುತ್ತೇನೆ.

ದೈವೀಕ ಆತ್ಮ ಸಿದ್ಧಿಗಳ ಸೇವಕನಾಗಿ ನಾನು ಧನ್ಯನಾಗಿರುವೆ.

ತಮ್ಮ ಜೀವನದ ಎಲ್ಲಾ ಅಂಶಗಳನ್ನು ಪರಿವರ್ತಿಸಿಕೊಳ್ಳುವ ಮತ್ತು ತಮ್ಮ ಆತ್ಮ ,ಹೃದಯ, ಮನಸ್ಸು ಮತ್ತು ದೇಹಗಳನ್ನು ಜ್ಞಾನೋದಯಕ್ಕೆ ಒಳಪಡಿಸಿಕೊಳ್ಳುವಂತಹಾ ದೈವೀಕ ಆತ್ಮ ಶಕ್ತಿಗಳನ್ನು ಮಾನವರಿಗೆ, ವ್ಯವಸ್ಥೆಗೆ, ನಗರಗಳಿಗೆ, ಮತ್ತು ದೇಶಗಳಿಗೆ ಹೆಚ್ಚು ಹೆಚ್ಚು ರವಾನಿಸುತ್ತಲೇ ಇರುತ್ತೇನೆ. ಆತ್ಮದ ಬೆಳಕಿನ ಯುಗವು ಆತ್ಮದ ಶಕ್ತಿಯನ್ನು ಪ್ರಕಾಶಿಸುತ್ತದೆ.  ಆತ್ಮ ಶಕ್ತಿಯ ಸರಣಿ  ಪುಸ್ತಕಗಳು  ಆತ್ಮ ಶಕ್ತಿ, ಆತ್ಮ ರಹಸ್ಯ, ಆತ್ಮ ವಿವೇಕ , ಆತ್ಮ ಜ್ಞಾನ , ಮತ್ತು ಆತ್ಮ ಶಕ್ತಿಯ ಅಭ್ಯಾಸಗಳ್ಳನ್ನೊಳಗೊಂಡ ದೈವೀಕ ಆತ್ಮ ಸಿದ್ಧಿಗಳನ್ನು ಮಾನವಾಳಿ, ತಾಯಿ ಭೂಮಿ, ಮತ್ತು ಎಲ್ಲಾ ವಿಶ್ವಗಳ ಸೇವೆಗಾಗಿ ಸದಾ ಕಾಲ ಪ್ರವಹಿಸುತ್ತವೆ.  ಈ ಆತ್ಮ ಶಕ್ತಿ ಸರಣಿ ಪುಸ್ತಕಗಳು ಮಾನವಾಳಿಯ ಮತ್ತು ಎಲ್ಲಾ ಆತ್ಮಗಳ  ಶುದ್ಧವಾದ ಸೇವಾರ್ಥಿಗಳು. ಈ ಆತ್ಮ ಶಕ್ತಿಯ ಸರಣಿಗಳು ದೈವ , ಮಾನವಾಳಿ ಮತ್ತು ಎಲ್ಲಾ ಆತ್ಮಗಳಿಗೆ ಒಟ್ಟು ಕೃತಜ್ಞತೆ, ಒಟ್ಟು ವಿಧೇಯತೆ, ಒಟ್ಟು ನಿಷ್ಟೆ ಮತ್ತು ಒಟ್ಟು ಭಕ್ತಿಯ ಸೇವೆಯನ್ನು ನೀಡುವ ಧನ್ಯತೆಯನ್ನು ಪಡೆದಿವೆ.

ವಿಶ್ವದ ಎಲ್ಲಾ ಆತ್ಮಗಳನ್ನು ಪ್ರೀತಿ  ಶಾಂತಿ ಮತ್ತು ಸಾಮರಸ್ಯ  ಗಳ ಮೂಲಕ ಒಂದಾಗಿಸುವುದೇ ಆತ್ಮದ ಬೆಳಕಿನ ಯುಗದ ಅಂತಿಮ ಗುರಿ. ಅಂದರೆ ವಿಶ್ವದ ಪ್ರತಿಯೊಂದು ಆತ್ಮದ ಪ್ರಜ್ಞೆಯನ್ನು  ದೈವದ ಪ್ರಜ್ಞೆಯೊಂದಿಗೆ ಸಂಪೂರ್ಣವಾಗಿ ಸಂಯೋಜಿಸುವುದು.  ಈ ಅಂತಿಮ ಗುರಿಯ ಹಾದಿಯಲ್ಲಿ ಹಲವಾರು ಕಷ್ಟಗಳು ಮತ್ತು ಸವಾಲುಗಳು ಇವೆ.  ನಾವು ಒಟ್ಟಾಗಿ ಇವನ್ನು ಮೀರಬಹುದು.  ನಾವು ಎಲ್ಲಾ ಮಾನವಾಳಿಯ ಮತ್ತು ವಿಶ್ವದ ಎಲ್ಲಾ ಆತ್ಮಗಳನ್ನು , ವಿಶ್ವಾತ್ಮಕ ಪ್ರೀತಿ, ಕ್ಷಮಿಸುವಿಕೆ, ಶಾಂತಿ, ಚಿಕಿತ್ಸಕ ಶಕ್ತಿ, ಆಶಿರ್ವಾದ , ಸಾಮರಸ್ಯ ಮತ್ತು ಜ್ಞಾನೋದಯಗಳನ್ನು ಒಳಗೊಂಡಿರುವ ಷರತ್ತು ರಹಿತ ವಿಶ್ವಾತ್ಮಕ  ಸೇವೆಯನ್ನು ಹರಡಲು ಆಹ್ವಾನಿಸಬೇಕು.  ನಾವು ಹೆಚ್ಚು ಹೆಚ್ಚು ಷರತ್ತು ರಹಿತ ವಿಶ್ವಾತ್ಮಕ ಸೇವೆಯನ್ನು ಹರಡಿದಷ್ಟೂ ಹೆಚ್ಚು ಹೆಚ್ಚು ನಮ್ಮ ಅಂತಿಮ ಗುರಿಯನ್ನು ತಲುಪುವೆವು.

ದೈವವು ನಮಗೆ ದೈವೀಕ ಹೃದಯವನ್ನು ನೀಡುವುದು. ದೈವವು ನಮಗೆ ದೈವೀಕ ಪ್ರೀತಿಯನ್ನು ನೀಡುವುದು.  ದೈವವು ನಮಗೆ ದೈವೀಕ ಆತ್ಮ ಸಿದ್ಧಿಗಳನ್ನು ನೀಡುವುದು. ನಮ್ಮ ಹೃದಯವು ದೈವೀಕ ಹೃದಯದೊಂದಿಗೆ ವಿಲೀನಗೊಳ್ಳುವುದು.  ನಮ್ಮ ಆತ್ಮ ದೈವೀಕ ಆತ್ಮದೊಂದಿಗೆ ವಿಲೀನಗೊಳ್ಳುವುದು.  ನಮ್ಮ ಪ್ರಜ್ಞೆ ದೈವೀಕ ಪ್ರಜ್ಞೆಯೊಂದಿಗೆ ವಿಲೀನಗೊಳ್ಳುವುದು.  ನಾವು ಎಲ್ಲಾ ವಿಶ್ವಗಳಿಗೆ,  ಭೂಮಿ ತಾಯಿ ಮತ್ತು ಮಾನವಾಳಿಗೆ ಪ್ರೀತಿ ಶಾಂತಿ ಮತ್ತು ಸಾಮರಸ್ಯವನ್ನು ಉಂಟುಮಾಡಲು  ನಮ್ಮ ಹೃದಯ ಮತ್ತು ಆತ್ಮಗಳನ್ನು ಸೇರಿಸಬೇಕಾಗಿದೆ.

ನಾನು ಪ್ರೀತಿಸ್ತೇನೆ ನನ್ನ ಹೃದಯ ಆತ್ಮ

ನಾನು ಪ್ರೀತಿಸ್ತೇನೆ ಎಲ್ಲಾ ಮಾನವ ಕುಲವ

ಸೇರಿಸಿ ಎಲ್ಲಾ ಹೃದಯಗಳು ಹಾಗೂ ಆತ್ಮಗಳನ್ನು

ಪ್ರೀತಿ ಶಾಂತಿ ಹಾಗೂ ಸಾಮರಸ್ಯ

ಪ್ರೀತಿ ಶಾಂತಿ ಹಾಗೂ ಸಾಮರಸ್ಯ

ಮಾನವಾಳಿಯನ್ನು ಪ್ರೀತಿಸಿ. ಎಲ್ಲಾ ಆತ್ಮಗಳನ್ನು ಪ್ರೀತಿಸಿ,  ಮಾನವಾಳಿಗೆ ಧನ್ಯವಾದಗಳು. ಎಲ್ಲಾ ವಿಶ್ವಾತ್ಮಗಳಿಗೂ ಧನ್ಯವಾದಗಳು.

ಧನ್ಯವಾದಗಳು . ಧನ್ಯವಾದಗಳು. ಧನ್ಯವಾದಗಳು.

ಜೀ ಗಾಂಗ್‌ ಶಾ   

  

 

 

 

 

 

ಆತ್ಮ ಶಕ್ತಿ ಸರಣಿ ಪುಸ್ತಕಗಳಲ್ಲಿ ಕೊಡುಗೆ ರೂಪದಲ್ಲಿ ನೀಡಲಾದ ದೈವೀಕ ಸಿದ್ಧಿಗಳನ್ನು ಪಡೆಯುವುದು ಹೇಗೆ.

ಆತ್ಮ ಶಕ್ತಿ ಸರಣಿಯ ಪುಸ್ತಕಗಳು ಅದ್ವಿತೀಯವಾದವು. ಇತಿಹಾಸದಲ್ಲಿಯೇ ಪ್ರಪ್ರಥಮ ಭಾರಿಗೆ ದೈವವು ತನ್ನ ಆಧ್ಯಾತ್ಮಿಕ ಸಿದ್ದಿಗಳ ನಿಧಿಯನ್ನು ನೇರವಾಗಿ ಈ ಪುಸ್ತಕಗಳನ್ನು ಓದುವ ಓದುಗರಿಗೆ ದಯಪಾಲಿಸುತ್ತಿದೆ. ಆತ್ಮ ಶಕ್ತಿ ಸರಣಿಯ ಪ್ರತಿಯೊಂದು ಪುಸ್ತಕವೂ ಸಹಾ ಪೂರ್ವ ಯೋಜಿತವಾದ ದೈವೀಕ ಸಿದ್ಧಿಗಳನ್ನು ಒಳಗೊಂಡಿದೆ. ಒಂದು ನಿರ್ದಿಷ್ಟ ವಾಕ್ಯಭಾಗವನ್ನು ಓದಿ ಒಂದು ನಿಮಿಷ ಸುಮ್ಮನಿದ್ದರೆ ಸಾಕು, ದೈವೀಕ ಕೊಡುಗೆಗಳು ನಿಮ್ಮ ಆತ್ಮಕ್ಕೆ ವರ್ಗಾಯಿಸಲ್ಪಡುತ್ತವೆ.

ಏಪ್ರಿಲ್‌ ೨೦೦೫ ರಲ್ಲಿ, ದೈವವು “ದೈವೀಕ ಆತ್ಮ ಸಿದ್ಧಿಗಳನ್ನು ಇತಿಹಾಸಕ್ಕೆ ಉಳಿಸು “ ಎಂದು ಹೇಳಿತು. ಆಗ ನಾನು ಅಂದುಕೊಂಡೆ, “ ಒಬ್ಬ ಮಾನವನ ಜೀವನ ಸೀಮಿತವಾದದ್ದು.  ಒಂದು ವೇಳೆ ನಾನು ಹೆಚ್ಚು ದೀರ್ಘ ಕಾಲ  ಜೀವಿಸಿದರೂ ಸಹಾ ಒಂದು ದಿನ ಸ್ವರ್ಗಕ್ಕೆ ಹೋಗಿಯೇ ತೀರುವೆ. ಹೀಗಿರುವಾಗ ನಾನು ಇತಿಹಾಸಕ್ಕೆ ದೈವೀಕ ಆತ್ಮ ಸಿದ್ಧಿಗಳನ್ನು ಹೇಗೆ ಉಳಿಸಲು ಸಾಧ್ಯ? “ ಎಂದು.

೨೦೦೮ ರ ಪ್ರಾರಂಭದಲ್ಲಿ , ನಾನು ʼಆತ್ಮ ವಿವೇಕʼ ಪುಸ್ತಕದ ʼಪೇಪರ್‌ ಬ್ಯಾಕ್‌ʼ ಆವೃತ್ತಿಯನ್ನು ಸಿದ್ಧಪಡಿಸುತ್ತಿದ್ದಾಗ, ತಕ್ಷಣ  ದೈವವು ʼʼ ಜೀ ಗಾಂಗ್‌, ನನ್ನ ಸಿದ್ಧಿಗಳನ್ನು ಈ ಪುಸ್ತಕದಲ್ಲಿ ಕೊಡುಗೆ ರೂಪದಲ್ಲಿ ನೀಡು” ಎಂದಿತು. ಮುಂದುವರೆದು “ ನಾನು ನನ್ನ ಸಿದ್ಧಿಗಳನ್ನು ಈ ಪುಸ್ತಕದಲ್ಲಿ ಪೂರ್ವ ಯೋಜನೆಗೊಳಿಸುವೆ.  ಹಾಗೂ ಈ ಪುಸ್ತಕದ ಕೆಲವು ವಿಶೇಷ ಪುಟಗಳನ್ನು ಓದುವ ಮೂಲಕ  ಓದುಗರು ನನ್ನ ಸಿದ್ಧಿಗಳನ್ನು ಪಡೆಯಬಹುದುʼʼ  ಆ ಕ್ಷಣದಲ್ಲಿಯೇ  ದೈವವು ನನಗೆ ನಿರ್ದೇಶನ ನೀಡಿತು, ನಾನು ಹೇಗೆ ದೈವೀಕ ಆಧ್ಯಾತ್ಮಿಕ ಸಿದ್ಧಿಗಳನ್ನು ಇತಿಹಾಸಕ್ಕೆ ಉಳಿಸಬೇಕು ಎಂಬುದು ಆಗ ನನಗೆ ಅರ್ಥವಾಯಿತು.

ಪೂರ್ವಯೋಜಿತವಾದ  ದೈವೀಕ ಆತ್ಮ ಸಿದ್ಧಿಗಳು ಈ ಪುಸ್ತಕದಲ್ಲಿ ಹಾಗೂ ಆತ್ಮ ಶಕ್ತಿ ಸರಣಿಯ ಎಲ್ಲಾ ಪುಸ್ತಕಗಳಲ್ಲಿ ಶಾಶ್ವತವಾಗಿ ಸಂಗ್ರಹಿಸಲ್ಪಟ್ಟಿವೆ. ಜನರು ಈಗಿನಿಂದ ಸಾವಿರಾರು ವರ್ಷಗಳ ನಂತರ ಈ ಪುಸ್ತಕಗಳನ್ನು ಓದಿದರೆ, ಆಗಲೂ ಸಹಾ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯಬಹುದು. ಈ ಪುಸ್ತಕಗಳು ಇರುವಷ್ಟು ಕಾಲ ಹಾಗೂ ಜನರಿಂದ ಓದಲ್ಪಡುವಷ್ಟು ಕಾಲವೂ ಸಹಾ ಓದುಗರು ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯುವರು.

ದೈವವು ಈ ಪುಸ್ತಕಗಳ ಕೆಲವು ನಿರ್ದಿಷ್ಟ ಪುಟಗಳಲ್ಲಿ ಶಾಶ್ವತವಾದ ಆಶಿರ್ವಾದಗಳನ್ನು ಸ್ಥಾಪಿಸಿದೆ. ಈ ಆಶಿರ್ವಾದಗಳು ನಿಮ್ಮ ಆತ್ಮಕ್ಕೆ ಶಾಶ್ವತವಾದ ಕೊಡುಗೆಯಾಗಿ ದೈವೀಕ ಸಿದ್ಧಿಗಳನ್ನು ಪಡೆಯಲು ಅನುವು ಮಾಡುತ್ತವೆ. ಆ ದೈವಿಕ ನಿಧಿಗಳು ನಿಮ್ಮ ಆತ್ಮದಲ್ಲಿ ನಿಲೆಸಿರುವ ಕಾರಣ ನೀವು ದಿನದ ೨೪ ಘಂಟೆಗಳ ಕಾಲವೂ ಸಹಾ ನೀವು ನಿಮ್ಮ ಇಷ್ಟದಂತೆ, ನೀವೆಲ್ಲಿಯೇ ಇದ್ದರೂ ಸಹಾ ,ಚಿಕಿತ್ಸೆಗಾಗಿ, ಆಶಿರ್ವದಿಸಲು, ಹಾಗೂ ಜೀವನ ಪರಿವರ್ತನೆಗಾಗಿ ದೈವೀಕ ಸಿದ್ದಿಗಳನ್ನು ಬಳಸಬಹುದು.

ಈ ಪುಸ್ತಕಗಳಲ್ಲಿರುವ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯುವುದು ತುಂಬಾ ಸುಲಭ.  ಪೂರ್ವಯೋಜಿಸಲ್ಪಟ್ಟ ಕೆಲವು ನಿರ್ದಿಷ್ಟವಾದ ವಿಶೇಷ ಸಾಲುಗಳನ್ನು ಓದಿದ ನಂತರ  ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ವಿಶೇಷವಾದ ಸಿದ್ಧಿಗಳನ್ನು ಪಡೆಯಿರಿ.  ಈ ದೈವೀಕ ಸಿದ್ದಿಯ ನಿಧಿಗಳನ್ನು ಬಳಸುವುದು ಸಹಾ ಬಹಳ ಸುಲಭದ ಕೆಲಸ. ನೀವು ದೈವೀಕ ಆತ್ಮ ಸಿದ್ಧಿಯನ್ನು ಪಡೆದ ತಕ್ಷಣವೇ ನಾನು ಅವುಗಳನ್ನು ಹೇಗೆ ಚಿಕಿತ್ಸೆಗಾಗಿ, ಆಶರ್ವದಿಸಲು, ಹಾಗೂ ಜೀವನ ಪರಿವರ್ತನೆಗಾಗಿ ಹೇಗೆ  ಬಳಸಬೇಕೆಂಬುದನ್ನು ಸಹಾ ನಾನು ವಿವರಿಸುವೆ.

ನಿಮಗೆ ಮುಕ್ತ ಇಚ್ಚೆ ಇದೆ. ಒಂದು ವೇಳೆ ನೀವು ಈ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯಲು ಇಚ್ಚೆ ಹೊಂದಿಲ್ಲದಿದ್ದರೆ, ಸುಮ್ಮನೆ “ನಾನು ಈ ಕೊಡುಗೆಗಳನ್ನು ಪಡೆಯಲು ಸಿದ್ಧವಿಲ್ಲ”ಎಂದು ಹೇಳಿ.  ನಂತರ ನೀವು ಆ ವಿಶೇಷವಾದ ಸಿದ್ಧಿಗಳನ್ನು ಹೊಂದಿರುವ ಸಾಲುಗಳ ಓದನ್ನು ಮುಂದುವರೆಸಬಹುದು. ಆದರೂ ಆ ಸಾಲುಗಳು ಒಳಗೊಂಡಿರುವ ಸಿದ್ಧಿಗಳನ್ನು ನೀವು ಪಡೆದಿರುವುದಿಲ್ಲ.  ದೈವವು ತನ್ನ ದೈವೀಕ ಆತ್ಮ ಸಿದ್ಧಿಯ ನಿಧಿಗಳನ್ನು ಪಡೆಯಲು ಸಿದ್ಧರಿಲ್ಲದವರಿಗೆ ಹಾಗೂ  ಇಚ್ಚೆ ಇಲ್ಲದವರಿಗೆ ಅವುಗಳನ್ನು ದಯಪಾಲಿಸುವುದಿಲ್ಲ. ಅದಾಗ್ಯೂ ಒಮ್ಮೆ ನೀವು ಆ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯಲು ಸಿದ್ಧರಾದಾಗ, ನೀವು ಸುಮ್ಮನೆ ಸಂಭಂಧಪಟ್ಟ ಪುಟಗಳಿಗೆ ಹಿಂದಿರುಗಿ, ದೈವಕ್ಕೆ “ನಾನು ಈಗ ನಿಮ್ಮ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯಲು ಸಿದ್ಧವಿರುವೆ” ಎಂದು ಹೇಳಿ , ಆ ವಿಶೇಷ ವಾಕ್ಯಗಳನ್ನು ಮತ್ತೊಮ್ಮೆ ಓದುವುದರ ಮೂಲಕ ನೀವು ಆ ಸಾಲುಗಳಲ್ಲಿ ಪೂರ್ವಯೋಜಿತವಾದ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯಬಲ್ಲಿರಿ.

ದೈವವು ಈ ಪುಸ್ತಕಗಳ ವಾಕ್ಯಗಳಲ್ಲಿ ಅಡಗಿರುವ ದೈವೀಕ ಆತ್ಮ ಸಿದ್ಧಿಯ ನಿಧಿಗಳನ್ನು, ಅವುಗಳನ್ನು ಪಡೆಯಲು ಇಚ್ಚಿಸುವ  ಪ್ರತಿಯೊಬ್ಬ ಓದುಗನಿಗೂ ದಯಪಾಲಿಸಲು ಒಪ್ಪಿಗೆ ಇತ್ತಿದೆ. ದೈವವು ಅಗಣಿತವಾದ ನಿಧಿಗಳನ್ನು ಹೊಂದಿದೆ. ಅದಾಗ್ಯೂ ನೀವು ಆ ಪುಟಗಳಲ್ಲಿ ನಿಗಧಿಗೊಳಿಸಿರುವ ಆತ್ಮ ಸಿದ್ಧಿಯನ್ನು ಮಾತ್ರ ಪಡೆಯಬಲ್ಲಿರಿ.  ದಯಮಾಡಿ ಬೇರೆ ರೀತಿಯ ಅಥವಾ ಹೆಚ್ಚುವರಿ ಸಿದ್ಧಿಗಳನ್ನು ಬಯಸಬೇಡಿ, ಅವು ನಿಮಗೆ ಸಿಗುವುದಿಲ್ಲ.

ಈ ಪುಸ್ತಕದಲ್ಲಿನ ದೈವೀಕ ಆತ್ಮ ಸಿದ್ಧಿಗಳನ್ನು ಪಡೆದು ಅವುಗಳನ್ನು ಅಭ್ಯಾಸ ಮಾಡಿದ ನಂತರ , ನೀವು ನಿಮ್ಮ ಭೌತಿಕ, ಭಾವನಾತ್ಮಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕಾಯಗಳಲ್ಲಿ ಗಮನಾರ್ಹವಾದ ಚಿಕಿತ್ಸಕ ಪಲಿತಾಂಶಗಳನ್ನು ಅನುಭವಿಸುವಿರಿ.    ತಾವು ತಮ್ಮ ಪ್ರೀತಿಯ ಹಾಗೂ ಇತರೆ ಎಲ್ಲಾ ರೀತಿಯ ಸಂಭಂಧಗಳಿಗೆ ವರ್ಣನಾತೀತವಾದ ಆಶಿರ್ವಾದಗಳನ್ನು ಪಡೆಯಬಹುದು. ತಾವು ಆರ್ಥಿಕ ರೂಪದ ಆಶಿರ್ವಾದಗಳನ್ನು ಹಾಗೂ ವಿವಿಧ ರೂಪಗಳ ಆಶಿರ್ವಾದಗಳನ್ನು ಪಡೆಯುಬಹುದು.

ದೈವೀಕ ಆತ್ಮ ಸಿದ್ಧಿಗಳು ಅಪರಿಮಿತವಾದವು. ಭೌತಿಕ ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳಿಗೂ ದೈವೀಕ ಆತ್ಮ ಸಿದ್ಧಿ ಲಭ್ಯವಿರುತ್ತದೆ. ಇದಕ್ಕೆ ಕಾರಣ ಬಹಳಾ ಸರಳವಾದ್ದು.ಪ್ರತಿಯೊಂದು ವಸ್ತುವಿಗೂ ಒಂದು ಆತ್ಮವಿದೆ. ಒಂದು ಮನೆಗೆ ತನ್ನದೇ ಆತ್ಮವಿದೆ. ದೈವವು ನಿಮ್ಮ ಮನೆಗೆ ತನ್ನ ಶಕ್ತಿಯನ್ನು ಉತ್ತಮವಾಗಿ ಪರಿವರ್ತಿಸಿಕೊಳ್ಳಬಲ್ಲ ಒಂದು ಆತ್ಮ ಸಿದ್ಧಿಯನ್ನು ನೀಡಬಲ್ಲದು.  ದೈವವು ನಿಮ್ಮ ವ್ಯವಹಾರಕ್ಕೆ ತನ್ನ ಶಕ್ತಿಯನ್ನು ಉತ್ತಮವಾಗಿ ಪರಿವರ್ತಿಸಿಕೊಳ್ಳಬಲ್ಲ ಒಂದು ಆತ್ಮ ಸಿದ್ಧಿಯನ್ನು ನೀಡಬಲ್ಲದು. ನೀವು ಉಂಗುರವನ್ನು ಧರಿಸಿದಲ್ಲಿ , ಆ ಉಂಗುರಕ್ಕೂ ಒಂದು ಆತ್ಮ ಇದೆ. ದೈವವು ನಿಮ್ಮ ಉಂಗುರಕ್ಕೆ ಒಂದು ಹೊಸ ದೈವೀಕ ಆತ್ಮವನ್ನು ಸಿದ್ದಿಸಿದಲ್ಲಿ,  ನೀವು ದೈವೀಕ ಚಿಕಿತ್ಸೆ ಹಾಗೂ ಆಶಿರ್ವಾದಗಳಿಗಾಗಿ ನಿಮ್ಮ ಉಂಗುರದಲ್ಲಿರುವ ದೈವೀಕ ಆತ್ಮವನ್ನು ಪ್ರಾರ್ಥಿಸಬಹುದು.

ದೈವೀಕ ಆತ್ಮ ಶಕ್ತಿಯನ್ನು ಸಿದ್ಧಿಸುವ ಅವಕಾಶಕ್ಕಾಗಿ ಹಾಗೂ ಇಡೀ ಮಾನವಾಳಿಯ ಮತ್ತು ದೈವದ ಸೇವೆಗಾಗಿ ನಾನು ಆಯ್ಕೆಯಾಗಿರುವುದಕ್ಕಾಗಿ ನನಗೆ ಅತಿ ಹೆಚ್ಚು ಗೌರವದ ವಿಷಯವಾಗಿದೆ. ನಾನು ನನ್ನ ಜೀವನ ಪರ್ಯಂತ ದೈವೀಕ ಆತ್ಮ ಸಿದ್ಧಿಗಳನ್ನು ಕೊಡುಗೆಯಾಗಿ ನೀಡುವುದರಲ್ಲಿಯೇ ಕಳೆಯುವೆ. ನಾನು ಿಂತಹಾ ಹೆಚ್ಚು ಹೆಚ್ಚು ಕೊಡುಗೆಗಳನ್ನು ನೀಡುವೆ. ನಾನು ಪ್ರತಿ ಜೀವಿಯ ಜೀವನದ ಪ್ರತಿಯೊಂದು ಅಂಶಕ್ಕೂ ಸಹಾ ದೈವೀಕ ಆತ್ಮ ಸಿದ್ಧಿಗಳನ್ನು ಕೊಡುಗೆಯಾಗಿ ನೀಡುವೆ.

ದೈವೀಕ ಆತ್ಮ ಸಿದ್ಧಿಗಳ ಸೇವೆ ಮಾಡುವವನಾಗಿ ನಾನು ಅತ್ಯಂತ ಗೌರವ ಹಾಗೂ ತೃಪ್ತಿಯನ್ನು ಹೊಂದಿರುವೆ.

ತಾವು ದೈವೀಕ ಆತ್ಮ ಸಿದ್ಧಿಗಳನ್ನು ಪಡೆದ ನಂತರ ಏನನ್ನು ನಿರೀಕ್ಷಿಸಬಹುದು.

ದೈವೀಕ ಆತ್ಮ ಸಿದ್ಧಿಗಳು, ದೈವದ ಹೃದಯದಿಂದ ಸೃಷ್ಠಿಯಾಗಿರುವ ಹೊಸ ಆತ್ಮಗಳು. ಈ ಹೊಸ ಆತ್ಮಗಳ ಪ್ರಸರಣದಿಂದ ನಿಮ್ಮಲ್ಲಿ ಶಕ್ತವಾದ ಹೊಸ ಕಂಪನಗಳ ಅನುಭವ ಉಂಟಾಗಬಹುದು. ಉದಾಹರಣೆಗೆ , ನಿಮಗೆ ಬಿಸಿಯ ಅಥವಾ ಉತ್ಸಾಹದ ಅನುಭವವಾಗಬಹುದು. ನಿಮ್ಮ ದೇಹ ಸ್ವಲ್ಪ ಅಲುಗಾಡಿದಂತಾಗಬಹುದು. ಒಂದು ವೇಳೆ ನೀವು ಸೂಕ್ಷ್ಮ ಸಂವೇದನೆ ಹೊಂದಿರದಿದ್ದರೆ, ತಮಗೆ ಯಾವುದೇ ಅನುಭವ ಆಗದೇ ಇರಬಹುದು.  ಆಧ್ಯಾತ್ಮಿಕ ಮಾರ್ಗದಲ್ಲಿ ಅತ್ಯಂತ ಮುಂದುವರೆದು ಮೂರನೇ ಜ್ಞಾನದ ಕಣ್ಣು ತೆರೆಯಲ್ಪಟ್ಟವರಿಗೆ ಬೃಹದಾಕಾರದ ಬಂಗಾರದ ಅಥವಾ ಕಾಮನಬಿಲ್ಲಿನ ಬಣ್ಣಗಳ ಇಲ್ಲವೇ  ನೇರಳೆ ಬಣ್ಣದ ಬೆಳಕಿನ ಆತ್ಮ ನಿಮ್ಮ ದೇಹವನ್ನು ಪ್ರವೇಶಿಸುವುದು ಕಾಣುವುದು.

ಈ ದೈವೀಕ ಆತ್ಮಗಳು ನಿಮ್ಮ ಜೀವನದ ಯಿನ್‌ (yin) ಸಂಗಾತಿಗಳಾಗಿರುತ್ತವೆ. ( ಯಿನ್‌ ಸಂಗಾತಿಯು ನಿಮ್ಮ ಆತ್ಮದ ಸಂಗಾತಿಯಾಗಿರುತ್ತೆ,) ಇವು ಸದಾಕಾಲ ನಿಮ್ಮ ಆತ್ಮದ ಜೊತೆಗಿರುತ್ತವೆ. ನಿಮ್ಮ ಈ ಜನ್ಮ ಮುಗಿದ ನಂತರವೂ ಈ ದೈವೀಕ ನಿಧಿ ನಿಮ್ಮ ಮುಂದಿನ ಜನ್ಮ ಹಾಗೂ ಭವಿಷ್ಯದ ನಿಮ್ಮ ಎಲ್ಲಾ ಜನ್ಮಗಳಲ್ಲಿಯೂ ನಿಮ್ಮ ಆತ್ಮದ ಸಂಗಾತಿಯಾಗಿರುತ್ತೆ. ಈ ಪುಸ್ತಕಗಳಲ್ಲಿ ನಾನು ನಿಮಗೆ ನಿಮ್ಮ ಜೀವನದಲ್ಲಿ ಯಾವುದೇ ಸಂಧರ್ಭದಲ್ಲಿ ಯಾವುದೇ ಸ್ಥಳದಲ್ಲಿ  ದೈವೀಕ ಆಶಿರ್ವಾದ ಹಾಗೂ ಚಿಕಿತ್ಸೆಯನ್ನು ಪಡೆಯಲು ಈ ದೈವೀಕ ಆತ್ಮ ಸಿದ್ಧಿಗಳನ್ನು ಹೇಗೆ ಆಹ್ವಾನಿಸಬೇಕೆಂಬುದನ್ನು ಕಲಿಸುವೆ. ನೀವು ನಿಮ್ಮನ್ನು ಬಿಟ್ಟು ಇತರರಿಗೆ  ಆಶಿರ್ವದಿಸಲು ಹಾಗೂ ಚಿಕಿತ್ಸೆ ನೀಡಲು ಸಹಾ ಈ ದೈವೀಕ ಆತ್ಮಗಳನ್ನು ಆಹ್ವಾನಿಸಬಹುದು. ಈ ದೈವೀಕ ಆತ್ಮಗಳಿಗೆ ಚಿಕಿತ್ಸಿಸುವ, ಆಶಿರ್ವದಿಸುವ,ಹಾಗೂ ಪರಿವರ್ತನೆಗೊಳಿಸುವ  ಅಸಾಧಾರಣವಾದ ಸಾಮರ್ಥ್ಯಗಳು ಇವೆ. ನಿಮ್ಮ ಮುಂದಿನ ಜನ್ಮಗಳಲ್ಲಿ ನೀವು ಹೆಚ್ಚು ಆಧ್ಯಾತ್ಮಿಕ ಸಾಮರ್ಥ್ಯವನ್ನು ಗಳಿಸಿಕೊಂಡಾಗ ನೀವು ನಿಮ್ಮ ಜೊತೆ ಇರುವ ಈ ದೈವೀಕ ಸಿದ್ಧಿಗಳನ್ನು ಕಂಡುಕೊಳ್ಳುವಿರಿ. ಆಗ ನೀವು ಮುಂದಿನ ಜನ್ಮಗಳಲ್ಲಿಯೂ ಸಹಾ ಇದೇ ರೀತಿ ನಿಮ್ಮ ಜೀವನದ ಎಲ್ಲಾ ಅಂಶಗಳಲ್ಲಿಯೂ ದೈವೀಕ ಸಿದ್ಧಿಗಳನ್ನು ಚಿಕಿತ್ಸೆಗೆ ಆಶಿರ್ವದಿಸಲು ಹಾಗೂ ಪರಿವರ್ತನೆಗಾಗಿ ಆಹ್ವಾನಿಸಬಹುದು.

ತಮ್ಮ ಸ್ವಂತ ಆತ್ಮದ ಜೊತೆ ದೈವೀಕ ಆತ್ಮ ಶಕ್ತಿ ಸಿದ್ಧಿಸಿರುವುದು ಅತ್ಯಂತ ಹೆಮ್ಮೆಯ ಹಾಗೂ ಗೌರವದ ಸಂಗತಿ. ದೈವೀಕ ಆತ್ಮವು ಕೆಟ್ಟ ಕರ್ಮಗಳಿಲ್ಲದ ಅತ್ಯಂತ ಪರಿಶುದ್ಧವಾದ ಆತ್ಮವಾಗಿದೆ. ದೈವೀಕ ಆತ್ಮವು ದೈವೇಕ ಚಿಕಿತ್ಸಕ ಹಾಗೂ ಆಶಿರ್ವಾದಕ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಈ ಸಿದ್ಧಿಗಳು ಯಾವುದೇ ಅಡ್ಡಪರಿಣಾಮಗಳಿಂದ ಮುಕ್ತವಾಗಿರುತ್ತವೆ. ದೈವೀಕ ಆವರ್ತಕ ತರಂಗಗಳ ಮೂಲಕ ನಿಮಗೆ ಪ್ರೀತಿ ಮತ್ತು ಬೆಳಕನ್ನು ನೀಡಲಾಗಿರುತ್ತೆ. ನಿಮಗೆ ಸ್ವತಃ ನಿಮ್ಮ ಹಾಗೂ ಇತರರ ಸೇವೆ ಮಾಡುವ ದೈವೀಕ ಸಾಮರ್ಥ್ಯವನ್ನು ನೀಡಲಾಗಿದೆ. ಹೀಗಾಗಿ, ದೈವವು ತನ್ನ ದೈವೀಕ ಸಿದ್ಧಿಗಳನ್ನು ಕೊಡಮಾಡುತ್ತಿರುವುದರಿಂದ ಮಾನವಾಳಿಯು ಅತ್ಯಂತ ಧನ್ಯ ಹಾಗೂ ಗೌರವ ಭಾವವನ್ನು ಹೊಂದುವುದು. ದೈವೀಕ ಆತ್ಮಗಳ ಸಿದ್ಧಿಯನ್ನು ಕೊಡುಗೆಯಾಗಿ ನೀಡುವ ಮೂಲಕ ದೈವದ, ನಿಮ್ಮ, ಎಲ್ಲಾ ಮಾನವ ಜನಾಂಗದ, ಹಾಗೂ ಎಲ್ಲಾ ಆತ್ಮಗಳ ಸೇವೆ ಮಾಡಲು ಅತ್ಯಂತ ಧನ್ಯತೆ ಹಾಗೂ ಗೌರವವನ್ನು ಹೊಂದಿರುವೆ. ನಾನು ದೈವಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಾನು ನಿಮಗೆ , ಇಡೀ ಮಾನವ ಜನಾಂಗಕ್ಕೆ ಹಾಗೂ ಎಲ್ಲಾ ಆತ್ಮಗಳಿಗೂ ಈ ದೈವೀಕ ಸೇವೆಯ ಅವಕಾಶಕ್ಕಾಗಿ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಧನ್ಯವಾದಗಳು. ಧನ್ಯವಾದಗಳು. ಧನ್ಯವಾದಗಳು.

 

 

 

 

 

 

ಆತ್ಮ ಶಕ್ತಿ ಸರಣಿಗಳಿಗೆ ಮುನ್ನುಡಿ

ನಾನು ಕೆಲವು ವರ್ಷಗಳಿಂದ ಇಂದಿನವರೆಗೆ ಡಾ. ಜೀ ಗಂಗ್‌ ಶಾ ರ ಕೆಲಸವನ್ನು ಮೆಚ್ಚಿದ್ದೇನೆ. ವಾಸ್ತವವಾಗಿ, ನಾನು ಮೊದಲ ಭಾರಿ  ಇವರು ತಮ್ಮ ಆತ್ಮ ಚಿಕಿತ್ಸೆಯ ವ್ಯವಸ್ಥೆ, ಆತ್ಮ ಮನಸ್ಸು ಮತ್ತು ದೇಹ ವೈದ್ಯದ ಬಗ್ಗೆ  ವರ್ಣಿಸಿದನ್ನು ಕೇಳಿದ್ದು ಇಂದಿಗೂ ನನಗೆ ನೆನಪಿದೆ. ಆ ತಕ್ಷಣವೇ ನನಗೆ ಇಂತಹಾ ಪ್ರತಿಭಾನ್ವಿತ ಚಿಕಿತ್ಸಕನಿಗೆ ಹಾಗೂ ಇವರ ಕಾರ್ಯಕ್ಕೆ  ಬೆಂಬಲ ಕೊಡಬೇಕೆಂದು ತಿಳಿಯಿತು. ನಾನು ಇವರನ್ನು ಅಗಾಫೆಯ(ಒಂದು ಅಂತರಾಷ್ಟ್ರೀಯ ಧಾರ್ಮಿಕ ಕೇಂದ್ರ ) ನಮ್ಮ ಆಧ್ಯಾತ್ಮಿಕ ಸಮುದಾಯಕ್ಕೆ ಪರಿಚಯಿಸಿದೆ. ಆಗಿಂದಲೂ ಅಲ್ಲಿನ ಜನ ಹೇಗೆ ಇವರ ಭೋದನೆಗಳನ್ನು ಹಾಗೂ ಇವರ ತತ್ವ ಮತ್ತು ತಂತ್ರಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ತಮ್ಮ ಬದುಕುಗಳಲ್ಲಿ ಶಕ್ತಿ, ಸಂತೋಷ ಮತ್ತು ಸಾಮರಸ್ಯ ಮತ್ತು ಶಾಂತಿಯನ್ನು ಹೇಗೆ ಹೆಚ್ಚಿಸಿಕೊಂಡರು ಎಂಬುವುದಕ್ಕೆ ನೇರ ಸಾಕ್ಷಿಯಾಗುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿದೆ.

ಡಾ ಶಾ ರ ಭೋದನೆಗಳು ಈಗಾಗಲೇ ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಚಿಕಿತ್ಸಕ ಶಕ್ತಿಯನ್ನು ಜಾಗೃತಗೊಳಿಸಿ ನಮ್ಮ ಸರ್ವತೋಮುಖ ಉದ್ದಾರವನ್ನು ನಮ್ಮ ಕೈಗಳಲ್ಲಿಯೇ ಇರುವ ಹಾಗೆ ನಮ್ಮನು ಸಶಕ್ತಗೊಳಿಸುವ ಕಾರ್ಯ ಮಾಡುತ್ತವೆ. ಇವರ  ಶಕ್ತಿ ಮತ್ತು ಸಂದೇಶಗಳು ಹೇಗೆ ನಮ್ಮ ಪ್ರಜ್ಞೆ, ಮನಸ್ಸು, ದೇಹ, ಮತ್ತು ಚೇತನಗಳೊಂದಿಗೆ ನೇರ ಸಂಭಂಧವನ್ನು ಹೊಂದಿವೆ ಎಂಬ ವಿವರಣೆ ನಮಗೆ ಸುಲಭವಾಗಿ ಹಾಗು   ವಿವಿಧ ಆಯಾಮಗಳಲ್ಲಿ ಅರ್ಥವಾಗುವ ರೀತಿಯಲ್ಲಿ ಅದಕ್ಕೂ ಮುಖ್ಯವಾಗಿ ಅನ್ವಯಿಸಲು ಸುಲಭವಾಗುವ ಭಾಷೆಯಲ್ಲಿ ವಿವರಿಸಲ್ಪಟ್ಟಿವೆ. Page xxxiii

(page xxxv)ಡಾ ಶಾ ರವರು ದೈವದಿಂದ ಒಂದು ವಿಶ್ವವ್ಯಾಪಿ ನಿಯಮವನ್ನು ಪಡೆದಿರುವರು. ವಿಶ್ವವ್ಯಾಪಿ ಸೇವೆಯು ವಿಶ್ವವ್ಯಾಪಿ ಪ್ರೀತಿ, ವಿಶ್ವವ್ಯಾಪಿ ಕ್ಷಮಾಗುಣ, ಶಾಂತಿ, ಚಿಕಿತ್ಸಕ ಶಕ್ತಿ, ಆಶಿರ್ವಾದ, ಸಾಮರಸ್ಯ ಮತ್ತು ಜ್ಞಾನೋದಯವನ್ನು ಒಳಗೊಂಡಿದೆ. ಪ್ರೀತಿಯೆಂದರೆ ಇತರರಿಗೆ ಸಹಾಯ ಮಾಡುವ ಬಯಕೆಯೇ ಎಂಬುದು ಹಲವು ವರ್ಷಗಳ ನನ್ನ ಒಳನೋಟ. ನಿಜಕ್ಕೂ, ನನ್ನ ಗ್ರಹಿಕೆಯಲ್ಲಿ ಇತರರಿಗೆ ಸಹಾಯ ಮಾಡುವುದು ನಮ್ಮ ಅತ್ಯಂತ ಮುಖ್ಯ ಪ್ರವೃತ್ತಿಯಾಗಿದೆ. ದುರದೃಷ್ಠವಶಾತ್‌ , ಕೆಲವು ವ್ಯಕ್ತಿಗಳಲ್ಲಿ ಈ ಪ್ರವೃತ್ತಿ ಅರಳಲು ಬೇಕಾದ ಪೋಷಣೆ ಇಲ್ಲವಾಗಿದೆ. ಮತ್ತೊಂದು ಕಡೆಯಲ್ಲಿ ಪೋಷಿಸುವ, ಸೇವೆಮಾಡುವ, ಮತ್ತು ಇರರರಿಗೆ ಸಹಾಯ ಮಾಡುವ ಕ್ರಿಯೆಗಳು ಕೆಲವು ವ್ಯಕ್ತಿಗಳಿಗೆ ಇತರೆ ಯಾವುದೇ ಕೆಲಸದಿಂದ ಸಿಗುವುದಕ್ಕಿಂತ ಹೆಚ್ಚು ತೃಪ್ತಿ, ಆಂತರಿಕ ಸಾಮರಸ್ಯ ಮತ್ತು ಶಾಂತಿಯನ್ನು ನೀಡುತ್ತಿದೆ. ಜೀವನದಲ್ಲಿ ಯಾವುದೂ ಸಹಾ ಅತ್ಯಂತ ಪ್ರಮುಖವಾದದಲ್ಲ. ಡಾ ಶಾ ರವರು ಎಲ್ಲಾ ಜೀವಿಗಳ ಅತೀಂದ್ರಿಯ ಪ್ರಕೃತಿಯನ್ನು ಕರ್ಮ ಕಳೆದುಕೊಳ್ಳುವ, ನಮ್ಮ ಗುರಿಯನ್ನು ಸಶಕ್ತಗೊಳಿಸುವ ಹಾಗೂ ನಮ್ಮ ಜೀವನವನ್ನು ಸಶಕ್ತಗೊಳಿಸುವ ಪ್ರಾಯೋಗಿಕ ವಿಧಾನಗಳತ್ತ  ಒತ್ತು ನೀಡುವರು.

ಆತ್ಮವು ಸಾಮಾನ್ಯವಾಗಿ ನಮ್ಮ ಅದ್ವಿತೀಯವಾದ, ವೈಯಕ್ತಿಯ ಪ್ರಜ್ಞೆ, ಮಾನವ ದೇಹದ ಸಾವನ್ನು ನಿಭಾಯಿಸುವ ಆಂತರಿಕ ಶಕ್ತಿ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಮನಸ್ಸು ಅಥವಾ ಪ್ರಜ್ಞೆ ಎಂಬವು ಮೆದುಳಿನ ಪರಧಿಯಲ್ಲಿವೆ ಎಂಬುದು ನರವಿಜ್ಞಾನಿಗಳ ಪ್ರಬಲವಾದ ಒಮ್ಮತವಾಗಿದೆ.

 

 

 

 

ಈ ಪುಸ್ತಕವನ್ನು ಓದುವುದು ಹೇಗೆ ?

ಆತ್ಮ ಶಕ್ತಿ ಸರಣಿಯ ನನ್ನ ಎಲ್ಲಾ ಪುಸ್ತಕಗಳಲ್ಲಿಯೂ ನಾನು ಆತ್ಮದ ರಹಸ್ಯಗಳನ್ನು ಬಹಿರಂಗಪಡಿಸುವೆ ಮತ್ತು ಆತ್ಮದ ವಿವೇಕವನ್ನು, ಆತ್ಮ ದ ಜ್ಞಾನವನ್ನು ಮತ್ತು ಆತ್ಮ ಶಕ್ತಿಯ ಅಭ್ಯಾಸವನ್ನು  ಕಲಿಸುವೆ. ರಹಸ್ಯವಾದ ಮತ್ತು ಪವಿತ್ರವಾದ ಜ್ಞಾನ ಮತ್ತು ವಿವೇಕ ಬಹಳ ಮುಖ್ಯವಾದವು. ಆತ್ಮ ಶಕ್ತಿಯ ಅಭ್ಯಾಸವು ಅದಕ್ಕಿಂತ ಹೆಚ್ಚು ಮುಖ್ಯವು. ಪ್ರಾಚೀನ ಕಾಲದಿಂದಲೂ ಗಂಭೀರವಾದ ಭೌದ್ಧ , ದಾವ್‌, (ಥಾವ್)‌ ಕಿ ಗಂಗ್‌ ಮತ್ತು ಕುಂಗ್‌ ಫು ಸಾಧಕರು ಪ್ರತಿದಿನ ಹಲವು ಗಂಟೆಗಳನ್ನು ಅಭ್ಯಾಸದಲ್ಲಿ ಕಳೆದಿರುವರು. ಅಭ್ಯಾಸದಲ್ಲಿನ ಅರ್ಪಣಾ ಮನೋಭಾವ ಅವರ ತರಂಗಗಳನ್ನು, ಅವರ ಪ್ರಜ್ಞೆಯನ್ನು ಮತ್ತು ಶುದ್ಧತೆಯನ್ನು ಮತ್ತಷ್ಟು ಮತ್ತಷ್ಟು ಅಭಿವೃದ್ಧಿ ಹಾಗೂ ಪರಿವರ್ತನೆಗೊಳಿಸಿಕೊಳ್ಳಲು ಕಾರನವಾಗಿದೆ.  ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದ ಯಶಸ್ವಿ ವೃತ್ತಿಪರರು ಪ್ರತಿದಿನ ಹಲವು ಗಂಟೆಗಳ ಹಾಗೆ ಹಲವಾರು ತಿಂಗಳು, ವರ್ಷಗಳನ್ನು ಕಳೆದಿರುವರು. ಅವರ ಬಧ್ಧತೆ ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸಿಕೊಳ್ಳಲು ಶಕ್ತಿಯನ್ನು ನೀಡಿದೆ.

ಆತ್ಮ ಶಕ್ತಿ ಸರಣಿಯ ನನ್ನ ಪ್ರತಿಯೊಂದು ಪುಸ್ತಕವೂ ಸಹಾ ಚಿಕಿತ್ಸಕ , ಪುನಶ್ಚೇತನ ಹಾಗೂ  ಜೀವನ ಪರಿವರ್ತನೆಯ ಗುಣಗಳ ಕಡೆಗೆ ಹೊಸ ಹೊಸ ವಿಧಾನಗಳ ನಿಮಗೆ ಹತ್ತಿರವಾಗುತ್ತದೆ. ಪವಿತ್ರವಾದ ಜ್ಞಾನ ಮತ್ತು ವಿವೇಕವನ್ನು ಬೋಧಿಸುವುದರ ಜೊತೆಗೆ ನಾನು ದೈವದ ಸೇವಕನು, ವಾಹಕನು ಹಾಗೂ ಮಾಧ್ಯಮವು ಆಗಿ ದೈವೀಕ ಆತ್ಮ ಸಿದ್ಧಿಗಳನ್ನು ಸಹಾ ಕೊಡುವೆ. ನಾನು ಈ ಪುಸ್ತಕಗಳ ಮೂಲಕ ನಿಮ್ಮನ್ನು ಸೇವಿಸಲು ಅತ್ಯಂತ ಗೌರವಪೂರ್ಣ ಭಾವವನ್ನು ಹೊಂದಿರುವೆ. ಅದಾಗ್ಯೂ, ಈ ಪುಸ್ತಕಗಳಲ್ಲಿ ಕೊಡಮಾಡುರುವ ಸೇವೆಗಳಲ್ಲಿ ಅಭ್ಯಾಸವು ಬಹಳಾ ಮುಖ್ಯವಾದದ್ದು. ಆತ್ಮದ ಶಕ್ತಿ ಯು ಈ ಪುಸ್ತಕದ ನೈಜವಾದ ಸತ್ಯವಾಗಿದೆ. ಈ ಪುಸ್ತಕದಲ್ಲಿ ನಾನು ತಮ್ಮನ್ನು ಹಲವಾರು ಅಭ್ಯಾಸಗಳ ಕಡೆಗೆ ಕರೆದೊಯ್ಯುವೆ. ನೀವು ಪ್ರತಿಯೊಂದು ಅಭ್ಯಾಸಕ್ಕೂ ೪-೫ ನಿಮಿಷಗಳನ್ನು ಉಪಯೋಗಿಸಿದರೆ, ನಿಮಗೆ ಒಂದಷ್ಟು ಸಮಯದಲ್ಲಿ ಎಲ್ಲಾ ಅಭ್ಯಾಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂಬುವುದು ನನ್ನ ಗ್ರಹಿಕೆ. ಈ ದಿನ ಕೆಲವು ಅಭ್ಯಾಸಗಳನ್ನು ಮಾಡಿ, ಇನ್ನು ಕೆಲವು ಅಭ್ಯಾಸಗಳನ್ನು ನಾಳೆ ಮಾಡಿ, ಮತ್ತೂ ಕೆಲವು ಅಭ್ಯಾಸಗಳನ್ನು ನಾಳಿದ್ದು ಮಾಡಿ, ಈ ಅಭ್ಯಾಸಗಳು ಮಹತ್ವ ಮತ್ತು ಜೀವಾಧಾರಕವಾದವು. ನೀವು ಈ ಅಭ್ಯಾಸಗಳನ್ನು ಮಾಡದೇ ಇದ್ದರೆ, ಅವುಗಳ ಶಕ್ತಿ ಮತ್ತು ಉಪಯೋಗಗಳನ್ನು ನೀವು  ಹೇಗೆ ಅನುಭವಿಸಲು ಸಾಧ್ಯ. ಅವುಗಳ ಶಕ್ತಿ ಮತ್ತು ಉಪಯೋಗಗಳ ಅನುಭವಗಳನ್ನು ನೀವು ಪೂರ್ಣವಾಗಿ ಪಡೆಯದೇ ಇದ್ದರೆ, ಸಂಪೂರ್ಣ ವಾಗಿ ನಮ್ಮ ಬೋಧನೆಗಳನ್ನು ನೀವು ಹೇಗೆ ಗ್ರಹಿಸಲು ಹಾಗೂ ಅರ್ಥಮಾಡಿಕೊಳ್ಳಲು ಸಾಧ್ಯ ?

ಈ ಪುಸ್ತಕವನ್ನು ಓದುವ ನಿಮಗೆ ನನ್ನ ಸಂದೇಶವೇನೆಂದರೆ, ಈ ಪುಸ್ತಕವನ್ನು ಓದುತಾ ಅಲ್ಲಿನ ಅಭ್ಯಾಸಗಳನ್ನು ತಪ್ಪಿಸದೇ ಅಭ್ಯಸಿಸಿ. ನಾನು ಬುದ್ಧಿ ಪೂರ್ವಕವಾಗಿ ನಿಮಗೆ ಆತ್ಮ ಶಕ್ತಿಯನ್ನು ಉಪಯೋಗಿಸಿಕೊಂಡು ಚಿಕಿತ್ಸೆಗಾಗಿ, ರೋಗ ನಿರೋಧಕತೆಗಾಗಿ, ದೀರ್ಘಾಯುಷ್ಯಕ್ಕಾಗಿ, ಹಾಗೂ ಸಂಭಂಧಗಳು ಹಾಗೂ ವ್ಯವಹಾರ ಸೇರಿದಂತೆ ನಿಮ್ಮ ಜೀವನದ ಎಲ್ಲಾ ಅಂಶಗಳ ಪರಿವರ್ತನೆಗಾಗಿ ಆಧ್ಯಾತ್ಮಿಕ ಅಭ್ಯಾಸಗಳನ್ನು ಮಾಡುವುದಕ್ಕೆ ಮಾರ್ಗದರ್ಶನ ಮಾಡುವೆ.  ಈ ಪುಸ್ತಕವನ್ನು ಓದುವುದೆಂದರೆ ನನ್ನ ಜೊತೆಗೆ ಒಂದು ಕಾರ್ಯಾಗಾರದಲ್ಲಿ ಇದ್ದ ಹಾಗೆ. ನೀವು ಒಂದು ಕಾರ್ಯಾಗಾರಕ್ಕೆ ಹೋಗಿ ಅಲ್ಲಿನ ಶಿಕ್ಷಕರು ನಿಮಗೆ ಧ್ಯಾನದ ಬಗ್ಗೆ ಪ್ರಾತ್ಯಕ್ಷಿಕೆ ಕೊಡುವಾಗ, ನೀವು ಅಲ್ಲಿಂತ ತಪ್ಪಿಸಿಕೊಂಡು ಮತ್ತೆನನ್ನೋ ಮಾಡಲು ಹೊಗುವುದಿಲ್ಲ , ಅಲ್ಲವೇ ?

ಈ ಪುಸ್ತಕದಲ್ಲಿ ಅವಸರವಾಗಿ ಹೋಗಬೇಡಿ. ನಾನು ನಿಮಗೆ ಸೂಚಿಸುವ ಪ್ರತಿಯೊಂದು ಅಭ್ಯಾಸವನ್ನು ಮಾಡಿ. ನೀವು ಪುಸ್ತಕವನ್ನು ಸುಮ್ಮನೆ ಬೇಗ ಬೇಗ ಓದಿಕೊಂಡು ಹೊಗುವುದರಿಂದ ಪಡೆಯುವ ಫಲಕ್ಕಿಂತ ೧೦,೫೦,೧೦೦ ಪಟ್ಟು  ಹೆಚ್ಚು ಪ್ರಯೋಜನವನ್ನು    ಅಭ್ಯಾಸ ಮಾಡುವುದರ ಮೂಲಕ ಪಡೆಯಬಹುದು. ಮುಖ್ಯವಾಗಿ, ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯುವುದೆಂದರೆ ನೀವು ಅವುಗಳ ಪ್ರಯೋಜನಗಳನ್ನು ಪಡೆದಿರುವುರು ಎಂದು ಅರ್ಥವಲ್ಲ.  ನೀವು ಆ ದೈವೀಕ ಸಿದ್ಧಿಗಳನ್ನು ಆಹ್ವಾನಿಸಿ ಅಭ್ಯಾಸಮಾಡಿದರೆ ಆಗ ನಿಮಗೆ ಅವುಗಳ ಅನುಭವ ಆಗುವುದರೊಂದಿಗೆ  ದೈವೀಕ ಚಿಕಿತ್ಸೆ ಮತ್ತು ಆಶಿರ್ವಾದಗಳು ದೊರೆಯುತ್ತವೆ. ನೆನಪಿನಲ್ಲಿಡಿ, ಕೇವಲ್ಲ ಒಮ್ಮೆ ಈ ಪುಸ್ತಕವನ್ನು ಓದಿದರೆ ಅದು ಸಾಕಾಗವುದಿಲ್ಲ. ನನ್ನ ಸುಧಾರಿತ ಶಿಷ್ಯರು ನನ್ನ ಪುಸ್ತಕಗಳನ್ನು ಅನೇಕ ಭಾರಿ ಓದುವರು. ಪ್ರತಿಯೊಂದು ಭಾರಿ ಅವರು ಓದಿ, ಅಬ್ಯಾಸಗಳನ್ನು ಮಾಡಿದಾಗ ಅವರು ಹೆಚ್ಚು ಹೆಚ್ಚು ಅಹಾ ಎನ್ನಿಸುವ ಅನುಭವಗಳನ್ನು ಪಡೆಯುವರು. ಅವರು ಹೆಚ್ಚು ಹೆಚ್ಚು ಗಮನಾರ್ಹವಾದ ಚಿಕಿತ್ಸಕ, ಪರಿಶುದ್ಧವಾದ, ಮತ್ತು ಜೀವನ ಪರಿವರ್ತನೆಯ ಫಲಿತಾಂಶಗಳನ್ನು ಪಡೆಯುವರು.

ಈ ಪುಸ್ತಕವನ್ನು ಓದಲಿರುವ ನಿಮಗೆ ಇವು ಅತ್ಯಂತ ಮುಖ್ಯವಾದ ಹಾಗೂ ನೆನಪಿನಲ್ಲಿಡಬೇಕಾದ ಅಂಶಗಳಾಗಿವೆ.  ನೀವು ಪ್ರತಿಯೊಬ್ಬರೂ ಈ ಪುಸ್ತಕದಲ್ಲಿರುವ ಅಭ್ಯಾಸಗಳನ್ನು ಮಾಡುವುದರ ಮೂಲಕ ಶ್ರೀಷ್ಠವಾದ ಚಿಕಿತ್ಸಕ ಗುಣವನ್ನು, ಪುನಶ್ಚೇನ ಗುಣವನ್ನು, ಪರಿಶುದ್ಧತೆಯ ಗುಣವನ್ನು, ಮತ್ತು ಜೀವನ ಪರಿವರ್ತನೆಯನ್ನು  ಪಡೆಯಬೇಕೆಂದು ಹಾಗೂ  ಆತ್ಮದ ಶಕ್ತಿಯಾದ  (soul over matter) ಅನ್ನು ಪಡೆಯಿರಿ ಎಂದು ನಾನು ಆಶಿಸುವೆ.

ಅಭ್ಯಾಸ. ಅಭ್ಯಾಸ. ಅಭ್ಯಾಸ.

ಅನುಭವ. ಅನುಭವ. ಅನುಭವ.

ಲಾಭ. ಲಾಭ. ಲಾಭ.

ಹವ್!‌ ಹವ್‌ ! ಹವ್‌ !

ಧನ್ಯವಾದಗಳು. ಧನ್ಯವಾದಗಳು. ಧನ್ಯವಾದಗಳು.

 

 

 

 

 

 

 

 

 

 

 

 

 

ಪರಿಚಯ

ಪ್ರಪಂಚದಾದ್ಯಂತ ತಮ್ಮ ಜೀವನಗಳ ಪರಿವರ್ತನೆ ಹಾಗೂ ಜ್ಞಾನೋದಯಕ್ಕಾಗಿ ಮಿಲಿಯಾಂತರ ಜನ  ಆಧ್ಯಾತ್ಮಿಕ ರಹಸ್ಯಗಳು, ಆಧ್ಯಾತ್ಮಿ ವಿವೇಕ, ಆಧ್ಯಾತ್ಮಿಕ ಜ್ಞಾನ ಹಾಗೂ ಆಧ್ಯಾತ್ಮಿಕ ಅಭ್ಯಾಸಗಳಿಗಾಗಿ ಹುಡುಕುತ್ತಿರುವರು. ಇತಿಹಾಸದುದ್ದಕ್ಕೂ ಬುದ್ಧರು, ಪವಿತ್ರ ಸಂತರು, ದಾವ್‌ ಸಂತರು, ಚಿಕಿತ್ಸಕ ದೇವತೆಗಳು,  ಪ್ರಧಾನ ದೇವಧೂರತು, ಭಾರತೀಯ ಗುರುಗಳು, ಟಿಬೇಟಿನ ಲಾಮಾಗಳು, ಸೇರಿದಂತೆ ಹಲವು ಸಂಪ್ರದಾಯ ಹಾಗೂ ಸಂಸ್ಕೃತಿಗಳಿಂದ ಬಂದ ಹಲವು ಗುರುಗಳು ಆಗಿ ಹೋಗಿರುವರು. ಇವರೆಲ್ಲರೂ ಮಾನವಾಳಿಗೆ ಅತ್ಯಂತ ಅದ್ಬುತವಾದ  ಭೋದನೆಗಳನ್ನು ಕೊಟ್ಟಿರುವರು. ಮಾನವರ ಜೀವನ ಪರಿವರ್ತನೆಗೊಳಿಸುವ ಆಧ್ಯಾತ್ಮಿಕ ಶಕ್ತಿಯ ಸಾಮರ್ಥ್ಯವನ್ನು ಇವರು ಅನ್ವೇಷಿಸಿರುವರು. ನಾನು ಈ ಎಲ್ಲಾ ಶ್ರೇಷ್ಠ ಗುರುಗಳಿಗೂ ಗೌರವಪೂರ್ವಕವಾಗಿ ನಮಿಸುವೆ.

ಈ ಪುಸ್ತಕದಲ್ಲಿ ನೀವು ಆತ್ಮ ಶಕ್ತಿ ಎಂದರೇನು, ಆತ್ಮ ಶಕ್ತಿಯ ಮಹತ್ವ, ನಿಮ್ಮ ಆತ್ಮ ಶಕ್ತಿಯನ್ನು ಅಭಿವೃದ್ಧಿಗೊಳಿಸುವುದು ಹೇಗೆ, ಮತ್ತು ಆತ್ಮ ಶಕ್ತಿಯನ್ನು ನಮ್ಮ ಚಿಕಿತ್ಸೆಗಾಗಿ, ಕಾಯಿಲೆಗಳನ್ನು ತಡೆಗಟ್ಟಲು, ಪುನಶ್ಚೆತನಗೊಳಿಸಿಕೊಳ್ಳಲು, ದೀರ್ಘಾಯುಷ್ಯಕ್ಕಾಗಿ, ಮತ್ತು ಸಂಬಂಧಗಳ, ವ್ಯವಹಾರಗಳ ಪರಿವರ್ತನೆ ಹಾಗೂ ನಿಮ್ಮ ಆತ್ಮ ಹೃದಯ, ಮನಸ್ಸು ಮತ್ತು ದೇಹಗಳ ಜ್ಞಾನೋದಯವನ್ನು ಒಳಗೊಂಡ ಒಟ್ಟು ಜೀವನ ಪರಿವರ್ತನೆಗಾಗಿ ಹೇಗೆ ಬಳಸಬೇಕು ಎಂಬುದನ್ನು ಕಲಿಯುವಿರಿ.

ಈ ಪುಸ್ತಕವು ಜೀಸಸ್‌, ಮೇರಿ,ಶಿ ಜಿ ಮೊ ನಿ ಫೋ (ಭೌಧ್ಧ ದರ್ಮದ ಸ್ಥಾಪಕನಾದ ಶಾಕ್ಯಮುನಿಯ ಚೀನಿ ಭಾಷೆಯ ಹೆಸರು), ಗ್ವಾನ್‌ ಯಿನ್ (ಕರುಣೆಯ ದೇವತೆ ಅಥವಾ ಸಹಾನುಭೂತಿಯ ಭೋಧಿ ಸತ್ವನಾದ ಅವಲೋಕಿತೇಶ್ವರರ ಚೀನಿ ಭಾಷೆಯ ಹೆಸರು), ಬುಧ್ಧರು ಹಾಗೂ ಹಲವು ಸಂತರು ಹೇಗೆ ದೈವ ಹಾಗೂ ವಿಶ್ವದ ಶ್ರೇಷ್ಠವಾದ ಆತ್ಮ ಶಕ್ತಿಯನ್ನು ಪಡೆಯುತ್ತಿದ್ದರು ಎಂಬ ರಹಸ್ಯವನ್ನು ಈ ಪುಸ್ತಕವೂ ಬಹಿರಂಗಪಡಿಸುತ್ತದೆ. ಈ ಸಂತರೆಲ್ಲಾ ನಮಗೆ ಶ್ರೇಷ್ಠ ಉದಾಹರಣೆಗಳಾಗಿದ್ದಾರೆ.  ವಾಸ್ತವವಾಗಿ, ಪ್ರತಿಯೊಬ್ಬ ಮಾನವ ಜೀವಿ ಹಾಗೂ ಪ್ರತಿಯೊಂದು ಆತ್ಮವೂ ದೈವದಿಂದ ಈ ಶ್ರೇಷ್ಠ ಸಂತರು ಪಡೆದಂತಹಾ ಆತ್ಮ ಶಕ್ತಿಯನ್ನು ತಾವೂ ಸಹಾ ಪಡೆಯುವ ಸಂಭಾವ್ಯತೆಯನ್ನು ಹೊಂದಿರುವರು. ಆದರೆ ಈ ಹಂತದ ದೈವೀಕ ಆತ್ಮ ಶಕ್ತಿಯನ್ನು ಪಡೆಯಲು ಕೆಲವು ಅವಶ್ಯಕ ಅರ್ಹತೆಗಳು ಇವೆ: ನೀನು ತಪ್ಪದೇ ಮಾನವಾಳಿಗೆ ಹಾಗೂ ಎಲ್ಲಾ ಆತ್ಮಗಳಿಗೆ  ಬೇಷರತ್ತಾದ ಸಾರ್ವತ್ರಿಕ ಸೇವೆಯನ್ನುಒದಗಿಸಬೇಕು. ಸೇವೆ ಮಾಡುವುದು, ಸ್ವೀಕರಿಸುವುದು. ನೀನು ಹೆಚ್ಚು ಹೆಚ್ಚು ಸೇವೆ ಮಾಡಿದಂತೆಲ್ಲಾ ಹೆಚ್ಚು ಹೆಚ್ಚು ಶ್ರೇಷ್ಠವಾದ ಆತ್ಮ ಶಕ್ತಿಯನ್ನು ದೈವವು ನಿನಗೆ ಪ್ರಸಾದಿಸುವುದು.

ಧೈವವು ಒಂದು ಆಧ್ಯಾತ್ಮಿಕ ನಿಯಮವನ್ನು ಸೃಷ್ಠಿಸಿದೆ. ಮಾನವಾಳಿಗೆ ಸೇವೆಮಾಡು. ಮಾನವಾಳಿಯನ್ನು ಜಾಗೃತಗೊಳಿಸು. ಮಾನವಾಳಿಯ ಹಾಗೂ ಎಲ್ಲಾ ಆತ್ಮಗಳ ಪ್ರಜ್ಞೆಯನ್ನು ಪರಿವರ್ತಿಸು. ಮಾನವಾಳಿಗೆ ಹಾಗೂ ಎಲ್ಲಾ ಆತ್ಮಗಳಿಗೆ ಜ್ಞಾನೋದಯವನ್ನುಂಟುಮಾಡು. ಕೇವಲ ಈ ಮಾರ್ಗದಿಂದ ಮಾತ್ರ ನಿನ್ನ ಆಧ್ಯಾತ್ಮಿಕ ಸ್ಥಿತಿ ಉನ್ನತೀಕರಿಸಲ್ಪಡುವುದು. ಕೇವಲ ಈ ವಿಧಾನದಿಂದ ಮಾತ್ರವೇ ನೀನು ದೈವೀಕ ಆತ್ಮ ಶಕ್ತಿಯನ್ನು ಪ್ರತಿಸಲ ಒಂದೊಂದು ಹಂತದಲ್ಲಿ ಪಡೆಯುವೆ.  ಶಕ್ತಿಯು ಕೊಡುವಂತಹದಾಗಿದೆ. ನಿಜವಾದ ಆತ್ಮ ಶಕ್ತಿಯು ದೈವದಿಂದ ಕೊಡಲ್ಪಡುವುದಾಗಿದೆ.

ಆಗಸ್ಟ್‌ ೮ ೨೦೦೩ ರಂದು ದೈವವು ಸ್ವರ್ಗದಲ್ಲಿ ಒಂದು ಮಹತ್ವವಾದ ಆತ್ಮ ಸಮ್ಮೇಳನವನ್ನು ನಡೆಸಿತು. ಈ ದಿನವು ಹಿಂದಿನ ಹದಿನೈದು ಸಾವಿರ ವರ್ಷಗಳ ಯುಗದ ಕೊನೆಯ ದಿನವಾಗಿ ಗುರುತಿಸಲ್ಪಟ್ಟಿತು. ಹಾಗೂ ಆ ಯುಗದ ಇಬ್ಬರು ಪ್ರಮುಖ ಆಧ್ಯಾತ್ಮಿಕ ನಾಯಕರಾದ ನ್ಯು ವಾ ನಾಯಂಗ್‌ ನಿಯಾಂಗ್‌ ಹಾಗೂ ಯೋನ್‌ ಶಿ ಟಾಯ್‌ ಜುನ್‌ ರು ದೈವ ಸ್ಥಾನಕ್ಕೆ ಏರಲ್ಪಟ್ಟರು. ಈ ದಿನದಿಂದ ಪ್ರಾರಂಭವಾಗಲಿರುವ ಹೊಸ ಯುಗ ವನ್ನು ಮುನ್ನಡೆಸಲು ಹನ್ನೆರಡು ಜನ ದೈವೀಕ ನಾಯಕರ ಸಮಿತಿಯು ರಚಿಸಲ್ಪಟ್ಟಿತು. ಈ ಹೊಸ ಯುಗವೂ ಸಹಾ ಹದಿನೈದು ಸಾವಿರ ವರ್ಷಗಳ ಕಾಲ ಇರಲಿದೆ. ಈ ಯುಗವನ್ನು ಆತ್ಮದ ಬೆಳಕಿನ ಯುಗವೆಂದು ಕರೆಯುವರು. 

ಈ ಆತ್ಮದ ಬೆಳಕಿನ ಯುಗದ ಅಂತಿಮ ಗುರಿ ಮಾನವಾಳಿಯ ಹಾಗೂ ಎಲ್ಲಾ ಆತ್ಮಗಳ ಜ್ಞಾನೋದಯಕ್ಕಾಗಿ, ಮಾನವಾಳಿಯ ಹಾಗೂ ಎಲ್ಲಾ ಆತ್ಮಗಳ ಪ್ರಜ್ಞೆಯನ್ನು ಪರಿವರ್ತಿಸಿ ದೈವೀಕ ಪ್ರಜ್ಷೆಯೊಂದಿಗೆ ಅನುಸಂಧಾನಗೊಳಿಸುವುದರ ಮೂಲಕ ಎಲ್ಲಾ ಆತ್ಮಗಳನ್ನು ಒಂದಾಗಿಸುವುದು.

ಎಲ್ಲರ ಪ್ರಜ್ಞೆಯನ್ನು ಪರಿವರ್ತಿಸಿ ದೈವೀಕ ಪ್ರಜ್ಞೆಯೊಂದಿಗೆ ಅನುಸಂಧಾನಗೊಳಿಸಿ ಮಾನವಾಳಿಗೆ ಹಾಗೂ ಎಲ್ಲಾ ಆತ್ಮಗಳಿಗೆ ಜ್ಞಾನೋದಯವುಂಟುಮಾಡುವುದು ಹೇಗೆ ? ಈ ಪ್ರಕ್ರಿಯೆ ಯು ಏಳು ಪ್ರಮುಖ ಹಂತಗಳನ್ನು ಒಳಗೊಂಡಿದೆ.

ಮೊದಲನೇ ಹಂತ ಮಾನವಾಳಿಯ ಹಾಗೂ ಎಲ್ಲಾ ಆತ್ಮಗಳ ಬಳಲುವಿಕೆಯನ್ನು ಕಳೆಯಲು ಆತ್ಮ ಚಿಕಿತ್ಸೆ ಯನ್ನು ನೀಡುವುದು. ಆತ್ಮ ಶಕ್ತಿ ಸರಣಿಗಳ ಪ್ರಮುಖ ಬೋಧನೆ ಮೊದಲು ಆತ್ಮಕ್ಕೆ ಚಿಕಿತ್ಸೆ ನೀಡು; ನಂತರ ಮನಸ್ಸು ಹಾಗೂ ದೇಹದ ಚಿಕಿತ್ಸೆ ಮುಂದುವರೆಯುತ್ತೆ ಎಂಬುದು. ಮಾನವಾಳಿಯು ಭೌತಿಕ, ಭಾವನಾತ್ಮಕ, ಭೌದ್ಧಿಕ, ಮತ್ತು ಆಧ್ಯಾತ್ಮಿಕ ಹಂತಗಳಲ್ಲಿ  ಬಳಲುವುದು. ಮಾನವೀಕ ಸ್ಥಾನದಲ್ಲಿ , ಸಾವಿರಾರು ವಿಧ ವಿಧದ ತಾಪತ್ರಯಗಳು ಇವೆ. ಹಾಗೂ ಆತ್ಮದ ಸ್ಥಿತಿಯಲ್ಲಿ ಅಗಣಿತ  ತಾಪತ್ರಯಗಳಿವೆ. ಮಾನವ ಜೀವಿಯ ಭೌತಿಕ, ಭಾವನಾತ್ಮಕ, ಭೌದ್ಧಿಕ, ಮತ್ತು ಆಧ್ಯಾತ್ಮಿಕ ದೇಹಗಳಿಗೆ ಚಿಕಿತ್ಸೆ ಅಗತ್ಯವಿದೆ. ಒಂದು ಸಂಸ್ಥೆಗೆ ಸಾಮರಸ್ಯ ಮತ್ತು ಯಶಸ್ಸಿಗಾಗಿ ಚಿಕಿತ್ಸೆ ಅಗತ್ಯವಿದೆ. ಒಂದು ನಗರ ಅಥವಾ ಒಂದು ದೇಶಕ್ಕೆ ಸಮತೋಲನಕ್ಕಾಗಿ ಚಿಕಿತ್ಸೆ ಬೇಕಾಗಿದೆ. ಇಡೀ ವಿಶ್ವಕ್ಕೆ ಶಾಂತಿಗಾಗಿ ಚಿಕಿತ್ಸೆ ಅವಶ್ಯವಾಗಿದೆ.

 

 

 

 

 

 

 

 

 

 

 

 

 

 

 

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.